ವಯಂ ತ್ರಯಃ ಸಮೇತ್ಯ ತಂ
ಪ್ರಯಾತಯಾಮ ಮೃತ್ಯವೇ ।
ಹನಿಷ್ಯತಿ ಸ್ಫುಟಂ ರಣೇ
ವೃಕೋದರೋ ಜರಾಸುತಮ್ ॥೨೧.೧೧೮॥
ನಾವು ಮೂವರು ಸೇರಿ ಜರಾಸಂಧನನ್ನು ಯಮನಲ್ಲಿಗೆ ಕಳುಹಿಸುತ್ತೇವೆ.
ಖಂಡಿತವಾಗಿ ಭೀಮಸೇನನು ಜರಾಸಂಧನನ್ನು ಯುದ್ಧದಲ್ಲಿ ಕೊಲ್ಲುತ್ತಾನೆ.
ಭಯಂ ನ ಕಾರ್ಯ್ಯಮೇವ ತೇ
ಮಯಾ ಹತಃ ಸ ನೇತಿ ಹ ।
ಮಯಾ ಹಿ ನೀತಿಹೇತುತಃ
ಸ್ವಯಂ ನ ಹನ್ಯತೇ ರಿಪುಃ ॥೨೧.೧೧೯॥
ಸ ಶರ್ವಸಂಶ್ರಯಾಗ್ರಣೀರ್ಮ್ಮದಾಶ್ರಯೋತ್ತಮೇನ
ತು ।
ನಿಹನ್ಯತೇ ಯದಾ ತದಾ
ಪ್ರಕಾಶಿತಂ ಹಿ ಮೇ ಬಲಮ್ ॥೨೧.೧೨೦॥
ಜರಾಸಂಧ ಈವರೆಗೂ ನನ್ನಿಂದ ಕೊಲ್ಲಲ್ಪಡಲಿಲ್ಲವೆಂದು ನೀನು ಭಯಪಡಬೇಡ. ನನ್ನಿಂದ
ಒಂದು ನೀತಿಯನ್ನು ಪ್ರಕಾಶಿಸಲೋಸುಗ ಶತ್ರು ಕೊಲ್ಲಲ್ಪಡಲಿಲ್ಲ. ಅವನು ಶಿವನನ್ನು ಆಶ್ರಯಿಸಿರುವ
ಭಕ್ತರಲ್ಲಿ ಅಗ್ರಗಣ್ಯನಾಗಿದ್ದಾನೆ. ಅಂತಹ ಅವನು ನನ್ನ ಭಕ್ತರಲ್ಲಿ ಅಗ್ರಗಣ್ಯನಾದ ಭೀಮಸೇನನಿಂದ
ಕೊಲ್ಲಲ್ಪಡುತ್ತಾನೆ. ಹೀಗಾದರೆ ಆಗ ನನ್ನ ಬಲವು ಪ್ರಕಾಶಿಸಲ್ಪಡುತ್ತದೆ.
ಅತೋ ನ ಶಙ್ಕಿತಂ ಮನಃ
ಕುರುಷ್ವ ಭೂಪತೇ ಕ್ವಚಿತ್ ।
ಪ್ರದರ್ಶಯಾಮಿ ತೇsನುಜೌ ನಿಹತ್ಯ ಮಾಗಧೇಶ್ವರಮ್ ॥೨೧.೧೨೧॥
ರಾಜನೇ, ನನ್ನ ಅಥವಾ ಭೀಮಾರ್ಜುನರ ವಿಷಯದಲ್ಲಿ ಕೊಲ್ಲುತ್ತಾರೋ
ಇಲ್ಲವೋ ಎನ್ನುವ ಸಂಶಯಯುಕ್ತ ಮನಸ್ಸನ್ನು ಹೊಂದಬೇಡ. ಜರಾಸಂಧನನ್ನು ಕೊಂದು ಬಳಿಕ ನಿನ್ನ
ತಮ್ಮಂದಿರನ್ನು ನಿನಗೆ ತೋರಿಸುತ್ತೇನೆ.
ಇತೀರಿತಃ ಸ ವಿಷ್ಣುನಾ
ವಿಚಾರ್ಯ್ಯ ತದ್ಗುಣಾನ್ ಪರಾನ್ ।
ತಥೇತಿ ಚಾsಹ ತೇ ತ್ರಯಃ ಪ್ರತಸ್ಥುರಾಶು ಮಾಗಧಾನ್ ॥೨೧.೧೨೨॥
ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಶ್ರೀಕೃಷ್ಣನ ಅತ್ಯುತ್ಕೃಷ್ಟವಾದ
ಗುಣಗಳನ್ನು ಚೆನ್ನಾಗಿ ಚಿಂತಿಸಿ, ‘ಆಯಿತು’ ಎಂದು
ಹೇಳಿದನು. ನಂತರ ಆ ಮೂವರು ಕೂಡಲೇ ಜರಾಸಂಧನ
ದೇಶವನ್ನು ಕುರಿತು ತೆರಳಿದರು.
No comments:
Post a Comment