ಏವಂ ಕೃಷ್ಣೇ ದ್ವಾರಕಾಮದ್ಧ್ಯಸಂಸ್ಥೇ
ಗಿರಿಂ ಭೂಪಾ ರೈವತಕಂ ಸಮಾಯಯುಃ ।
ದುರ್ಯ್ಯೋಧನಾದ್ಯಾಃ
ಪಾಣ್ಡವಾಶ್ಚೈವ ಸರ್ವೇ ನಾನಾದೇಶ್ಯಾ ಯೇ ಚ ಭೂಪಾಲಸಙ್ಘಾಃ ॥೨೦.೬೩॥
ಹೀಗೆ ದ್ವಾರಕೆಯ ಮಧ್ಯದಲ್ಲಿ ಶ್ರೀಕೃಷ್ಣನು ಇರಲು, ರಾಜರಾಗಿರುವ ದುರ್ಯೋಧನ ಮೊದಲಾದವರು, ಪಾಂಡವರು, ಬೇರೆಬೇರೆ ದೇಶದ ರಾಜರ ಸಮೂಹವೆಲ್ಲವೂ ಕೂಡಾ, ರೈವತಕ ಪರ್ವತವನ್ನು ಕುರಿತು ಬಂದರು. (ರೈವತಕ
ಪರ್ವತ ಯಾದವರ ಕ್ರೀಡಾಪರ್ವತ, ಅದು ದ್ವಾರಕಾ ಪಟ್ಟಣದ ಹತ್ತಿರದಲ್ಲಿತ್ತು).
ಆತ್ಮಾನಂ ತಾನ್ ದ್ರಷ್ಟುಮಭ್ಯಾಗತಾನ್
ಸ ಕೃಷ್ಣೋ ಗಿರೌ ರೈವತಕೇ ದದರ್ಶ ।
ನಮಸ್ಕೃತೇ
ಸರ್ವನರೇನ್ದ್ರಮುಖ್ಯೈಃ ಕೃಷ್ಣೇ ವೈದರ್ಭ್ಯಾ ಸಹ ದಿವ್ಯಾಸನಸ್ಥೇ ॥೨೦.೬೪॥
ಏತ್ಯಾsಕಾಶಾನ್ನಾರದಃ
ಕೃಷ್ಣಮಾಹ ಸರ್ವೋತ್ತಮಸ್ತ್ವಂ ತ್ವಾದೃಶೋ ನಾಸ್ತಿ ಕಶ್ಚಿತ್ ।
ಇತ್ಯಾಶ್ಚರ್ಯ್ಯೋ ಧನ್ಯ
ಇತ್ಯೇವ ಶಬ್ದದ್ವಯೇ ತೂಕ್ತೇ ವಾಸುದೇವಸ್ತಮಾಹ ॥೨೦.೬೫॥
ದಕ್ಷಿಣಾಭಿಃ
ಸಾಕಮಿತ್ಯೇವ ಕೃಷ್ಣಂ ಪಪ್ರಚ್ಛುರೇತತ್ ಕಿಮಿತಿ ಸ್ಮ ಭೂಪಾಃ ।
ನಾರಾಯಣೋ ಮುನಿಮೂಚೇ
ವದೇತಿ ಶೃಣುಧ್ವಮಿತ್ಯಾಹ ಸ ನಾರದೋsಪಿ ॥೨೦.೬೬॥
ತನ್ನನ್ನು ಕಾಣಲು ಬಂದ ಪಾಂಡವಾದಿ ಅರಸರನ್ನು ಶ್ರೀಕೃಷ್ಣನು ರೈವತಕ ಪರ್ವತದಲ್ಲಿ ಕಂಡನು.
ಎಲ್ಲಾ ಶ್ರೇಷ್ಠ ರಾಜರುಗಳಿಂದ ನಮಸ್ಕರಿಸಲ್ಪಡುತ್ತಿರಲು, ರುಗ್ಮಿಣಿ ಜೊತೆಗೂಡಿ ದಿವ್ಯವಾದ
ಆಸನದಲ್ಲಿ ಶ್ರೀಕೃಷ್ಣ ಕುಳಿತಿರಲು(೬೪), ನಾರದರು ಆಕಾಶದಿಂದ ಕೃಷ್ಣನ ಬಳಿ ಬಂದು ಕೃಷ್ಣನನ್ನು
ಕುರಿತು “ನೀನು ಸರ್ವೋತ್ಕೃಷ್ಟನಾಗಿದ್ದೀಯ, ನಿನಗೆ ಸದೃಶನಾದವನು ಯಾರೂ ಇಲ್ಲಾ. ಈ ಕಾರಣದಿಂದ
ನೀನು ಆಶ್ಚರ್ಯ ಮತ್ತು ಧನ್ಯ” ಎಂದು ನಾರದರಿಂದ ಈ ಎರಡು ಶಬ್ದವು ಹೇಳಲ್ಪಡುತ್ತಿರಲು(೬೫), ವಾಸುದೇವನು
ನಾರದರನ್ನು ಕುರಿತು “ದಕ್ಷಿಣೆಯ ಜೊತೆಗೆ ನಾನು ಸರ್ವೋತ್ತಮ” ಎಂದನು. ಆಗ ರಾಜರೆಲ್ಲರೂ
ಹಾಗೆಂದರೇನು? ಎಂದು ಕೇಳಿದರು. ಆಗ ನಾರಾಯಣನು ನಾರದರನ್ನು ಕುರಿತು ‘ಹೇಳು’ ಎಂದಾಗ, ನಾರದರು
ಅರಸರನ್ನು ಕುರಿತು ‘ಕೇಳಿರಿ’ ಎಂದು ಹೇಳಿದರು:
[ಹರಿವಂಶದಲ್ಲಿ ಈ ಕುರಿತು ಹೇಳಿರುವುದನ್ನು ನಾವು ಕಾಣಬಹುದು: ‘ತಾಂ ಶ್ರುತ್ವಾ ಮಾಧವೀಂ
ಲಕ್ಷ್ಮೀಂ ಸಪುತ್ರಂ ಚ ಜನಾರ್ದನಮ್ । ಪುರೀಂ
ದ್ವಾರಾವತೀಂ ಚೈವ ನಿವಿಷ್ಟಾಂ ಸಾಗರಾನ್ತರೇ । ದೂತೈಸ್ತೈಃ ಕೃತಸನ್ಧಾನಾಃ ಪೃಥಿವ್ಯಾಂ
ಸರ್ವಪಾರ್ಥಿವಾಃ । ದ್ರಷ್ಟುಂ ಶ್ರಿಯಂ ಹೃಷೀಕೇಶಮಾಜಗ್ಮುಃ ಕೃಷ್ಣಮನ್ದಿರಂ । ದುರ್ಯೋಧನಮುಖಾಃ
ಸರ್ವೇ ಧೃತರಾಷ್ಟ್ರವಶಾನುಗಾಃ । ಪಾಣ್ಡವಪ್ರಮುಖಾಶ್ಚೈವ
ಧೃಷ್ಟದ್ಯುಮ್ನಾದಯೋ ನೃಪಾಃ (ವಿಷ್ಣುಪರ್ವಣಿ ೧೧೦.೭-೮) ದೂತರ ಜೊತೆಗೆ ಸಂಧಾನ ಮಾಡಿಕೊಂಡು
ಎಲ್ಲಾ ರಾಜರೂ ಕೂಡಾ ರೈವತಕ ಪರ್ವತಕ್ಕೆ ಬಂದರು. ಒಟ್ಟಾರೆ ಪ್ರಪಂಚದ ಎಲ್ಲಾ ಮುಖ್ಯರಾಜರೂ ಕೂಡಾ
ಬಂದಿದ್ದರು.
ಆಶ್ಚರ್ಯಃ ಖಲು ದೇವಾನಾಮೇಕಸ್ತ್ವಂ ಪುರುಷೋತ್ತಮಃ । ಧನ್ಯಶ್ಚಾಸಿ ಮಹಾಬಾಹೋ ಲೋಕೇ ನಾನ್ಯೋsಸ್ತಿ
ಕಶ್ಚನ’ (ವಿಷ್ಣುಪರ್ವಣಿ ೧೧೦.೨೨), ನೀನು ‘ಸರ್ವೋತ್ತಮ’
ಹಾಗಾಗಿ ‘ಆಶ್ಚರ್ಯ’. ಲೋಕದಲ್ಲಿ ನಿನಗಿಂತ
ಅತಿರಿಕ್ತರಾದವರು ಯಾರೂ ಇಲ್ಲ ಅದರಿಂದ ನೀನು ‘ಧನ್ಯ’
‘ಎವಮುಕ್ತಃ ಸ್ಮಿತಂ ಕೃತ್ವಾ ಪ್ರತ್ಯುವಾಚ ಮುನಿಂ ಪ್ರಭುಃ । ಆಶ್ಚರ್ಯಶ್ಚೈವ ಧನ್ಯಶ್ಚ ದಕ್ಷಿಣಾಭಿಃ ಸಹೇತ್ಯಹಮ್’(ವಿಷ್ಣುಪರ್ವಣಿ ೧೧೦.೨೩)
ಈರೀತಿಯಾಗಿ ಹೇಳಲ್ಪಟ್ಟ ಕೃಷ್ಣನು ಮುಗುಳುನಗೆಯನ್ನು ಬೀರಿ,
ನಾರದರನ್ನು ಕುರಿತು ‘ನಾನು ಆಶ್ಚರ್ಯ, ಧನ್ಯ, ದಕ್ಷಿಣೆಯ ಜೊತೆಗೆ’ ಎಂದ]
No comments:
Post a Comment