ಸ ಕದಾಚಿಚ್ಛಶುಭಾವಂ ಕುರ್ವನ್ತ್ಯಾ ಮಾತುರಾತ್ಮನೋ ಭೂಯಃ ।
ಅಪನೇತುಂ ಪರಮೇಶೋ ಮೃದಂ ಜಘಾಸೇಕ್ಷತಾಂ ವಯಸ್ಯಾನಾಮ್ ॥೧೩.೦೪॥
ಎಲ್ಲರಿಗೂ ಒಡೆಯನಾದ
ಶ್ರೀಕೃಷ್ಣನು ಒಮ್ಮೆ ‘ಇದು ನನ್ನಮಗು’ ಎನ್ನುವ ಭಾವನೆಯನ್ನು ತೋರುತ್ತಿರುವ ತಾಯಿಗೆ, ಆರೀತಿಯ
ಭಾವನೆಯನ್ನು ನಾಶಮಾಡಲು, ಗೆಳೆಯರೆಲ್ಲರೂ ನೋಡುತ್ತಿರಲು, ಮಣ್ಣನ್ನು ತಿಂದ.
ಮಾತ್ರೋಪಾಲಾಬ್ದ ಈಶೋ ಮುಖವಿವೃತಿಮಕರ್ನ್ನಾಮ್ಬ ಮೃದ್ಭಕ್ಷಿತಾsಹಂ ।
ಪಶ್ಯೇತ್ಯಸ್ಯಾನ್ತರೇ ತು ಪ್ರಕೃತಿವಿಕೃತಿಯುಕ್ ಸಾ ಜಗತ್ ಪರ್ಯ್ಯಪಶ್ಯತ್
।
ಇತ್ಥಂ ದೇವೋsತ್ಯಚಿನ್ತ್ಯಾಮಪರದುರಧಿಗಾಂ
ಶಕ್ತಿಮುಚ್ಚಾಂ ಪ್ರದರ್ಶ್ಯ
ಪ್ರಾಯೋ ಜ್ಞಾತಾತ್ಮತತ್ತ್ವಾಂ ಪುನರಪಿ
ಭಗವಾನಾವೃಣೋದಾತ್ಮಶಕ್ತ್ಯಾ ॥೧೩.೦೫॥
ತಾಯಿಯಿಂದ ‘ಬಾಯಿತೆರೆ’
ಎಂದು ಗದರಿಸಲ್ಪಟ್ಟವನಾದ ಸರ್ವಸಮರ್ಥನಾದ ಕೃಷ್ಣನು 'ಅಮ್ಮಾ, ನಾನು ಮಣ್ಣನ್ನು ತಿನ್ನಲಿಲ್ಲಾ
ನೋಡು’ ಎಂದು ಹೇಳಿ ತನ್ನ ಬಾಯನ್ನು ತೆರೆದನು. ಆಗ ಯಶೋದೆಯು ಅವನ ಬಾಯಲ್ಲಿ ಪ್ರಕೃತಿ ಹಾಗು
ವಿಕೃತಿಯಿಂದ ಕೂಡಿರುವ ಜಗತ್ತನ್ನು ಕಂಡಳು. ಈರೀತಿಯಾಗಿ ನಾರಾಯಣನು ಯಾರಿಗೂ ಚಿಂತಿಸಲಾಗದ,
ಬೇರೊಬ್ಬರಿಗೆ ತಿಳಿಯಲಾಗದ ಉತ್ಕೃಷ್ಟವಾದ ಸ್ವರೂಪ ಶಕ್ತಿಯನ್ನು ತಾಯಿಗೆ ತೋರಿಸಿ, ಹೆಚ್ಚಾಗಿ ತನ್ನನ್ನು ತಿಳಿದ ಆ ಯಶೋದೆಯನ್ನು ಮತ್ತೆ
ತನ್ನ ಸಾಮರ್ಥ್ಯದಿಂದ (ಮೊದಲಿನಂತೆ)ಆವರಿಸಿದ.
ಇತಿ ಪ್ರಭುಃ ಸ ಲೀಲಯಾ ಹರಿರ್ಜ್ಜಗದ್ ವಿಡಮ್ಬಯನ್ ।
ಚಚಾರ ಗೋಷ್ಠಮಣ್ಡಲೇsಪ್ಯನನ್ತಸೌಖ್ಯಚಿದ್ಘನಃ ॥೧೩.೦೬॥
ಈರೀತಿಯಾಗಿ,
ಸರ್ವಸಮರ್ಥನಾದ ಶ್ರೀಕೃಷ್ಣನು ತನ್ನ ಲೀಲೆಯಿಂದ
ಜಗತ್ತನ್ನು ಅನುಕರಿಸುವವನಾಗಿ, ಆ ಗೋವುಗಳ ಗ್ರಾಮದಲ್ಲಿ, ಎಣೆಯಿರದ ಸುಖದಿಂದಲೂ, ಜ್ಞಾನದಿಂದಲೂ
ತುಂಬಿರುವವನಾಗಿ ಸಂಚರಿಸಿದನು.
No comments:
Post a Comment