ಅತೀತ್ಯ ಪುತ್ರಂ ತು
ಗುರೋಃ ಸಮಾಗತೇ ಪಾರ್ತ್ಥೇ ಕರ್ಣ್ಣೋ ದ್ರಾವಯಾಮಾಸ ಸೇನಾಮ್ ।
ಪಾಣ್ಡೋಃ ಸುತಾನಾಂ
ಶರವರ್ಷಧಾರೋ ದುರ್ಯ್ಯೋಧನಶ್ಚಾನು ಯಯೌ ತಮೇವ ॥೨೭.೯೪ ॥
ಈರೀತಿ ಗುರುಪುತ್ರ ಅಶ್ವತ್ಥಾಮನನ್ನು ದಾಟಿ ಅರ್ಜುನ ಬರುತ್ತಿರಲು, ಕರ್ಣನು ಪಾಂಡವರ
ಸೇನೆಯನ್ನು ಬಾಣಗಳ ಮಳೆಯಿಂದ ಓಡಿಸಲಾರಮ್ಭಿಸಿದನು. ಅವನನ್ನು ಅನುಸರಿಸಿ, ದುರ್ಯೋಧನನು ಯುದ್ಧಕ್ಕೆಂದು ಬಂದನು.
ಕರ್ಣ್ಣಮಾಯಾನ್ತಮಾಲೋಕ್ಯ ದ್ರಾವಯನ್ತಂ ನಿಜಾಂ ಚಮೂಮ್ ।
ಧನುರನ್ಯತ್ ಸಮಾದಾಯ
ಧೃಷ್ಟದ್ಯುಮ್ನೋ ನ್ಯವಾರಯತ್ ॥೨೭.೯೫ ॥
ಬರುತ್ತಿರುವ ಕರ್ಣನನ್ನು ಕಂಡು, ತನ್ನ ಸೇನೆಯನ್ನು ಓಡಿಸುತ್ತಿರುವ
ಕರ್ಣನನ್ನು ಬೇರೊಂದು ಧನುಸ್ಸನ್ನು ಹಿಡಿದುಕೊಂಡ ಧೃಷ್ಟದ್ಯುಮ್ನನು ತಡೆದ.
ತಯೋರಾಸೀನ್ಮಹದ್
ಯುದ್ಧಂ ಚಿರಂ ಸಮಮವಿಶ್ರಮಮ್ ।
ತದೈವ ಸಾತ್ಯಕಿರ್ವೀರೋ
ದುರ್ಯ್ಯೋಧನಮವಾರಯತ್ ॥೨೭.೯೬ ॥
ಅವರಿಬ್ಬರ ನಡುವೆ ಧೀರ್ಘಕಾಲದ, ಸಮವಾಗಿರುವ, ವಿಶ್ರಾಂತಿಯೇ ಇಲ್ಲದ ದೊಡ್ಡ ಯುದ್ಧವು
ನಡೆಯಿತು. ಆಗಲೇ ಸಾತ್ಯಕಿಯು ದುರ್ಯೋಧನನನ್ನು ತಡೆದ.
ನಿವಾರಿತಃ ಸಾತ್ಯಕಿನಾ
ರಣೇ ದುರ್ಯ್ಯೋಧನೋ ನೃಪಃ ।
ನಿಹತ್ಯ
ಸಾತ್ಯಕೇರಶ್ವಾನ್ ದ್ರೌಪದೇಶ್ಚಾಪಮಚ್ಛಿನತ್ ॥೨೭.೯೭ ॥
ಸಾತ್ಯಕಿಯಿಂದ ತಡೆಯಲ್ಪಟ್ಟ ರಾಜಾ ದುರ್ಯೋಧನನು-ಯುದ್ಧದಲ್ಲಿ ಸಾತ್ಯಕಿಯ ಕುದುರೆಗಳನ್ನು
ಕೊಂದು, ಧೃಷ್ಟದ್ಯುಮ್ನನ ಬಿಲ್ಲನ್ನು ಕತ್ತರಿಸಿದನು.
ತದನ್ತರೈವ ಕರ್ಣ್ಣೋSಪಿ ಪಾರ್ಷತಾಶ್ವಾನಪಾತಯತ್ ।
ತಯೋರ್ವಿರಥಯೋರೇವ
ಭಗ್ನಂ ತತ್ ಪಾಣ್ಡವಂ ಬಲಮ್ ॥೨೭.೯೮ ॥
ಅದೇ ಸಂಧರ್ಭದಲ್ಲಿ ಕರ್ಣನು ಧೃಷ್ಟದ್ಯುಮ್ನನ ಕುದುರೆಗಳನ್ನು ಸಾಯಿಸಿದ. ಹೀಗೆ ಸಾತ್ಯಕಿ
ಮತ್ತು ಧೃಷ್ಟದ್ಯುಮ್ನ ಇಬ್ಬರೂ ರಥಹೀನರಾಗಲು, ಪಾಂಡವ ಸೇನೆಯು ಸೋತಿತು.
No comments:
Post a Comment