ಜಘ್ನುರ್ಗ್ಗಿರೀನ್ದ್ರತಳಮುಷ್ಟಿಮಹಾಸ್ತ್ರಶಸ್ತ್ರೈಶ್ಚಕ್ರುರ್ನ್ನದೀಶ್ಚ
ರುಧಿರೌಘವಹಾ ಮಹೌಘಮ್ ।
ತತ್ರ ಸ್ಮ
ದೇವವೃಷಭೈರಸುರೇಶಚಮ್ವಾ ಯುದ್ಧೇ ನಿಸೂದಿತ ಉತೌಘಬಲೈಃ ಶತಾಂಶಃ ॥೧೧.೧೮೪॥
ಹೀಗೆ ಸೇರಿದ
ದೈತ್ಯ-ದೇವತೆಗಳು ಪರಸ್ಪರ ಬೆಟ್ಟಗಳು, ಕೈತಳ, ಮುಷ್ಠಿ ಮತ್ತು ಅಸ್ತ್ರ-ಶಸ್ತ್ರಗಳಿಂದ
ಹೊಡೆದಾಡಿಕೊಂಡರು. ಅವರು ಈ ರೀತಿಯ ಯುದ್ಧದಲ್ಲಿ ರಕ್ತದ ಹೊಳೆಹರಿಸುವ ನದಿಗಳನ್ನು ಮಾಡಿದರು. ಯುದ್ಧದಲ್ಲಿ
ದೇವತಾಶ್ರೇಷ್ಠರಿಂದ ದೈತ್ಯರ ಸೈನ್ಯದ ನೂರನೇ ಒಂದು ಭಾಗವು ಕೊಲ್ಲಲ್ಪಟ್ಟಿತು.
ಅಥಾsತ್ಮಸೇನಾಮವಮೃದ್ಯಮಾನಾಂ
ವೀಕ್ಷ್ಯಾಸುರಃ ಶಮ್ಬರನಾಮಧೇಯಃ ।
ಸಸಾರ ಮಾಯಾವಿದಸಹ್ಯ̐ಮಾಯೋ ವರಾದುಮೇಶಸ್ಯ ಸುರಾನ್ ವಿಮೋಹಯನ್ ॥೧೧.೧೮೫॥
ತದನಂತರ, ಕೊಲ್ಲಲ್ಪಡುತ್ತಿರುವ
ತನ್ನ ಸೇನೆಯನ್ನು ಕಂಡು, ಮಾಯಾವಿದ್ಯೆಯನ್ನು ಬಲ್ಲವನಾದ ‘ಶಂಬರ’ ಎಂಬ ಹೆಸರುಳ್ಳ ಅಸುರನು,
ಯಾರಿಗೂ ತಡೆಯಲಾಗದ ಕಣ್ಕಟ್ಟುವಿದ್ಯೆಯನ್ನು ಹೊಂದಿದವನಾಗಿ, ರುದ್ರನ ವರದಿಂದ ದೇವತೆಗಳನ್ನು
ಪ್ರಜ್ಞೆತಪ್ಪುವಂತೆ ಮಾಡುತ್ತಾ ಯುದ್ಧಕ್ಕೆ ಬಂದನು.
ಮಾಯಾಸಹಸ್ರೇಣ ಸುರಾಃ
ಸಮರ್ದ್ದಿತಾ ರಣೇ ವಿಷೇದುಃ ಶಶಿಸೂರ್ಯ್ಯಮುಖ್ಯಾಃ ।
ತಾನ್ ವಿಕ್ಷ್ಯ ವಜ್ರೀ
ಪರಮಾಂ ತು ವಿದ್ಯಾಂ ಸ್ವಯಮ್ಭುದತ್ತಾಮ್ ಪ್ರಯುಯೋಜ ವೈಷ್ಣವೀಮ್॥೧೧.೧೮೬॥
ಸಾವಿರಾರು ಮಾಯೆಗಳಿಂದ ಚಂದ್ರ,
ಸೂರ್ಯ, ಮೊದಲಾದ ದೇವತೆಗಳು ಪೀಡಿತರಾಗಿ ಯುದ್ಧದಲ್ಲಿ ಆಯಾಸಗೊಂಡರು(ದುಃಖಗೊಂಡರು). ಅವರೆಲ್ಲರನ್ನು ನೋಡಿ
ಇಂದ್ರನು ಬ್ರಹ್ಮದೇವರು ತನಗೆ ಕೊಟ್ಟ ವಿಷ್ಟುದೇವತಾಕವಾದ ಪರಮವಿದ್ಯೆಯನ್ನು(ವೈಷ್ಣವೀ
ಮಾಯೆಯನ್ನು) ಶಂಬರನ ಮೇಲೆ ಪ್ರಯೋಗಿಸಿದನು.
ಸಮಸ್ತಮಾಯಾಪಹಯಾ ತಯೈವ
ವರಾದ್ ರಮೇಶಸ್ಯ ಸದಾsಪ್ಯಸ̐ಹ್ಯಯಾ ।
ಮಾಯಾ ವಿನೇಶುರ್ದ್ದಿತಿಜೇನ್ದ್ರಸೃಷ್ಟಾ
ವಾರೀಶವಹ್ನೀನ್ದುಮುಖಾಶ್ಚ ಮೋಚಿತಾಃ ॥೧೧.೧೮೭॥
ಎಲ್ಲಾ ಮಾಯೆಗಳನ್ನು
ನಾಶಮಾಡುವ ಆ ವಿದ್ಯೆಯಿಂದ ಮತ್ತು ನಿನ್ನ ವರದಿಂದ, ಶಂಬರಾಸುರ ಸೃಷ್ಟಿಮಾಡಿದ್ದ ಮಾಯೆಯು ನಾಶವಾಯಿತು.
ಹೀಗೆ ವರುಣ, ಅಗ್ನಿ, ಚಂದ್ರ, ಮೊದಲಾದ ದೇವತೆಗಳು ಇಂದ್ರನ ಕಾರಣದಿಂದ ಬಿಡುಗಡೆ ಮಾಡಲ್ಪಟ್ಟರು.
ಯಮೇನ್ದುಸೂರ್ಯ್ಯಾದಿಸುರಾಸ್ತತೋsಸುರಾನ್
ನಿಜಘ್ನುರಾಪ್ಯಾಯಿತವಿಕ್ರಮಾಸ್ತದಾ ।
ಸುರೇಶ್ವರೇಣೋರ್ಜ್ಜಿತಪೌರುಷಾ
ಬಹೂನ್ ವಜ್ರೇಣ ವಜ್ರೀ ನಿಜಘಾನ ಶಮ್ಬರಮ್ ॥೧೧.೧೮೮ ॥
ತದನಂತರ ಯಮ, ಚಂದ್ರ,
ಸೂರ್ಯ ಮೊದಲಾದ ಎಲ್ಲಾ ದೇವತೆಗಳು ತಮ್ಮ ಬಲವನ್ನು ಮರಳಿ ಪಡೆದು, ದೇವೆಂದ್ರನಿಂದ ವರ್ದಿತ
ಬಲವುಳ್ಳವರಾಗಿ ಅನೇಕ ಅಸುರರನ್ನು ಕೊಂದರು. ಇಂದ್ರನು ತನ್ನ ವಜ್ರದಿಂದ ಶಂಬರಾಸುರನನ್ನು ಕೊಂದನು.
No comments:
Post a Comment