ಸ ಚಿತ್ರಸೇನಃ ಪ್ರಥಮಂ ಕರ್ಣ್ಣಮೇವ
ಯುಯೋಧ ಪಾರ್ತ್ಥಸ್ಪರ್ದ್ದಯಾ ತೇನ ಯುದ್ಧ್ಯನ್ ।
ಕರ್ಣ್ಣೋ ನಾಶಕ್ನೋದ್ ವಚನಾದ್ ಭಾರ್ಗ್ಗವಸ್ಯ ರಾಮಸ್ಯ ನಿತ್ಯಾಮಿತಷಡ್-ಗುಣಸ್ಯ ॥೨೨.೪೧೦॥
ಆ ಚಿತ್ರಸೇನನು ಮೊದಲು ಕರ್ಣನನ್ನು ಎದುರಿಸಿದನು. ಆದರೆ ಕರ್ಣ ಅರ್ಜುನನ ಮೇಲಿನ ಸ್ಪರ್ದಾ
ಮನೋಭಾವದಿಂದ ಯುದ್ಧಮಾಡುವವನಾಗಿ, ಅಮಿತವಾಗಿರುವ ಜ್ಞಾನೈಶ್ವರ್ಯ ಮೊದಲಾದ ಗುಣಗಳಿರುವ, ಭೃಗು
ಕುಲದಲ್ಲಿ ಬಂದ ಪರಶುರಾಮನ ಮಾತಿನಂತೆ ಯುದ್ಧದಲ್ಲಿ ಸೋತನು.
ಸ ಭಗ್ನಯಾನಶ್ಚ ವಿಕರ್ಣ್ಣಯಾನಮಾಸ್ಥಾಯ ತಸ್ಯೈವ ನಿಯಮ್ಯ ವಾಜಿನಃ ।
ಪರಾದ್ರವತ್ ತೇನ ಸಹೈವ ಶೀಘ್ರಂ ದುರ್ಯ್ಯೋಧನಶ್ಚಿತ್ರಸೇನಂ ಯುಯೋಧ ॥೨೨.೪೧೧॥
ಕರ್ಣನು ಯುದ್ಧದಲ್ಲಿ ರಥವನ್ನು ಕಳೆದುಕೊಂಡು, ವಿಕರ್ಣನ ರಥವನ್ನು ಏರಿ, ಅವನ
ಕುದುರೆಗಳನ್ನು ತಾನೇ ನಡೆಸಿ, ವಿಕರ್ಣನನ್ನು ಕೂಡಿಕೊಂಡು ಅಲ್ಲಿಂದ ಪಲಾಯನ ಮಾಡಿದನು. ಆಗ ದುರ್ಯೋಧನನು
ಚಿತ್ರಸೇನನೊಡನೆ ಯುದ್ಧಮಾಡಿದನು.
ಮುಹೂರ್ತ್ತಮೇನೇನ ಸಮಂ ಸ ಯುದ್ಧ್ಯನ್ನನ್ಯೈರ್ಗ್ಗನ್ಧರ್ವೈರ್ಬಹುಭಿರ್ಮ್ಮಾಯಯೈವ ।
ಭಗ್ನೇ ರಥೇ ಭೂಮಿತಳೇ ಸ್ಥಿತಃ ಸನ್ ಗೃಹೀತ ಆಸೀಚ್ಚಿತ್ರಸೇನೇನ ಸಙ್ಖೇ ॥೨೨.೪೧೨॥
ಒಂದು ಮಹೂರ್ತಕಾಲ ದುರ್ಯೋಧನ ಚಿತ್ರಸೇನನೊಂದಿಗೆ ಸಮವಾಗಿ ಯುದ್ಧಮಾಡುತ್ತಿರಲು, ಉಳಿದ
ಬಹಳ ಜನ ಗಂಧರ್ವರು ಮಾಯಾವಿದ್ಯೆಯಿಂದ ಅವನ ರಥವನ್ನು ಮುರಿಯಲು, ಭೂಮಿಯಲ್ಲಿ ನಿಂತ ದುರ್ಯೋಧನನು
ಚಿತ್ರಸೇನನಿಂದ ಯುದ್ಧದಲ್ಲಿ ಸೆರೆ ಹಿಡಿಯಲ್ಪಟ್ಟವನಾದನು.
ಮಹಾಬಲೋ ಧಾರ್ತ್ತರಾಷ್ಟ್ರೋSಪಿ ಶಕ್ರವರಾದ್ ವಿಷ್ಣೋರಾಜ್ಞಯಾ
ಜಾಭಿವೃದ್ಧೇ ।
ಸ ಚಿತ್ರಸೇನೇನ ಧೃತಸ್ತದಾSSಸೀದ್ ಬದ್ಧಃ ಪಾಶೈರ್ವೈದ್ಯುತೈರಿನ್ದ್ರದತ್ತೈಃ ॥೨೨.೪೧೩॥
ಇಂದ್ರನ ವರಬಲ ಹಾಗೂ ವಿಷ್ಣುವಿನ ಆಜ್ಞೆಯಿದ್ದುದರಿಂದ ಗಂಧರ್ವರ ಬಲವು ಬೆಳೆಯಲು, ಆ ದುರ್ಯೋಧನನು ಮಹಾಬಲನಾದರೂ ಕೂಡಾ, ಚಿತ್ರಸೇನನಿಂದ ಸೆರೆಹಿಡಿಯಲ್ಪಟ್ಟ
ಮತ್ತು ಇಂದ್ರ ಕೊಟ್ಟ ಮಿಂಚಿನಂತಿರುವ ಹಗ್ಗಗಳಿಂದ ಕಟ್ಟಲ್ಪಟ್ಟವನಾದನು.
[ವಸ್ತುತಃ ದುರ್ಯೋಧನ ಚಿತ್ರಸೇನನಿಗಿಂತ ಬಲಿಷ್ಠ. ಆದರೆ ಬ್ರಹ್ಮ-ನಾರಾಯಣರ
ವರವಿದ್ದುದರಿಂದ, ಇಂದ್ರನ ಬಯಕೆಯಂತೆ ಚಿತ್ರಸೇನ ದುರ್ಯೋಧನನನ್ನು ಕಟ್ಟಿಹಾಕಲು ಸಾಧ್ಯವಾಯಿತು].
ತಸ್ಯಾನುಜಾಃ ಶಕುನೀ ರಾಜಭಾರ್ಯ್ಯಾಃ ಸರ್ವೇ ಬದ್ಧಾಃ ಶಕ್ರಭೃತ್ಯೈಃ ಪ್ರಣೀತಾಃ ।
ಆದಾಯ ತಾನಮ್ಬರಂ ಸಮ್ಪ್ರಯಾತೇಷ್ವರೂರುವನ್ ಪಾಣ್ಡವಾನ್ ಮನ್ತ್ರಿಣೋSಸ್ಯ ॥೨೨.೪೧೪॥
ದುರ್ಯೋಧನನ ತಮ್ಮಂದಿರು, ಶಕುನಿಯು, ಆ ದುರ್ಯೋಧನನ ಹೆಣ್ಣುಮಕ್ಕಳು, ಹೀಗೆ ಎಲ್ಲರೂ ಕೂಡಾ
ಇಂದ್ರನ ಭೃತ್ಯರಿಂದ ಕಟ್ಟಲ್ಪಟ್ಟವರಾದರು. ಗಂಧರ್ವರು ಅವರನ್ನು ಹಿಡಿದುಕೊಂಡು ಆಕಾಶಕ್ಕೆ
ನೆಗೆಯಲು, ದುರ್ಯೋಧನನ ಮಂತ್ರಿಗಳು ಪಾಂಡವರನ್ನು ಕುರಿತು ಕೂಗಿಕೊಂಡರು.
No comments:
Post a Comment