ಅಭೂಚ್ಛಿನಿರ್ನ್ನಾಮ ಯದುಪ್ರವೀರಸ್ತಸ್ಯಾsತ್ಮಜಃ ಸತ್ಯಕ ಆಸ ತಸ್ಮಾತ್
।
ಕೃಷ್ಣಃ ಪಕ್ಷೋ ಯುಯುಧಾನಾಭಿಧೇಯೋ ಗರುತ್ಮತೋsಮ್ಶೇನ ಯುತೋ ಬಭೂವ ॥೧೧.೨೩೩॥
ಯಃ ಸಂವಹೋ ನಾಮ ಮರುತ್ ತದಂಶಶ್ಚಕ್ರಸ್ಯ ವಿಷ್ಣೋಶ್ಚ ಬಭೂವ
ತಸ್ಮಿನ್ ।
ಯದುಷ್ವಭೂದ್ಧೃದಿಕೋ ಭೋಜವಂಶೇ ಸಿತಃ ಪಕ್ಷಸ್ತಸ್ಯ ಸುತೋ ಬಭೂವ॥೧೧.೨೩೪॥
ಸ ಪಾಞ್ಚಜನ್ಯಾಂಶಯುತೋ ಮರುತ್ಸು ತಥಾSಮ್ಶಯುಕ್ತಃ ಪ್ರವಹಸ್ಯ
ವೀರಃ ।
ನಾಮಾಸ್ಯ ಚಾಭೂತ್ ಕೃತವರ್ಮ್ಮೇತ್ಯಥಾನ್ಯೇ ಯೇ ಯಾದವಾಸ್ತೇsಪಿ ಸುರಾಃ ಸಗೋಪಾಃ॥೧೧.೨೩೫॥
ಶಿನಿ ಎಂಬ ಹೆಸರಿನ ಯಾದವಶ್ರೇಷ್ಠನೊಬ್ಬನಿದ್ದ.
ಅವನ ಮಗ ಸತ್ಯಕ. ಈ ಸತ್ಯಕನಿಂದ
ಕೃಷ್ಣಪಕ್ಷಾಭಿಮಾನಿದೇವತೆಯು ಗರುಡನ ಅಂಶದಿಂದ ಕೂಡಿದವನಾಗಿ ಹುಟ್ಟಿದ. ಅವನೇ ಯುಯುಧಾನ.
ಯುಯುಧಾನನಲ್ಲಿ ‘ಸಂವಹ’
ಎನ್ನುವ ಹೆಸರಿನ ಮರುದ್ದೇವತೆಯ ಅಂಶವೂ, ವಿಷ್ಣುಚಕ್ರಾಭಿಮಾನಿಯ ಅಂಶವೂ ಇತ್ತು. ಹಾಗೇ, ‘ಹೃಧಿಕ’ ಎನ್ನುವ ಯದುವಿಗೆ ಶುಕ್ಲಪಕ್ಷಾಭಿಮಾನಿ ದೇವತೆಯು ಮಗನಾಗಿ ಹುಟ್ಟಿದನು. ಅವನು
ಪಾಂಚಜನ್ಯದ(ಭಗವಂತನ ಶಂಖಾಭಿಮಾನಿಯಾದ ಅನಿರುದ್ಧನ) ಅಂಶದಿಂದಲೂ ಹಾಗು ‘ಪ್ರವಹ’ ಎಂಬ ಪ್ರಸಿದ್ಧ ಮರುದ್ದೇವತೆಯ
ಅಂಶದಿಂದಲೂ ಕೂಡಿದವನಾಗಿದ್ದನು. ಅವನೇ ಕೃತವರ್ಮ.
ಇದೇ ರೀತಿ ಉಳಿದ ಯಾದವರು ಮತ್ತು ಗೋಪಾಲಕರೆಲ್ಲರೂ ಕೂಡಾ ದೇವತೆಗಳೇ ಆಗಿದ್ದರು.
ಯೇ ಪಾಣ್ಡವಾನಾಮಭವನ್
ಸಹಾಯಾ ದೇವಾಶ್ಚ ದೇವಾನುಚರಾಃ ಸಮಸ್ತಾಃ ।
ಅನ್ಯೇ ತು ಸರ್ವೇsಪ್ಯಸುರಾ ಹಿ ಮಧ್ಯಮಾ ಯೇ
ಮಾನುಷಾಸ್ತೇ ಚಲಬುದ್ಧಿವೃತ್ತಯಃ ॥೧೧.೨೩೬॥
ಯಾರು-ಯಾರು ಪಾಂಡವರಿಗೆ
ಸಹಾಯಕರಾಗಿದ್ದರೋ, ಅವರೆಲ್ಲರೂ ದೇವತೆಗಳು ಹಾಗು ದೇವತೆಗಳಿಗೆ ಅನುಕೂಲರಾದ ಗಂಧರ್ವಾದಿಗಳ
ಅವತಾರಭೂತರಾಗಿದ್ದರು. ಪಾಂಡವರಿಗೆ ವಿರುದ್ಧವಾಗಿ ನಿಂತವರು ಅಸುರರಾಗಿದ್ದರು. ಕೆಲವೊಮ್ಮೆ ಪಾಂಡವರ
ಪರ, ಇನ್ನು ಕೆಲವೊಮ್ಮೆ ವಿರುದ್ಧ, ಈ ರೀತಿಯ
ಚಂಚಲ ಮನೋವೃತ್ತಿ ಉಳ್ಳವರು ಮಧ್ಯಮರಾದ ಮನುಷ್ಯರಾಗಿದ್ದರು.
ಲಿಙ್ಗಂ ಸುರಾಣಾಂ ಹಿ ಪರೈವ ಭಕ್ತಿರ್ವಿಷ್ಣೌ ತದನ್ಯೇಷು ಚ ತತ್
ಪ್ರತೀಪತಾ ।
ಅತೋsತ್ರ ಯೇಯೇ
ಹರಿಭಕ್ತಿತತ್ಪರಾಸ್ತೇತೇ ಸುರಾಸ್ತದ್ಭರಿತಾ ವಿಶೇಷತಃ ॥೧೧.೧೩೭ ॥
ನಾರಾಯಣನಲ್ಲಿ ಉತ್ಕೃಷ್ಟವಾದ
ಭಕ್ತಿಯೇ ದೇವತೆಗಳಿಗೆ ಲಕ್ಷಣವು. ಭಗವಂತನ ವಿರುದ್ಧತ್ವವೇ
ಅಸುರರ ಲಕ್ಷಣವು. ಮಹಾಭಾರತ-ಪುರಾಣ ಮೊದಲಾದವುಗಳಲ್ಲಿ ಯಾರು-ಯಾರು ಹರಿಭಕ್ತಿತತ್ಪರರೋ, ಅವರೆಲ್ಲರೂ ದೇವತೆಗಳು.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭಗವದವತಾರಪ್ರತಿಜ್ಞಾ ನಾಮ ಏಕಾದಶೋsಧ್ಯಾಯಃ ॥
*********
No comments:
Post a Comment