ತನುಸ್ತೃತೀಯಾ ಪವನಸ್ಯ
ಸೇಯಂ ಸದ್ಭಾರತಾರ್ತ್ಥಪ್ರತಿದೀಪನಾಯ ।
ಗ್ರನ್ಥಂ ಚಕಾರೇಮಮುದೀರ್ಣ್ಣವಿದ್ಯಾ
ಯಸ್ಮಿನ್ ರಮನ್ತೇ ಹರಿಪಾದಭಕ್ತಾಃ ॥ ೩೨.೧೭೬ ॥
ಮುಖ್ಯಪ್ರಾಣನ ಈ ಮೂರನೇ ಅವತಾರದಲ್ಲಿ, ನಿರ್ದುಷ್ಟವಾದ ಮಹಾಭಾರತದ ಅರ್ಥವನ್ನು ಪ್ರಕಾಶಪಡಿಸುವುದಕ್ಕಾಗಿ
ಈ ಗ್ರಂಥವು ರಚಿಸಲ್ಪಟ್ಟಿತು. ವಿದ್ಯೆಯನ್ನು ಚೆನ್ನಾಗಿ ಬಲ್ಲ ಭಗವದ್ಭಕ್ತರು ಈ ಮಹಾಭಾರತ
ತಾತ್ಪರ್ಯದಲ್ಲೇ ಆಸಕ್ತರಾಗಿ ನಿರಂತರ ಹರಿಪಾದಲ್ಲಿ ಕ್ರೀಡಿಸುತ್ತಾರೆ.
[ಋಗ್ವೇದದಲ್ಲಿ ಹೇಳಿರುವ, ಈಗಾಗಲೇ ಎರಡನೇ ಅಧ್ಯಾಯದಲ್ಲಿ ವಿವರಿಸಿರುವ
ಮುಖ್ಯಪ್ರಾಣನ ಮೂರು ಅವತಾರದ ಕುರಿತಾದ ಮಾತನ್ನು ಮತ್ತೆ ಇಲ್ಲಿ ನಮಗೆ ನೆನಪಿಸುತ್ತಾರೆ:]
‘ತೃತೀಯಮಸ್ಯ ವೃಷಭಸ್ಯ
ದೋಹಸೇ ದಶಪ್ರಮತಿಂ ಜನಯನ್ತ ಯೋಷಣಃ ।
‘ನಿರ್ಯ್ಯದೀಂ
ಬುಧ್ನಾನ್ಮಹಿಷಸ್ಯ ವರ್ಪ್ಪಸ ಈಶಾನಾಸಃ ಶವಸಾ ಕ್ರನ್ತ ಸೂರಯಃ ॥ ೩೨.೧೭೭ ॥
‘ಯದೀಮನು ಪ್ರದಿವೋ
ಮಧ್ವ ಆಧವೇ ಗುಹಾ ಸನ್ತಂ ಮಾತರಿಶ್ವಾ ಮಥಾಯತಿ’ ।
ಇತ್ಯಾದಿವಾಕ್ಯೋಕ್ತಮಿದಂ
ಸಮಸ್ತಂ ತಥಾ ಪುರಾಣೇಷು ಚ ಪಞ್ಚರಾತ್ರೇ ॥ ೩೨.೧೭೮ ॥
ವೇದಾಭಿಮಾನಿಗಳಾದ ತಾಯಂದಿರು ಪರಮಾತ್ಮನನ್ನು ವೇದಗಳ ರಹಸ್ಯ ಸಾರ ಎಂದು ತಿಳಿಸಿಕೊಡುವುದಕ್ಕಾಗಿ
ಮಧ್ವನನ್ನಾಗಿ ಹುಟ್ಟಿಸಿದರು. ಇದು ಮುಖ್ಯಪ್ರಾಣನ ಮೂರನೇ ರೂಪ.
ಜ್ಞಾನಿಗಳಲ್ಲಿ ಶ್ರೇಷ್ಠನಾದ ಮುಖ್ಯಪ್ರಾಣನ ಅನುಗ್ರಹದಿಂದ, ಶ್ರೇಷ್ಠನಾದ ಪರಮಾತ್ಮನ ಗುಣಗಳನ್ನು ಜ್ಞಾನಿಗಳು ಸುಖವಾಗಿ
ತಿಳಿಯುತ್ತಾರೆ. ಯಾವ ಪರಮಾತ್ಮನ ಚಿಂತನೆಯಿಂದ ಸಜ್ಜನರನ್ನು ಸರಿಯಾದ
ದಾರಿಯಲ್ಲಿ ನಡೆಸಲು ಸಾದ್ಯವೋ, ಅಂತಹ ಪರಮಾತ್ಮನ ಗುಣಗಳನ್ನು ಸಾಧನೆ ಮಾಡಲು ಮುಖ್ಯಪ್ರಾಣನು
ನಮ್ಮ ಹೃದಯ ಗುಹೆಯಲ್ಲೇ ಇರುವ ಅಂತರ್ಯಾಮಿಯಾದ ಪರಮಾತ್ಮನನ್ನು ಮಥನ ಮಾಡಿ ಕೊಡುತ್ತಾನೆ. ಇತ್ಯಾದಿ ವಾಕ್ಯಗಳಿಂದ ಇದೆಲ್ಲವೂ ಕೂಡಾ
ಹೇಳಲ್ಪಟ್ಟಿದೆ. ವೇದದಲ್ಲಷ್ಟೇ ಅಲ್ಲಾ, ಪುರಾಣಗಳಲ್ಲಿಯೂ, ಪಂಚರಾತ್ರದಲ್ಲಿಯೂ ಇದನ್ನು
ಹೇಳಿದ್ದಾರೆ.
ಅತ್ರೋದಿತಾ ಯಾಶ್ಚ
ಕಥಾಃ ಸಮಸ್ತಾ ವೇದೇತಿಹಾಸಾದಿವಿನಿರ್ಣ್ಣಯೋಕ್ತಾಃ ।
ತಸ್ಮಾದಯಂ ಗ್ರನ್ಥವರೋSಖಿಲೋರುಧರ್ಮ್ಮಾದಿಮೋಕ್ಷಾನ್ತಪುಮರ್ತ್ಥಹೇತುಃ ।
ಕಿಂ ವೋದಿತೈರಸ್ಯ
ಗುಣೈಸ್ತತೋSನ್ಯೈರ್ನ್ನಾರಾಯಣಃ
ಪ್ರೀತಿಮುಪೈತ್ಯತೋSಲಮ್ ॥ ೩೨.೧೭೯ ॥
ಇಲ್ಲಿ ಹೇಳಿದ ಎಲ್ಲಾ ಕಥೆಗಳೂ ಕೂಡಾ ವೇದ, ಇತಿಹಾಸ, ಇತ್ಯಾದಿಗಳ ನಿರ್ಣಯದಿಂದ ಬಂದಿರುವುವಂಥದ್ದು.
ಅದರಿಂದ ಈ ಶ್ರೇಷ್ಠವಾದ ಗ್ರಂಥವು ಧರ್ಮ, ಅರ್ಥ, ಕಾಮ, ಮೋಕ್ಷ, ಮೊದಲಾದ ಎಲ್ಲಾ ಪುರುಷಾರ್ಥಗಳಿಗೆ ಸಾಧನ. ಇದನ್ನು
ಓದಿದರೆ ನಾರಾಯಣನು ಅತ್ಯಂತ ಪ್ರೀತನಾಗುತ್ತಾನೆ. ಆದಕಾರಣ
ಬೇರೆ ಎಷ್ಟು ಗುಣಗಳನ್ನು ಹೇಳಿ ಏನು ಪ್ರಯೋಜನ.
ಯಃ ಸರ್ವಗುಣಸಮ್ಪೂರ್ಣ್ಣಃ
ಸರ್ವದೋಷವಿವರ್ಜ್ಜಿತಃ ।
ಪ್ರೀಯತಾಂ ಪ್ರೀತ
ಏವಾಲಂ ವಿಷ್ಣುರ್ಮ್ಮೇ ಪರಮಃ ಸುಹೃತ್ ॥ ೩೨.೧೮೦ ॥
ಎಲ್ಲಾ ಗುಣಗಳಿಂದ
ತುಂಬಿರುವ, ಯಾವ
ಕೊರತೆಯೂ ಇಲ್ಲದ, ಎಲ್ಲಾ ಕೊರತೆಗಳನ್ನು ಮೀರಿ ನಿಂತಿರುವ, ನನ್ನಲ್ಲಿ ಯಾವಾಗಲೂ ಪ್ರೀತನೇ ಆಗಿರುವ,
ಪ್ರಿಯನಾದ ಶ್ರೀಹರಿಯು ಅತ್ಯಂತ ಪ್ರೀತನಾಗಲಿ.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವಸ್ವರ್ಗ್ಗಾರೋಹಣರ್ನ್ನಾಮ ದ್ವಾತ್ರಿಂಶೋsಧ್ಯಾಯಃ ॥
[ ಆದಿತಃ ಶ್ಲೋಕಾಃ ೫೦೦೦ + ೧೮೦=೫೧೮೦ ]
*********
ಸಮಾಪ್ತೋಯಂ ಗ್ರನ್ಥಃ
॥ ಶ್ರೀಕೃಷ್ಣಾರ್ಪಣಮಸ್ತು ॥
No comments:
Post a Comment