ತದ್ವಂಶಜಃ ಕುರುರ್ನ್ನಾಮ ಪ್ರತೀಪೋsಭೂತ್ ತದನ್ವಯೇ ।
ಪ್ರತೀಪಸ್ಯಾಭವನ್ ಪುತ್ರಾಸ್ತ್ರಯಸ್ತ್ರೇತಾಗ್ನಿವರ್ಚ್ಚಸಃ ॥೧೧.೦೫॥
ದೇವಾಪಿರಥ ಬಾಹ್ಲೀಕೋ ಗುಣಜ್ಯೇಷ್ಠಶ್ಚ ಶನ್ತನುಃ ।
ತ್ವಗ್ದೋಷಯುಕ್ತೋ ದೇವಾಪಿರ್ಜ್ಜಗಾಮ ತಪಸೇ ವನಮ್ ॥೧೧.೦೬॥
ಭರತನ ವಂಶದಲ್ಲಿ ‘ಕುರು’
ಎಂದು ಪ್ರಸಿದ್ಧನಾದ ರಾಜನ ಜನನವಾಯಿತು. ಅವನ ವಂಶದಲ್ಲೇ ಪ್ರತೀಪ ರಾಜನ ಜನನವಾಯಿತು. ಪ್ರತೀಪನಿಗೆ
ಮೂರು ಅಗ್ನಿಗಳಂತೆ ಕಾಂತಿಯುಳ್ಳ ದೇವಾಪಿ,
ಬಾಹ್ಲೀಕ ಮತ್ತು ಗುಣಜೇಷ್ಠನಾದ^ ಶಂತನು
ಎನ್ನುವ ಮೂರು ಜನ ಮಕ್ಕಳು ಹುಟ್ಟಿದರು. ದೇವಾಪಿಗೆ
ತೊನ್ನುರೋಗದ ದೋಷವಿದ್ದುದರಿಂದ ಆತ ಕಾಡಿಗೆ ಹೊರಟುಹೋದ.
[^ಆಚಾರ್ಯರು ಇಲ್ಲಿ ಈ
ರೀತಿಯ ವಿವರಣೆ ನೀಡಲು ಕಾರಣವಿದೆ: ದೇವಾಪಿ,
ಬಾಹ್ಲೀಕ ಮತ್ತು ಶನ್ತನು ಈ ಮೂವರ ಕುರಿತಾಗಿ ಬೇರೆ ಬೇರೆ ಗ್ರಂಥಗಳಲ್ಲಿ ಬೇರೆಬೇರೆ ರೀತಿಯ
ವಿವರಣೆ ಕಾಣಸಿಗುತ್ತದೆ. ಭಾಗವತದಲ್ಲಿ(೯.೧೯.೧೨)
ದೇವಾಪಿಃ ಶನ್ತನುಸ್ತಸ್ಯ ಬಾಹ್ಲೀಕ ಇತಿ ಚಾsತ್ಮಜಾಃ ಎನ್ನುವ ವಿವರಣೆ ಇದೆ. ಇಲ್ಲಿ ಮೊದಲನೆಯವನು ದೇವಾಪಿ, ಎರಡನೆಯವನು ಶನ್ತನು
ಮತ್ತು ಮೂರನೆಯವನು ಬಾಹ್ಲೀಕ ಎಂದು ಹೇಳಿದಂತೆ ಕಾಣುತ್ತದೆ. ಮಹಾಭಾರತದಲ್ಲೇ ಇನ್ನೊಂದು ಕಡೆ (ಆದಿಪರ್ವ ೧೦೧.೪೯) ದೇವಾಪಿಃ ಶನ್ತನುಶ್ಚೈವ
ಬಾಹ್ಲೀಕಶ್ಚ ಮಹಾರಥಃ ಎಂದು ಹೇಳಲಾಗಿದೆ. ಆದರೆ ಹರಿವಂಶಪರ್ವದಲ್ಲಿ(೩೨.೧೦೬) ಪ್ರತೀಪೋ ಭೀಮಸೇನಸ್ಯ ಪ್ರತೀಪಸ್ಯ ತು ಶನ್ತನುಃ ।
ದೇವಾಪಿರ್ಬಾಹ್ಲಿಕಶ್ಚೈವ ತ್ರಯ ಏವ ಮಹಾರಥಾಃ ॥ ಎಂದು ವಿವರಿಸಲಾಗಿದೆ. ಹೀಗಾಗಿ ಇಲ್ಲಿ
ಶನ್ತನು ಜೇಷ್ಠ ಎಂದು ಹೇಳಿದಂತೆ ಕಾಣುತ್ತದೆ. ಆದ್ದರಿಂದ
ಆಚಾರ್ಯರು ನಿರ್ಣಯ ನೀಡುತ್ತಾ, ‘ಗುಣಜ್ಯೇಷ್ಠಶ್ಚ ಶನ್ತನುಃ’ ಎಂದು
ವಿವರಿಸಿದ್ದಾರೆ. ಅಂದರೆ ಹರಿವಂಶ ಪರ್ವದ ವಿವರಣೆ
ಗುಣಜ್ಯೇಷ್ಠತೆಯ ಲೆಕ್ಕದಲ್ಲಿ ನೀಡಲಾಗಿದೆ. ಒಟ್ಟಿನಲ್ಲಿ ಮಹಾಭಾರತದ ಉದ್ಯೋಗ
ಪರ್ವದಲ್ಲಿ(೧೪೯.೧೬) ದೇವಾಪಿರಭವಚ್ಛ್ರೇಷ್ಠೋ ಬಾಹ್ಲೀಕಸ್ತದನಂತರಂ । ತೃತೀಯಃ ಶಂತನುಸ್ತಾತ
ಧೃತಿಮಾನ್ಮೇ ಪಿತಾಮಹಃ ॥ ಎನ್ನುವ ಧೃತರಾಷ್ಟ್ರ ದುರ್ಯೋಧನನಿಗೆ ಹೇಳುವ ಮಾತೇನಿದೆ, ಅದು ಅವರ
ಹುಟ್ಟಿನ ಸರಿಯಾದ ಕ್ರಮವನ್ನು ತಿಳಿಸುತ್ತದೆ].
[ಭರತನಿಂದ ಪ್ರಾರಂಭವಾಗಿ
ಶಂತನುವಿನ ತನಕದ ವಂಶ ವೃಕ್ಷದ ವಿವರ ಬೇರೆಬೇರೆ ಗ್ರಂಥಗಳಲ್ಲಿ ಬೇರೆ ಬೇರೆ ರೀತಿಯಾಗಿ
ಕಾಣಸಿಗುತ್ತದೆ. ಮಹಾಭಾರತ, ಹರಿವಂಶ, ಭಾಗವತ,
ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿ ಸಿಗುವ ಈ ವಂಶವೃಕ್ಷದ ಸಂಗ್ರಹವನ್ನು ಈ ಕೆಳಗೆ
ನೀಡಲಾಗಿದೆ:
ಮಹಾಭಾರತ
|
ಹರಿವಂಶ
|
ಭಾಗವತ
|
ವಿಷ್ಣುಪುರಾಣ
|
ಗರುಡಪುರಾಣ
|
೧. ಭರತಃ
|
೧. ಭರತಃ
|
೧. ಭರತಃ
|
೧. ಭರತಃ
|
೧. ಭರತಃ
|
೨. ಭೂಮನ್ಯುಃ
|
೨. ವಿತಥಃ
|
೨. ವಿತಥಃ
|
೨. ವಿತಥಃ
|
೨. ವಿತಥಃ
|
೩. ಸುಹೋತ್ರಃ
|
೩. ಸುಹೋತ್ರಃ
|
೩. ಮನ್ಯುಃ
|
೩. ಮನ್ಯುಃ
|
೩. ಮನ್ಯುಃ
|
೪. ಹಸ್ತೀ
|
೪. ಬೃಹನ್
|
೪. ಬೃಹತ್ಕ್ಷತ್ರಃ
|
೪. ಬೃಹತ್ಕ್ಷತ್ರಃ
|
೪. ಬೃಹತ್ಕ್ಷತ್ರಃ
|
೫. ವಿಕುಣ್ಠನಃ
|
೫. ಅಜಮೀಢಃ
|
೫. ಸುಹೋತ್ರಃ
|
೫. ಸುಹೋತ್ರಃ
|
೫. ಸುಹೋತ್ರಃ
|
೬. ಅಜಮೀಢಃ
|
೬. ಋಕ್ಷಃ
|
೬. ಹಸ್ತಿ
|
೬. ಹಸ್ತಿ
|
೬. ಹಸ್ತಿ
|
೭.ಸಂವರಣಃ
|
೭.ಸಂವರಣಃ
|
೭. ಅಜಮೀಢಃ
|
೭. ಅಜಮೀಢಃ
|
೭. ಅಜಮೀಢಃ
|
೮. ಕುರುಃ
|
೮. ಕುರುಃ
|
೮. ವೃಕ್ಷಃ
|
೮. ವೃಕ್ಷಃ
|
೮. ಋಕ್ಷಃ
|
೯. ವಿಡೂರಥಃ
|
೯. ಪರೀಕ್ಷಿತ್
|
೯. ಸಂವರಣಃ
|
೯. ಸಂವರಣಃ
|
೯. ಸಂವರಣಃ
|
೧೦. ಅನಶ್ವಾನ್
|
೧೦.ಜನಮೇಜಯಃ
|
೧೦. ಕುರುಃ
|
೧೦. ಕುರುಃ
|
೧೦. ಕುರುಃ
|
೧೧. ಪರೀಕ್ಷಿತ್
|
೧೧. ಸುರಥಃ
|
೧೧. ಜನ್ಹುಃ
|
೧೧. ಜನ್ಹುಃ
|
೧೧. ಜನ್ಹುಃ
|
೧೨. ಭೀಮಸೇನಃ
|
೧೨. ವಿಡೂರಥಃ
|
೧೨. ಸುರಥಃ
|
೧೨. ಸುರಥಃ
|
೧೨. ಸುರಥಃ
|
೧೩. ಪ್ರತಿಶ್ರವಾಃ
|
೧೩. ಋಕ್ಷಃ
|
೧೩. ವಿಡೂರಥಃ
|
೧೩. ವಿಡೂರಥಃ
|
೧೩. ವಿಡೂರಥಃ
|
೧೪. ಪ್ರತೀಪಃ
|
೧೪. ಭೀಮಸೇನಃ
|
೧೪.ಸಾರ್ವಭೌಮಃ
|
೧೪.ಸಾರ್ವಭೌಮಃ
|
೧೪.ಸಾರ್ವಭೌಮಃ
|
೧೫. ಶನ್ತನುಃ
|
೧೫. ಪ್ರತೀಪಃ
|
೧೫ . ಜಯತ್ಸೇನಃ
|
೧೫ . ಜಯತ್ಸೇನಃ
|
೧೫ . ಜಯತ್ಸೇನಃ
|
---
|
೧೬. ಶನ್ತನುಃ
|
೧೬. ರಾಧಿತಃ
|
೧೬. ಆರಾಧಿತಃ
|
೧೬. ಆರಾಧಿತಃ
|
---
|
---
|
೧೭. ಧ್ಯೂಮಾನ್
|
೧೭. ಅಯುತಾಯುಃ
|
೧೭. ಅಯುತಾಯುಃ
|
---
|
---
|
೧೮. ಅಕ್ರೋಧನಃ
|
೧೮. ಅಕ್ರೋಧನಃ
|
೧೮. ಅಕ್ರೋಧನಃ
|
---
|
---
|
೧೯. ದೇವಾತಿಥಿಃ
|
೧೯. ದೇವಾತಿಥಿಃ
|
೧೯. ಅತಿಥಿಃ
|
---
|
---
|
೨೦. ಋಕ್ಷಃ
|
೨೦. ಋಕ್ಷಃ
|
೨೦. ಋಕ್ಷಃ
|
---
|
---
|
೨೧. ದಿಲೀಪಃ
|
೨೧. ಭೀಮಸೇನಃ
|
೨೧. ಭೀಮಸೇನಃ
|
---
|
---
|
೨೨. ಪ್ರತೀಪಃ
|
೨೨. ದಿಲೀಪಃ
|
೨೨. ದಿಲೀಪಃ
|
---
|
---
|
೨೩. ಶನ್ತನುಃ
|
೨೩. ಪ್ರತೀಪಃ
|
೨೩. ಪ್ರತೀಪಃ
|
---
|
---
|
---
|
೨೪. ಶನ್ತನುಃ
|
೨೪. ಶನ್ತನುಃ
|
ಎಲ್ಲಾ ಗ್ರಂಥಗಳನ್ನು
ಒಟ್ಟಿಗೆ ಸೇರಿಸಿ, ನಾಮಾನ್ತರವನ್ನು ಕಂಡುಕೊಂಡು ಜೋಡಿಸಿದಾಗ, ಭರತನಿಂದ ಶನ್ತನುವಿನ ತನಕದ ವಂಶವೃಕ್ಷವನ್ನು ಈ
ರೀತಿಯಾಗಿ ಕಾಣಬಹುದು:
೧. ಭರತಃ
|
೯. ಋಕ್ಷಃ
|
೧೮. ಆರಾಧಿತಃ
|
೨. ವಿತಥಃ [ಭೂಮನ್ಯುಃ,
|
೧೦. ಸಂವರಣಃ
|
೧೯. ಅಯುತಾಯುಃ[ಧ್ಯೂಮಾನ್]
|
ಭರಧ್ವಾಜಃ ,ಭಾರಧ್ವಾಜಃ]
|
೧೧. ಕುರುಃ
|
೨೦. ಅಕ್ರೋಧನಃ
|
೩. ಮನ್ಯುಃ
|
೧೨. ಪರೀಕ್ಷಿತ್
|
೨೧. ದೇವಾತಿಥಿಃ
|
೪. ಬೃಹತ್ಕ್ಷತ್ರಃ
|
೧೩.ಜನಮೇಜಯಃ
|
೨೨. ಋಕ್ಷಃ
|
೫. ಸುಹೋತ್ರಃ
|
೧೪. ಸುರಥಃ
|
೨೩. ಭೀಮಸೇನಃ
|
೬. ಹಸ್ತೀ
|
೧೫. ವಿಡೂರಥಃ
|
೨೪. ದಿಲೀಪಃ[ಪ್ರತಿಶ್ರವಾಃ,
ಹವಿಃಶ್ರವಾಃ]
|
೭. ವಿಕುಣ್ಠನಃ
|
೧೬.ಸಾರ್ವಭೌಮಃ
|
೨೫. ಪ್ರತೀಪಃ
|
೮. ಅಜಮೀಢಃ
|
೧೭ . ಜಯತ್ಸೇನಃ
|
೨೬. ಶನ್ತನುಃ
|
ವಿಷ್ಣೋಃ ಪ್ರಸಾದಾತ್ ಸ ಕೃತೇ ಯುಗೇ ರಾಜಾ ಭವಿಷ್ಯತಿ ।
ಪುತ್ರಿಕಾಪುತ್ರತಾಂ ಯಾತೋ ಬಾಹ್ಲೀಕೋ ರಾಜಸತ್ತಮಃ ॥೧೧.೦೭॥
ಚರ್ಮರೋಗವಿದ್ದ ಕಾರಣ ಕಾಡಿಗೆ
ಹೋದ ಪ್ರತೀಪನ ಜೇಷ್ಠಪುತ್ರ ದೇವಾಪಿಯು ವಿಷ್ಣುವಿನ ಅನುಗ್ರಹದಂತೆ ಭವಿಷ್ಯದಲ್ಲಿ ರಾಜನಾಗುವ
ಯೋಗವನ್ನು ಹೊಂದಿದ್ದ. ಎರಡನೇ ಮಗ ಬಾಹ್ಲೀಕನು ಪುತ್ರಿಕಾಪುತ್ರತ್ವವನ್ನು^ ಹೊಂದಿದನು.
[ಭಾಗವತದಲ್ಲಿ
ಹೇಳುವಂತೆ(೯.೧೯.೧೭) ದೇವಾಪಿರ್ಯೋಗಮಾಸ್ಥಾಯ ಕಲಾಪಗ್ರಾಮಮಾಶ್ರಿತಃ । ಸೋಮವಂಶೇ ಕಲೌ ನಷ್ಟೇ
ಕೃತಾದೌ ಸ್ಥಾಪಯಿಷ್ಯತಿ ॥ ತಪಸ್ಸನ್ನು ಮಾಡುತ್ತಾ ಕಲಾಪಗ್ರಾಮದಲ್ಲಿರುವ ದೇವಾಪಿಯು,
ಕಲಿಯುಗದಲ್ಲಿ ಚಂದ್ರವಂಶ ನಷ್ಟವಾಗಲು, ಮುಂದಿನ ಕೃತಯುಗದಲ್ಲಿ ಆ ವಂಶಪ್ರವೃತ್ತಕನಾಗುವ
ಅನುಗ್ರಹವನ್ನು ಭಗವಂತನಿಂದ ಪಡೆದಿದ್ದ. ಮೇಲ್ನೋಟಕ್ಕೆ
ತೊನ್ನು ದೋಷ. ಆದರೆ ಭಗವಂತನ ಪರಮಾನುಗ್ರಹ ಅವನ ಮೇಲಿತ್ತು.
^ಪುತ್ರಿಕಾಪುತ್ರತ್ವ
ಎಂದರೆ: ‘ಮಗಳ ಮಗನೇ ತನ್ನ ಪುತ್ರನು’ ಎಂದು ಸಂಕಲ್ಪಿಸಿ ಯಾವ ಕನ್ನಿಕೆಯನ್ನು ತಂದೆ ಮದುವೆ ಮಾಡಿ
ಕೊಡುತ್ತಾನೋ, ಆ ಕನ್ನಿಕೆಯ ಮಗನು ಪುತ್ರಿಕಾಪುತ್ರನೆನಿಸುತ್ತಾನೆ. ಹೀಗಾಗಿ ಬಾಹ್ಲೀಕ ತನ್ನ
ತಾಯಿಯ ತಂದೆಯ ದೇಶದ ಅಧಿಪತಿಯಾದನು. ಮೂಲತಃ ಈ ಬಾಹ್ಲೀಕ ಯಾರು ಎನ್ನುವುದನ್ನು ಆಚಾರ್ಯರು ಮುಂದಿನ
ಶ್ಲೋಕದಲ್ಲಿ ವಿವರಿಸಿದ್ದಾರೆ].
ಹಿರಣ್ಯಕಶಿಪೋಃ ಪುತ್ರಃ ಪ್ರಹ್ಲಾದೋ ಭಗವತ್ಪರಃ ।
ವಾಯುನಾ ಚ ಸಮಾವಿಷ್ಟೋ ಮಹಾಬಲಸಮನ್ವಿತಃ ॥೧೧.೦೮॥
ಯೇನೈವ ಜಾಯಮಾನೇನ ತರಸಾ ಭೂರ್ವಿದಾರಿತಾ ।
ಭೂಭಾರಕ್ಷಪಣೇ ವಿಷ್ಣೋರಙ್ಗತಾಮಾಪ್ತುಮೇವ ಸಃ ॥೧೧.೦೯॥
ಪೂರ್ವದಲ್ಲಿ ಹಿರಣ್ಯಕಶಿಪುವಿನ
ಮಗನಾಗಿದ್ದ ಪ್ರಹ್ಲಾದನೇ^ ಈ ಬಾಹ್ಲೀಕ. ಈತ ಪರಮಾತ್ಮನ ಪರಮ ಭಕ್ತ. ಮುಖ್ಯಪ್ರಾಣನಿಂದಲೂ ಕೂಡಾ ಆತ
ಆವಿಷ್ಟನಾಗಿದ್ದ. ಯಾರು ಹುಟ್ಟಿದಾಗ ಭೂಮಿಯೇ ಸೀಳಿತೋ, ಅಂತಹ ಮಹಾಬಲಿಷ್ಠ ಈತನಾಗಿದ್ದ. ಭೂ-ಭಾರ ಕ್ಷಪಣ(ನಾಶ) ಕಾರ್ಯದಲ್ಲಿ ನಾರಾಯಣನ ಸೇವೆ
ಮಾಡಲಿಕ್ಕಾಗಿಯೇ ಈತ ಈರೀತಿ ಹುಟ್ಟಿ ಬಂದಿದ್ದ.
[^‘ಪ್ರಹ್ಲಾದೋ ನಾಮ
ಬಾಹ್ಲೀಕಃ ಸ ಬಭೂವ ನರಾದಿಪಃ’ ಎಂದು ಈ ಅಂಶವನ್ನು ಮಹಾಭಾರತದ ಅಂಶಾವತರಣ ಪರ್ವದಲ್ಲೇ(೬೮.೩೧) ಹೇಳಲಾಗಿದೆ].
No comments:
Post a Comment