ಉತ್ತರೋತ್ತರತಃ ಸರ್ವೇ
ಸುಖೇ ಶತಗುಣೋತ್ತರಾಃ ।
ಅನನ್ತಜನಸಮ್ಪೂರ್ಣ್ಣಾ
ಅಪಿ ತೇ ಹೀಚ್ಛಯಾ ಹರೇಃ ॥೨೧.೬೦॥
ಅವಕಾಶವನ್ತೋ
ದಿವ್ಯತ್ವಾತ್ ಪೂರ್ಯ್ಯನ್ತೇ ನ ಕದಾಚನ ।
ಸರ್ವಕಾಮಸುಖೈಃ ಪೂರ್ಣ್ಣಾ
ದಿವ್ಯಸ್ತ್ರೀಪುರುಷೋಜ್ಜ್ವಲಾಃ ॥೨೧.೬೧॥
ಈ ಲೋಕಗಳು (ಸ್ವರ್ಗಲೋಕದಿಂದ ಮೇಲೆ ವೈಕುಂಠದವರೆಗೆ ಇರುವ
ಲೋಕಗಳು) ಸುಖದ ವಿಷಯದಲ್ಲಿ ಕ್ರಮೇಣ ಮೇಲು-ಮೇಲಕ್ಕೆ ಒಂದರಿಂದ ಇನ್ನೊಂದು ನೂರುಪಟ್ಟು ಆಧಿಕ್ಯವನ್ನು ಹೊಂದಿವೆ. ಅನಂತ ಜೀವರಾಶಿಗಳೂ ಇಲ್ಲಿದ್ದಾರೆ ಆದರೆ ಅಲೌಕಿಕವಾದ್ದರಿಂದ
ಅವಕಾಶವುಳ್ಳವುದಾಗಿವೆ(ಇಲ್ಲಿ ಎಂದೂ ಜೀವಸಾಂದ್ರತೆ ಉಂಟಾಗುವುದಿಲ್ಲ). ಈ ಲೋಕಗಳು ಎಲ್ಲಾ ರೀತಿಯ ಸುಖ-ಸಮೃದ್ಧಿಯಿಂದ
ಕೂಡಿರುವುದಾಗಿವೆ. ಅಲೌಕಿಕರಾದ ಸ್ತ್ರೀ-ಪುರುಷರಿಂದ ಈ ಲೋಕಗಳು ಶೋಭಿಸುತ್ತಿವೆ.
[ಭೂಲೋಕದಿಂದ ಸತ್ಯಲೋಕದತನಕ ಅಂತರಿಕ್ಷಲೋಕಗಳನ್ನು ನೋಡಿದೆವು.
ಅದೇ ರೀತಿ ಕೆಳಗೆ ಏಳು ಪಾತಾಳ ಲೋಕಗಳಿವೆ- ಅತಳ,
ವಿತಳ, ಸುತಳ, ತಳಾತಳ,
ಮಹಾತಳ, ರಸಾತಳ ಮತ್ತು ಪಾತಾಳ)]
ದಿವ್ಯರತ್ನಸಮಾಕೀರ್ಣ್ಣಂ
ತಥಾ ಪಾತಾಳಸಪ್ತಕಮ್ ।
ಅಧಸ್ತಾಚ್ಛೇಷದೇವೇನ
ಬಲಿನಾ ಸಮಧಿಷ್ಠಿತಮ್ ॥೨೧.೬೨॥
ದಿವ್ಯವಾದ ರತ್ನಗಳಿಂದ ತುಂಬಿರುವ ಪಾತಾಳ ಲೋಕಗಳು ಏಳು. ಈ
ಲೋಕಗಳು ಬಲಿಷ್ಠನಾದ ಶೇಷನಿಂದ ಧರಿಸಲ್ಪಟ್ಟಿವೆ (ಅದನ್ನು ಶೇಷ ಹೊತ್ತು
ನಿಂತಿದ್ದಾನೆ).
[ವಿಷ್ಣುಪುರಾಣ: ‘ಅತಳಂ ವಿತಳಂ ಚೈವ ನಿತಳಂ ಚ ಗಭಸ್ತಿಮತ್ । ಮಹಾಖ್ಯಂ ಸುತಳಂ
ಚಗ್ರ್ಯಂ ಪಾತಾಳಂ ಚಾಪಿ ಸಪ್ತಮಮ್’ (೨.೫.೩) (ಇಲ್ಲಿ ನಿತಳ ಎಂದರೆ ತಳಾತಳ ಎಂದು ಅರ್ಥ ಮಾಡಿಕೊಳ್ಳಬೇಕು).
ಭಾಗವತದ ಐದನೇ ಸ್ಕಂಧದಲ್ಲಿ ಏಳು ಪಾತಾಳ ಲೋಕಗಳನ್ನು ಹೇಳಿದ್ದಾರೆ. ಈ ಎಲ್ಲಾ ಪಾತಾಳಗಳೂ ಕೂಡಾ
ಅಲೌಕಿಕವಾದ ರತ್ನಗಳಿಂದ ಕೂಡಿವೆ.
ಈ ಎಲ್ಲಾ ಲೋಕಗಳಿಗೆ ಸಂಬಂಧಿಸಿದ ದೇವತಾ ಮೀಮಾಂಸೆ ಮಹಾಭಾರತದ ಇಂದಿನ ಪಾಠದಲ್ಲಿ ಕಾಣಸಿಗುವುದಿಲ್ಲವಾದರೂ
ಕೂಡಾ, ಪುರಾಣಗಳಲ್ಲಿ ಈ ಕುರಿತ ವಿವರವಿದೆ:
·
ಭಾಗವತ(೫.೨೩.೭): ‘ಅವನೇರಪ್ಯಧಸ್ತಾತ್ ಸಪ್ತ ಭೂವಿವರಾ ಏಕೈಕಶೋ ಯೋಜನಾಯುತಾಯಾಮಾಸ್ತಾರತ್ಮಯೇನೋಪಕ್ಲುಪ್ತಾ ಅತಳಂ ವಿತಳಂ ಸುತಳಂ ತಳಾತಳಂ ಮಹಾತಳಂ ರಸಾತಳಂ ಪಾತಾಳಮಿತಿ’
· ವಿಷ್ಣುಪುರಾಣ(೨.೫.೮-೬) ‘ಸ್ವರ್ಲೋಕಾದಪಿ ರಮ್ಯಾಣಿ ಪಾತಾಳಾದೀನಿ ನಾರದಃ । ಪ್ರಾಹ ಸ್ವರ್ಗಸದಾಂ ಮಧ್ಯೇ ಪಾತಾಳೇಭ್ಯೋ ಗತೋ ದಿವಿ । ಆಹ್ಲಾದಕಾರಿಣಃ ಶುಭ್ರ ಮಣಯೋ ಯತ್ರ ಸುಪ್ರಭಾಃ । ನಾಗೈರಾಭ್ರಿಯಮಾಣಾಸ್ತು ಪಾತಾಳಂ ಕೇನ ತತ್ ಸಮಮ್’
· ವಿಷ್ಣುಪುರಾಣ(೨.೫.೧೩) ‘ಪಾತಾಳಾನಾಮಧಶ್ಚಾಸ್ತೇ ವಿಷ್ಣೋರ್ಯಾ ತಾಮಸೀ ತನುಃ । ಶೇಷಾಖ್ಯಾ ಯದ್ಗುಣಾನ್ ವಕ್ತುಂ ನ ಶಕ್ತಾ ದೈತ್ಯದಾನವಾಃ’
· ಭಾಗವತ (೫.೨೩.೨೦) ‘ತತೋಽಧಸ್ತಾತ್ ಸುತಳ ಉರುಶ್ರವಾಃ ಪುಣ್ಯಶ್ಲೋಕೋ ವಿರೋಚನಾತ್ಮಜೋ ಬಲಿರ್ಭಗವತಾ..... ವಾಮನರೂಪೇಣ ಪರಾಕ್ಷಿಪ್ತಲೋಕತ್ರಯಃ .....ಆಸ್ತೇಽಧುನಾsಪಿ’]
ಕಾಮಭೋಗಸಮಾಯುಕ್ತಾ
ಬಹುವರ್ಷಸಹಸ್ರಿಣಃ ।
ಸಪ್ತದ್ವೀಪೇಷು ಪುರುಷಾ
ನಾರ್ಯ್ಯಶ್ಚೋಕ್ತಾಃ ಸುರೂಪಿಣಃ ॥೨೧.೬೩॥
ಕೆಳಗಿನ ಲೋಕದಲ್ಲಿರುವವರು ಬಯಸಿದ ಭೋಗವನ್ನು ಪಡೆಯುತ್ತಿರುತ್ತಾರೆ ಮತ್ತು ಅವರು ಬಹಳ
ವರ್ಷಗಳ ಕಾಲ ಬಾಳುತ್ತಾರೆ. ಏಳೂ ದ್ವೀಪಗಳಲ್ಲಿ ಅತ್ಯಂತ ಸುಂದರಿಯರಾದ ನಾರಿಯರು,
ಅತ್ಯಂತ ಸುಂದರರಾದ ಪುರುಷರಿದ್ದಾರೆ.
ಏಷಾಂ ಚ ಸರ್ವಲೋಕಾನಾಂ
ಧಾತಾ ನಾರಾಯಣಃ ಪರಃ ।
ವಿಷ್ಣುಲೋಕಸ್ಥಿತೋ
ಮುಕ್ತೈಃ ಸದಾ ಸರ್ವೈರುಪಾಸ್ಯತೇ ॥೨೧.೬೪॥
ಈ ಸಮಸ್ತ ಲೋಕಗಳನ್ನೂ ಹೊತ್ತಿರುವವನು- ಮುಕ್ತಲೋಕದಲ್ಲಿದ್ದು, ಮುಕ್ತರಿಂದ ಯಾವಾಗಲೂ ಉಪಾಸಿಸಲ್ಪಡುವ ನಾರಾಯಣ.
[ಹೀಗೆ ಒಟ್ಟಿನಲ್ಲಿ ಇಲ್ಲಿ ಆಚಾರ್ಯರು ಭಾಗವತದ ಐದನೇ
ಸ್ಕಂಧದಲ್ಲಿ ಹೇಳಿದ ಭೂಗೋಳ ವರ್ಣನೆ, ಖಗೋಳ ವರ್ಣನೆ ಮತ್ತು ವಿಷ್ಣುಪುರಾಣಾದಿಗಳಲ್ಲಿ ಹೇಳಿರುವ
ಇಡೀ ಬ್ರಹ್ಮಾಂಡ ವರ್ಣನೆ ಈ ಮೂರನ್ನೂ ಸಮಷ್ಠಿಯಾಗಿ, ವ್ಯಾಖ್ಯಾನ ಮಾಡಿ
ನಮಗೆ ನೀಡಿದ್ದಾರೆ].
No comments:
Post a Comment