ಜನಾರ್ದ್ದನಶ್ಚ
ರುಗ್ಮಿಣೀಕರಂ ಶುಭೇ ದಿನೇSಗ್ರಹೀತ್ ।
ಮಹೋತ್ಸವಸ್ತಧಾSಭವತ್ ಕುಶಸ್ಥಲೀನಿವಾಸಿನಾಮ್ ॥೧೭.೧೭೬॥
ಶ್ರೀಕೃಷ್ಣನೂಕೂಡಾ ಶುಭದಿನದಲ್ಲಿ ರುಗ್ಮಿಣಿಯ ಕೈಹಿಡಿದನು. ಈ ಪಾಣೀಗ್ರಹಣ ದ್ವಾರಕಾಪಟ್ಟಣದಲ್ಲಿರುವವರಿಗೆ
ಅತ್ಯಂತ ದೊಡ್ಡ ಉತ್ಸವವಾಯಿತು.
ಚತುರ್ಮ್ಮುಖೇಶಪೂರ್ವಕಾಃ
ಸುರಾ ವಿಯತ್ಯವಸ್ಥಿತಾಃ ।
ಪ್ರತುಷ್ಟುವುರ್ಜ್ಜನಾರ್ದ್ದನಂ
ರಮಾಸಮೇತಮವ್ಯಯಮ್ ॥೧೭.೧೭೭॥
ಚತುರ್ಮುಖ, ರುದ್ರ, ಮೊದಲಾಗಿರತಕ್ಕಂತಹ ದೇವತೆಗಳು ಆಕಾಶದಲ್ಲಿ ನಿಂತು, ಲಕ್ಷ್ಮೀಯಿಂದ ಒಡಗೂಡಿದ, ನಾಶವಿಲ್ಲದ ಪರಮಾತ್ಮನನ್ನು ಸ್ತೋತ್ರಮಾಡಿದರು.
ಮುನೀನ್ದ್ರದೇವಗಾಯನಾದಯೋSಪಿ ಯಾದವೈಃ ಸಹ ।
ವಿಚೇರುರುತ್ತಮೋತ್ಸವೇ
ರಮಾರಮೇಶಯೋಗಿನಿ ॥೧೭.೧೭೮॥
ಮುನಿಶ್ರೇಷ್ಠರು, ಗಂಧರ್ವರೇ ಮೊದಲಾದವರು, ಯಾದವರಿಂದ ಕೂಡಿಕೊಂಡು, ಲಕ್ಷ್ಮೀ ಹಾಗೂ
ನಾರಾಯಣರಿಗೆ ಸಂಬಂಧಿಸಿದ ಅತ್ಯಂತ ಉತ್ಕೃಷ್ಟವಾದ ಈ ಉತ್ಸವದಲ್ಲಿ ವಿಹರಿಸಿದರು.
ಸುರಾಂಶಕಾಶ್ಚ
ಯೇ ನೃಪಾಃ ಸಮಾಹುತಾ ಮಹೋತ್ಸವೇ ।
ಸಪಾಣ್ಡವಾಃ
ಸಮಾಯಯುರ್ಹರಿಂ ರಮಾಸಮಾಯುತಮ್ ॥೧೭.೧೭೯॥
ದೇವತಾಂಶವುಳ್ಳ ಯಾವ ರಾಜರು ಈ ಮಹೋತ್ಸವದಲ್ಲಿ ಕರೆಸಲ್ಪಟ್ಟರೋ, ಅವರು ಪಾಣ್ಡವರಿಂದ ಕೂಡಿದವರಾಗಿ
ರುಗ್ಮಿಣಿಯಿಂದ ಕೂಡಿರುವ ಕೃಷ್ಣನ ಮದುವೆಯ ಮಹೋತ್ಸವಕ್ಕೆ ಬಂದರು.
ಸಮಸ್ತಲೋಕಸುನ್ದರೌ
ಯುತೌ ರಮಾರಮೇಶ್ವರೌ ।
ಸಮೀಕ್ಷ್ಯಮೋದಮಾಯಯುಃ
ಸಮಸ್ತಲೋಕಸಜ್ಜನಾಃ ॥೧೭.೧೮೦॥
ಸಮಸ್ತ ಲೋಕದಲ್ಲಿಯೇ ಅತ್ಯಂತ ಸುಂದರರೆನಿಸಿದ ರುಗ್ಮಿಣಿ-ಕೃಷ್ಣರು ಕೂಡಿರುವುದನ್ನು ನೋಡಿ, ಸಮಸ್ತ
ಲೋಕದಲ್ಲಿರುವ ಸಜ್ಜನರು ಸಂತಸವನ್ನು ಹೊಂದಿದರು.
No comments:
Post a Comment