ಜಿತ್ವಾ ಜಲೇಶಂ ಚ ಹೃತಾನಿ ಯೇನ ರತ್ನಾನಿ ಯಕ್ಷಾಶ್ಚ ಜಿತಾಃ
ಶಿವಸ್ಯ।
ಕನ್ಯಾವನಾರ್ತ್ಥಂ ಮಗಧಾಧಿಪೇನ ಪ್ರಯೋಜಿತಾಸ್ತೇ ಚ ಹೃತೇ ಬಲೇನ
॥ ೧೧.೨೦೨ ॥
ವರುಣನನ್ನು ಗೆದ್ದ ಈ
ಕಂಸನಿಂದ ಸಮುದ್ರದಲ್ಲಿರುವ ರತ್ನಗಳೆಲ್ಲವೂ ಅಪಹರಿಸಲ್ಪಟ್ಟಿತು. ಜರಾಸಂಧನಿಂದ ತನ್ನಿಬ್ಬರ
ಹೆಣ್ಣುಮಕ್ಕಳ(ಅಸ್ತಿ ಮತ್ತು ಪ್ರಾಸ್ತಿ)
ರಕ್ಷಣೆಗಾಗಿ ನೇಮಿಸಲ್ಪಟ್ಟ ಶಿವನ ಯಕ್ಷರನ್ನು
ಗೆದ್ದ ಕಂಸ, ಆ ಇಬ್ಬರು ಹೆಣ್ಣುಮಕ್ಕಳನ್ನೂ ಕೂಡಾ
ಬಲಾತ್ಕಾರದಿಂದ ಅಪಹರಿಸಿದ.
ಸ ವಿಪ್ರಚಿತ್ತಿಶ್ಚ ಜರಾಸುತೋsಭೂದ್ ವರಾದ್ ವಿಧಾತುರ್ಗ್ಗಿರಿಶಸ್ಯ
ಚೈವ ।
ಸರ್ವೈರಜೇಯೋ ಬಲಮುತ್ತಮಂ ತತೋ ಜ್ಞಾತ್ವೈವ ಕಂಸಸ್ಯ ಮುದಾ ಸುತೇ
ದದೌ ॥೧೧.೨೦೩॥
ನಿವಾರಯಾಮಾಸ ನ ಕಂಸಮುದ್ಧತಂ ಶಕ್ತೋsಪಿ ಯೋ ಯಸ್ಯ ಬಲೇ ನ
ಕಶ್ಚಿತ್ ।
ತುಲ್ಯಃ ಪೃಥಿವ್ಯಾಂ ವಿವರೇಷು ವಾ ಕ್ವಚಿದ್ ವಶೇ ಬಲಾದ್ ಯೋ ನೃಪತೀಂಶ್ಚ ಚಕ್ರೇ ॥೧೧.೨೦೪॥
ಯಾವ ವಿಪ್ರಚಿತ್ತಿಯು
ಹಿಂದೆ ಮುಖ್ಯಪ್ರಾಣನಿಂದ ಕೊಲ್ಲಲ್ಪಟ್ಟಿದ್ದನೋ, ಅವನೇ
ಜರಾಸಂಧನಾಗಿ ಹುಟ್ಟಿ ಬ್ರಹ್ಮ-ರುದ್ರರ ವರಬಲದಿಂದ ಅಜೇಯನಾಗಿದ್ದಾನೆ. ಜರಾಸಂಧ ಕಂಸನ
ಉತ್ಕೃಷ್ಟವಾದ ಬಲವನ್ನು ತಿಳಿದೇ ಅವನಿಗೆ ಅತ್ಯಂತ
ಸಂತಸದಿಂದ ತನ್ನ ಮಗಳಿಂದರನ್ನು ಕೊಟ್ಟನು. (ಕಂಸನಿಂದ ಅಪಹೃತರಾದ ತನ್ನ ಮಗಳಿಂದರನ್ನು ಜರಾಸಂಧ ಸಂತೋಷದಿಂದಲೇ
ಅವನಿಗೇ ಮದುವೆ ಮಾಡಿಸಿಕೊಟ್ಟ).
ಜರಾಸಂಧನು ಶಕ್ತನಾದರೂ ಕೂಡಾ,
ದೃಪ್ತನಾದ ಕಂಸನನ್ನು ತಡೆಯಲಿಲ್ಲ. (ಜರಾಸಂಧನ ಬಲಕ್ಕೆ ಹೋಲಿಸಿದರೆ ಕಂಸ ಏನೂ ಅಲ್ಲ. ಆದರೆ ಸ್ವಾಭಾವಿಕವಾದ ಪ್ರೀತಿಯಿಂದ ತನ್ನ ಮಗಳಿಂದರನ್ನು ಆತ ಕಂಸನಿಗೆ
ಕೊಟ್ಟ). ಎಲ್ಲಾ ರಾಜರನ್ನೂ ಕೂಡಾ ಬಲಾತ್ಕಾರದಿಂದ
ವಶಮಾಡಿಕೊಂಡಿರುವ ಜರಾಸಂಧನ ಬಲಕ್ಕೆ ತುಲ್ಯನಾದವನು ಭೂಮಿಯ ಯಾವ ಮೂಲೆಯಲ್ಲೂ ಇನ್ನೊಬ್ಬನಿಲ್ಲ.
ಹತೌ ಪುರಾ ಯೌ ಮಧುಕೈಟಭಾಖ್ಯೌ ತ್ವಯೈವ ಹಂಸೋ ಡಿಭಕಶ್ಚ ಜಾತೌ ।
ವರಾದಜೈಯೌ ಗಿರಿಶಸ್ಯ ವೀರೌ ಭಕ್ತೌ ಜರಾಸನ್ಧಮನು ಸ್ಮ ತೌ ಶಿವೇ
॥೧೧.೨೦೫॥
ಹಿಂದೆ ನಿನ್ನಿಂದಲೇ
ಕೊಲ್ಲಲ್ಪಟ್ಟ ಮಧು ಮತ್ತು ಕೈಟಭಾ ಎನ್ನುವ ಹೆಸರಿನ
ದೈತ್ಯರು ಇದೀಗ ಹಂಸ ಮತ್ತು ಡಿಭಕ ಎನ್ನುವ ಹೆಸರಿನಿಂದ ಹುಟ್ಟಿದ್ದಾರೆ. ರುದ್ರನ ವರದಿಂದ ಅವಧ್ಯರಾಗಿರುವ ,
ಅಜೇಯರಾಗಿರುವ ಇವರು ಜರಾಸಂಧನನ್ನು ಅನುಸರಿಸುತ್ತಾ
ಶಿವನಲ್ಲಿ ಭಕ್ತರಾಗಿದ್ದಾರೆ.
ಅನ್ಯೇsಪಿ ಭೂಮಾವಸುರಾಃ
ಪ್ರಜಾತಾಸ್ತ್ವಯಾ ಹತಾ ಯೇ ಸುರದೈತ್ಯಸಙ್ಗರೇ ।
ಅನ್ಯೇ ತಥೈವಾನ್ಧತಮಃ ಪ್ರಪೇದಿರೇ ಕಾರ್ಯ್ಯಾ ತಥೈಷಾಂ ಚ
ತಮೋಗತಿಸ್ತ್ವಯಾ ॥೧೧.೨೦೬॥
ಇತರ ಯಾವ ಅಸುರರು ಹಿಂದೆ ನಿನ್ನಿಂದ ದೇವತೆಗಳು ಮತ್ತು ದೈತ್ಯರ ಸಂಗ್ರಾಮದಲ್ಲಿ ಕೋಲ್ಲಲ್ಪಟ್ಟಿದ್ದರೋ,
ಅವರಲ್ಲಿ ಕೆಲವರು ಅಂಧಂತಮಸ್ಸನ್ನು ಹೊಂದಿದ್ದಾರೆ. ಉಳಿದ ಹಲವರು ಇದೀಗ ಭೂಮಿಯಲ್ಲಿ ಹುಟ್ಟಿದ್ದಾರೆ.
ಹೀಗೆ ಹುಟ್ಟಿರುವ ಇವರೆಲ್ಲರ ತಮಪ್ರಾಪ್ತಿಯು ನಿನ್ನಿಂದ ಮಾಡಲ್ಪಡಬೇಕು.
No comments:
Post a Comment