ತಚ್ಚ ಭೀಮಪುರೋಗೇಷು
ಸೈನ್ಯೇಷ್ವಮುಚದುದ್-ಬ್ಲಣಮ್
।
ತದಸ್ತ್ರಂ ವರ್ಜ್ಜಯಾಮಾಸ ಭೀಮಂ ರಾಮಪ್ರಸಾದತಃ ॥೨೭.೧೦೪ ॥
ಅತ್ಯಂತ ಭಯಂಕರವಾಗಿರುವ
ಆ ಭಾರ್ಗವ ಅಸ್ತ್ರವನ್ನು ಕರ್ಣನು
ಭೀಮಸೇನನೇ ಮೊದಲಾಗಿ ಉಳ್ಳ ಸೈನ್ಯದಮೇಲೆ ಬಿಟ್ಟ.
ಆ ಅಸ್ತ್ರವು ರಾಮನ ಅನುಗ್ರಹದಿಂದಾಗಿ ಭೀಮನನ್ನು ಬಿಟ್ಟಿತು.
ಅನ್ಯೇ ತು ದುದ್ರುವುಃ
ಕೇಚಿಚ್ಛಿಷ್ಟಾಃ ಪ್ರಾಪುರ್ಯ್ಯಮಕ್ಷಯಮ್ ।
ನಹ್ಯಸ್ತ್ರಂ
ದ್ರವಮಾಣಾಂಸ್ತದ್ಧನ್ತಿ ತೇನ ಸಪಾರ್ಷತಾಃ ॥೨೭.೧೦೫ ॥
ಪಾಞ್ಚಾಲಾ
ದ್ರೌಪದೇಯಾಶ್ಚ ಶೈನೇಯಾದ್ಯಾಶ್ಚ ಸರ್ವಶಃ ।
ಪಲಾಯನೇನೋರ್ವರಿತಾ ಅರ್ಜ್ಜುನೋSಪ್ಯಸ್ತ್ರಮುದ್ಯತಮ್ ॥೨೭.೧೦೬ ॥
ವೀಕ್ಷ್ಯ
ಪ್ರತ್ಯಸ್ತ್ರಹೀನಂ ತದಪ್ರಾಪ್ಯೈವ ರವೇಃ ಸುತಮ್ ।
ವಾಸುದೇವಮಿದಂ ಪ್ರಾಹ ವರ್ಜ್ಜಯಿತ್ವೈವ ಸೂತಜಮ್ ॥೨೭.೧೦೭ ॥
ಆಗ ಕೆಲವರು ಓಡಿದರು. ಉಳಿದ ಕೆಲವರು ಯಮನ ಮನೆಯನ್ನು ಸೇರಿದರು(ಸತ್ತರು). ಆ ಅಸ್ತ್ರವು
ಓಡುವವರನ್ನು ಕೊಲ್ಲುವುದಿಲ್ಲ, ಹೀಗಾಗಿ ಧೃಷ್ಟದ್ಯುಮ್ನ ಮೊದಲಾಗಿರುವ ಪಾಂಚಾಲರು, ದ್ರೌಪದಿಯ
ಮಕ್ಕಳು, ಸಾತ್ಯಕಿ ಮೊದಲಾದವರು ಓಡಿದ್ದರಿಂದ ಬದುಕಿಕೊಂಡರು. ಅರ್ಜುನನೂ
ಕೂಡಾ ಪ್ರತ್ಯಸ್ತ್ರವಿಲ್ಲದ ಈ ಅಸ್ತ್ರವನ್ನು ಕಂಡು, ಆ ಅಸ್ತ್ರಕ್ಕೆ ಎದುರಾಗದಂತೆ ತೆರಳಬೇಕು
ಎಂದು ನಿಶ್ಚಯಿಸಿ, ಕೃಷ್ಣನಲ್ಲಿ ‘ಕರ್ಣನನ್ನು ಬಿಟ್ಟು ಬೇರೆಕಡೆ ಹೋಗುತ್ತೇನೆ’ ಎಂದು ಹೇಳಿದ.
[ಮಹಾಭಾರತದಲ್ಲಿ(ಕರ್ಣಪರ್ವ ೬೭.೬೫) ಈಕುರಿತ ವಿವರಣೆ ಹೀಗಿದೆ - ‘ಏಷ ಕರ್ಣೋ ರಥೇ ಭಾತಿ ಮಧ್ಯಾಹ್ನ ಇವ ಭಾಸ್ಕರಃ । ನಿವರ್ತಯ
ರಥಂ ಕೃಷ್ಣ ಜೀವನ್ ಭದ್ರಾಣಿ ಪಶ್ಯತಿ’
‘ಈ ಕರ್ಣ ರಥದಲ್ಲಿ ನಡು ಹಗಲಿನ ಸೂರ್ಯನಂತೆ
ಬೆಳಗುತ್ತಿದ್ದಾನೆ. ರಥವನ್ನು ಹಿಂದೆ ತೆಗೆ ಕೃಷ್ಣಾ, ಇಂದು ಬದುಕಿಕೊಂಡರೆ ಮುಂದೆ ಒಳ್ಳೆಯದಾಗುತ್ತದೆ’ ಎನ್ನುತ್ತಾನೆ ಅರ್ಜುನ.].
ಅನ್ಯತ್ರ ಯಾಮಿ
ನೈವಾಸ್ಮಾದಸ್ತ್ರಾಜ್ಜೀವನಮನ್ಯಥಾ ।
ಇತ್ಯೂಚಿವಾಂಸಂ ಪಾರ್ತ್ಥಂ
ತಂ ಕೃಷ್ಣೋSಪ್ರಾಪ್ಯೈವ
ಸೂತಜಮ್ ॥೨೭.೧೦೮ ॥
ಅನ್ಯೇನೈವ ಪಥಾ ಭೀಮಂ
ಪ್ರಾಪಯಾಮಾಸ ವಿಶ್ವಕೃತ್ ।
ತತ್ರಾರ್ಜ್ಜುನೋSವದದ್ ಭೀಮಂ ಯಾಹಿ ದ್ರಷ್ಟುಂ ಯುಧಿಷ್ಠಿರಮ್ ॥೨೭.೧೦೯
॥
‘ಬೇರೆಕಡೆ ಹೋಗುತ್ತೇನೆ, ಇಲ್ಲದಿದ್ದರೆ ಈ ಅಸ್ತ್ರದಿಂದ ನಾನು ಬದುಕುಳಿಯುವುದಿಲ್ಲ’
ಎಂದು ಹೇಳುವ ಅರ್ಜುನನನ್ನು ಶ್ರೀಕೃಷ್ಣ, ಕರ್ಣನನ್ನು ಹೊಂದಿಸದೇ, ಬೇರೊಂದು ಮಾರ್ಗದಿಂದ ಭೀಮಸೇನನನ್ನು
ಹೊಂದಿಸಿದ. ಅಲ್ಲಿ ಅರ್ಜುನನು ಭೀಮನನ್ನು ಕುರಿತು ‘ಯುಧಿಷ್ಠಿರನನ್ನು ನೋಡಿಕೊಂಡು ಬಾ’ ಎಂದು
ಹೇಳಿದ.
ಪ್ರವೃತ್ತಿಂ ವಿದ್ಧಿ
ಭೂಪಸ್ಯ ಮಾಂ ತು ಸಂಶಪ್ತಕಾ ಯುಧೇ ।
ಆಹ್ವಯನ್ತಿ
ಹತೋಚ್ಛೇಷಾಸ್ತಾನಹಂ ಯಾಮಿ ತದ್ ಯುಧೇ ॥೨೭.೧೧೦ ॥
ರಾಜನ ಪ್ರವೃತ್ತಿ ಏನು ಎನ್ನುವುದನ್ನು ತಿಳಿ(ಯುಧಿಷ್ಠಿರ ಹೇಗಿದ್ದಾನೆ ಎಂದು ತಿಳಿ).
ಅಳಿದು ಉಳಿದ ಸಂಶಪ್ತಕರು ಯುದ್ಧಕ್ಕಾಗಿ ಆಹ್ವಾನ ಮಾಡುತ್ತಿದ್ದಾರೆ. ನಾನು ಅವರನ್ನು ಕುರಿತು
ಯುದ್ಧಕ್ಕಾಗಿ ತೆರಳುತ್ತಿದ್ದೇನೆ.
ಇತ್ಯೂಚಿವಾಂಸಂ ತಮುವಾಚ
ಭೀಮೋ ಜಾನನ್ ಸ್ವಬಾಹ್ವೋರ್ಬಲಮಪ್ರಮೇಯಮ್ ।
ಸಂಶಪ್ತಕಾನ್ ಸೂತಜಂ
ಕೌರವಾಂಶ್ಚ ಯೋತ್ಸ್ಯೇSಹಮೇಕಸ್ತ್ವಮುಪೈಹಿ
ಭೂಪಮ್ ॥೨೭.೧೧೧ ॥
ಈರೀತಿಯಾಗಿ ಹೇಳುತ್ತಿರುವ ಅರ್ಜುನನನ್ನು ಕುರಿತು ಭೀಮಸೇನ, ತನ್ನ ಬಾಹುವಿನ ಎಣಿಯಿರದ
ಬಲವನ್ನು ತಿಳಿದವನಾಗಿ ಹೇಳುತ್ತಾನೆ- ‘ನಾನೊಬ್ಬನೇ ಸಂಶಪ್ತಕರನ್ನೂ, ಕರ್ಣನನ್ನೂ, ದುರ್ಯೋಧನಾದಿಗಳನ್ನೂ ಎದುರಿಸಿ ಯುದ್ಧ ಮಾಡುತ್ತೇನೆ. ನೀನೇ ಹೋಗಿ
ಯುಧಿಷ್ಠಿರನನ್ನು ನೋಡಿಕೊಂಡು ಬಾ’ ಎಂದು.
[ಮಹಾಭಾರತದಲ್ಲಿ(ಕರ್ಣಪರ್ವ
೬೮. ೧೬-೧೮) ಈ ಕುರಿತು ಹೀಗೆ ಹೇಳಿದ್ದಾರೆ-ತ್ವಮೇವ
ಜಾನೀಹಿ ಮಹಾನುಭಾವ ರಾಜ್ಞಃ ಪ್ರವೃತ್ತಿಂ ಭರತರ್ಷಭಸ್ಯ। ಅಹಂ ಹಿ ಯದ್ಯರ್ಜುನ ಯಾಂಯಮಿತ್ರಾ ವದಂತಿ
ಮಾಂ ಭೀತ ಇತಿ ಪ್ರವೀರಾಃ । ತತೋSಬ್ರವೀದರ್ಜುನೋ ಭೀಮಸೇನಂ ಸಂಶಪ್ತಕಾಃ ಪ್ರತ್ಯನೀಕಸ್ಥಿತಾ ಮೇ। ಏತಾನಹತ್ವಾSದ್ಯ ಮಯಾ ನ ಶಕ್ಯಮಿತೋSಪಯಾತುಂ ರಿಪುಸಙಘಮಧ್ಯಾತ್ ।
ಅಥಾಬ್ರವೀದರ್ಜುನಂ ಭೀಮಸೇನಃ ಸ್ವವೀರ್ಯಮಾಸಾದ್ಯ ಕುರುಪ್ರವೀರ । ಸಂಶಪ್ತಕಾನ್ ಪ್ರತಿಯೋತ್ಸ್ಯಾಮಿ
ಸಙ್ಖ್ಯೇ ಸರ್ವಾನಹಂ ಯಾಹಿ ಧನಂಜಯ ತ್ವಮ್’ ]
No comments:
Post a Comment