ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 19, 2023

Mahabharata Tatparya Nirnaya Kannada 32-74-85

 

[ಏಕೆ ಧರ್ಮರಾಜ ತಾನು ಊಹಿಸಿ ಹೇಳಿದ ದೋಷಗಳು ನಿಜವಾಗಿ ಅವರ ದೋಷಗಳೇ ಆಗಿರಲಿಲ್ಲ  ಎನ್ನುವುದನ್ನು ವಿವರಿಸುತ್ತಾರೆ-]

 

ಭೀಮಾದೃತೇ ಹಿ ಚತುರ್ಷು ಪಕ್ಷಪಾತಸ್ತು ವಾಸವೌ ।

ಯೋಗ್ಯ ಏವೇತಿ ಕೃಷ್ಣಾಯಾ ನ ದೋಷಃ ಸ್ಯಾತ್ ಕಥಞ್ಚನ ॥ ೩೨.೭೪ ॥

 

ನೀತಿರೂಪೇ ವೀರ್ಯ್ಯಬಲೇ ಮಹಾನ್ತ್ಯೇಷಾಂ ಯತಃ ಕ್ರಮಾತ್ ।

ಪ್ರಾಣತ್ವಾದ್ ಭೋಗಶಕ್ತಿಶ್ಚ ನಹಿ ದೋಷಾಯ ಮಾರುತೇಃ ॥ ೩೨.೭೫ ॥

 

‘ಯಥಾಸ್ವರೂಪವಿಜ್ಞಾನಮಾತ್ಮನ್ಯಪಿ ನ ದೋಷಕೃತ್ ’ ।

ಇತಿ ವ್ಯಾಸಸ್ಮೃತೇರೇಷಾಮುಕ್ತದೋಷೋದ್ಭವಃ ಕಥಮ್ ॥ ೩೨.೭೬ ॥

 

ಭೀಮನನ್ನು ಬಿಟ್ಟು ಉಳಿದ ನಾಲ್ಕುಜನ ಪಾಂಡವರಲ್ಲಿ ಗುಣದಲ್ಲಿ ಶ್ರೇಷ್ಠನಾದವನು ಅರ್ಜುನ. ಹೀಗಾಗಿ ಗುಣಾನುರೂಪವಾದಪ್ರೀತಿ ದೋಷವಲ್ಲ. ನೀತಿ, ಸೌಂದರ್ಯ, ವೀರ್ಯ ಮತ್ತು ಬಲ - ಈ ಗುಣಗಳು ಹೆಚ್ಚುವಿಕೆಯ ಕ್ರಮದಲ್ಲಿ ಪಾಂಡವರಲ್ಲಿ(ಕ್ರಮವಾಗಿ ಸಹದೇವ, ನಕುಲ, ಯುಧಿಷ್ಠಿರ, ಅರ್ಜುನ ಮತ್ತು ಭೀಮರಲ್ಲಿ) ಇದ್ದವು. ಹಾಗಾಗಿ ಇದೂ ದೋಷಕ್ಕೆ ಕಾರಣವಲ್ಲ. ಅತ್ಯಂತ ಕ್ರಿಯೆ ಇರುವುದರಿಂದ ಭೀಮನಲ್ಲಿ ಭೋಗಶಕ್ತಿ ಇತ್ತು. ಅವನ ಆ ಶಕ್ತಿ ದೋಷದಾಯಕವಲ್ಲ. ‘ತನ್ನಲ್ಲಿ ಎಷ್ಟು ಗುಣ ಇದೆಯೋ, ಅಷ್ಟನ್ನು ತಿಳಿದುಕೊಳ್ಳುವುದೂ ದೋಷವಲ್ಲ’ - ಇದು ವ್ಯಾಸಸ್ಮೃತಿಯ ಮಾತು. ಹಾಗಾಗಿ ಧರ್ಮರಾಜ ಹೇಳಿದ ದೋಷ ಎಲ್ಲಿಂದ ಬಂದೀತು?

 

ಕದಾಚಿದತಿಮಾನೋSಪಿ ತ್ರಯಾಣಾಮೇಷು ಜಾಯತೇ ।

ತಥಾSಪಿ ತತ್ಫಲಂ ನೈತತ್ ತಾರತಮ್ಯಂ ಹಿ ಮುಕ್ತಿಗಮ್ ॥ ೩೨.೭೭ ॥

 

ಗುಣದೋಷಾಧಿಕಾಲ್ಪತ್ವಾದತ್ರಸ್ಥಮಪಿ ಹಿ ಶ್ರುತಮ್ ।

ಆರಬ್ಧಕರ್ಮ್ಮನಾಶೇ ಹಿ ಪತೇದ್ ದೇಹೋSಪ್ಯಪಾಪಿನಃ ॥ ೩೨.೭೮ ॥

 

ಕೆಲವು ಸಂದರ್ಭಗಳಲ್ಲಿ, ಅರ್ಜುನ ಸೇರಿದಂತೆ ಮೂವರು ತಮ್ಮ ಗುಣಗಳ ಬಗ್ಗೆ ಅತಿಯಾದ ಅಹಂಕಾರವನ್ನು ಅನುಭವಿಸುತ್ತಿದ್ದರೂ ಕೂಡಾ, ಅವರು ತಮ್ಮ ದೇಹವನ್ನು ತ್ಯಜಿಸಿರುವುದು ಅದರ ಫಲದಿಂದಲ್ಲ. ಏಕೆಂದರೆ ಅದರ ಫಲ ಮುಕ್ತಿಯಲ್ಲಿ ತಾರತಮ್ಯವಾಗಿದೆ.

ಗುಣ ಹಾಗೂ ದೋಷ ಇತ್ಯಾದಿಗಳು ಇಲ್ಲಿ ದೇಹ ಬೀಳಲು ಕಾರಣವಲ್ಲ. ಪ್ರಾರಬ್ಧಕರ್ಮ ನಾಶವಾದಾಗ ಪಾಪಿ ಅಲ್ಲದವನ ದೇಹವೂ ಕೂಡಾ ಬಿದ್ದೇ ಬೀಳುತ್ತದೆ.

 

ಯುಧಿಷ್ಠಿರೋSಪಿ ಹಿ ಸ್ವರ್ಗ್ಗಂ ಬುಭುಜೇ ನೈವ ತತ್ತನುಃ ।

ಅತಿಮಾನಾದಯೋ ದೋಷಾಃ ಕುತ ಏವ ಹಿ ಮಾರುತೇಃ ॥ ೩೨.೭೯ ॥

 

ಯುಧಿಷ್ಠಿರನೂ ಕೂಡಾ ಮಾನವ ಶರೀರದಿಂದ ಸ್ವರ್ಗವನ್ನು ಭೋಗಿಸಲಿಲ್ಲ. ಹೀಗಿರುವಾಗ ಯುಧಿಷ್ಠಿರ ಹೇಳಿರುವ ಅತಿಮಾನ ಇತರ ದೋಷಗಳು ಯಾವರೀತಿ ಭೀಮಸೇನನಿಗೆ ಅನ್ವಯಿಸುತ್ತದೆ? (ಅನ್ವಯಿಸುವುದಿಲ್ಲ).

 

ಅನಾದಿಕಾಲತಃ ಸರ್ವದೋಷಹೀನಾ ಗುಣಾಧಿಕಾಃ ।

ಸರ್ವಜೀವಗಣೇಭ್ಯೋ ಯೇ ತೇ ಹಿ ವಾಯುತ್ವಮಾಪ್ನುಯುಃ  ॥ ೩೨.೮೦ ॥

 

ಋಜವೋ ನಾಮ ಯೇ ದೇವಾ ದೇವಾನಾಮಪಿ ದೇವತಾಃ ।

ಅಭಾವಂ ಹ್ಯತಿಮಾನಾದೇರ್ಭೀಮಸ್ಯಾSಹ ಚ ಕೇಶವಃ  ॥ ೩೨.೮೧ ॥

 

ಅನಾದಿಕಾಲದಿಂದ ದೋಷರಹಿತರು ಹಾಗೂ ಎಲ್ಲಾ ಜೀವಗಣಗಳಿಗಿಂತಲೂ ಗುಣದಿಂದ ಮಿಗಿಲಾದ ಋಜುಗಳೇ ವಾಯುಪದವಿಯನ್ನು ಹೊಂದುವುದು. ಅಂತಹ ಋಜುಗಳು ದೇವತೆಗಳಿಗೂ ದೇವತೆಗಳು. ಕೃಷ್ಣನೂ ಕೂಡಾ ಭೀಮಸೇನನಲ್ಲಿ ಅಹಂಕಾರ ಮೊದಲಾದವುಗಳ ಇಲ್ಲದಿರುವಿಕೆಯನ್ನು ಹೇಳಿದ್ದನಷ್ಟೇ.

 

[ಕೃಷ್ಣನ ಮಾತನ್ನು ಉಲ್ಲೇಖಿಸುತ್ತಾರೆ-]

 

‘ಯತ್ಕಿಞ್ಚಾSತ್ಮನಿ ಕಲ್ಯಾಣಂ ಸಮ್ಭಾವಯಸಿ ಪಾಣ್ಡವ ।

‘ಸಹಸ್ರಗುಣಮಪ್ಯೇತತ್ ತ್ವಯಿ ಸಮ್ಭಾವಯಾಮ್ಯಹಮ್’ ॥ ೩೨.೮೨ ॥

 

‘ಓ ಪಾಂಡವನೇ, ನೀನು ನಿನ್ನಲ್ಲಿ ಏನೊಂದು ಮಂಗಳವನ್ನು ತಿಳಿದುಕೊಳ್ಳುತ್ತೀಯೋ, ಅದು ನಿನ್ನಲ್ಲಿ ಸಾವಿರಪಟ್ಟಿದೆ ಎಂದು ನಾನು ತಿಳಿದಿದ್ದೇನೆ’. [ಉದ್ಯೋಗಪರ್ವದಲ್ಲಿ(೭೬.೩-೪; ೧೮) ಈ ವಿವರ ಕಾಣಸಿಗುತ್ತದೆ. ಹೀಗಾಗಿ ಭೀಮಸೇನನಲ್ಲಿ ಅತಿಮಾನ ಇಲ್ಲವೇ ಇಲ್ಲ].

 

ಇತಿ ತಸ್ಮಾದ್ ಯಥಾ ಯುದ್ಧೇ ಧರ್ಮ್ಮಹಾನಿಮಮನ್ಯತ ।

ಏವಮತ್ರಾಪ್ಯಧರ್ಮ್ಮೇಣ ದೇಹಪಾತಂ ನೃಪೋSಬ್ರವೀತ್ ॥ ೩೨.೮೩ ॥

 

ಈ ಎಲ್ಲಾ ಕಾರಣಗಳಿಂದಾಗಿ ಧರ್ಮರಾಜನು, ಹೇಗೆ ಯುದ್ಧದಲ್ಲಿ ಧರ್ಮಹಾನಿಯನ್ನು ತಿಳಿದನೋ, ಹಾಗೆಯೇ ಇಲ್ಲಿಯೂ ಕೂಡಾ ‘ಅಧರ್ಮದ ಕಾರಣದಿಂದ ದೇಹದ ಬೀಳುವಿಕೆ ಆಯಿತು’ ಎಂದು ಹೇಳಿದನು.

 

ಪೂಜ್ಯೇಭ್ಯಃ ಪೂರ್ವಮೇವೈಷಾಂ ದೇಹಪಾತಮಭೀಪ್ಸತಾಮ್ 

ತತ್ಕಾಮಾದ್ ದೇಹಪಾತೋSಭೂನ್ನ ಪಾಪಾನ್ಮುಚ್ಯತಾಂ ಯಥಾ ॥ ೩೨.೮೪ ॥

 

ನಹಿ ಪಾಪಫಲಾನ್ಮುಕ್ತೌ ದೇಹಪಾತಃ ಕಥಞ್ಚನ ।

ಕಿನ್ತು ಕರ್ಮ್ಮಕ್ಷಯಾದೇವ ತಥಾ ಸರ್ವತ್ರ ನಿಶ್ಚಿತಃ ॥ ೩೨.೮೫ ॥

 

ಹಿರಿಯರಿಗಿಂತ ಮೊದಲೇ ತಮ್ಮ ದೇಹ ಬೀಳಬೇಕು ಎಂದು ಬಯಸಿರಿರುವುದರಿಂದ ದೇಹ ಬಿದ್ದಿತೇ ಹೊರತು ಪಾಪದೋಷದಿಂದ ಬಿದ್ದಿರುವುದಲ್ಲ. ಕರ್ಮಕ್ಷಯದಿಂದಲೇ ದೇಹಪಾತ ಎನ್ನುವುದು ಎಲ್ಲೆಡೆ ನಿಶ್ಚಿತವಾದ ಪ್ರಮೇಯ. ಮುಕ್ತಿಯಾಗುವಾಗಲೂ ದೇಹಪಾತವಾಗುತ್ತದೆ, ಅದು ಪಾಪದೋಷದ ಕಲ್ಪನೆಯಲ್ಲ.

No comments:

Post a Comment