ಸಪ್ತೋಕ್ಷಣೋsತಿಬಲವೀರ್ಯ್ಯಯುತಾನದಮ್ಯಾನ್ ಸರ್ವೈರ್ಗ್ಗಿರೀಶವರತೋ ದಿತಿಜಪ್ರಧಾನಾನ್ ।
ಹತ್ವಾ ಸುತಾಮಲಭದಾಶು ವಿಭುರ್ಯ್ಯಶೋದಾಭ್ರಾತುಃ
ಸ ಕುಮ್ಭಕಸಮಾಹ್ವಯಿನೋsಪಿ ನೀಲಾಮ್ ॥೧೩.೪೮॥
ಸರ್ವಸಮರ್ಥನಾದ ಶ್ರೀಕೃಷ್ಣನು ರುದ್ರದೇವರ ವರದಿಂದ ಎಲ್ಲರಿಂದಲೂ
ನಿಗ್ರಹಿಸಲು ಆಶಕ್ಯರಾದ, ಅತ್ಯಂತ ಬಲ ಹಾಗು ವೀರ್ಯದಿಂದ ಕೂಡಿರುವ, ಗೂಳಿಗಳ ರೂಪದಲ್ಲಿರುವ
ದೈತ್ಯರನ್ನು ಕೊಂದು, ಕುಂಭಕ ಎನ್ನುವ ಹೆಸರಿನಿಂದ ಕೂಡಿರುವ ಯಶೋದೆಯ ಅಣ್ಣನ ಮಗಳಾದ ನೀಲಾಳನ್ನು ಶೀಘ್ರದಲ್ಲಿ
ಪಡೆದನು.
ಯಾ ಪೂರ್ವಜನ್ಮನಿ ತಪಃ
ಪ್ರಥಮೈವ ಭಾರ್ಯ್ಯಾ ಭೂಯಾಸಮಿತ್ಯಚರದಸ್ಯ ಹಿ ಸಙ್ಗಮೋ ಮೇ ।
ಸ್ಯಾತ್ ಕೃಷ್ಣಜನ್ಮನಿ
ಸಮಸ್ತವರಾಙ್ಗನಾಭ್ಯಃ ಪೂರ್ವಂ ತ್ವಿತಿ ಸ್ಮ ತದಿಮಾಂ ಪ್ರಥಮಂ ಸ ಆಪ ॥೧೩.೪೯॥
ಯಾವಾಕೆಯು ತನ್ನ ಪೂರ್ವಜನ್ಮದಲ್ಲಿ,
‘ವಿಶೇಷತಃ ಕೃಷ್ಣಾವತಾರದಲ್ಲಿ ಭಗವಂತನ ಜೇಷ್ಠಪತ್ನಿಯಾಗಬೇಕು’ ಎಂದು ತಪಸ್ಸನ್ನು ಮಾಡಿದ್ದಳೋ ಅವಳೇ ಈ ನೀಲಾ. ಆಕೆ ಶ್ರೀಕೃಷ್ಣನ
ಇತರ ಎಲ್ಲಾ ಪತ್ನಿಯರಿಗಿಂತ ಮೊದಲೇ ನನಗೆ ಕೃಷ್ಣನ ಸೇರುವಿಕೆಯು ಆಗಬೇಕು ಎಂದು
ತಪಸ್ಸನ್ನು ಮಾಡಿದ್ದಳು. ಆ ಕಾರಣದಿಂದ ಅವಳನ್ನು ಕೃಷ್ಣ ಮೊದಲೇ ಹೊಂದಿದ.
ಅಗ್ರೇ ದ್ವಿತ್ವತ
ಉಪಾವಹದೇಷ ನೀಲಾಂ ಗೋಪಾಙ್ಗನಾ ಅಪಿ ಪುರಾ ವರಮಾಪಿರೇ ಯತ್ ।
ಸಂಸ್ಕಾರತಃ ಪ್ರಥಮಮೇವ
ಸುಸಙ್ಗಮೋ ನೋ ಭೂಯಾತ್ ತವೇತಿ ಪರಮಾಪ್ಸರಸಃ ಪುರಾ ಯಾಃ ॥೧೩.೫೦॥
ಹೀಗೆ ಶ್ರೀಕೃಷ್ಣ ಉಪನಯನ ಸಂಸ್ಕಾರಕ್ಕೂ ಮೊದಲೇ ಮದುವೆಯಾದ. ಇದಕ್ಕೆ ಕಾರಣವೇನೆಂದರೆ:
ಗೋಪಿಕೆಯರೂ ಕೂಡಾ ಈ ಕುರಿತು ಮೊದಲೇ ವರವನ್ನು ಹೊಂದಿದ್ದರು. ‘ಉಪನಯನ ಸಂಸ್ಕಾರಕ್ಕಿಂತ ಮೊದಲೇ
ನಮಗೆ ನಿನ್ನ ದೇಹ ಸಂಗಮವು ಆಗಬೇಕು’ ಎನ್ನುವ ವರ ಅದಾಗಿತ್ತು. ಈ ಎಲ್ಲಾ ಗೋಪಿಕಾಂಗನೆಯರು ಮೂಲತಃ ಉತ್ತಮರಾದ ಅಪ್ಸರ
ಸ್ತ್ರೀಯರೇ ಆಗಿದ್ದರು
No comments:
Post a Comment