ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 9, 2023

Mahabharata Tatparya Nirnaya Kannada 32-131-138

 

ಚತುಃಸಹಸ್ರೇ ತ್ರಿಶತೋತ್ತರೇ ಗತೇ ಸಂವತ್ಸರಾಣಾಂ ತು ಕಲೌ ಪೃಥಿವ್ಯಾಮ್ ।

ಜಾತಃ ಪುನರ್ವಿಪ್ರತನುಃ ಸ ಭೀಮೋ ದೈತ್ಯೈರ್ನ್ನಿಗೂಢಂ ಹರಿತತ್ವಮಾಹ ॥ ೩೨.೧೩೧ ॥

 

ಕಲಿಯುಗದಲ್ಲಿ ಭೂಮಿಯಲ್ಲಿ ನಾಲ್ಕು ಸಾವಿರದ ಮುನ್ನೂರು ವರ್ಷಗಳು ಕಳೆದಮೇಲೆ, ಭೀಮಸೇನನು ಮತ್ತೆ ಬ್ರಾಹ್ಮಣ ಶರೀರವನ್ನು ಹೊಂದಿ, ದೈತ್ಯರಿಂದ ಮುಚ್ಚಲ್ಪಟ್ಟ ಪರಮಾತ್ಮನ ತತ್ವವನ್ನು ಹೇಳಿದನು. 

 

ತದೈವ ಕೃಷ್ಣಾSಪಿ ಭುವಿ ಪ್ರಜಾತಾ ಪ್ರೀತ್ಯೈ ಹರೇರನ್ಧತಮಸ್ಯಪಾತಯತ್ ।

ಮಹಾಸುರಾನ್ ವಿಷ್ಣುಪರಾರ್ಜ್ಜುನಾದ್ಯಾಃ ಕೃತೇ ಪ್ರಜಾತಾ ಹರಿತೋಷಣಾಯ ।

ಪುನಶ್ಚ ತೇ ಸ್ಥಾನಮವಾಪ್ಯ ಸರ್ವೇ ಸ್ವೀಯಂ ಪರಾನ್ತೇ ತು ವಿಮುಕ್ತಿಮಾಪ್ನುಯುಃ ॥ ೩೨.೧೩೨ ॥

 

ಆಗಲೇ ದ್ರೌಪದಿಯೂ ಕೂಡಾ ಪರಮಾತ್ಮನ ಪ್ರೀತಿಗಾಗಿ ಭೂಮಿಯಲ್ಲಿ ಹುಟ್ಟಿದವಳಾಗಿ, ಮಹತ್ತಾದ  ಅಸುರರನ್ನು ಅನ್ಧಂತಮಸ್ಸಿನಲ್ಲಿ ಬೀಳಿಸಿದಳು. ಪರಮಾತ್ಮನಲ್ಲಿಯೇ ಆಸಕ್ತರಾದ ಅರ್ಜುನಾದಿಗಳು ಪರಮಾತ್ಮನ ಸಂತೋಷಕ್ಕಾಗಿ ಭೂಮಿಯಲ್ಲಿ ಅವತಾರ ಮಾಡಿದರು. ಮತ್ತೆ ಅವರು ತಮ್ಮ ಸ್ಥಾನವನ್ನು ಹೊಂದಿ, ಕಡೆಯಲ್ಲಿ ತಮಗೆ ಯೋಗ್ಯವಾಗಿರುವ ವಿಮುಕ್ತಿಯನ್ನು ಹೊಂದುತ್ತಾರೆ.

 

ವಾಯುತ್ವಮಾಪ್ತಃ ಸಹನೂಮದಂಶೋ ಬ್ರಾಹ್ಮಂ ಪದಂ ಪ್ರಾಪ್ಯ ವೃಕೋದರಶ್ಚ ।

ವಾಗೀಶ್ವರಿತ್ವಂ ಗತಯೈವ ಕೃಷ್ಣಯಾ ಸಹೈವ ಮುಕ್ತಿಂ ಗಮಿತಾSಖಿಲೋತ್ತಮಾಮ್ ॥ ೩೨.೧೩೩ ॥

 

ಹನುಮಂತನ ಅಂಶದಿಂದ ಸಹಿತನಾದ ಭೀಮಸೇನನು ವಾಯುತ್ವವನ್ನು ಹೊಂದಿ, ಮುಂದೆ ಬ್ರಹ್ಮಪದವಿಯನ್ನು  ಹೊಂದಿ, ಸರಸ್ವತಿಯ ಸ್ಥಾನಕ್ಕೆ ಬಂದಿರುವ ದ್ರೌಪದಿಯ ಜೊತೆಗೇ ಮುಕ್ತಿಯನ್ನು ಹೊಂದುತ್ತಾನೆ.

 

ಭುವಿ ದ್ಯುಲೋಕೇ ಚ ವಿರಿಞ್ಚತಾಯಾಂ ಮುಕ್ತೌ ಚ ತಾಭ್ಯಾಮಧಿಕಂ ಸಮಸ್ತಾತ್ ।

ಸನ್ತೋಷ್ಯತೇ ಪೂರ್ಣ್ಣಗುಣೋ ರಮೇಶಃ ಸದೈವ ನಿತ್ಯೋರ್ಜ್ಜಿತತದ್ರತಿಭ್ಯಾಮ್ ॥ ೩೨.೧೩೪ ॥

 

 

ಮುಖ್ಯಪ್ರಾಣ-ಭಾರತೀಯರ ಅವತಾರ ರೂಪದಲ್ಲಿಯೂ, ಇಂದ್ರಾದಿ ಲೋಕದಲ್ಲಿಯೂ, ಬ್ರಹ್ಮದೇವರಾಗಿರಬೇಕಾಗಿರುವಾಗಲೂ, ಮುಕ್ತಿಯಲ್ಲಿಯೂ,  ಉತ್ಕೃಷ್ಟವಾದ ಭಕ್ತಿಯುಳ್ಳ ಅವರಿಂದ ಪೂರ್ಣಗುಣನಾಗಿರುವ ನಾರಾಯಣನು ಬಹಳ ಸಂತೋಷಿಸಿಕೊಳ್ಳಲ್ಪಡುತ್ತಾನೆ.

 

‘ಭೂಷನ್ ನ ಯೋSಧಿ ಬಭ್ರೂಷು ನಮ್ನತೇ’, ‘ಬಳಿತ್ಥಾ ತದ್ ವಪುಷೇ ಧಾಯಿ ದರ್ಶತಮ್’

‘ತಾಂ ಸು ತೇ ಕೀರ್ತ್ತಿಂ ಮಘವನ್ ಮಹಿತ್ವಾ’ ಇತ್ಯಾದಿಸೂಕ್ತಾನಿ ಚ ತತ್ಪ್ರಮಾಣಮ್ ॥ ೩೨.೧೩೫ ॥

 

ಭೂಷನ್ ನ ಯೋSಧಿ ಬಭ್ರೂಷು ನಮ್ನತೇ’ ಎನ್ನುವ ಋಗ್ವೇದ ಸಂಹಿತೆಯ(೧.೧೪೦) ಮಾತು, ಅಲ್ಲಿಯೇ ಹೇಳಿರುವ  ಬಳಿತ್ಥಾ ತದ್ ವಪುಷೇ ಧಾಯಿ ದರ್ಶತಮ್’(೧೪೧) ಎನ್ನುವಮಾತು, ಮುಂದೆ ಹೇಳಿರುವ  ‘ತಾಂ ಸು ತೇ ಕೀರ್ತಿಂ ಮಘವನ್ ಮಹಿತ್ವಾ’ (೧೦.೫೪), ಇತ್ಯಾದಿ ಋಗ್ವೇದದ ಸೂಕ್ತಗಳೇ ಈ ವಿಚಾರದಲ್ಲಿ ಪ್ರಮಾಣವಾಗಿ ನಿಂತಿವೆ.

 

ಅನ್ಯಾನಿ  ವಾಕ್ಯಾನಿ ಚ ವೈದಿಕಾನಿ ಸಪಞ್ಚರಾತ್ರೋಕ್ತಿಪುರಾಣಕಾನಿ ।

ಪೃಷ್ಟಶ್ಚ ಭೀಷ್ಮೋSತ್ರ ಯುಧಿಷ್ಠಿರೇಣೈತನ್ಮೋಕ್ಷಧರ್ಮ್ಮೇಷ್ವಪಿ ಕಿಞ್ಚಿದಾಹ ॥ ೩೨.೧೩೬ ॥

 

ಹಾಗೇ, ಪಂಚರಾತ್ರದಲ್ಲಿ  ಹೇಳಿರುವ ಉಕ್ತಿಗಳು, ಪುರಾಣ ವಾಕ್ಯಗಳು, ಇವುಗಳಿಂದ ಕೂಡಿರುವ ವೇದದಲ್ಲಿ ಹೇಳಿದ ಉಳಿದ ಮಾತುಗಳೂ ಕೂಡಾ ಇದರಲ್ಲಿ ಪ್ರಮಾಣ. ಯುಧಿಷ್ಠಿರನಿಂದ ಕೇಳಲ್ಪಟ್ಟಾಗ ಭೀಷ್ಮಾಚಾರ್ಯರಿಂದ ಹೇಳಲ್ಪಟ್ಟ ಮೋಕ್ಷಧರ್ಮಪರ್ವದಲ್ಲಿಯೂ ಕೂಡಾ ಈ ಕುರಿತು ಸಂಕ್ಷಿಪ್ತವಾಗಿ ಹೇಳಲಾಗಿದೆ. 

 

ಏವಂ ಪ್ರಯಾತೇಷು ಸಕೇಶವೇಷು ಸ್ವಾನೇವ ಲೋಕಾನ್ ಯದುಪಾಣ್ಡವೇಷು ।

ಪರೀಕ್ಷಿದಾದ್ಯಾಸ್ತು ತದನ್ವಯೋತ್ಥಾ ವ್ಯಾಸಾನುಶಿಷ್ಟಾಃ ಪೃಥಿವೀಮರಕ್ಷನ್ ॥ ೩೨.೧೩೭ ॥

 

ಈರೀತಿಯಾಗಿ ಕೃಷ್ಣನಿಂದ ಕೂಡಿರುವ ಯಾದವರು ಹಾಗೂ ಪಾಂಡವರು ತಮ್ಮ ಲೋಕವನ್ನು ಹೊಂದಲು, ಅವರ ವಂಶದಲ್ಲಿಯೇ ಬಂದಿರುವ, ವೇದವ್ಯಾಸರಿಂದ ಶಿಕ್ಷಿತರಾದ, ಪರೀಕ್ಷಿತರಾಜನೇ ಮೊದಲಾದವರು, ಭೂಮಿಯನ್ನು ಪಾಲನೆ ಮಾಡುತ್ತಿದ್ದರು.

 

ತೈಃ ಕ್ಷೇಮಕಾನ್ತೈರಿಹ ಭಾರತಾದಿಶಾಸ್ತ್ರಾಣಿ  ಶೃಣ್ವದ್ಭಿರಶೇಷವಿದ್ಭಿಃ ।

ವ್ಯಾಸಪ್ರಭಾವಾಚ್ಚ ಕಲೌ ಚ ಧರ್ಮ್ಮೋ ಜ್ಞಾನಂ ಚ ಸುತ್ರಾತಮಗಾನ್ನ ನಾಶಮ್ ॥ ೩೨.೧೩೮ ॥

 

ಆ ಪಾಂಡವರ ವಂಶದಲ್ಲಿ ಬಂದ, ಕ್ಷೇಮಕನೇ ಕಡೆಯಾಗಿ ಉಳ್ಳ, ಆ ರಾಜರುಗಳು, ಮಹಾಭಾರತವೇ ಮೊದಲಾಗಿರುವ ಶಾಸ್ತ್ರವನ್ನು ಕೇಳುತ್ತಿದ್ದುದರಿಂದ, ವೇದವ್ಯಾಸರ ಪ್ರಭಾವದಿಂದಾಗಿ, ಕಲಿಯುಗದಲ್ಲಿಯೂ ಕೂಡಾ ಧರ್ಮವು, ಜ್ಞಾನವು ಚೆನ್ನಾಗಿ ರಕ್ಷಿಸಲ್ಪಟ್ಟದ್ದಾಗಿ ನಾಶ ಹೊಂದಲಿಲ್ಲ.

No comments:

Post a Comment