ವಾಸಿಷ್ಠವೃಷ್ಣಿಪ್ರವರೌ
ಪ್ರಪಶ್ಯತಾಂ ತಾಭ್ಯಾಂ ಚ ಭೀಮೇನ ಮುನೀಶ್ವರೈಶ್ಚ ।
ಸಂಶಿಕ್ಷಿತಾನಾಂ
ಪ್ರಥಮಾದ್ ಯುಗಾಚ್ಚ ಗುಣಾಧಿಕಃ ಕಲಿರಾಸೀತ್ ಪ್ರಜಾನಾಮ್ ॥ ೩೦.೧೬ ॥
ಶ್ರೀಕೃಷ್ಣ ಹಾಗೂ ವೇದವ್ಯಾಸರು
ನಿರಂತರವಾಗಿ ಹಸ್ತಿನಪುರದ ಮೇಲೆ ತಮ್ಮ ಗಮನವನ್ನಿಟ್ಟಿದ್ದರು. ಅವರಿಬ್ಬರಿಂದಲೂ, ಭೀಮಸೇನನಿಂದಲೂ, ಶ್ರೇಷ್ಠ ಮುನಿಗಳಿಂದಲೂ ಚೆನ್ನಾಗಿ
ಶಿಕ್ಷಿತರಾದ ಪ್ರಜೆಗಳು ಕೃಷ್ಣ ಹಾಗೂ ವೇದವ್ಯಾಸರನ್ನು ನೋಡುತ್ತಿದ್ದರು. ಅವರಿಬ್ಬರ ಮಾರ್ಗದರ್ಶನ
ಅವರಿಗೆ ಸಿಗುತ್ತಿತ್ತು. ಜೊತೆಗೆ ಭೀಮಸೇನ ಹಾಗೂ ಋಷಿ-ಮುನಿಗಳ
ಮಾರ್ಗದರ್ಶನವೂ ಅವರಿಗೆ ಸಿಗುತ್ತಿತ್ತು.
ಅದರಿಂದಾಗ ಪ್ರಜೆಗಳ ಪಾಲಿಗೆ ಕಲಿಯುಗವು ಕೃತಯುಗಕ್ಕಿಂತಲೂ ಕೂಡಾ ಗುಣದಿಂದ ಶ್ರೇಷ್ಠವಾದುದಾಯಿತು.
ಶುಭಂ ಮಹತ್ ಸ್ವಲ್ಪಫಲಂ
ಕೃತೇ ಹಿ ವಿಪರ್ಯ್ಯಯೇಣಾಶುಭಮೇಷ ದೋಷಃ ।
ತದ್ಧೀನಮಪ್ಯುಚ್ಚಶುಭಂ
ಕೃತಾದ್ ಯುಗಾಚ್ಚಕ್ರೇ ಕಲಿಂ ಮಾರುತಿರಚ್ಯುತಾಶ್ರಯಾತ್ ॥ ೩೦.೧೭ ॥
ಕೃತಯುಗದಲ್ಲಿ ಬಹಳ
ಪುಣ್ಯಮಾಡಿದರೆ ಸ್ವಲ್ಪ ಫಲ ಆದರೆ ಇದರ ವಿರುದ್ಧ ಪಾಪ. ಅಂದರೆ ಸ್ವಲ್ಪ ಪಾಪಕ್ಕೂ ಅಲ್ಲಿ ಹೆಚ್ಚು ಫಲ. ಆದರೆ ಕಲಿಯುಗ ಕೃತಯುಗಕ್ಕೆ ವಿರುದ್ಧ.
ಇಲ್ಲಿ ಸ್ವಲ್ಪ ಪುಣ್ಯಕ್ಕೆ ಬಹಳ ಫಲ. ಬಹಳ ಪಾಪಕ್ಕೆ ಸ್ವಲ್ಪ ಫಲ. ಭೀಮಸೇನನು ಶ್ರೀಕೃಷ್ಣನ
ಆಶ್ರಯದಿಂದ ಕೃತಯುಗಕ್ಕಿಂತ ಕಲಿಯುಗವನ್ನು ಮಿಗಿಲಾಗಿ ಮಾಡಿದ.
ಧನಞ್ಜಯಃ ಪ್ರೋದ್ಯತದಣ್ಡ
ಆಸೀತ್ ಸದಾSನ್ಯಚಕ್ರೇಷು
ನಿಜಾಗ್ರಜೇರಿತಃ ।
ವಿಭೀಷಯಿತ್ವಾ ನೃಪತೀನ್
ಸರತ್ನಾನ್ ಪದೋರ್ನ್ನೃಪಸ್ಯಾಗ್ರಭುವೋ ನ್ಯಪಾತಯತ್ ॥ ೩೦.೧೮ ॥
ಧನಂಜಯನು
ಯುಧಿಷ್ಠಿರನಿಂದ ಪ್ರೇರಿತನಾಗಿ ಯಾವಾಗಲೂ ಬೇರೆ ರಾಷ್ಟ್ರದವರಲ್ಲಿ ದಂಡ-ಸಂಧಿ ಮೊದಲಾದವುಗಳನ್ನು
ನೋಡಿಕೊಳ್ಳುತ್ತಿದ್ದ. ಎಲ್ಲಾ ರಾಜರಲ್ಲಿ ಭಯವಿರಿಸಿಕೊಂಡು, ಎಲ್ಲರನ್ನೂ ಧರ್ಮರಾಜನಿಗೆ
ವಿನೀತರಾಗಿರುವಂತೆ ಅವನು ನೋಡಿಕೊಳ್ಳುತ್ತಿದ್ದ.
ಸದೈವ ಕೃಷ್ಣಸ್ಯ ಮುಖಾರವಿನ್ದಾದ್ ವಿನಿಸ್ಸೃತಂ ತತ್ವವಿನಿರ್ಣ್ಣಯಾಮೃತಮ್ ।
ಪಿಬನ್ ಸುತಾದ್ಯಾಧಿಮಸೌ
ಕ್ರಮೇಣ ತ್ಯಜಂಶ್ಚ ರೇಮೇ ವಿರತಾತಿಭೋಗಃ ॥ ೩೦.೧೯ ॥
ಯಾವಾಗಲೂ ಶ್ರೀಕೃಷ್ಣನ
ಮುಖಕಮಲದಿಂದ ಹೊರಬಂದ ತತ್ವನಿರ್ಣಯವೆಂಬ ಅಮೃತವನ್ನು ಕುಡಿಯುತ್ತಾ, ಮಕ್ಕಳನ್ನು ಕಳೆದುಕೊಂಡ ಹಾಗೂ
ಇತರ ದುಃಖವನ್ನು ಕ್ರಮವಾಗಿ ಬಿಡುತ್ತಾ, ನಿವೃತ್ತ ಭೋಗವುಳ್ಳವನಾಗಿ ಅರ್ಜುನ
ವಿಹರಿಸಿದನು.
ದುಃಶಾಸನಸ್ಯಾSವಸಥಂ
ಸುಭದ್ರಾಚಿತ್ರಾಙ್ಗದಾಸಹಿತೋSದ್ಧ್ಯಾವಸಂಶ್ಚ ।
ಸಚನ್ದ್ರಿಕಾಕಾನ್ತಿರನೂನಬಿಮ್ಬೋ
ನಭಸ್ಥಿತಶ್ಚನ್ದ್ರ ಇವಾತ್ಯರೋಚತ ॥ ೩೦.೨೦ ॥
ಈರೀತಿಯಾದ ಜೀವನವನ್ನು
ನಡೆಸುವ ಅರ್ಜುನನು ಸುಭದ್ರೆ ಹಾಗೂ ಚಿತ್ರಾಂಗದೆಯರಿಂದ ಕೂಡಿಕೊಂಡು ದುಃಶಾಸನನ ಮನೆಯಲ್ಲಿ ವಾಸಮಾಡುತ್ತಾ, ಬೆಳದಿಂಗಳಿನಿಂದ ಕೂಡಿದ
ಪೂರ್ಣಮಂಡಲವುಳ್ಳ ಚಂದ್ರನಂತೆ ಶೋಭಿಸಿದನು. [ಚಿತ್ರಾಂಗದೆ ಹಿಂದಿನ ಅವತಾರದಲ್ಲಿ ತಾರೆಯಾಗಿದ್ದಾಗ
ಸುಗ್ರೀವನ ಅಂಗಸಂಗವನ್ನು ಮಾಡಿದ್ದ ದೋಷದಿಂದ ಈತನಕ ಗಂಡನಿಂದ ದೂರವಿರಬೇಕಾಗಿ ಬಂದಿತ್ತು].
No comments:
Post a Comment