ಅನನ್ತಶೀರ್ಷೋsನನ್ತಾಕ್ಷೋsನನ್ತಪಾದಕರೋರುಕಃ ।
ಅನನ್ತಗುಣಮಾಹಾತ್ಮ್ಯಶ್ಚಿದಾನನ್ದಶರೀರಕಃ
॥೨೧.೫೦॥
ಅನಂತವಾದ ತಲೆಯುಳ್ಳವನು, ಅನಂತವಾದ ಕಣ್ಗಳುಳ್ಳವನು, ಅನಂತ ಪಾದ-ಕರಕಮಲಗಳುಳ್ಳವನು.
ಅನಂತವಾದ ಗುಣಮಹಾತ್ಮ್ಯನು. ಜ್ಞಾನಾನಂದವೇ ಮೈವೆತ್ತು ಬಂದವನು.
ಮದ್ವಶಾ ಏವ ಸರ್ವೇsಪಿ ತ್ವಂ ಚಾನ್ಯೇ ಚ ಧನಞ್ಜಯ।
ಮತ್ಪ್ರಸಾದಾದ್ ಬಲಂ
ಚೈವ ವಿಜಯಶ್ಚಾಖಿಲಾ ಗುಣಾಃ ।
ತಸ್ಮಾನ್ನ ವಿಸ್ಮಯಃ ಕಾರ್ಯ್ಯೋ
ನ ದರ್ಪ್ಪಶ್ಚ ತ್ವಯಾsನಘ ॥೨೧.೫೧॥
ಎಲೋ ಧನಂಜಯ, ನೀನಾಗಲೀ, ಬೇರೊಬ್ಬರಾಗಲೀ, ಎಲ್ಲರೂ ಕೂಡಾ ನನ್ನ ಕೈಗೊಂಬೆಗಳು. ತನ್ನ
ಅನುಗ್ರಹದಿಂದ ಬಲ, ವಿಜಯ, ಮೊದಲಾದ ಎಲ್ಲಾ ಗುಣಗಳೂ ಬರುತ್ತವೆ. ಆ ಕಾರಣದಿಂದ ಆಶ್ಚರ್ಯ ಪಡಬೇಡ. ಪಾಪವಿಲ್ಲದ
ನೀನು(ಅನಘ) ದರ್ಪ(ಅಹಂಕಾರ)ವನ್ನೂ ಪಡಬೇಡ. (ದೈತ್ಯಾವೇಶವನ್ನು ತೊಡೆದುಕೋ).
‘ಮನ್ಮನಾ ಭವ ಮದ್ಭಕ್ತೋ
ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಸತ್ಯಂ
ತೇ ಪ್ರತಿಜಾನೇ ಪ್ರಿಯೋsಸಿ ಮೇ’ ॥೨೧.೫೨॥
ನನ್ನಲ್ಲೇ ಬಗೆಯನ್ನು ನೆಡು. ನನ್ನ ಭಕ್ತನಾಗು, ನನ್ನ ಪೂಜೆಯನ್ನು ಮಾಡು,
ನನ್ನನ್ನು ಕುರಿತು ಪೊಡಮಡು. ನನ್ನನ್ನೇ ಹೊಂದುತ್ತೀಯ. ಇದು ಎಂದಿಗೂ ಹುಸಿಯಲ್ಲ. ನೀನು ನನಗೆ
ಪ್ರಿಯನಾಗಿದ್ದೀಯ ಹಾಗಾಗಿ ಪ್ರತಿಜ್ಞೆ ಮಾಡಿ ಹೇಳುತ್ತಿದ್ದೇನೆ’.
ಇತ್ಯುಕ್ತಃ
ಪ್ರಣಿಪತ್ಯೈನಂ ಕ್ಷಮಸ್ವೇತ್ಯಾಹ ಫಲ್ಗುನಃ ।
ಉಷಿತ್ವಾ
ಕತಿಚಿನ್ಮಾಸಾನ್ ಯಯುಃ ಸರ್ವೇಪಿ ಪಾಣ್ಡವಾಃ ॥೨೧.೫೩॥
ಅನುಜ್ಞಾತಾಃ ಕೇಶವೇನ ಭಕ್ತಿನಮ್ರಧಿಯೋsಚ್ಯುತೇ ।
ಸಮ್ಭಾವಿತಾಃ ಕೇಶವೇನ
ಸೌಹಾರ್ದ್ದೇನಾಧಿಕೇನ ಚ ॥೨೧.೫೪॥
ಈರೀತಿಯಾಗಿ ಹೇಳಲ್ಪಟ್ಟ ಅರ್ಜುನನು ಕೃಷ್ಣನಿಗೆ ನಮಸ್ಕರಿಸಿ
ಕ್ಷಮೆ ಬೇಡಿದ. ಎಲ್ಲಾ ಪಾಂಡವರೂ ಕೂಡಾ ಕೆಲವು ತಿಂಗಳುಗಳ ಕಾಲ ದ್ವಾರಕಾ ಪಟ್ಟಣದಲ್ಲೇ ಇದ್ದು, ಕೃಷ್ಣನಲ್ಲಿ
ಭಕ್ತಿಯಿಂದ ಬಾಗಿದ ಬಗೆಯುಳ್ಳವರಾಗಿ, ನಾರಾಯಣನಿಂದ ಬಹುಮಾನಿಸಲ್ಪಟ್ಟು, ಅತ್ಯಂತ ಪ್ರೀತಿಯನ್ನು
ಗಳಿಸಿದವರಾಗಿ, ಕೃಷ್ಣನ ಅನುಜ್ಞೆಯನ್ನು ಪಡೆದು ತಮ್ಮ ಪಟ್ಟಣಕ್ಕೆ ತೆರಳಿದರು.
[ಇದು ಭಾಗವತದ ೧೦ನೇ ಸ್ಕಂಧದ ೧೦೩ನೇ ಅಧ್ಯಾಯದಲ್ಲಿ ಬರುವ ಕಥೆಯಾಗಿದ್ದು,
ಅದನ್ನು ಇಲ್ಲಿ ಆಚಾರ್ಯರು ಕಾಲಕ್ರಮದಲ್ಲಿ ಪ್ರಸ್ತುತಪಡಿಸಿರುವುದನ್ನು ನಾವು ಗಮನಿಸಬೇಕು]
No comments:
Post a Comment