ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 17, 2019

Mahabharata Tatparya Nirnaya Kannada 13112_13116


ಆಯನ್ ಜಗದ್ಗುರತಮೋ ಬಲಿನಂ ಗಜೇನ್ದ್ರಂ ರುದ್ರಪ್ರಸಾದಪರಿರಕ್ಷಿತಮಾಶ್ವಪಶ್ಯತ್
ದೂಷ್ಟೋರುರಙ್ಗಮುಖಸಂಸ್ಥಿತಮೀಕ್ಷ್ಯ ಚೈಭ್ಯಂ ಪಾಪಾಪಯಾಹಿ ನಚಿರಾದಿತಿ ವಾಚಮೂದೇ ೧೩.೧೧೨

ರಂಗದತ್ತ ಬರುತ್ತಿರುವ, ಜ್ಞಾನೋಪದೇಶಕರಲ್ಲಿಯೇ ಶ್ರೇಷ್ಠನಾದ, ಜಗದ್ಗುರು ಕೃಷ್ಣನು, ರಂಗದ ಬಾಗಿಲಿನಲ್ಲಿರುವ, ರುದ್ರದೇವರ ಅನುಗ್ರಹದಿಂದ ರಕ್ಷಿಸಲ್ಪಟ್ಟಿರುವ  ಆನೆಯನ್ನು ಮತ್ತು ಆ ಆನೆಯನ್ನು ನಿಯಂತ್ರಿಸುವ ಮಾವುತನನ್ನೂ ಕಂಡು, ‘ಪಾಪಿಷ್ಠನೇ, ಬೇಗದಲ್ಲಿಯೇ(ಸಾವಕಾಶ ಮಾಡದೇ, ತಕ್ಷಣ) ಆಚೆ ಸರಿ’ ಎಂಬ ಮಾತನ್ನು ಹೇಳಿದನು.

ಕ್ಷಿಪ್ತಃ ಸ ಈಶ್ವರತಮೇನ ಗಿರೀಶಲಬ್ಧಾದ್ ದೃಪ್ತೋ ವರಾಜ್ಜಗತಿ ಸರ್ವಜನೈರವದ್ಧ್ಯಃ ।
ನಾಗಂ ತ್ವವದ್ಧ್ಯಮಭಿಯಾಪಯತೇ ತತೋsಗ್ರೇ ಪಾಪೋ ದುರನ್ತಮಹಿಮಂ ಪ್ರತಿ ವಾಸುದೇವಮ್ ೧೩.೧೧೩

ಸರ್ವಸಮರ್ಥನಾದ ಕೃಷ್ಣನಿಂದ ತಿರಸ್ಕರಿಸಲ್ಪಟ್ಟ,  ಜಗತ್ತಿನಲ್ಲಿ ಯಾರಿಂದಲೂ ಕೂಡಾ ಸೋಲಿಸಲಾಗದಂತಹ ವರವನ್ನು ರುದ್ರದೇವರಿಂದ ಪಡೆದಿದ್ದ ಆ ಮಾವುತನು,  ದರ್ಪದಿಂದ ಕೂಡಿದವನಾಗಿ, ಯಾರಿಂದಲೂ ಸಾಯಿಸಲಾಗದ ಆನೆಯನ್ನು,  ಎಣೆಯಿರದ ಮಹಿಮೆಯುಳ್ಳ ವಾಸುದೇವನನ್ನು ಕೊಲ್ಲಬೇಕು ಎಂದು ಪ್ರಚೋದಿಸುತ್ತಿದ್ದ.

ವಿಕ್ರೀಡ್ಯ ತೇನ ಕರಿಣಾ ಭಗವಾನ್ ಸ ಕಿಞ್ಚಿದ್ಧಸ್ತೇ ಪ್ರಗೃಹ್ಯ ವಿನಿಕೃಷ್ಯ ನಿಪಾತ್ಯ ಭೂಮೌ ।
ಕುಮ್ಭೇ ಪದಂ ಪ್ರತಿನಿಧಾಯ ವಿಷಾಣಯುಗ್ಮಮುತ್ಕೃಷ್ಯ ಹಸ್ತಿಪಮಹನ್ ನಿಪಪಾತ ಸೋsಪಿ ೧೩.೧೧೪

ಷಡ್ಗುಣೈಶ್ವರ್ಯ ಸಂಪನ್ನನಾದ ಶ್ರೀಕೃಷ್ಣನು, ಆ ಆನೆಯೊಂದಿಗೆ ಸ್ವಲ್ಪಕಾಲ ಆಟವಾಡಿ, ನಂತರ ಅದರ ಸೊಂಡಿಲನ್ನು ಹಿಡಿದೆಳೆದು, ಭೂಮಿಯಲ್ಲಿ ಕೆಡವಿ, ಅದರ ತಲೆಯಮೇಲೆ ಕಾಲನ್ನಿಟ್ಟು, ಅದರ ಎರಡೂ ದಂತಗಳನ್ನು ಸೆಳೆದು, ಆ ದಂತದಿಂದಲೇ ಮಾವುತನನ್ನು  ಹೊಡೆದಾಗ ಆ ಮಾವುತ ಕೆಳಗೆ ಬಿದ್ದನು(ಸತ್ತನು).

ನಾಗಂ ಸಸಾದಿನಮವದ್ಧ್ಯಮಸೌ ನಿಹತ್ಯ ಸ್ಕನ್ಧೇ ವಿಷಾಣಮವಸಜ್ಜ್ಯ ಸಹಾಗ್ರಜೇನ ।
ನಾಗೇನ್ದ್ರಸಾನ್ದ್ರಮದಬಿನ್ದುಭಿರಞ್ಚಿತಾಙ್ಗಃ ಪೂರ್ಣ್ಣಾತ್ಮಶಕ್ತಿರಮಲಃ ಪ್ರವಿವೇಶ ರಙ್ಗಮ್ ॥೧೩.೧೧೫

ಯಾರಿಂದಲೂ  ಕೊಲ್ಲಲು ಅಸಾಧ್ಯವಾಗಿದ್ದ ಮಾವುತ ಹಾಗು ಆನೆಯನ್ನು ಕೊಂದು, ಆನೆಯ ಕೋರೆ ದಾಡೆಯನ್ನು ತನ್ನ ಹೆಗಲ ಮೇಲಿರಿಸಿಕೊಂಡು, ಅಣ್ಣನೊಂದಿಗೆ ಕೂಡಿಕೊಂಡು, ಗಜಶ್ರೇಷ್ಠದ ದಪ್ಪವಾದ ಮದದ ನೀರಿನಿಂದ ಸಿಂಪಡಿಸಲ್ಪಟ್ಟ ಅವಯವವುಳ್ಳವನಾಗಿ,  ಶಕ್ತಿಪೂರ್ಣನೂ, ನಿರ್ದೋಷನೂ  ಆಗಿರುವ ಶ್ರೀಕೃಷ್ಣನು ರಂಗಸ್ಥಳವನ್ನು ಪ್ರವೇಶಿಸಿದನು.

ವಿಷ್ಟೇ ಜಗದ್ಗುರುತಮೇ ಬಲವೀರ್ಯ್ಯಮೂರ್ತ್ತೌ ರಙ್ಗಂ ಮುಮೋದ ಚ ಶುಶೋಷ ಜನೋsಖಿಲೋsತ್ರ
ಕಞ್ಜಂ ತಥಾsಪಿ ಕುಮುದಂ ಚ ಯಥೈವ ಸೂರ್ಯ್ಯ ಉದ್ಯತ್ಯಜೇsನುಭವಿನೋ ವಿಪರೀತಕಾಶ್ಚ ॥೧೩.೧೧೬॥

ಜಗತ್ತನ್ನು ಪಾಲನೆ ಮಾಡುವವರಲ್ಲೇ ಶ್ರೇಷ್ಠನಾದ, ಬಲ ಹಾಗು ವೀರ್ಯವೇ ಮೈದಾಳಿ ಬಂದ ಪರಮಾತ್ಮನು ರಂಗವನ್ನು ಪ್ರವೇಶಿಸುತ್ತಿರಲು, ಆ ರಂಗದಲ್ಲಿರುವ ಕೆಲವರು ಸಂತೋಷಪಟ್ಟರೆ, ಇನ್ನು ಕೆಲವರು ಒಣಗಿದರೂ ಕೂಡಾ. ಹೇಗೆ ಸೂರ್ಯನು ಉದಯಿಸುತ್ತಿರಲು ಕಮಲವು ಅರಳಿ ನೈದಿಲೆಯು ಒಣಗುತ್ತದೋ ಹಾಗೇ. (ಪರಮಾತ್ಮನು ರಂಗಪ್ರವೇಶಿಸುತ್ತಿದ್ದಂತೆ ಭಕ್ತರು ಸಂತಸಗೊಂಡರು. ದುಷ್ಟರೆಲ್ಲರೂ ಕೂಡಾ ಬಾಡಿದರು).

No comments:

Post a Comment