ಬಲಂ ಸ್ವಕೀಯಂ ಬಹುಧಾ
ವಿಭಿನ್ನಂ ಸಮೀಕ್ಷ್ಯ ಭೀಮೋ ಮೃಗರಾಜಕೇತುಃ ।
ಕೃತ್ವಾ
ಧರಾಕಮ್ಪಕಮುಗ್ರನಾದಂ ರಣೇSಭ್ಯಯಾತ್ ಕೌರವರಾಜಸೈನ್ಯಮ್ ॥೨೭.೯೯ ॥
ಹೀಗೆ ತಮ್ಮ ಸೇನೆಯು ಬಹುಪ್ರಕಾರವಾಗಿ ನಾಶವಾದುದ್ದನ್ನು ನೋಡಿದ, ಸಿಂಹವೇ ಧ್ವಜದ ಲಾಂಛನವಾಗಿ ಉಳ್ಳ ಭೀಮಸೇನನು, ಭೂಮಿಯನ್ನೇ ನಡುಗಿಸುವ ಭಯಂಕರ
ಗರ್ಜನೆಯನ್ನು ಮಾಡಿ, ದುರ್ಯೋಧನನ ಸೇನೆಯನ್ನು ಯುದ್ಧದಲ್ಲಿ ಎದುರುಗೊಂಡನು.
ನಾದೇನ ಬಾಣೈಶ್ಚ
ವೃಕೋದರೇಣ ಭಗ್ನಂ ತದಾ ಕೌರವಸೈನ್ಯಮಾಶು ।
ದಿಶೋ ವಿದುದ್ರಾವ
ಸುಯೋಧನೋSಪಿ
ಕೃತೋ ರಣೇ ತೇನ ವಿವಾಹನಾಯುಧಃ ॥೨೭.೧೦೦ ॥
ಸಿಂಹ ನಾದದಿಂದಲೂ, ಬಾಣಗಳಿಂದಲೂ, ಭೀಮಸೇನನಿಂದ ನಾಶಗೊಂಡ ಕೌರವಸೇನೆಯು ದಿಕ್ಕು-ದಿಕ್ಕುಗಳಲ್ಲಿ
ಓಡಿತು. ದುರ್ಯೋಧನನೂ ಕೂಡಾ ಭೀಮನಿಂದ ರಥಹೀನ ಹಾಗೂ ಆಯುಧಹೀನನಾದನು.
ದೃಷ್ಟ್ವೈವ ತತ್
ಪಾಣ್ಡವಾನಾಂ ಚ ಸೇನಾ ಸಮಾವೃತ್ತಾ ಕ್ಷಿಪ್ರಮವಾರ್ಯ್ಯವೇಗಾ ।
ತಯಾ ಪುನಃ ಕೌರವಾಣಾಂ
ಬಲಂ ತದ್ ಭಗ್ನಂ ದೂರಾದ್ ದೂರತರಂ ಪ್ರದುದ್ರುವೇ ॥೨೭.೧೦೧ ॥
ಇದನ್ನು ಕಂಡ ಓಡಿಹೋಗುತ್ತಿದ್ದ ಪಾಂಡವರ ಸೇನೆಯು ಶೀಘ್ರದಲ್ಲಿ ಮರಳಿ ಬಂದು ಒಂದಾಯಿತು. ಎಣಿಸಲಾರದ ವೇಗದಿಂದ ಪಾಂಡವ
ಸೇನೆಯಿಂದ ಕೌರವರ ಸೇನೆಯು ನಾಶವಾದದ್ದಾಗಿ ದೂರ-ದೂರಕ್ಕೆ ಓಡಿಹೋಯಿತು.
ಹನ್ಯಮಾನಂ ದಿಶೋ ಯಾತಂ
ಪಾಞ್ಚಾಲೈರ್ಭೀಮಸಂಶ್ರಯಾತ್ ।
ಸುಯೋಧನಬಲಂ ದೃಷ್ಟ್ವಾ
ಜಜ್ವಾಲಾSಧಿರಥಿಃ ಕ್ರುಧಾ ॥೨೭.೧೦೨
॥
ಹೀಗೆ ಭೀಮನ ಬೆಂಗಾವಲಿನಿಂದ ಕೂಡಿಕೊಂಡ ಪಾಂಚಾಲದೇಶದವರಿಂದ ನಾಶಮಾಡಲ್ಪಟ್ಟು
ದಿಕ್ಕು-ದಿಕ್ಕುಗಳಿಗೆ ಚಲ್ಲಪಿಲ್ಲಿಯಾಗಿ ಓಡುತ್ತಿರುವ ದುರ್ಯೋಧನನ ಸೇನೆಯನ್ನು ಕಂಡು, ಕರ್ಣನು ಸಿಟ್ಟಿನಿಂದ ಉರಿದನು.
ಸೋSಮೋಘಂ ರಾಮದೇವತ್ಯಮಸ್ತ್ರಂ ಭಾರ್ಗ್ಗವಸಂಜ್ಞಿತಮ್
।
ಸರ್ವಾಸ್ತ್ರನಾಶಕಂ
ದಿವ್ಯಮಪ್ರತಿದ್ವನ್ದ್ವಮಾದದೇ ॥೨೭.೧೦೩ ॥
ಅವನು ಪರಶುರಾಮನೇ ದೇವತೆಯಾಗಿ ಉಳ್ಳ, ಭಾರ್ಗವ ಎಂಬ ಹೆಸರಿನ, ಎಲ್ಲಾ ಅಸ್ತ್ರವನ್ನೂ
ನಾಶಮಾಡುವ, ಅಲೌಕಿಕವಾಗಿರುವ, ಎಣೆಯಿರದ, ಎಂದೂ
ವ್ಯರ್ಥವಲ್ಲದ ಅಸ್ತ್ರವನ್ನು ತೆಗೆದುಕೊಂಡನು.
No comments:
Post a Comment