ಪ್ರಷ್ಟಾ ಚ ದಾತಾSಖಿಲರಾಜನಮ್ಯೋ ಯಷ್ಟಾ ಚ ಧರ್ಮ್ಮಾತ್ಮಜ
ಏವ ತತ್ರ ।
ಬಭೂವ ಪಾಣ್ಡೋರ್ಗ್ಗೃಹಮಾವಸಂಶ್ಚ
ರಾಜಾಧಿರಾಜೋ ವನಿತಾನಿವೃತ್ತಃ ॥ ೩೦.೦೬ ॥
ಧರ್ಮರಾಜ ಪಾಂಡುವಿನ
ಮನೆಯಲ್ಲಿ ವಾಸಮಾಡುತ್ತಿದ್ದ. ಸ್ತ್ರೀಭೋಗದಿಂದ ನಿವೃತ್ತನಾದ ಅವನು ಪ್ರಶ್ನೆಮಾಡುವವನಾಗಿಯೂ, ಎಲ್ಲಾ ರಾಜರಿಂದ ನಮಸ್ಕಾರಕ್ಕೆ
ಒಳಗಾದವನಾಗಿಯೂ, ಯಾಗ ಮಾಡುವವನಾಗಿಯೂ ಇರುತ್ತಿದ್ದ.
ಭೀಮಸ್ತು ದೌರ್ಯ್ಯೋಧನಮೇವ
ಸದ್ಮ ಪ್ರಪೇದಿವಾನೂರ್ಜ್ಜಿತವೀರ್ಯ್ಯಲಬ್ಧಮ್ ।
ಕೃಷ್ಣಾಸಹಾಯಃ
ಸುರರಾಜಯೋಗ್ಯಾನಭುಙ್ಕ್ತ ಭೋಗಾನ್ ಯುವರಾಜ ಏವ ॥ ೩೦.೦೭ ॥
ಯುವರಾಜನಾದ ಭೀಮಸೇನನು ತನ್ನ
ಉತ್ಕೃಷ್ಟವಾದ ಪರಾಕ್ರಮದಿಂದ ಪಡೆದುಕೊಂಡ ದುರ್ಯೋಧನನ ಮನೆಯನ್ನು ಹೊಂದಿದವನಾಗಿ, ಅಲ್ಲಿ
ದ್ರೌಪದಿಯಿಂದ ಕೂಡಿಕೊಂಡು ಅಲೌಕಿಕವಾದ (ದೇವೇಂದ್ರ ಮಾತ್ರ ಹೊಂದಬಲ್ಲ) ಭೋಗಗಳನ್ನು ಭೋಗಿಸಿದನು.
ಕೃಷ್ಣಾ ಚ ಪಾರ್ತ್ಥಾಂಶ್ಚತುರೋ
ವಿಹಾಯ ಸುವ್ಯಕ್ತಸಾರಸ್ವತಶುದ್ಧಭಾವಾ ।
ರರಾಜ ರಾಜಾವರಜೇನ
ನಿತ್ಯಮನನ್ಯಯೋಗೇನ ಶಿಖೇವ ವಹ್ನೇಃ ॥ ೩೦.೦೮ ॥
ಭಾರತೀದೇವಿಯ ಅಸ್ತಿತ್ವವು
ಸಂಪೂರ್ಣವಾಗಿ ಅಭಿವ್ಯಕ್ತಿಹೊಂದಿದ ದ್ರೌಪದಿಯು, ಇತರ ಪಾಂಡವರನ್ನು ಬಿಟ್ಟು, ಅಗ್ನಿಯ ಜ್ವಾಲೆಯಂತೆ, ಬೇರೆಯವರ ಸಂಪರ್ಕವಿಲ್ಲದೇ, ಧರ್ಮರಾಜನ ತಮ್ಮನಾಗಿರುವ ಭೀಮಸೇನನೊಂದಿಗೆ ಶೋಭಿಸಿದಳು.
ಪ್ರೀತ್ಯೈವ
ವಿಜ್ಞಾನಯುಜಾSನ್ಯಪಾರ್ತ್ಥೈಃ
ಸಂವಾದತಃ ಪರಿಹೃತಾ ಗತಭಾವಿಕಾಲೇ ।
ಅಪಿ ಸ್ವಕೀಯಂ ಪತಿಮೇವ
ಭೀಮಮವಾಪ್ಯ ಸಾ ಪರ್ಯ್ಯಚರನ್ಮುದೈವ ॥ ೩೦.೦೯ ॥
ಪ್ರಜ್ಞೆಯನ್ನು
ಹೊಂದಿರುವ ಅವಳಿಂದ ಪ್ರೀತಿಯಿಂದಲೇ, ಉಳಿದ ಪಾಂಡವರೊಡನೆ ಸಂವಾದಮಾಡಿ, ಅವರಿಂದ ದೂರ ಇದ್ದಳು. ಹೀಗೆ
ತನ್ನ ಸ್ವಕೀಯ ಪತಿಯಾದ ಭೀಮಸೇನನನ್ನು ಹೊಂದಿ ದ್ರೌಪದಿ ಆನಂದದಿಂದಿದ್ದಳು.
ರರಾಜ ರಾಜಾವರಜಸ್ತಯಾ ಸ
ದ್ವಿರೂಪಯಾ ಸೋಮಕಕಾಶಿಜಾತಯಾ ।
ಶ್ರಿಯಾ ಭುವಾ ಚೈವ ಯಥಾSಬ್ಜನಾಭೋ ನಿಹತ್ಯ ಸರ್ವಾನ್
ದಿತಿಜಾನ್ ಮಹಾಬ್ಧೌ ॥ ೩೦.೧೦ ॥
ಯಾವ ರೀತಿ ಶ್ರೀಮನ್ನಾರಾಯಣನು
ಎಲ್ಲಾ ರಾಕ್ಷಸರನ್ನು ಕೊಂದು,
ಕ್ಷೀರಸಾಗರದಲ್ಲಿ ಶ್ರೀದೇವಿ- ಭೂದೇವಿಯರಿಂದ ಕೂಡಿ ಶೋಭಿಸಿರುವನೋ ಹಾಗೆಯೇ, ದ್ರೌಪದಿ ಮತ್ತು
ಕಾಳಿ ಎನ್ನುವ ಎರಡು ರೂಪದಲ್ಲಿರುವ ಭಾರತೀದೇವಿಯೊಂದಿಗೆ ಭೀಮಸೇನನು ಶೋಭಿಸಿದನು.
No comments:
Post a Comment