ಯದಾ ಹಿ ಜಾತಃ ಸ ಕೃಪಸ್ತದೈವ ಬೃಹಸ್ಪತೇಃ ಸೂನುರಗಾಚ್ಚ
ಗಙ್ಗಾಮ್ ।
ಸ್ನಾತುಂ ಘೃತಾಚೀಂ ಸ ದದರ್ಶ ತತ್ರ ಶ್ಲಥದ್ದುಕೂಲಾಂ
ಸುರವರ್ಯ್ಯಕಾಮಿನೀಮ್ ॥೧೧.೬೪॥
ಯಾವಾಗ ಕೃಪಾಚಾರ್ಯರ
ಜನನವಾಯಿತೋ ಅದೇ ಕಾಲದಲ್ಲಿ ಬೃಹಸ್ಪತಿಯ ಮಗನಾದ ಭರದ್ವಾಜರು ಸ್ನಾನ ಮಾಡಲು ಗಂಗಾನದಿಯನ್ನು ಕುರಿತು ತೆರಳಿದರು.
ಅಲ್ಲಿ ದೇವತೆಗಳ ಅಪ್ಸರೆಯಾದ, ಬಟ್ಟೆ ಜಾರಿದ ಸ್ಥಿತಿಯಲ್ಲಿದ್ದ ಘೃತಾಚೀಯನ್ನು ಕಂಡರು.
ತದ್ದರ್ಶನಾತ್
ಸ್ಕನ್ನಮಥೇನ್ದ್ರಿಯಂ ಸ ದ್ರೋಣೇ ದಧಾರಾsಶು ತತೋsಭವತ್ ಸ್ವಯಮ್ ।
ಅಮ್ಭೋಜಜಾವೇಶಯುತೋ
ಬೃಹಸ್ಪತಿಃ ಕರ್ತ್ತುಂ ಹರೇಃ ಕರ್ಮ್ಮ ಬುವೋ ಭರೋದ್ಧೃತೌ ॥೧೧.೬೫॥
ಘೃತಾಚೀಯನ್ನು ನೋಡಿದ್ದರಿಂದ
ಜಾರಿದ ತನ್ನ ರೇತಸ್ಸನ್ನು ಭರಧ್ವಾಜರು ಕೊಳಗದಲ್ಲಿ ಹಿಡಿದರು. ಅದರಿಂದ ಬ್ರಹ್ಮದೇವರ ಆವೇಶದಿಂದ
ಕೂಡಿರುವ ಬೃಹಸ್ಪತಿಯು, ಭೂಭಾರ ಹನನ ಕಾರ್ಯದಲ್ಲಿ ಪರಮಾತ್ಮನ ಸೇವೆಯನ್ನು ಮಾಡಲು ತಾನೇ ಹುಟ್ಟಿ ಬಂದರು.
ದ್ರೋಣೇತಿನಾಮಾಸ್ಯ ಚಕಾರ ತಾತೋ ಮುನಿರ್ಭರದ್ವಾಜ ಉತಾಸ್ಯ
ವೇದಾನ್ ।
ಅಧ್ಯಾಪಯಾಮಾಸ ಸಶಾಸ್ತ್ರಸಙ್ಘಾನ್ ಸರ್ವಜ್ಞತಾಮಾಪ ಚ ಸೋsಚಿರೇಣ ॥೧೧.೬೬॥
ಈರೀತಿ ಅವತರಿಸಿದ ಬೃಹಸ್ಪತಿಗೆ
ಮುನಿ ಭರದ್ವಾಜರು ‘ದ್ರೋಣ’ ಎಂಬ ಹೆಸರನ್ನು ಇಟ್ಟರು.
ಭರದ್ವಾಜರು ದ್ರೋಣನಿಗೆ ಶಾಸ್ತ್ರಗಳಿಂದ ಕೂಡಿದ ವೇದಗಳನ್ನು ಬೋಧಿಸಿದರು. ದ್ರೋಣನು ಅತಿ ಶೀಘ್ರದಲ್ಲಿ ಎಲ್ಲವನ್ನೂ ಕಲಿತು ಸರ್ವಜ್ಞತ್ವವನ್ನು ಹೊಂದಿದನು.
ಪದ್ಯ ರೂಪ: https://go-kula.blogspot.com/
ಪದ್ಯ ರೂಪ: https://go-kula.blogspot.com/
No comments:
Post a Comment