ಕೃಷ್ಣೋ ಜಿತ್ವಾ
ಮಾಗಧಂ ರೌಹಿಣೇಯಯುಕ್ತೋ ಯಯೌ ದಮಘೋಷೇಣ ಸಾರ್ದ್ಧಮ್ ।
ಪಿತೃಷ್ವಸಾಯಾಃ
ಪತಿನಾ ತೇನ ಚೋಕ್ತಃ ಪೂರ್ವಂ ಜಿತೇನಾಪಿ ಯುಧಿ ಸ್ಮ ಬಾನ್ಧವಾತ್ ॥೧೬.೨೮ ॥
ಕೃಷ್ಣನು ಬಲರಾಮನಿಂದ ಕೂಡಿಕೊಂಡು ಮಾಗಧನನ್ನು ಗೆದ್ದು, ತನ್ನ ಅತ್ತೆಯ
ಗಂಡನಾದ ದಮಘೋಷನಿಂದ ಕೂಡಿಕೊಂಡು ಅಲ್ಲಿಂದ ತೆರಳಿದನು. ಈಗಷ್ಟೇ ಯುದ್ಧದಲ್ಲಿ ಸೋತ ದಮಘೋಷನೊಂದಿಗೆ
ಬಾಂಧವ್ಯ ಇರುವುದರಿಂದಾಗಿ ಅವರಿಬ್ಬರು ಜೊತೆಯಾಗಿ
ಅಲ್ಲಿಂದ ತೆರಳಿದರು.
[ವಸುದೇವನ ಸಹೋದರಿ ಶ್ರುತದೇವೇ. ಅವಳ ಪತಿ ದಮಘೋಷ. ಇವರ ದಾಂಪತ್ಯದಲ್ಲಿ
ಹುಟ್ಟಿಬಂದವನೇ ಶಿಶುಪಾಲ. ಆದ್ದರಿಂದ ದಮಘೋಷ ಶ್ರೀಕೃಷ್ಣನ ಸೋದರತ್ತೆಯ ಗಂಡ (ಪಿತೃಷ್ವಸಾಯಾಃ ಪತಿ)]
ಯಾಮಃ ಪುರಂ ಕರಿವೀರಾಖ್ಯಮೇವ
ಮಹಾಲಕ್ಷ್ಮ್ಯಾಃ ಕ್ಷೇತ್ರಸನ್ದರ್ಶನಾಯ ।
ಶ್ರುತ್ವಾ ವಾಕ್ಯಂ
ತಸ್ಯ ಯುದ್ಧೇ ಜಿತಸ್ಯ ಭೀತ್ಯಾ ಯುಕ್ತಸ್ಯಾsತ್ಮನಾ ತದ್ಯುತೋsಗಾತ್ ॥೧೬.೨೯ ॥
‘ಕರವೀರಪುರ (ಕೋಲ್ಹಾಪುರ)ಎಂಬ ಹೆಸರಿನ ಮಹಾಲಕ್ಷ್ಮಿಯ ಕ್ಷೇತ್ರವನ್ನು
ನೋಡಲು ಹೊರಡೋಣ’ ಎನ್ನುವ ಭಯದಿಂದ ಕೂಡಿದ,
ತನ್ನಿಂದ ಸೋತಿರುವ ದಮಘೋಷನ ಮಾತಿನಂತೆ ಶ್ರೀಕೃಷ್ಣ ಕರವೀರ ಕ್ಷೇತ್ರಕ್ಕೆ ತೆರಳಿದನು.
ಗನ್ಧರ್ವೋsಸೌ ದನುನಾಮಾ ನರೋsಭೂತ್ ತಸ್ಮಾತ್ ಕೃಷ್ಣೇ ಭಕ್ತಿಮಾಂಶ್ಚಾsಸ ರಾಜಾ ।
ಪುರಪ್ರಾಪ್ತಾಂಸ್ತಾನ್
ಸ ವಿಜ್ಞಾಯ ಪಾಪಃ ಸೃಗಾಲಾಖ್ಯೋ ವಾಸುದೇವಃ ಕ್ರುಧಾssಗಾತ್ ॥೧೬.೩೦ ॥
ಈ ದಮಘೋಷನು ಮೂಲತಃ ‘ದನು’
ಎಂಬ ಹೆಸರುಳ್ಳ ಗಂಧರ್ವನು. ಈಗ ಮನುಷ್ಯಲೋಕದಲ್ಲಿ ಅವತರಿಸಿ ಬಂದಿರುವವನು. ಆಕಾರಣದಿಂದ ಕೃಷ್ಣನಲ್ಲಿ
ಭಕ್ತಿಯುಳ್ಳವನಾದನು.
ಇತ್ತ ಕರವೀರಪುರಕ್ಕೆ ಬಂದಿರುವ ಅವರನ್ನು ತಿಳಿದ ಪಾಪಿಷ್ಠನಾಗಿರುವ
ಸೃಗಾಲವಾಸುದೇವನು ಸಿಟ್ಟಿನಿಂದ ಅವರತ್ತ ಬಂದನು.
ಸೂರ್ಯ್ಯಪ್ರದತ್ತಂ
ರಥಮಾರುಹ್ಯ ದಿವ್ಯಂ ವರಾದವದ್ಧ್ಯಸ್ತಿಗ್ಮರುಚೇಃ ಸ ಕೃಷ್ಣಮ್ ।
ಯೋದ್ಧುಂ ಯಯಾವಮುಚಚ್ಚಾಸ್ತ್ರಙ್ಘಾಞ್ಛಿರಸ್ತಸ್ಯಾಥಾsಶು ಜಹಾರ ಕೃಷ್ಣಃ ॥ ೧೬.೩೧ ॥
ಸೃಗಾಲವಾಸುದೇವನು ಸೂರ್ಯಕೊಟ್ಟ ರಥವನ್ನು ಏರಿ, ಸೂರ್ಯನ ವರದಿಂದ
ಅವಧ್ಯನಾದವನಾಗಿ, ಕೃಷ್ಣನನ್ನು ಕುರಿತು ಯುದ್ಧಮಾಡಲೆಂದು ಬಂದ. ಅನೇಕ ಅಸ್ತ್ರಗಳನ್ನು ಬಿಟ್ಟ ಆ
ಸೃಗಾಲವಾಸುದೇವನ ಕತ್ತನ್ನು ಶ್ರೀಕೃಷ್ಣ ತಕ್ಷಣ
ಕತ್ತರಿಸಿದ.
ದ್ವಿಧಾ ಕೃತ್ವಾ
ದೇಹಮಸ್ಯಾರಿಣಾ ಚ ಪುತ್ರಂ ಭಕ್ತಂ ತಸ್ಯ ರಾಜ್ಯೇsಭಿಷಿಚ್ಯ ।
ಸ ಶಕ್ರದೇವಂ ಮಾಣಿಭದ್ರಃ
ಪುರಾ ಯೋ ಯಯೌ ಪುರೀಂ ಸ್ವಾಂ ಸಹಿತೋsಗ್ರಜೇನ ॥೧೬.೩೨ ॥
ಸೃಗಾಲ ವಾಸುದೇವನ ದೇಹವನ್ನು ಚಕ್ರದಿಂದ ಎರಡನ್ನಾಗಿ ಮಾಡಿ, ತನ್ನ
ಭಕ್ತನಾದ ಸೃಗಾಲ ವಾಸುದೇವನ ಮಗನಾದ ಶಕ್ರದೇವ ಎನ್ನುವ ಹೆಸರಿನ ತನ್ನ ಭಕ್ತನನ್ನು ರಾಜ್ಯದಲ್ಲಿ
ಅಭಿಷೇಕ ಮಾಡಿದ ಶ್ರೀಕೃಷ್ಣ, ತನ್ನ ಪಟ್ಟಣಕ್ಕೆ ತೆರಳಿದನು.
ಈ ಶಕ್ರದೇವ ಯಾರೆಂದರೆ: ಅವನು ಮಣಿಭದ್ರನ (ಕುಬೇರನ) ಸೇವಕ. ಅವನಿಗೆ ರಾಜ್ಯಾಭಿಷೇಕ ಮಾಡಿ, ತನ್ನ ಅಣ್ಣನೊಂದಿಗೆ ಕೂಡಿಕೊಂಡು ಶ್ರೀಕೃಷ್ಣ ಮಧುರೆಗೆ ತೆರಳಿದನು.
[ಹರಿವಂಶದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ಸಾವಿತ್ರೇ ನಿಯಮೇ
ಪೂರ್ಣೆ ಯಂ ದದೌ ಸವಿತಾ ಸ್ವಯಮ್ ।.... ತೇನ
ಸ್ಯಂದನಮುಖ್ಯೇನ ದ್ವಿಷತ್ಸ್ಯನ್ದನಘಾತಿನಾ । ಸ ಸೃಗಾಲೋsಭ್ಯಯಾತ್ ಕೃಷ್ಣಂ ಶಲಭಃ ಪಾವಕಂ ಯಥಾ’ (ವಿಷ್ಣುಪರ್ವಣಿ ೪೪.೬-೭) ‘ಚಕ್ರೇಣೋರಸಿ
ನಿರ್ಭಿಣ್ಣಃ ಸಗತಾಸುರ್ಗತೋತ್ಸವಃ’ (ವಿಷ್ಣುಪರ್ವಣಿ ೪೪.೨೯) (ಇದಲ್ಲದೇ
ಭಾಗವತದಲ್ಲೂ ಈ ಮಾತು ಬರುತ್ತದೆ): ‘ಶಿರೋ ಜಹಾರ ಗೋವಿನ್ದಃ ಕ್ಷಣೇನ ಮಕುಟೋಜ್ಜ್ವಲಂ’(ಭಾಗವತ:
೧೦.೫೨,೩೯). ಇನ್ನು ಹರಿವಂಶದಲ್ಲಿ
ಹೇಳುತ್ತಾರೆ: ಚಕ್ರನಿರ್ದಾರಿತೋರಸ್ಕಂ
ಭಿನ್ನಶೃಙ್ಗಮಿವಾಚಲಮ್’(೩೭) ‘ತಸ್ಯ ಪದ್ಮಾವತೀ ನಾಮ ಮಹಿಷೀ ಪ್ರಮದೊತ್ತಮ । ರುದತಿ
ಪುತ್ರಮಾದಾಯವಾಸುದೇವಮುಪಸ್ಥಿತಾ ।... (ಸೃಗಾಲವಾಸುದೇವನ ಹೆಂಡತಿ ಪದ್ಮಾವತಿ ತನ್ನ ಮಗನನ್ನು
ಕರೆದುಕೊಂಡು ಬಂದು ಪರಮಾತ್ಮನಿಗೆ ನಮಸ್ಕಾರ ಮಾಡುತ್ತಾಳೆ). ಅಯಮಸ್ಯ ವಿಪನ್ನಸ್ಯ ಬಾಂಧವಸ್ಯ ತವಾನಘ । ಸಂತತಿ ರಕ್ಷ್ಯತಾಂ ವೀರ
ಪುತ್ರಃ ಪುತ್ರ ಇವಾsತ್ಮಜಃ । (ನಿನ್ನ ಅಣ್ಣನ ಮಗನಾಗಿರುವುದರಿಂದ ಇವನು
ನಿನ್ನ ಮಗನೇ ಎಂದು ಶ್ರಿಕೃಷ್ಣನಲ್ಲಿ ಆಕೆ ಹೇಳುತ್ತಾಳೆ).
ತಸ್ಯಾಸ್ತದ್ ವಚನಂ ಶ್ರುತ್ವಾ ಮಹಿಷ್ಯಾ
ಯದುನಂದನಃ । ಮೃದುಪೂರ್ವಮಿದಂ ವಾಕ್ಯಮುವಾಚ ವದತಾಂ ವರಃ । (ಆಕೆಯೊಂದಿಗೆ ಶ್ರೀಕೃಷ್ಣ ಮೃದುವಾಗಿ ಮಾತನಾಡುತ್ತಾನೆ). ಯೋsಯಂ ಪುತ್ರಃ ಸೃಗಾಲಸ್ಯ ಮಮಾಪ್ಯೇಷ ನ ಸಂಶಯಃ । ಅಭಯಂ ಚಾಭಿಷೇಕಂ ಚ ದದಾಮ್ಯಸ್ಯ ಸುಖಾಯ ವೈ’ (ವಿಷ್ಣುಪರ್ವಣಿ. ೪೪.೪೮-೫೬) (ಶ್ರೀಕೃಷ್ಣ ಅವರಿಗೆ
ತನ್ನ ಅಭಯ ದಾನ ಮಾಡುತ್ತಾನೆ).
ಹರಿವಂಶದಲ್ಲಿ ಸೃಗಾಲವಾಸುದೇವನ
ಮಗನಿಗೆ ಅಭಿಷೇಕ ಮಾಡಿ ಅದೇ ದಿನ ಕೃಷ್ಣ-ಬಲರಾಮರು ಹೊರಟರು ಎಂದಿದೆ. ‘ಅಭಿಷಿಚ್ಯ ಸೃಗಾಲಸ್ಯ ಕರವೀರಪುರೇ ಸುತಂ । ಕೃಷ್ಣಸ್ತದಹರೇವಾsಶು ಪ್ರಯಾಣಮಭಿರೋಚಯತ್’ (ವಿಷ್ಣುಪರ್ವಣಿ ೪೪.೫೯) ಇನ್ನು
ಭಾಗವತದಲ್ಲಿ ನಾಕು ತಿಂಗಳು ವಾಸಮಾಡಿದರು
ಎಂದಿದೆ. ಅವರುಹ್ಯ ಗಿರೇಃ ಶೃಙ್ಗಾತ್ ಕರವೀರಪುರಂ ಗತೌ । ತತ್ರ ತೌ ಚತುರೋ ಮಾಸಾನುಶಿತ್ವಾ ಭರತರ್ಷಭ । ಮಹತ್ಯಾ ಸೇನಯಾ ಸಾರ್ಧಂ ಜಗ್ಮತುರ್ಮಧುರಾಂ ಪುರಿಮ್’ (ಭಾಗವತ ೧೦.೫೩.೨೦-೨೧) ಈ ಗೊಂದಲವನ್ನು ಆಚಾರ್ಯರು ಪರಿಹರಿಸುತ್ತಾ,
ಗೋಮಂತ ಪರ್ವತದಲ್ಲಿ ಶ್ರೀಕೃಷ್ಣ-ಬಲರಾಮರು ನಾಲ್ಕು ತಿಂಗಳು ವಾಸಮಾಡಿದರು ಎನ್ನುವ ನಿರ್ಣಯವನ್ನು
ನೀಡಿದ್ದಾರೆ].
ನೀತಿಂ ಬಲಿಷ್ಠಸ್ಯ
ವಿಹಾಯ ಸೇನಾಂ ದೂರಾದ್ ಯುದ್ಧಂ ದರ್ಶಯಿತ್ವೈವ ಗುಪ್ತ್ಯೈ ।
ಸ್ವಸೇನಾಯಾಃ ಸರ್ವಪೂರ್ಣ್ಣಾತ್ಮಶಕ್ತಿಃ
ಪುನಃ ಪುರೀಂ ಪ್ರಾಪ್ಯ ಸ ಪೂಜಿತೋsವಸತ್ ॥೧೬.೩೩ ॥
ಬಲಿಷ್ಠನೊಬ್ಬನು ಸೇನೆಯನ್ನು ಬಿಟ್ಟು ಬಹಳ ದೂರದಿಂದಲೇ ತನ್ನ ದೇಶದ ರಕ್ಷಣೆಗಾಗಿ
ಯುದ್ಧವನ್ನು ಯಾವ ರೀತಿ ಮಾಡಬೇಕು ಎಂದು ತೋರಿಸಿ, ತನ್ನ
ಸೇನೆಯನ್ನು ಯಾವರೀತಿ ರಕ್ಷಿಸಿಕೊಳ್ಳಬೇಕು ಎನ್ನುವ ನೀತಿಯನ್ನು ತೋರಿಸಿ, ಪೂರ್ಣಶಕ್ತಿಯಾದ
ಪರಮಾತ್ಮನು ಮತ್ತೆ ಮಧುರೆಗೆ ತೆರಳಿ ಪೂಜಿತನಾಗಿ ಅಲ್ಲಿ ಆವಾಸಮಾಡಿದ.
॥ ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸೃಗಾಲವಧೋ ನಾಮ ಷೋಡಶೋsದ್ಧ್ಯಾಯಃ ॥