ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, June 6, 2023

Mahabharata Tatparya Nirnaya Kannada 27-160-170

ಯದಾ ಸ ರಙ್ಗಃ ಪವಮಾನಸೂನುನಾ ಶೂನ್ಯಃ ಕೃತಸ್ತತ್ರ ಮುಹೂರ್ತ್ತಮಾತ್ರಾತ್ ।

ದುರ್ಯ್ಯೋಧನಸ್ಯಾವರಜಾಃ ಶರೌಘೈರವೀವೃಷನ್ ಭೀಮಮುದಾರಸತ್ತ್ವಮ್ ॥೨೭.೧೬೦ ॥

ಭೀಮಸೇನನಿಂದಾಗಿ ಶೂನ್ಯವಾಗಿ ಮಾಡಲ್ಪಟ್ಟಿದ್ದ ಆ ಯುದ್ಧರಂಗದಲ್ಲಿ  ಮಹೂರ್ತಾಕಾಲಾ ನಂತರ ದುರ್ಯೋಧನನ ತಮ್ಮಂದಿರು ಉತ್ಕೃಷ್ಟವಾದ ಬಲವುಳ್ಳ ಭೀಮಸೇನನ ಮೇಲೆ ಬಾಣಗಳ ಮಳೆಗರೆದರು.

ತಾನ್ ಮಾರುತಿರ್ಬಾಣವರೈರ್ನ್ನಿಕೃತ್ತಶೀರ್ಷಾನ್ ಯಮಾಯಾನಯದಾಶು ವೀರಃ ।

ತಸ್ಮಿನ್ ದಿನೇ ವಿಂಶತಿರ್ಧಾರ್ತ್ತರಾಷ್ಟ್ರಾ ಹತಾಸ್ತದನ್ಯೇ ಸಮರಾತ್ ಪ್ರದುದ್ರುವುಃ ॥೨೭.೧೬೧ ॥

ಉತ್ಕ್ರಷ್ಟವಾದ ಬಾಣಗಳಿಂದ ಭೀಮಸೇನನು ಅವರೆಲ್ಲರ ತಲೆಯನ್ನು ಕತ್ತರಿಸಿ, ಅವರನ್ನು ಯಮನ ಮನೆಗೆ ಕಳುಹಿಸಿಕೊಟ್ಟನು. ಆ ಒಂದೇ ದಿನದಲ್ಲಿ ಭೀಮಸೇನನಿಂದ ಇಪ್ಪತ್ತುಮಂದಿ ಧೃತರಾಷ್ಟ್ರನ ಮಕ್ಕಳು ಸಂಹರಿಸಲ್ಪಟ್ಟರು ಮತ್ತು ಇತರರು ಯುದ್ಧದಿಂದ ಓಡಿಹೋದರು.

ಕರ್ಮ್ಮಾಣ್ಯನನ್ಯೌಪಯಿಕಾನಿ ಭೀಮೇ ಕುರ್ವತ್ಯೇವಂ ಭೀತಭೀತೇSರಿಸಙ್ಘೇ ।

ನಿಮೀಲಿತಾಕ್ಷೇ ಚ ಭಯೇನ ಕರ್ಣ್ಣೇ ಕರ್ಣ್ಣಾತ್ಮಜೋ ನಕುಲಂ ಪ್ರತ್ಯಧಾವತ್ ॥೨೭.೧೬೨॥

ಈರೀತಿ ಭೀಮಸೇನನು ಇತರರಿಂದ ಅಸಾಧ್ಯವಾದ ಕರ್ಮ ಮಾಡುತ್ತಿರಲು, ಶತ್ರು ಸಮುದಾಯ ಹೆದರುತ್ತಿರಲು, ಭಯದಿಂದ ಕರ್ಣ ಕಣ್ಣು ಮುಚ್ಚುತ್ತಿರಲು, ಕರ್ಣನ ಪುತ್ರನಾದ ವೃಷಸೇನನು ನಕುಲನನ್ನು ಕುರಿತು ತೆರಳಿದನು.  

ಮಾದ್ರೀಸುತೋ ವೃಷಸೇನಂ ಶರೌಘೈರವಾರಯತ್ ತಂ ವಿರಥಂ ಚಕಾರ ।

ಕರ್ಣ್ಣಾತ್ಮಜಃ ಸೋSಪ್ಯಸಿಚರ್ಮ್ಮಪಾಣಿಸ್ತಸ್ಯಾನುಗಾಂಸ್ತ್ರಿಸಹಸ್ರಂ ಜಘಾನ ॥೨೭.೧೬೩ ॥

ಮಾದ್ರೀಸುತನಾದ ನಕುಲನು ಬಾಣಗಳ ಸಮೂಹದಿಂದ ವೃಷಸೇನನನ್ನು ತಡೆದನು. ಆಗ ಕರ್ಣಪುತ್ರ ವೃಷಸೇನನು ನಕುಲನನ್ನು ರಥಹೀನನನ್ನಾಗಿ ಮಾಡಿದನು. ಆಗ ಕತ್ತಿ-ಗುರಾಣಿಯನ್ನು ಕೈಯಲ್ಲಿ ಹಿಡಿದ ನಕುಲನು ವೃಷಸೇನನ ಮೂರುಸಹಸ್ರ ಸೈನ್ಯವನ್ನು ಸಂಹರಿಸಿದನು.

ಕರ್ಣ್ಣಾತ್ಮಜಸ್ತಸ್ಯ ಸಞ್ಛಿದ್ಯ ಚರ್ಮ್ಮ ಭೀಮಾರ್ಜ್ಜುನಾದೀನಪಿ ಬಾಣಸಙ್ಘೈಃ ।

ಅವೀವೃಷತ್ ತಸ್ಯ ಪಾರ್ತ್ಥಃ ಶರೇಣ ಗ್ರೀವಾಬಾಹೂರೂನ್ ಯುಗಪಚ್ಚಕರ್ತ್ತ ॥೨೭.೧೬೪ ॥

ಕರ್ಣನ ಮಗನಾದ ಆ ವೃಷಸೇನನು ನಕುಲನ ಗುರಾಣಿಯನ್ನು ಛೇದಿಸಿ, ಭೀಮಾರ್ಜುನ ಮೊದಲಾದವರ ಮೇಲೆ ಬಾಣಗಳ ಮಳೆಗರೆದನು. ಆಗ ಅರ್ಜುನನು ತನ್ನ ಬಾಣದಿಂದ ವೃಷಸೇನನ ಕುತ್ತಿಗೆ, ಬಾಹು ಮತ್ತು ತೊಡೆಯನ್ನು ಏಕಕಾಲದಲ್ಲಿ ಕತ್ತರಿಸಿದನು.

ಏಕೇನ ಬಾಣೇನ ಸುತೇ ಹತೇ ಸ್ವೇ ವೈಕರ್ತ್ತನೋ ವಾಸವಿಮಭ್ಯಧಾವತ್ ।

ತಯೋರಭೂದ್ ದ್ವೈರಥಯುದ್ಧಮದ್ಭುತಂ ಸರ್ವಾಸ್ತ್ರವಿದ್ವರಯೋರುಗ್ರರೂಪಮ್ ॥೨೭.೧೬೫ ॥

ಅರ್ಜುನನ ಒಂದೇ ಬಾಣದಿಂದ ತನ್ನ ಮಗ ಹತನಾಗಿರುವುದನ್ನು ಕಂಡ ಕರ್ಣನು ಅರ್ಜುನನನ್ನು ಕುರಿತು ಧಾವಿಸಿದನು. ಅಸ್ತ್ರಗಳನ್ನು ತಿಳಿದವರಲ್ಲಿ ಶ್ರೇಷ್ಠರಾದ ಕರ್ಣಾರ್ಜುನರನಡುವೆ ಉಗ್ರವಾದ, ಆಶ್ಚರ್ಯಕರವಾದ ದ್ವಂದ್ವಯುದ್ಧವಾಯಿತು.

ಪಕ್ಷಗ್ರಹಾಸ್ತತ್ರ ಸುರಾಸುರಾಸ್ತಯೋರನ್ಯೇ ಚ ಜೀವಾ ಗಗನಂ ಸಮಾಸ್ಥಿತಾಃ ।

ಮಹಾನ್ ವಿವಾದೋSಪ್ಯಭವತ್ ತಯೋಃ ಕೃತೇ ತದಾ ಗಿರೀಶೋSವದದಬ್ಜಯೋನಿಮ್ ॥೨೭.೧೬೬ ॥

ಕರ್ಣಾರ್ಜುನರ ನಡುವಿನ ಆ ಯುದ್ಧದಲ್ಲಿ ದೇವತೆಗಳು ಅರ್ಜುನನ ಪಕ್ಷದಲ್ಲಿ ನಿಂತರೆ, ಅಸುರರು ಕರ್ಣನ ಪಕ್ಷದಲ್ಲಿ ನಿಂತರು. ಇತರರು ತಟಸ್ಥವಾಗಿ ಆಕಾಶದಲ್ಲಿ ನಿಂತರು. ಆಗ  ಅರ್ಜುನ-ಕರ್ಣರಿಗಾಗಿ ದೇವತೆಗಳು ಮತ್ತು ಅಸುರರ ನಡುವೆ ವಿವಾದವುಂಟಾಯಿತು. (ಅರ್ಜುನ ಗೆಲ್ಲುತ್ತಾನೆ ಎಂದು ದೇವತೆಗಳು, ಕರ್ಣ ಗೆಲ್ಲುತ್ತಾನೆ ಎಂದು ಅಸುರರು).  ಆಗ ರುದ್ರದೇವರು ಬ್ರಹ್ಮದೇವರನ್ನು ಕುರಿತು ಮಾತನ್ನಾಡಿದರು-

ಸುರಾಸುರಾಣಾಂ ಭೀಮದುರ್ಯ್ಯೋಧನೌ ದ್ವೌ ಸಮಾಶ್ರಯೌ ತತ್ಪ್ರಿಯೌ  ಕರ್ಣ್ಣಪಾರ್ತ್ಥೌ ।

ಪ್ರಾಣೋಪಮೌ ತೇನ ಚೈತತ್ಕೃತೇ ತೇ ಸುರಾಸುರಾಃ ಕರ್ತ್ತುಮಿಚ್ಛನ್ತಿ ಯುದ್ಧಮ್ ।

ತದಾ ವಿನಾಶೋ ಜಗತಾಂ ಮಹಾನ್ ಸ್ಯಾತ್ ತೇನಾನಯೋಃ ಸಮಮೇವಾಸ್ತು ಯುದ್ಧಮ್ ॥೨೭.೧೬೭ ॥

‘ಸುರಾಸುರರಿಗೆ ಕ್ರಮವಾಗಿ ಭೀಮ ಮತ್ತು ಅರ್ಜುನ ಆಶ್ರಯಭೂತರಾಗಿದ್ದಾರೆ. ಅರ್ಜುನ ಮತ್ತು ಕರ್ಣ ಭೀಮ-ದುರ್ಯೋಧನರಿಗೆ ಪ್ರಿಯರು ಹಾಗೂ ಪ್ರಾಣಕ್ಕೆ ಸಮಾನರು. ಹೀಗಾಗಿ ಸುರಾಸುರರು ಯುದ್ಧಮಾಡಲಿಚ್ಛಿಸಿದ್ದಾರೆ. ಒಂದು ವೇಳೆ ಈರೀತಿ ಯುದ್ಧವಾದರೆ ಜಗತ್ತು ವಿನಾಶವಾಗುವುದು. ಹೀಗಾಗಿ ಕರ್ಣ-ಅರ್ಜುನರಿಗೆ ಯುದ್ಧವು ಸಮವಾಗಿ ನಡೆಯಲಿ’.

ಇತೀರಿತೇ ವಾಸವಃ ಪದ್ಮಯೋನಿಂ ಜಗಾದ ಕೃಷ್ಣೋ ಯತ್ರ ಜಯಶ್ಚ ತತ್ರ ।

ಕಾಮೋ ನ ಕೃಷ್ಣಸ್ಯ ಮೃಷಾ ಭವೇದ್ಧಿ ಕಾಮೋSಸ್ಯ ಪಾರ್ತ್ಥಸ್ಯ ಜಯಂ ಪ್ರದಾತುಮ್ ॥೨೭.೧೬೮ ॥

ಈರೀತಿಯಾಗಿ ರುದ್ರದೇವರು ಹೇಳಿದಾಗ ‘ಎಲ್ಲಿ ಶ್ರೀಕೃಷ್ಣನೋ ಅಲ್ಲೇ ಜಯ ಎನ್ನುತ್ತಾರೆ ಬ್ರಹ್ಮದೇವರು. ‘ಶ್ರೀಕೃಷ್ಣನ ಸಂಕಲ್ಪ ಎಂದೂ ಹುಸಿಯಾಗದು. ಅರ್ಜುನನ ಜಯವೇ ಅವನ ಸಂಕಲ್ಪ’ ಎನ್ನುತ್ತಾನೆ ದೇವೇಂದ್ರ

ಇತ್ಯೂಚಿವಾನ್ ವಾಸವಃ ಫಲ್ಗುನಸ್ಯ ಜಯೋSಸ್ತು ಕರ್ಣ್ಣಸ್ಯ ವಧಸ್ತಥೇತಿ ।

ಉಕ್ತ್ವಾSನಮತ್ ಕಞ್ಜಭವಸ್ತಥೇತಿ ಪ್ರಾಹಾಸುರಾನ್ ದೇವತಾಶ್ಚಾSಬಭಾಷೇ ॥೨೭.೧೬೯ ॥

ಹೀಗೆ ಹೇಳಿದ ದೇವೇಂದ್ರ, ‘ಅರ್ಜುನನಿಗೆ ಜಯವಾಗಲಿ ಮತ್ತು ಕರ್ಣನ ಸಂಹಾರವಾಗಲಿ ಎಂದು ಹೇಳಿ ಚತುರ್ಮುಖನಿಗೆ ನಮಸ್ಕರಿಸಿದನು. ‘ಹಾಗೆಯೇ ಆಗಲಿ ಎಂದು ಹೇಳಿದ ಬ್ರಹ್ಮದೇವರು ಅಸುರರನ್ನೂ ದೇವತೆಗಳನ್ನೂ ಕುರಿತು ಮಾತನಾಡಿದರು.

ನ ಕರ್ಣ್ಣಾರ್ಜ್ಜುನಯೋರರ್ತ್ಥೇ ವಿರೋಧಂ ಕುರುತ ಕ್ವಚಿತ್ ।

ಭೀಮದುರ್ಯ್ಯೋಧನಾರ್ತ್ಥೇ ವಾ ಪಶ್ಯನ್ತ್ವೇವ ಚ ಸಂಯುಗಮ್ ।

ಇತ್ಯುಕ್ತೇ ಶಾನ್ತಿಮಾಪನ್ನಾ ದದೃಶುಃ ಸಂಯುಗಂ ತಯೋಃ ॥೨೭.೧೭೦ ॥

‘ಕರ್ಣ-ಅರ್ಜುನರ ಕುರಿತಾಗಲೀ, ಭೀಮ-ದುರ್ಯೋಧನರ ಕುರಿತಾಗಲೀ ನೀವು ಒಬ್ಬರಿಗೊಬ್ಬರು ವಿರೋಧವನ್ನು ಮಾಡಕೂಡದು.  ಕೇವಲ ಯುದ್ಧವನ್ನು ನೋಡಿರಿ’ ಎಂದು ಚತುರ್ಮುಖ ಹೇಳಲು, ಸುರಾಸುರರು ಶಾಂತಿಯನ್ನು ಹೊಂದಿದವರಾಗಿ ಕರ್ಣಾರ್ಜುನರ ಯುದ್ಧವನ್ನು ನೋಡಿದರು.   

Mahabharata Tatparya Nirnaya Kannada 27-160-165

ಯದಾ ಸ ರಙ್ಗಃ ಪವಮಾನಸೂನುನಾ ಶೂನ್ಯಃ ಕೃತಸ್ತತ್ರ ಮುಹೂರ್ತ್ತಮಾತ್ರಾತ್ ।

ದುರ್ಯ್ಯೋಧನಸ್ಯಾವರಜಾಃ ಶರೌಘೈರವೀವೃಷನ್ ಭೀಮಮುದಾರಸತ್ತ್ವಮ್ ॥೨೭.೧೬೦ ॥

ಭೀಮಸೇನನಿಂದಾಗಿ ಶೂನ್ಯವಾಗಿ ಮಾಡಲ್ಪಟ್ಟಿದ್ದ ಆ ಯುದ್ಧರಂಗದಲ್ಲಿ  ಮಹೂರ್ತಾಕಾಲಾ ನಂತರ ದುರ್ಯೋಧನನ ತಮ್ಮಂದಿರು ಉತ್ಕೃಷ್ಟವಾದ ಬಲವುಳ್ಳ ಭೀಮಸೇನನ ಮೇಲೆ ಬಾಣಗಳ ಮಳೆಗರೆದರು.

ತಾನ್ ಮಾರುತಿರ್ಬಾಣವರೈರ್ನ್ನಿಕೃತ್ತಶೀರ್ಷಾನ್ ಯಮಾಯಾನಯದಾಶು ವೀರಃ ।

ತಸ್ಮಿನ್ ದಿನೇ ವಿಂಶತಿರ್ಧಾರ್ತ್ತರಾಷ್ಟ್ರಾ ಹತಾಸ್ತದನ್ಯೇ ಸಮರಾತ್ ಪ್ರದುದ್ರುವುಃ ॥೨೭.೧೬೧ ॥

ಉತ್ಕ್ರಷ್ಟವಾದ ಬಾಣಗಳಿಂದ ಭೀಮಸೇನನು ಅವರೆಲ್ಲರ ತಲೆಯನ್ನು ಕತ್ತರಿಸಿ, ಅವರನ್ನು ಯಮನ ಮನೆಗೆ ಕಳುಹಿಸಿಕೊಟ್ಟನು. ಆ ಒಂದೇ ದಿನದಲ್ಲಿ ಭೀಮಸೇನನಿಂದ ಇಪ್ಪತ್ತುಮಂದಿ ಧೃತರಾಷ್ಟ್ರನ ಮಕ್ಕಳು ಸಂಹರಿಸಲ್ಪಟ್ಟರು ಮತ್ತು ಇತರರು ಯುದ್ಧದಿಂದ ಓಡಿಹೋದರು.

ಕರ್ಮ್ಮಾಣ್ಯನನ್ಯೌಪಯಿಕಾನಿ ಭೀಮೇ ಕುರ್ವತ್ಯೇವಂ ಭೀತಭೀತೇSರಿಸಙ್ಘೇ ।

ನಿಮೀಲಿತಾಕ್ಷೇ ಚ ಭಯೇನ ಕರ್ಣ್ಣೇ ಕರ್ಣ್ಣಾತ್ಮಜೋ ನಕುಲಂ ಪ್ರತ್ಯಧಾವತ್ ॥೨೭.೧೬೨॥

ಈರೀತಿ ಭೀಮಸೇನನು ಇತರರಿಂದ ಅಸಾಧ್ಯವಾದ ಕರ್ಮ ಮಾಡುತ್ತಿರಲು, ಶತ್ರು ಸಮುದಾಯ ಹೆದರುತ್ತಿರಲು, ಭಯದಿಂದ ಕರ್ಣ ಕಣ್ಣು ಮುಚ್ಚುತ್ತಿರಲು, ಕರ್ಣನ ಪುತ್ರನಾದ ವೃಷಸೇನನು ನಕುಲನನ್ನು ಕುರಿತು ತೆರಳಿದನು.  

ಮಾದ್ರೀಸುತೋ ವೃಷಸೇನಂ ಶರೌಘೈರವಾರಯತ್ ತಂ ವಿರಥಂ ಚಕಾರ ।

ಕರ್ಣ್ಣಾತ್ಮಜಃ ಸೋSಪ್ಯಸಿಚರ್ಮ್ಮಪಾಣಿಸ್ತಸ್ಯಾನುಗಾಂಸ್ತ್ರಿಸಹಸ್ರಂ ಜಘಾನ ॥೨೭.೧೬೩ ॥

ಮಾದ್ರೀಸುತನಾದ ನಕುಲನು ಬಾಣಗಳ ಸಮೂಹದಿಂದ ವೃಷಸೇನನನ್ನು ತಡೆದನು. ಆಗ ಕರ್ಣಪುತ್ರ ವೃಷಸೇನನು ನಕುಲನನ್ನು ರಥಹೀನನನ್ನಾಗಿ ಮಾಡಿದನು. ಆಗ ಕತ್ತಿ-ಗುರಾಣಿಯನ್ನು ಕೈಯಲ್ಲಿ ಹಿಡಿದ ನಕುಲನು ವೃಷಸೇನನ ಮೂರುಸಹಸ್ರ ಸೈನ್ಯವನ್ನು ಸಂಹರಿಸಿದನು.

ಕರ್ಣ್ಣಾತ್ಮಜಸ್ತಸ್ಯ ಸಞ್ಛಿದ್ಯ ಚರ್ಮ್ಮ ಭೀಮಾರ್ಜ್ಜುನಾದೀನಪಿ ಬಾಣಸಙ್ಘೈಃ ।

ಅವೀವೃಷತ್ ತಸ್ಯ ಪಾರ್ತ್ಥಃ ಶರೇಣ ಗ್ರೀವಾಬಾಹೂರೂನ್ ಯುಗಪಚ್ಚಕರ್ತ್ತ ॥೨೭.೧೬೪ ॥

ಕರ್ಣನ ಮಗನಾದ ಆ ವೃಷಸೇನನು ನಕುಲನ ಗುರಾಣಿಯನ್ನು ಛೇದಿಸಿ, ಭೀಮಾರ್ಜುನ ಮೊದಲಾದವರ ಮೇಲೆ ಬಾಣಗಳ ಮಳೆಗರೆದನು. ಆಗ ಅರ್ಜುನನು ತನ್ನ ಬಾಣದಿಂದ ವೃಷಸೇನನ ಕುತ್ತಿಗೆ, ಬಾಹು ಮತ್ತು ತೊಡೆಯನ್ನು ಏಕಕಾಲದಲ್ಲಿ ಕತ್ತರಿಸಿದನು.

ಏಕೇನ ಬಾಣೇನ ಸುತೇ ಹತೇ ಸ್ವೇ ವೈಕರ್ತ್ತನೋ ವಾಸವಿಮಭ್ಯಧಾವತ್ ।

ತಯೋರಭೂದ್ ದ್ವೈರಥಯುದ್ಧಮದ್ಭುತಂ ಸರ್ವಾಸ್ತ್ರವಿದ್ವರಯೋರುಗ್ರರೂಪಮ್ ॥೨೭.೧೬೫ ॥

ಅರ್ಜುನನ ಒಂದೇ ಬಾಣದಿಂದ ತನ್ನ ಮಗ ಹತನಾಗಿರುವುದನ್ನು ಕಂಡ ಕರ್ಣನು ಅರ್ಜುನನನ್ನು ಕುರಿತು ಧಾವಿಸಿದನು. ಅಸ್ತ್ರಗಳನ್ನು ತಿಳಿದವರಲ್ಲಿ ಶ್ರೇಷ್ಠರಾದ ಕರ್ಣಾರ್ಜುನರನಡುವೆ ಉಗ್ರವಾದ, ಆಶ್ಚರ್ಯಕರವಾದ ದ್ವಂದ್ವಯುದ್ಧವಾಯಿತು.

Monday, May 29, 2023

Mahabharata Tatparya Nirnaya Kannada 27-150-159

ಉವಾಚ ವಾಚಂ ಪುರುಷಪ್ರವೀರಃ ಸತ್ಯಾಂ ಪ್ರತಿಜ್ಞಾಂ ಲೋಕಮದ್ಧ್ಯೇ ವಿಧಾಯ ।

ಯಾಃ ಸಪತಯಸ್ತಾ ಅಪತಯೋ ಹಿ ಜಾತಾ ಯಾಸಾSಪತಿಃ ಸಾ ಸಪತಿಶ್ಚ ಜಾತಾ ॥೨೭.೧೫೦ ॥

ಪುರುಷಶ್ರೇಷ್ಠನಾದ ಭೀಮಸೇನನು ಸಮಸ್ತ ಲೋಕದ ಮುಂದೆ ತಾನು ಹಿಂದೆ ಮಾಡಿದ್ದ ಪ್ರತಿಜ್ಞೆಯನ್ನು ಪೂರೈಸಿ ಹೇಳುತ್ತಾನೆ- ‘ಯಾರು ಪತಿ ಸಹಿತರಾಗಿದ್ದರೋ ಅಂತಹ ಕೌರವರ ಪತ್ನಿಯರು ಇಂದು ಪತಿರಹಿತರಾದರು. ಯಾವ ದ್ರೌಪದಿಯನ್ನು ಹಿಂದೆ ಪತಿರಹಿತಳು ಎಂದು ಕರೆದಿದ್ದರೋ, ಅವಳು ಪತಿ ಸಹಿತಳಾಗಿದ್ದಾಳೆ’.

ಪಶ್ಯನ್ತು ಚಿತ್ರಾಂ ಪರಮಸ್ಯ ಶಕ್ತಿಂ ಯೇ ವೈ ತಿಲಾಃ ಷಣ್ಢತಿಲಾ ಬಭೂವುಃ ।

ಏನಂ ಗೃಹೀತಂ ಚ ಮಯಾ ಯದೀಹ ಕಶ್ಚಿತ್ ಪುಮಾನ್ ಮೋಚಯತು ಸ್ವವೀರ್ಯ್ಯಾತ್ ॥೨೭.೧೫೧ ॥

ಎಲೋ ವೀರರೇ, ಸರ್ವೋತ್ತಮನಾದ ಶ್ರೀಹರಿಯ ಶಕ್ತಿಯನ್ನು ನೋಡಿರಿ. ಯಾರು ತಮ್ಮನ್ನು ಗಟ್ಟಿಎಳ್ಳು(ವೀರ್ಯವಂತರು) ಎಂದು ತಿಳಿದಿದ್ದರೋ, ಅವರು ಈಗ ನಪುಂಸಕಪ್ರಾಯರೂ, ವೀರ್ಯಹೀನರೂ(ಷಣ್ಢತಿಲಾಃ) ಆದರು. ಇಲ್ಲಿರುವ ವೀರರ ನಡುವೆ ಯಾರಾದರೂ ಪುಂಸ್ತ್ವವುಳ್ಳವನು ಇದ್ದರೆ,  ನನ್ನಿಂದ ಹಿಡಿಯಲ್ಪಟ್ಟ ಇವನನ್ನು ಬಿಡಿಸಲಿ.

ಇತಿ ಬ್ರುವಾಣಃ ಪುನರೇವ ರಕ್ತಂ ಪಪೌ ಸುಧಾಂ ದೇವವರೋ ಯಥಾ ದಿವಿ ।

ಪುನಶ್ಚ ಸಪ್ರಾಣಮಮುಂ ವಿಸೃಜ್ಯ ನದನ್ ನನರ್ತ್ತಾರಿಬಲೇ ನಿರಾಯುಧಃ ॥೨೭.೧೫೨ ॥

ಈರೀತಿ ಮತ್ತೆ ಮತ್ತೆ ಹೇಳುತ್ತಾ, ಭೀಮಸೇನನು ಹೇಗೆ ದೇವೇಂದ್ರ ಅಮೃತಪಾನ ಮಾಡುತ್ತಾನೋ ಹಾಗೆ ರಕ್ತವನ್ನು ಪಾನಮಾಡುವವನಂತೆ ತೋರಿಸಿಕೊಂಡನು ಮತ್ತು ಇನ್ನೂ ಉಸಿರಾಡುತ್ತಿರುವ ದುಃಶಾಸನನನ್ನು ಬಿಟ್ಟು, ಸಿಂಹನಾದವನ್ನು ಮಾಡುತ್ತಾ, ಆಯುಧರಹಿತನಾಗಿ ಶತ್ರು ಸೈನ್ಯದ ಮಧ್ಯದಲ್ಲಿ ಕುಣಿದಾಡಿದನು.  

ಪ್ರತ್ಯನೃತ್ಯನ್ ಪುರಾ ಯೇSಸ್ಮಾನ್ ಪುನರ್ಗೌರಿತಿ ಗೌರಿತಿ ।

ತಾನ್ ವಯಂ ಪ್ರತಿನೃತ್ಯಾಮಃ ಪುನರ್ಗ್ಗೌರಿತಿ ಗೌರಿತಿ ॥೨೭.೧೫೩ ॥

ಯಾವ ಕೌರವರು ನಮ್ಮನ್ನು ಕುರಿತು ಗೂಳಿ-ಗೂಳಿ ಎಂದು ಅಣಕಿಸಿ ಕುಣಿದಿದ್ದರೋ,  ಅವರನ್ನು ನಾವಿಂದು ಗೂಳಿ-ಗೂಳಿ ಎಂದು ಅಣಕಿಸಿ ಕುಣಿಯುತ್ತೇವೆ.

ಇತಿ ಬ್ರುವನ್ ನೃತ್ಯಮಾನೋSರಿಮದ್ಧ್ಯ ಆಸ್ಫೋಟಯಚ್ಛತ್ರುಗಣಾನಜೋಹವೀತ್ ।

ಶಶಾಖ ಚ ದ್ರಷ್ಟುಮಮುಂ ನ ಕಶ್ಚಿದ್ ವೈಕರ್ತ್ತನದ್ರೌಣಿಸುಯೋಧನಾದಿಷು ॥೨೭.೧೫೪ ॥

ಈರೀತಿ ಹೇಳುತ್ತಾ, ಶತ್ರುಗಳ ಮಧ್ಯದಲ್ಲಿ ಕುಣಿಯುವವನಾಗಿ, ಭೀಮಸೇನ ತೊಡೆತಟ್ಟಿ ಶತ್ರುಗಳ ಸಮೂಹವನ್ನು ಯುದ್ಧಕ್ಕಾಗಿ ಕರೆದನು. ಕರ್ಣ, ಅಶ್ವತ್ಥಾಮ, ದುರ್ಯೋಧನ, ಮೊದಲಾದವರಲ್ಲಿ ಯಾರೊಬ್ಬನೂ ಈ ಭೀಮಸೇನನನ್ನು ಕಣ್ಣೆತ್ತಿ ನೋಡಲು ಕೂಡಾ ಸಮರ್ಥರಾಗಲಿಲ್ಲ.

ಭಯಾಚ್ಚ ಕರ್ಣ್ಣಸ್ಯ ಪಪಾತ ಕಾರ್ಮ್ಮುಕಂ ನಿಮೀಲಯಾಮಾಸ ತದಾSಕ್ಷಿಣೀ ಚ ।

ಸಮ್ಬೋಧಿತೋ ಮದ್ರರಾಜೇನ ಯುದ್ಧೇ ಸ್ಥಿತಃ ಕಥಞ್ಚಿತ್ ಸ ತು ಪಾರ್ತ್ಥಭಾಗಃ ॥೨೭.೧೫೫ ॥

ಇದನ್ನು ನೋಡಿ ಭಯದಿಂದಲೇ ಕರ್ಣನ ಬಿಲ್ಲು ಕೈಜಾರಿ ಬಿದ್ದಿತು. ಆಗ ಅವನು ಕಣ್ಣುಗಳನ್ನು ಮುಚ್ಚಿಕೊಂಡನು. ಶಲ್ಯನಿಂದ ಪದೇ ಪದೇ ಎಚ್ಚರಿಸಲ್ಪಟ್ಟ ಕರ್ಣನು ಪ್ರಾಯಾಸದಿಂದ ಯುದ್ಧದಲ್ಲಿ ಸ್ಥಿರನಾದನು. ಅವನು ಸಂಹಾರದಲ್ಲಿ ಅರ್ಜುನನ ಭಾಗವಾದ್ದರಿಂದ ಹೇಗೋ ಬದುಕುಳಿದನು.

ದ್ರೌಣಿರ್ವಿಹಾಯೈನಮಪಾಜಗಾಮ ದೂರಂ ತದಾ ಭೀಮಸೇನೋ ಜಗಾದ ।

ಪೀತಃ ಸೋಮೋ ಯುದ್ಧಯಜ್ಞೇ ಮಯಾSದ್ಯ ವದ್ಧ್ಯಃ ಪಶುರ್ಮ್ಮೇ ಹರಯೇ ಸುಯೋಧನಃ ॥೨೭.೧೫೬ ॥

ಅಶ್ವತ್ಥಾಮ ಭೀಮನ ದೃಷ್ಟಿಯಿಂದ ದೂರಕ್ಕೆ ಹೊರಟುಹೋದ. ಆಗ ಭೀಮಸೇನ ಹೇಳುತ್ತಾನೆ- ‘ನನ್ನಿಂದ ಈ ಯುದ್ಧವೆಂಬ ಯಜ್ಞದಲ್ಲಿ ಸೋಮಪಾನ ಮಾಡಲ್ಪಟ್ಟಿತು. ಇನ್ನು ಶ್ರೀಹರಿಯ ಪ್ರೀತಿಗಾಗಿ ದುರ್ಯೋಧನನೆಂಬ ಯಜ್ಞಪಶುವು ನನ್ನಿಂದ ವಧಾರ್ಹವಾಗಿದೆ’.

ಇತಿ ಬ್ರುವನ್ ಮೃತಮುತ್ಸೃಜ್ಯ ಶತ್ರುಂ ದುರ್ಯ್ಯೋಧನಂ ಚಾSಶು ರುಷಾSಭಿದುದ್ರುವೇ ।

ಆಯಾನ್ತಮೀಕ್ಷ್ಯೈವ ತಮುಗ್ರಪೌರುಷಂ ದುದ್ರಾವ ಭೀತಃ ಸ ಸುಯೋಧನೋ ಭೃಶಮ್ ॥೨೭.೧೫೭ ॥

ಹೀಗೆ ಹೇಳುತ್ತಾ, ಸತ್ತ ದುಃಶಾಸನನ ದೇಹವನ್ನು ದೂರಕ್ಕೆ ಎಸೆದ ಭೀಮಸೇನ ಶೀಘ್ರದಲ್ಲಿ ಸಿಟ್ಟಿನಿಂದ ದುರ್ಯೋಧನನನ್ನು ಕುರಿತು ಧಾವಿಸಿದ.  ತನ್ನೆದುರುಬರುತ್ತಿರುವ ಉಗ್ರಪೌರುಷವುಳ್ಳ ಭೀಮಸೇನನನ್ನು ಕಂಡ ದುರ್ಯೋಧನ ಅತ್ಯಂತ ಭಯಗ್ರಸ್ಥನಾಗಿ ಓಡಿಹೋದ.

ಬಲದ್ವಯಂ ಚಾಪಯಯೌ ವಿಹಾಯ ಭಯಾದ್ ಭೀಮಂ ಕೃಷ್ಣಪಾರ್ತ್ಥೌ ವಿನೈವ ।

ಆಯೋಧನಂ ಶೂನ್ಯಮಭೂನ್ಮುಹೂರ್ತ್ತಂ ನನರ್ತ್ತ ಭೀಮೋ ವ್ಯಾಘ್ರಪದೇನ ಹರ್ಷಾತ್ ॥೨೭.೧೫೮ ॥

ಆಗ ಕೃಷ್ಣಾರ್ಜುನರನ್ನು ಬಿಟ್ಟು ಇತರ ಸೇನೆ (ಕೌರವ ಹಾಗೂ ಪಾಂಡವ ಸೇನೆ) ಅಲ್ಲಿಂದ ಪಲಾಯನಮಾಡಿತು. ಸುಮಾರು ಒಂದು ಮಹೂರ್ತದ ತನಕ ಆ ಪ್ರದೇಶ (ಆ ಮೂವರನ್ನು ಬಿಟ್ಟು) ಜನರಹಿತವಾಯಿತು. ಆಗ ಭೀಮಸೇನ ಹುಲಿಯಂತೆ ಹೆಜ್ಜೆ ಹಾಕುತ್ತಾ, ಹರ್ಷದಿಂದ ಕುಣಿದಾಡಿದನು.

ಸಙ್ಕಲ್ಪ್ಯ ಶತ್ರೂನ್ ಗೋವದೇವಾSಜಿಮದ್ಧ್ಯೇ ಶಾರ್ದ್ದೂಲವತ್ ತಚ್ಚರಿತಂ ನಿಶಾಮ್ಯ ।

ಜಹಾಸ ಕೃಷ್ಣಶ್ಚ ಧನಞ್ಜಯಶ್ಚ ಶಶಂಸತುಶ್ಚೈನಮತಿಪ್ರಹೃಷ್ಟೌ ॥೨೭.೧೫೯ ॥

ಆ ಯುದ್ಧಭೂಮಿಯಲ್ಲಿ ತನ್ನ ಶತ್ರುಗಳನ್ನು ಪಶುಗಳಂತೆ ಸಂಕಲ್ಪಿಸಿ, ಹುಲಿಯಂತೆ ಭೀಮ ಮಾಡಿದ ಕರ್ಮವನ್ನು ನೋಡಿ ಕೃಷ್ಣಾರ್ಜುನರು ನಕ್ಕರು. ಅತ್ಯಂತ ಸಂತುಷ್ಟರಾಗಿ ಭೀಮಸೇನನನ್ನು ಹೊಗಳಿದರು ಕೂಡಾ.