ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 19, 2018

Mahabharata Tatparya Nirnaya Kannada 9.94-9.100


ಅಥ ಬ್ರಹ್ಮಾ ಹರಿಂ ಸ್ತುತ್ವಾ ಜಗಾದೇದಂ ವಚೋ ವಿಭುಮ್
ತ್ವದಾಜ್ಞಯಾ ಮಯಾ ದತ್ತಂ ಸ್ಥಾನಂ ದಶರಥಸ್ಯ ಹಿ ೯.೯೪

ಮಾತೄಣಾಂ ಚಾಪಿ ತಲ್ಲೋಕಸ್ತ್ವಯುತಾಬ್ದಾದಿತೋsಗ್ರತಃ
ಅನರ್ಹಾಯಾಸ್ತ್ವಯಾssಜ್ಞಪ್ತಾ  ಕೈಕೇಯ್ಯಾ ಅಪಿ ಸದ್ಗತಿಃ  ೯.೯೫

ಸೂತ್ವಾ ತು ಭರತಂ ನೈಷಾ ಗಚ್ಛೇತ ನಿರಯಾನಿತಿ
ತಥಾsಪಿ ಸಾ ಯದಾವೇಶಾಚ್ಚಕಾರ ತ್ವಯ್ಯಶೋಭನಮ್ ೯.೯೬

ತದನಂತರ, ಭಗವಂತನು ಸ್ವಧಾಮವನ್ನು ಸೇರಿಯಾದ ಮೇಲೆ, ಬ್ರಹ್ಮದೇವರು ಭಗವಂತನಿಗೆ  ನಮಸ್ಕರಿಸಿ ಈ ಮಾತನ್ನು ಹೇಳುತ್ತಾರೆ:  ನಿನ್ನ ಆಜ್ಞೆಯಂತೆ ದಶರಥನಿಗೆ ಉತ್ತಮ ಲೋಕದ ಸ್ಥಾನವನ್ನು ನೀಡಿದ್ದೇನೆ.
ಕೌಸಲ್ಯಾದಿ ನಿನ್ನ ತಾಯನ್ದಿರರಿಗೂ ಕೂಡಾ ಉತ್ತಮ ಗತಿಯನ್ನು ನೀಡಿದ್ದೇನೆ. (ದಶರಥನ ಲೋಕವನ್ನು ನೀಡಿದ್ದೇನೆ).  ನಿಜವಾಗಿಯೂ ಕೈಕೇಯಿ  ಸದ್ಗತಿಯನ್ನು ಹೊಂದಲು ಅರ್ಹಳಲ್ಲ. ಆದರೆ ಅವಳಿಗೂ ಕೂಡಾ  ನಿನ್ನ ಆಜ್ಞೆಯಂತೆ ನಾನು ಒಳ್ಳೆಯ ಗತಿಯನ್ನು ನೀಡಿದ್ದೇನೆ.
ಭರತನಂತಹ ಮಗನನ್ನು ಹೆತ್ತಮೇಲೆ, ಆ ತಾಯಿ ನರಕಕ್ಕೆ ಹೋಗಬಾರದು ಎನ್ನುವುದು ನಿನ್ನ ಸಂಕಲ್ಪ. ಭರತನ ಮೇಲಿನ ಅನುಗ್ರಹದಿಂದ ಕೈಕೇಯೀ ಈರೀತಿ ಒಳ್ಳೆಯ ಲೋಕವನ್ನು ಪಡೆದಿದ್ದಾಳೆ.

ನಿಕೃತಿರ್ನ್ನಾಮ ಸಾ ಕ್ಷಿಪ್ತಾ ಮಯಾ ತಮಸಿ ಶಾಶ್ವತೇ
ಕೈಕಯಿ ತು ಚಲಾನ್ ಲೋಕಾನ್ ಪ್ರಾಪ್ತಾ ನೈವಾಚಲಾನ್ ಕ್ವಚಿತ್ ೯.೯೭

ಪಶ್ಚಾದ್ ಭಕ್ತಿಮತೀ ಯಸ್ಮಾತ್ ತ್ವಯೀ ಸಾ ಯುಕ್ತಮೇವ ತತ್
ಮನ್ಥರಾ ತು ತಮಸ್ಯನ್ಧೇ ಪಾತಿತಾ ದುಷ್ಟಚಾರಿಣೀ       ೯.೯೮

ಕೈಕೇಯಿ ಯಾರ ಆವೇಶದಿಂದ ನಿನ್ನಲ್ಲಿ ಕೆಟ್ಟದ್ದಾಗಿ ನಡೆದುಕೊಂಡಳೋ, ಆ ನಿಕೃತಿ^  ಎನ್ನುವ ತಾಮಸಿಯನ್ನು ಶಾಶ್ವತವಾಗಿ  ಅಂಧಂತಮಸ್ಸಿಗೆ ಹಾಕಿದ್ದೇನೆ.  
ಕೈಕೇಯ್ಯೀಯೂ ಕೂಡಾ ಈಗ ಕೇವಲ ಚಲ(ಸಂಸಾರಕ್ಕೆ ಹಿಂದಿರುಗೆ ಬರಬಹುದಾದ) ಲೋಕವನ್ನಷ್ಟೇ ಹೊಂದಿದ್ದಾಳೆ. ಅವಳು ನಿನ್ನಲ್ಲಿ ಭಕ್ತಿಯನ್ನು ಹೊಂದಿಯೇ ಇರುವುದರಿಂದ, ಆ ಭಕ್ತಿ ಬೆಳೆದು,  ತದನಂತರ ಆಕೆ ಅಚಲ ಲೋಕವನ್ನು ಪಡೆಯುತ್ತಾಳೆ. ಇನ್ನು ಮನ್ಥರೆಯನ್ನು^ ಅಂಧಂತಮಸ್ಸಿಗೆ ಹಾಕಿದ್ದೇನೆ.
[^ನಿಕೃತಿ ಎನ್ನುವ ರಾಕ್ಷಸಿ ಕೈಕೇಯಿಯೊಳಗಿದ್ದು ಆಕೆಯನ್ನು ಪ್ರಚೋದಿಸಿ, ಸಮಸ್ತ ಕಾರ್ಯವನ್ನು ಕೈಕೇಯಿ ಮುಖೇನ ಮಾಡಿಸಿದ್ದಳು. ನಿಕೃತಿ ಕೈಕೇಯಿ ಒಳಗಿದ್ದು ಪ್ರಚೋದಿಸಿದರೆ, ಹೊರಗೆ ಮಂಥರಾ ಎನ್ನುವ ರಾಕ್ಷಸಿ ದಾಸಿಯಾಗಿ ಕೈಕೇಯಿಯನ್ನು ಪ್ರಚೋದಿಸುತ್ತಿದ್ದಳು. ಈ ರೀತಿ ಕೈಕೇಯಿ  ಅಸುರಾವೇಶಕ್ಕೊಳಗಾಗಿದ್ದಳು ] 

ಸೀತಾರ್ತ್ಥಂ ಯೇsಪ್ಯನಿನ್ದಮ್ಸ್ತ್ವಾಂ ತೇsಪಿ ಯಾತಾ ಮಹತ್ ತಮಃ
ಪ್ರಾಯಶೋ ರಾಕ್ಷಸಾಸ್ಚೈವ ತ್ವಯಿ ಕೃಷ್ಣತ್ವಮಾಗತೇ ೯.೯೯

ಶೇಷಾ ಯಾಸ್ಯನ್ತಿ ತಚ್ಛೇಷಾ ಅಷ್ಟಾವಿಂಶೇ ಕಲೌ ಯುಗೇ
ಗತೇ ಚತುಸ್ಸಹಸ್ರಾಬ್ದೇ ತಮೋಗಾಸ್ತ್ರಿಶತೋತ್ತರೇ ೯.೧೦೦

ಸೀತೆಗಾಗಿ ಯಾರು ನಿನ್ನನ್ನು ನಿಂದನೆ ಮಾಡಿದರೋ(ಸುರಾಣಕ ದೈತ್ಯರು), ಅಂತಹ ಅಸುರ ಸ್ವಭಾವದವರನ್ನೂ ಅಂಧಂತಮಸ್ಸಿಗೆ ಹಾಕಿದ್ದೇನೆ. ನಿನ್ನಿಂದ ಸಂಹರಿಸಲ್ಪಟ್ಟ ರಾಕ್ಷಸರು ಪ್ರಾಯಶಃ (ಸರಿ ಸುಮಾರು ರಾಕ್ಷಸರೆಲ್ಲರೂ ಕೂಡಾ) ತಮಸ್ಸನ್ನು ಪಡೆದ್ದಿದ್ದಾರೆ. ಉಳಿದವರು  ನೀನು ಕೃಷ್ಣಾವತಾರವನ್ನು ಹೊಂದಿದಾಗ ತಮಸ್ಸನ್ನು ಪಡೆಯುತ್ತಾರೆ.
ಕೃಷ್ಣಾವತಾರದಲ್ಲೂ ತಮಸ್ಸನ್ನು ಹೊಂದದೇ ಉಳಿಯುವ ದೈತ್ಯರು,  ಇಪ್ಪತ್ತೆಂಟನೇ ಕಲಿಯುಗದಲ್ಲಿ, ನಾಲ್ಕು ಸಾವಿರದ ಮುನ್ನೂರು ವರ್ಷಗಳು ಕಳೆದಾದ ಮೇಲೆ  (ಅವರಿಗೆ ಮೀಸಲಾದ ಕಾರ್ಯವನ್ನು ಮಾಡಿ) ತಮಸ್ಸನ್ನು ಹೊಂದುತ್ತಾರೆ.

Saturday, August 18, 2018

Mahabharata Tatparya Nirnaya Kannada 9.89-9.93


ದಧ್ರೇ ಚ್ಛತ್ರಂ ಹನೂಮಾನ್ ಸ್ರವದಮೃತಮಯಂ ಪೂರ್ಣ್ಣಚನ್ದ್ರಾಯುತಾಭಂ
ಸೀತಾ ಸೈವಾಖಿಲಾಕ್ಷ್ಣಾಂ ವಿಷಯಮುಪಗತಾ ಶ್ರೀರಿತಿ ಹ್ರೀರಥೈಕಾ
ದ್ವೇಧಾ ಭೂತ ದಧಾರ ವ್ಯಜನಮುಭಯತಃ ಪೂರ್ಣ್ಣಚನ್ದ್ರಾಂಶುಗೌರಂ
ಪ್ರೋದ್ಯದ್ಭಾಸ್ವತ್ಪ್ರಭಾಭಾ ಸಕಲಗುಣತನುರ್ಭೂಷಿತಾ ಭೂಷಣೈಃ ಸ್ವೈಃ ೯.೮೯

ಪೂರ್ಣಚಂದ್ರರ ಕಾಂತಿಯಂತೆ ಕಾಂತಿಯುಳ್ಳ, ಅಮೃತವನ್ನು ಸುರಿಸುವ ಶ್ವೇತ ಚ್ಛತ್ರವನ್ನು ಹನುಮಂತ ಹಿಡಿದನು. ಸೂರ್ಯನಂತೆ ಕಾಂತಿಯುಳ್ಳವಳಾಗಿ, ಸಮಸ್ತ ಗುಣವೇ ಮೈವೆತ್ತು ಬಂದವಳಾಗಿ, ತನ್ನ ಭೂಷಣಗಳಿಂದ ದೇವರ ಪಕ್ಕದಲ್ಲೇ, ಹಿಂದೆ ಅದೃಶ್ಯಳಾಗಿದ್ದ ಸೀತಾದೇವಿ  ಶ್ರೀ ಮತ್ತು ಭೂ (ಹ್ರೀ)ಎನ್ನುವ ಎರಡು ರೂಪದಿಂದ ಎಲ್ಲರ ಕಣ್ಣಿಗೆ ಕಾಣಿಸಿಕೊಂಡಳು. ಹೀಗೆ ಎರಡು ರೂಪದಿಂದ ಎರಡು ಕಡೆಯಿಂದ ಎರಡು ಚಾಮರವನ್ನು ಹಿಡಿದು ಸೀತೆ  ನಿಂತಳು.
[ಸ್ಕಂಧ ಪುರಾಣದಲ್ಲಿ(ವೈಷ್ಣವ ಖಂಡ, ಅಯೋಧ್ಯಾ ಮಹಾತ್ಮೇ, ೬.೧೩೬.-೮) ಈ ವಿವರ ಬರುತ್ತದೆ:  ರಾಮಸ್ಯ ಸವ್ಯಪಾರ್ಶ್ವೇ ತು ಸಪದ್ಮಾ ಶ್ರೀಃ  ಸಮಾಶ್ರಿತಾ ದಕ್ಷಿಣೇ  ಹ್ರೀರ್ವಿಶಾಲಾಕ್ಷೀ  ವ್ಯವಸಾಯಸ್ತಥಾSಗ್ರತಃ ನಾನಾವಿಧಾ-ಯುಧಾನ್ಯತ್ರ ಧನುರ್ಜ್ಯಪ್ರಭ್ರುತೀನಿ ಚ   ಅನುವೃಜಂತಿ ಕಾಕುತ್ಸ್ಥಂ  ಸರ್ವೇಪುರುಷವಿಗ್ರಹಾಃ ವೇದೋ ಬ್ರಾಹ್ಮಣರೂಪೇಣ ಸಾವಿತ್ರೀ ಸವ್ಯದಕ್ಷಿಣೇ ಓಙ್ಕಾರೋSಥ ವಷಟ್ಕಾರಃ ಸರ್ವೇ ರಾಮಂ ತದಾSವೃಜನ್’ 
ವಾಲ್ಮೀಕಿ ರಾಮಾಯಣದಲ್ಲೂ(ಉತ್ತರ ಕಾಂಡ, ೧೨೨. ೬-೮) ಇದೇ ಮಾತನ್ನು ಸ್ವಲ್ಪ ವ್ಯತ್ಯಾಸವಾಗಿ  ಹೇಳಿದ್ದಾರೆ: ರಾಮಸ್ಯ ದಕ್ಷಿಣೇ ಪಾರ್ಶ್ವೇ ಸಪದ್ಮಾ ಶ್ರೀರೂಪಾಶ್ರಿತಾ  ಸವ್ಯೇ ತು ಹ್ರೀರ್ಮಹಾದೇವಿ ವ್ಯವಸಾಯಸ್ತಥಾSಗ್ರತಃ ಶರಾ  ನಾನಾವಿಧಾಶ್ಚಾಪಿ ಧನುರಾಯತಮುತ್ತಮಮ್   ತಥಾSSಧಾನಿ ತೇ ಸರ್ವೇ ಯಯುಃ  ಪುರುಷವಿಗ್ರಹಾಃ ವೇದಾ  ಬ್ರಾಹ್ಮಣರೂಪೇಣ  ಗಾಯತ್ರೀ  ಸರ್ವರಕ್ಷಿಣೀ ಓಙ್ಕಾರೋSಥ ವಷಟ್ಕಾರಃ ಸರ್ವೇ ರಾಮಮನುವ್ರತಾಃ ]

ಸಾಕ್ಷಾಚ್ಚಕ್ರತನುಸ್ತಥೈವ ಭರತಶ್ಚಕ್ರಂ ದಧದ್ ದಕ್ಷಿಣೇ-
ನಾsಯಾತ್ ಸವ್ಯತ ಏವ ಶಙ್ಖವರಭೃಚ್ಛಙ್ಕಾತ್ಮಕಃ ಶತ್ರುಹಾ
ಅಗ್ರೇ ಬ್ರಹ್ಮಪುರೋಗಮಾಃ ಸುರಗಣಾ ವೇದಾಶ್ಚ ಸೋಙ್ಕಾರಕಾಃ
ಪಶ್ಚಾತ್ ಸರ್ವಜಗಜ್ಜಗಾಮ ರಘುಪಂ ಯಾನ್ತಂ ನಿಜಂ ಧಾಮ ತಮ್ ೯.೯೦

ಚಕ್ರದ ಅಭಿಮಾನಿಯಾಗಿರುವ ಭರತನು  ಶ್ರೀರಾಮನ  ಬಲಬದಿಯಲ್ಲಿ ಸುದರ್ಶನ ಚಕ್ರವನ್ನು ಹಿಡಿದು ನಡೆದನು. ಶಂಖಾಭಿಮಾನಿಯಾಗಿ ಶತ್ರುಘ್ನನು ಎಡಗಡೆಯಿಂದ ಪಾಂಚಜನ್ಯ ಶಂಖವನ್ನು ಹಿಡಿದು ನಡೆದನು. ರಾಮಚಂದ್ರನ ಮುಂದೆ ಚತುರ್ಮುಖ ಬ್ರಹ್ಮನೇ ಮೊದಲಾದ ದೇವತೆಗಳು, ಪ್ರಣವದಿಂದ ಸಹಿತರಾದ  (ಓಙ್ಕಾರ ಅಭಿಮಾನಿ ದೇವತೆಗಳ ಸಹಿತರಾದ) ವೇದಾಭಿಮಾನಿ ದೇವತೆಗಳು  ನಡೆದರು. ದೇವರ ಹಿಂದೆ, ಸಮಸ್ತ ಮುಕ್ತಿಯೋಗ್ಯ ಜೀವರಿದ್ದರು.

ತಸ್ಯ ಸೂರ್ಯ್ಯಸುತಪೂರ್ವವಾನರಾ ದಕ್ಷಿಣೇನ ಮನುಜಾಸ್ತು ಸವ್ಯತಃ
ರಾಮಜನ್ಮಚರಿತಾನಿ ತಸ್ಯ ತೇ ಕೀರ್ತ್ತಯನ್ತ ಉಚಥೈರ್ದ್ದ್ರುತಂ ಯಯುಃ ೯.೯೧

ಸುಗ್ರೀವ ಮೊದಲಾದ ಕಪಿಗಳು ಬಲಗಡೆಯಿಂದ ತೆರಳಿದರು.  ಸೇವಕರು, ಆತ್ಮೀಯರು, ಮೊದಲಾದ ಮನುಷ್ಯರು ಎಡಗಡೆಯಿಂದ ನಡೆದರು. ಎಲ್ಲರೂ ವೈದಿಕಸೂಕ್ತಗಳಿಂದ ಮನೋಹರವಾದ  ರಾಮನ ಜನ್ಮಚರಿತೆಯನ್ನು  ಕೀರ್ತನೆ ಮಾಡುತ್ತಾ ಸಾಗಿದರು.

ಗನ್ಧರ್ವೈರ್ಗ್ಗೀಯಮಾನೋ ವಿಬುಧಮುನಿಗಣೈರಬ್ಜಸಮ್ಭೂತಿಪೂರ್ವೈ-
ರ್ವೇದೋದಾರಾರ್ತ್ಥವಾಗ್ಭಿಃ ಪ್ರಣಿಹಿತಸುಮನಃ ಸರ್ವದಾ ಸ್ತೂಯಮಾನಃ
ಸರ್ವೈರ್ಭೂತೈಶ್ಚ ಭಕ್ತ್ಯಾ ಸ್ವನಿಮಿಷನಯನೈಃ ಕೌತುಕಾದ್ ವೀಕ್ಷ್ಯಮಾಣಃ
ಪ್ರಾಯಾಚ್ಛೇಷಗರುತ್ಮದಾದಿಕನಿಜೈಃ ಸಂಸೇವಿತಃ ಸ್ವಂ ಪದಮ್              ೯.೯೨

ಗಂಧರ್ವರೆಲ್ಲಾ ಸ್ತೋತ್ರಮಾಡುತ್ತಿದ್ದರು. ಬ್ರಹ್ಮಾದಿ ದೇವತೆಗಳು ವೇದದ ಉತ್ಕೃಷ್ಟವಾದ ವಚನಗಳಿಂದ ಸ್ತೋತ್ರಮಾಡುತ್ತಾ,  ಪುಷ್ಪವನ್ನು  ಭಗವಂತನ ಮೇಲೆ ಸುರಿಸುತ್ತಾ ಸಾಗುತ್ತಿದ್ದರು. ಎಲ್ಲರೂ ಅಚ್ಚರಿ ತುಂಬಿದ ಕಣ್ಗಳಿಂದ ಭಗವಂತನನ್ನು ನೋಡುತ್ತಿದ್ದರು. ಶ್ರೀರಾಮನು ಗರುಡ-ಶೇಷ ಮೊದಲಾದ ಎಲ್ಲರಿಂದ ಕೂಡಿಕೊಂಡು ತನ್ನ ಧಾಮವನ್ನು ಕುರಿತು ನಡೆದ.

ಬ್ರಹ್ಮರುದ್ರಗರುಡೈಃ ಸಶೇಷಕೈಃ ಪ್ರೋಚ್ಯಮಾನಸುಗುಣೋರುವಿಸ್ತರಃ
ಆರುರೋಹ ವಿಭುರಮ್ಬರಂ ಶನೈಸ್ತೇ ಚ ದಿವ್ಯವಪುಷೋsಭವಂಸ್ತದಾ      ೯.೯೩

ಹೀಗೆ ಎಲ್ಲರ ಜೊತೆಗೆ ಸಾಗುತ್ತಾ, ಬ್ರಹ್ಮ, ರುದ್ರ ಮೊದಲಾದವರಿಂದ ಭಗವಂತನ ಗುಣಗಾನವಾಗುತ್ತಿರುವಂತೆಯೇ, ಮೆಲ್ಲಗೆ ಭೂಮಿಯನ್ನು ಬಿಟ್ಟ ಶ್ರೀರಾಮ, ನಿಧಾನವಾಗಿ ಆಕಾಶವನ್ನು ಏರಿದ. ಜೊತೆಗಿದ್ದವರೆಲ್ಲರೂ ರಾಮಚಂದ್ರನ ಪ್ರಭಾವದಿಂದ ತಮ್ಮ ಪ್ರಾಕೃತ ದೇಹದ ದೋಷಗಳನ್ನೆಲ್ಲವನ್ನು ಕಳಚಿಕೊಂಡು ಮೆಲ್ಲನೆ ಭಗವಂತನೊಂದಿಗೆ ಮೇಲಕ್ಕೇರಿದರು.

ಕನ್ನಡ ಪದ್ಯರೂಪ: https://go-kula.blogspot.com/2018/08/9-89-93.html

Friday, August 17, 2018

Mahabharata Tatparya Nirnaya Kannada 9.83-9.88


ಉದಾರಬಾಹುಭೂಷಣಃ ಶುಭಾಙ್ಗದಃ ಸಕಙ್ಕಣಃ
ಮಹಾಙ್ಗುಲೀಯಭೂಷಿತಃ ಸುರಕ್ತಸತ್ಕರಾಮ್ಭುಜಃ ೯.೮೩

 ಉತ್ಕೃಷ್ಟವಾದ ತೊಳಬಂಧೀ, ಕಂಕಣ ಹಾಗು  ಉಂಗುರವನ್ನು ತೊಟ್ಟಿದ್ದ ಶ್ರೀರಾಮ, ಉತ್ಕೃಷ್ಟ ಬಾಹು ಭೂಷಣನಾಗಿದ್ದ. ಕೆಂಪಾದ ಹಸ್ತತಳ ಅವನದಾಗಿತ್ತು.

ಅನರ್ಘರತ್ನಮಾಲಯಾ  ವನಾಖ್ಯಯಾ ಚ ಮಾಲಯಾ
ವಿಲಾಸಿವಿಸ್ತೃತೋರಸಾ ಬಭಾರ ಚ ಶ್ರಿಯಂ ಪ್ರಭುಃ ೯.೮೪

ಅನರ್ಘವಾಗಿರುವ (ಬೆಲೆಕಟ್ಟಲಾಗದ ಅತ್ಯುತ್ತಮ) ರತ್ನಗಳಿಂದ ಕೂಡಿರುವ ಮಾಲೆ ಮತ್ತು  ವನಮಾಲೆಗಳಿಂದ ಶೋಭಿಸುತ್ತಿದ್ದ ಶ್ರೀರಾಮ,  ತನ್ನ  ಅಗಲವಾದ ವಕ್ಷಸ್ಥಳದಲ್ಲಿ ಶ್ರೀಲಕ್ಷ್ಮಿಯನ್ನು ಧರಿಸಿದ್ದ.

ಸ ಭೂತಿವತ್ಸಭೂಷಣಸ್ತನೂದರೇ ವಲಿತ್ರಯೀ
ಉದಾರಮಧ್ಯಭೂಷಣೋ ಲಸತ್ತಟಿತ್ಪ್ರಭಾಮ್ಬರಃ ೯.೮೫

ಶ್ರೀವತ್ಸದಿಂದ ಕೂಡಿದವನಾದ ಶ್ರೀರಾಮನ  ಚೆಲುವಾದ ಹೊಟ್ಟೆಯಲ್ಲಿ ರೇಖತ್ರಯಗಳಿದ್ದವು.  ಆತ ಪೀತಾಂಬರವನ್ನು ಧರಿಸಿ ಶೋಭಿಸುತ್ತಿದ್ದ.

ಕರೀನ್ದ್ರಸತ್ಕರೋರುಯುಕ್ ಸುವೃತ್ತಜಾನುಮಣ್ಡಲಃ
ಕ್ರಮಾಲ್ಪವೃತ್ತಜಙ್ಘಕಃ ಸುರಕ್ತಪಾದಪಲ್ಲವಃ ೯.೮೬

ಲಸದ್ಧರಿನ್ಮಣಿಧ್ಯುತೀ ರರಾಜ ರಾಘವೋsಧಿಕಮ್
ಅಸಙ್ಖ್ಯಸತ್ಸುಖಾರ್ಣ್ಣವಃ ಸಮಸ್ತಶಕ್ತಿಸತ್ತನುಃ ೯.೮೭


ಆನೆಯ ಸೊಂಡಿಲಿನಂತಹ ತೊಡೆ, ಉರುಟಾಗಿರುವ ಮಂಡಿ, ಕ್ರಮದಿಂದ ವರ್ತುಲವಾದ(ಮಂಡಿಯಿಂದ ಮಣಿಗಂಟಿನತನಕ ಕ್ರಮವಾಗಿ ಉರುಟಾಗಿರುವ) ಮೊಣಕಾಲು, ಕೆಂಪಾದ ಪಾದತಳ, ನೀಲಿಯಾದ ಮಣಿಯಂತೆ ಕಂಗೊಳಿಸುತ್ತಿರುವ,  ಸುಖಾತ್ಮಕವೂ , ಶಕ್ತ್ಯಾತ್ಮಕವೂ ಆಗಿರುವ ಶರೀರವುಳ್ಳ ರಾಮಚಂದ್ರ ಶೋಭಿಸುತ್ತಿದ್ದನು.

ಜ್ಞಾನಂ ನೇತ್ರಾಬ್ಜಯುಗ್ಮಾನ್ಮುಖವರಕಮಲಾತ್ ಸರ್ವವೇದಾರ್ತ್ಥಸಾರಾಂ-
ಸ್ತನ್ವಾ ಬ್ರಹ್ಮಾಣ್ಡಬಾಹ್ಯಾನ್ತರಮಧಿಕರುಚಾ ಭಾಸಯನ್ ಭಾಸುರಾಸ್ಯಃ
ಸರ್ವಾಭೀಷ್ಟಾಭಯೇ ಚ ಸ್ವಕರವರಯಗೇನಾರ್ತ್ಥಿನಾಮಾದಧಾನಃ
ಪ್ರಾಯಾದ್ದೇವಾಧಿದೇವಃ ಸ್ವಪದಮಭಿಮುಖಶ್ಚೋತ್ತರಾಶಾಂ ವಿಶೋಕಾಮ್ ೯.೮೮

ಎರಡು ತಾವರೆಯಂತಾ ಕಂಗಳಿಂದ ಜ್ಞಾನದ ಬೆಳಕನ್ನು ಬೆಳಗಿಸಿದವನು. ಮುಖಕಮಲದ ಕಾಂತಿಯಿಂದ ಸರ್ವ ವೇದಾರ್ಥದ ಸಾರವನ್ನು ಬೆಳಗಿಸಿದವನು. [ಅನುಗ್ರಹದ ಕಣ್ನೋಟದಿಂದ ಜ್ಞಾನವನ್ನು ಭಕ್ತರ ಹೃದಯದಲ್ಲಿ ಬೆಳಗಿಸುವವನು, ತನ್ನ ಮಾತಿನಿಂದ ವೇದಗಳ ಅರ್ಥಸಾರವನ್ನು ದೇವತೆಗಳ ಹೃದಯದಲ್ಲಿ ಬೆಳಗಿಸಿದವನು] ಸ್ವಶಕ್ತಿಯಿಂದ ಬ್ರಹ್ಮಾಂಡದ ಒಳಗೆ ಹೊರಗೆ ತುಂಬಿ ನಿಂತವನು, ಹೊಳೆವ ಮುಖದವನು, ನೊಂದವರ ನೋವು ನೀಗಲೆಂದೆ ವರ ಮತ್ತು ಅಭಯ ಎಂಬ ಎರಡು ಕೈಗಳನ್ನು ಹಿಡಿದಿರುವವನು. ಇಂಥಾ ದೇವಾದಿದೇವನು ತಾನು ವಿಶೋಕವೆಂಬ ಉತ್ತರದಿಕ್ಕಿಗೆ ನಡೆದನು.

ಕನ್ನಡ ಪದ್ಯರೂಪ: https://go-kula.blogspot.com/2018/08/9-83-88.html