ಶಾಪಾದೇವಾರ್ಜ್ಜುನಃ ಷಣ್ಢವೇಷೋsಭೂನ್ನಕುಲಸ್ತಥಾ ।
ಕ್ಷತ್ರಿಯಾನನ್ತರತ್ವಾತ್ತು
ಸೂತಜಾತೇಸ್ತಥಾsಭವತ್ ॥೨೩.೦೭॥
ಊರ್ವಶಿಯ ಶಾಪದಿಂದಾಗಿ ಅರ್ಜುನ ಷಣ್ಢವೇಷದವನಾದ.
ಹಾಗೆಯೇ ನಕುಲನು ಕ್ಷತ್ರಿಯಜಾತಿಯ ನಂತರದ ಸೂತಜಾತಿ ವೇಷದವನಾದ.
ಸೂತಸ್ಯಾನನ್ತರತ್ವಾತ್ತು
ವೈಶ್ಯಜಾತೇಸ್ತಥಾSಭವತ್ ।
ಸಹದೇವೋ ವೈಶ್ಯಜಾತಿರ್ಗ್ಗೋಪಾಲಸ್ತೇಷು ಚೋತ್ತಮಃ ।
ತತೋ ಗೋಪಾಲತಾಮಾಪ ಯತಿಃ ಪೂಜ್ಯೋSಖಿಲೈರ್ಯ್ಯತಃ ॥೨೩.೦೮॥
ಸೂತನ ನಂತರ ವೈಶ್ಯಜಾತಿ
ಬರುವುದರಿಂದ ಸಹದೇವನು ವೈಶ್ಯಜಾತಿಯ ವೇಷವನ್ನು ಧರಿಸಿಕೊಂಡ. ವೈಶ್ಯ ಜಾತಿಯಲ್ಲಿ ಗೋಪಾಲಕ
ಶ್ರೇಷ್ಠ. ಅದರಿಂದಲೇ ಅವನು ಗೋಪಾಲಕನಾದ.
ಯತಿರಾಸೀದ್ ಧರ್ಮ್ಮಜೋSತಃ ಸೋSಭ್ಯಾಸಾರ್ತ್ಥಂ ಸದೈವ ಚ ।
ಅಕ್ಷಾಸಕ್ತೋSಭವತ್ ಪಶ್ಚಾದ್ ದರ್ಶಯಿಷ್ಯನ್
ಸ್ವಶಿಷ್ಟತಾಮ್ ॥೨೩.೦೯॥
ಯಾವ ಕಾರಣದಿಂದ ಯತಿಯು ಎಲ್ಲಾ ವರ್ಣಾಶ್ರಮದವರಿಂದಲೂ ಪೂಜ್ಯನೋ, ಆ ಕಾರಣದಿಂದ ಧರ್ಮರಾಜನು
ಯತಿಯಾದನು. ಅವನು ಯಾವಾಗಲೂ ಅಭ್ಯಾಸ ಮಾಡುವುದಕ್ಕಾಗಿ ಜೂಜಿನಲ್ಲಿಯೇ ರಥನಾದನು. ತಾನು ಜೂಜಿನಲ್ಲಿ
ಎಷ್ಟು ಪರಿಣತ ಎಂದು ಜಗತ್ತಿಗೆ ತೋರಿಸಲು ಅವನು ಹೀಗೆ ಮಾಡಿದ.
ಭೀಮಸೇನಸಧರ್ಮ್ಮಾರ್ತ್ಥಂ
ಶೂದ್ರಾ ಸೈರನ್ಧ್ರಿಕಾSಭವತ್
।
ದ್ರೌಪದೀ ಭರ್ತ್ತೃಸಾಧರ್ಮ್ಮೈಂ
ಸ್ತ್ರೀಣಾಂ ಧರ್ಮ್ಮೋ ಯತಃ ಸದಾ ॥೨೩.೧೦॥
ದ್ರೌಪದಿಯು ಭೀಮಸೇನನ ಸಾದೃಶ್ಯವನ್ನು ಹೊಂದಲು ಸೈರನ್ಧ್ರಿಯಾದಳು. ಸ್ತ್ರೀಯರಿಗೆ ಗಂಡನ ಸಾದೃಶ್ಯ
ಎನ್ನುವುದು ಅಪೇಕ್ಷಿತ. (ಭೀಮಸೇನ ಶೂದ್ರವೇಷವನ್ನು ಧರಿಸಿದ್ದಾನೆ. ಅದರಿಂದಾಗಿ ದ್ರೌಪದಿಯೂ
ಕೂಡಾ)
No comments:
Post a Comment