ತಾಭ್ಯಾಂ ಹತಾನಭಿಸಮೀಕ್ಷ್ಯ
ನಿಜಾನ್ ಸಮಸ್ತಾನ್ ಕಂಸೋ ದಿದೇಶ ಬಲಮಕ್ಷಯಮುಗ್ರವೀರ್ಯ್ಯಮ್।
ರುದ್ರಪ್ರಸಾದಕೃತರಕ್ಷಮವ
ದ್ಧ್ಯಮೇನೌ ನಿಸ್ಸಾರ್ಯ ದಣ್ಡಮಧಿಕಂ ಕುರುತೇತಿ ಪಾಪಃ ॥೧೩.೧೨೩॥
ಕೃಷ್ಣ-ಬಲರಾಮರಿಂದ ತನ್ನವರೆಲ್ಲರೂ
ಕೊಲ್ಲಲ್ಪಟ್ಟದ್ದನ್ನು ಕಂಡ ಪಾಪಿಷ್ಠನಾದ ಕಂಸನು, ರುದ್ರನ ವರದಿಂದ ರಕ್ಷಣೆಯನ್ನು ಹೊಂದಿದ, ಯಾರಿಂದಲೂ
ನಾಶಮಾಡಲು ಸಾಧ್ಯವಿಲ್ಲದ, ಉತ್ಕೃಷ್ಟವಾದ ವೀರ್ಯವುಳ್ಳ ತನ್ನ ಸೈನ್ಯಕ್ಕೆ, ರಾಮ-ಕೃಷ್ಣರನ್ನು ಹೊರಹಾಕಿ
ಕಠಿಣವಾದ ಶಿಕ್ಷೆಯನ್ನು ಕೊಡುವಂತೆ ಆಜ್ಞೆಮಾಡಿದ.
ಶ್ರುತ್ವೈವ ರಾಜವಚನಂ
ಬಲಮಕ್ಷಯಂ ತದಕ್ಷೋಹಿಣೀದಶಕಯುಗ್ಮಮನನ್ತವೀರ್ಯ್ಯಮ್ ।
ಕೃಷ್ಣಂ ಚಕಾರ
ವಿವಿದಾಸ್ತ್ರಧರಂ ಸ್ವಕೋಷ್ಠೇ ಸಿಂಹಂ ಯಥಾsಕಿಲ ಸೃಗಾಲಬಲಂ ಸಮೇತಮ್॥೧೩.೧೨೪॥
ಕಂಸನ ಆಜ್ಞೆಯನ್ನು ಕೇಳಿದಕೂಡಲೇ,
ನಾಶವಾಗದ ಆ ಅಕ್ಷೋಹಿಣಿಯ ಹತ್ತರ ಜೋಡಿಯ (ಇಪ್ಪತ್ತು ಅಕ್ಷೋಹಿಣಿ ಸಂಖ್ಯೆಯಿಂದ ಪರಿಮಿತವಾದ)
ಮಹಾಪರಾಕ್ರಮಿಯಾದ, ವಿಧವಿಧವಾದ ಅಸ್ತ್ರವನ್ನು ಧರಿಸಿದ ಆ ಸೈನ್ಯವು,
ಕೃಷ್ಣ-ಬಲರಾಮರನ್ನು ಸುತ್ತುವರಿಯಿತು. ನರಿಗಳ ಸಮೂಹ ಸಿಂಹವನ್ನು ಸುತ್ತುವರಿದರೆ ಹೇಗಿರುತ್ತದೋ ಹಾಗೆ.
ಜಾನನ್ನಪೀಶ್ವರಮನನ್ತಬಲಂ
ಮಹೇನ್ದ್ರಃ ಕೃಷ್ಣಂ ರಥಂ ನಿಜಮಯಾಪಯದಾಯುಧಾಢ್ಯಮ್ ।
ಶುಶ್ರೂಷಣಾಯ ಪರಮಸ್ಯ ಯಥಾ
ಸಮುದ್ರಮರ್ಘ್ಯೇಣ ಪೂರಯತಿ ಪೂರ್ಣ್ಣಜಲಂ ಜನೋsಯಮ್॥೧೩.೧೨೫॥
ಇಂದ್ರನು ಸರ್ವಸಮರ್ಥನಾದ
ಕೃಷ್ಣನನ್ನು ಅನಂತ ಬಲವುಳ್ಳವನೆಂದು ತಿಳಿದಿದ್ದರೂ ಕೂಡಾ, ದೇವರ ಸೇವೆಗಾಗಿ,
ಆಯುಧದಿಂದ ಕೂಡಿದ, ಕೃಷ್ಣಸಂಬಂಧಿಯಾದ(ಭಗವಂತನಿಂದ ಇಂದ್ರನಿಗೆ ನೀಡಲ್ಪಟ್ಟ) ರಥವನ್ನು ಕಳುಹಿಸಿಕೊಟ್ಟ. ಇಂದ್ರನ ಈ ಸೇವೆ
ಹೇಗಿತ್ತೆಂದರೆ: ಪೂರ್ಣವಾದ ಜಲವುಳ್ಳ ಸಮುದ್ರವನ್ನು ಅರ್ಘ್ಯದಿಂದ ಹೇಗೆ ಪೂಜಿಸುತ್ತಾರೋ ಹಾಗಿತ್ತು(ಅಂದರೆ: ಹೇಗೆ ಸಮುದ್ರದ ಜಲವನ್ನೇ ತಮ್ಮ ಕರ ಸಂಪುಟದಿಂದ ತೆಗೆದು ಅರ್ಘ್ಯ ನೀಡಿ ಹೇಗೆ ಪೂರ್ಣವನ್ನಾಗಿ ಮಾಡುತ್ತಾರೋ ಹಾಗೆ)
ಸ್ವಸ್ಯನ್ದನಂ ತು ಭಗವಾನ್
ಸ ಮಹೇನ್ದ್ರದತ್ತಮಾರುಁಹ್ಯ
ಸೂತವರಮಾತಲಿಸಙ್ಗೃಹೀತಮ್ ।
ನಾನಾಯುಧೋಗ್ರಕಿರಣಸ್ತರಣಿರ್ಯ್ಯಥೈವ
ಧ್ವಾನ್ತಂ ವ್ಯನಾಶಯದಶೇಷತ ಆಶು ಸೈನ್ಯಮ್ ॥೧೩.೧೨೬॥
ಪರಮಾತ್ಮನು, ಸಾರಥಿಗಳಲ್ಲೇ ಅಗ್ರಗಣ್ಯನಾದ ಮಾತಲಿಯಿಂದ[1]
ತರಲ್ಪಟ್ಟ, ಇಂದ್ರನಿಂದ ನೀಡಲ್ಪಟ್ಟ, ತನ್ನದೇ ಆದ ರಥವನ್ನು ಏರಿ, ನಾನಾ ಆಯುಧಗಳೆಂಬ ಉಗ್ರವಾದ
ಕಿರಣವುಳ್ಳವನಾಗಿ, ಹೇಗೆ ಸೂರ್ಯ ಕತ್ತಲನ್ನು ನಾಶಪಡಿಸುತ್ತಾನೋ ಹಾಗೆ ಕಂಸನ ಆ ಎಲ್ಲಾ ಸೈನ್ಯವನ್ನು ಕೂಡಲೇ ನಾಶಮಾಡಿದನು.
[ಮಹಾಭಾರತ ಸಭಾಪರ್ವದಲ್ಲಿ ಈ
ಕುರಿತಾದ ವಿವರ ಕಾಣಸಿಗುತ್ತದೆ. ‘ಏಷ ಶಕ್ರರಥೇ ತಿಷ್ಠಂಸ್ತಾನ್ಯನೀಕಾನಿ ಭಾರತ । ವ್ಯಧಮದ್ ಭೋಜಪುತ್ರಸ್ಯ ಮಹಾಭ್ರಾಣೀವ ಮಾರುತಃ’(೫೪.೩೦) ‘ಕಶ್ಚ ನಾರಾಯಣಾದನ್ಯಃ ಸರ್ವರತ್ನವಿಭೂಷಿತಮ್ ।
ರಥಮಾದಿತ್ಯಸಙ್ಕಾಶಾಮಾತಿಷ್ಠೇತ ಶಚೀಪತೇಃ । ಕಸ್ಯ ಚಾಪ್ರತಿಮೋ ಯಂತಾ
ವಜ್ರಪಾಣೇಃ ಪ್ರಿಯಃ ಸಖಾ । ಮಾತಲಿಃ
ಸಙ್ಗ್ರಹೀತಾ ಸ್ಯಾದನ್ಯತ್ರ ಪುರುಷೋತ್ತಮಾತ್'(೫೪.೧೫-೧೬)
(ನಾರಾಯಣನಲ್ಲದೇ ಯಾರು
ತಾನೆ ಇಂದ್ರನ ರಥವನ್ನು ಏರಿಯಾರು? ಮಾತಲಿಯೂ
ಕೂಡಾ ಸೇವೆ ಮಾಡಬೇಕು ಎಂಬ ಮನೋಭಾವದಿಂದ ರಥವನ್ನು ನಡೆಸಿದ. ಅಂತಹ ರಥವನ್ನು ಭಗವಂತನಲ್ಲದೆ ಬೇರೆ
ಯಾರು ಏರಲು ಸಾಧ್ಯ].
No comments:
Post a Comment