ಉದಾರಬಾಹುಭೂಷಣಃ ಶುಭಾಙ್ಗದಃ
ಸಕಙ್ಕಣಃ ।
ಮಹಾಙ್ಗುಲೀಯಭೂಷಿತಃ
ಸುರಕ್ತಸತ್ಕರಾಮ್ಭುಜಃ ॥೯.೮೩ ॥
ಉತ್ಕೃಷ್ಟವಾದ ತೊಳಬಂಧೀ,
ಕಂಕಣ ಹಾಗು ಉಂಗುರವನ್ನು ತೊಟ್ಟಿದ್ದ ಶ್ರೀರಾಮ, ಉತ್ಕೃಷ್ಟ
ಬಾಹು ಭೂಷಣನಾಗಿದ್ದ. ಕೆಂಪಾದ ಹಸ್ತತಳ ಅವನದಾಗಿತ್ತು.
ಅನರ್ಘರತ್ನಮಾಲಯಾ ವನಾಖ್ಯಯಾ ಚ ಮಾಲಯಾ ।
ವಿಲಾಸಿವಿಸ್ತೃತೋರಸಾ ಬಭಾರ ಚ ಶ್ರಿಯಂ
ಪ್ರಭುಃ ॥೯.೮೪
॥
ಅನರ್ಘವಾಗಿರುವ (ಬೆಲೆಕಟ್ಟಲಾಗದ ಅತ್ಯುತ್ತಮ) ರತ್ನಗಳಿಂದ ಕೂಡಿರುವ ಮಾಲೆ
ಮತ್ತು ವನಮಾಲೆಗಳಿಂದ ಶೋಭಿಸುತ್ತಿದ್ದ ಶ್ರೀರಾಮ,
ತನ್ನ ಅಗಲವಾದ ವಕ್ಷಸ್ಥಳದಲ್ಲಿ ಶ್ರೀಲಕ್ಷ್ಮಿಯನ್ನು ಧರಿಸಿದ್ದ.
ಸ ಭೂತಿವತ್ಸಭೂಷಣಸ್ತನೂದರೇ
ವಲಿತ್ರಯೀ ।
ಉದಾರಮಧ್ಯಭೂಷಣೋ ಲಸತ್ತಟಿತ್ಪ್ರಭಾಮ್ಬರಃ
॥೯.೮೫
॥
ಶ್ರೀವತ್ಸದಿಂದ ಕೂಡಿದವನಾದ ಶ್ರೀರಾಮನ ಚೆಲುವಾದ ಹೊಟ್ಟೆಯಲ್ಲಿ ರೇಖತ್ರಯಗಳಿದ್ದವು. ಆತ ಪೀತಾಂಬರವನ್ನು ಧರಿಸಿ ಶೋಭಿಸುತ್ತಿದ್ದ.
ಕರೀನ್ದ್ರಸತ್ಕರೋರುಯುಕ್
ಸುವೃತ್ತಜಾನುಮಣ್ಡಲಃ ।
ಕ್ರಮಾಲ್ಪವೃತ್ತಜಙ್ಘಕಃ
ಸುರಕ್ತಪಾದಪಲ್ಲವಃ ॥೯.೮೬ ॥
ಲಸದ್ಧರಿನ್ಮಣಿಧ್ಯುತೀ ರರಾಜ ರಾಘವೋsಧಿಕಮ್ ।
ಅಸಙ್ಖ್ಯಸತ್ಸುಖಾರ್ಣ್ಣವಃ
ಸಮಸ್ತಶಕ್ತಿಸತ್ತನುಃ ॥೯.೮೭ ॥
ಆನೆಯ ಸೊಂಡಿಲಿನಂತಹ ತೊಡೆ, ಉರುಟಾಗಿರುವ ಮಂಡಿ, ಕ್ರಮದಿಂದ ವರ್ತುಲವಾದ(ಮಂಡಿಯಿಂದ
ಮಣಿಗಂಟಿನತನಕ ಕ್ರಮವಾಗಿ ಉರುಟಾಗಿರುವ) ಮೊಣಕಾಲು, ಕೆಂಪಾದ ಪಾದತಳ, ನೀಲಿಯಾದ ಮಣಿಯಂತೆ ಕಂಗೊಳಿಸುತ್ತಿರುವ,
ಸುಖಾತ್ಮಕವೂ , ಶಕ್ತ್ಯಾತ್ಮಕವೂ ಆಗಿರುವ ಶರೀರವುಳ್ಳ
ರಾಮಚಂದ್ರ ಶೋಭಿಸುತ್ತಿದ್ದನು.
ಜ್ಞಾನಂ
ನೇತ್ರಾಬ್ಜಯುಗ್ಮಾನ್ಮುಖವರಕಮಲಾತ್ ಸರ್ವವೇದಾರ್ತ್ಥಸಾರಾಂ-
ಸ್ತನ್ವಾ
ಬ್ರಹ್ಮಾಣ್ಡಬಾಹ್ಯಾನ್ತರಮಧಿಕರುಚಾ ಭಾಸಯನ್ ಭಾಸುರಾಸ್ಯಃ ।
ಸರ್ವಾಭೀಷ್ಟಾಭಯೇ ಚ ಸ್ವಕರವರಯಗೇನಾರ್ತ್ಥಿನಾಮಾದಧಾನಃ
ಪ್ರಾಯಾದ್ದೇವಾಧಿದೇವಃ
ಸ್ವಪದಮಭಿಮುಖಶ್ಚೋತ್ತರಾಶಾಂ ವಿಶೋಕಾಮ್ ॥೯.೮೮॥
ಎರಡು ತಾವರೆಯಂತಾ ಕಂಗಳಿಂದ ಜ್ಞಾನದ ಬೆಳಕನ್ನು ಬೆಳಗಿಸಿದವನು.
ಮುಖಕಮಲದ ಕಾಂತಿಯಿಂದ ಸರ್ವ ವೇದಾರ್ಥದ ಸಾರವನ್ನು ಬೆಳಗಿಸಿದವನು. [ಅನುಗ್ರಹದ ಕಣ್ನೋಟದಿಂದ
ಜ್ಞಾನವನ್ನು ಭಕ್ತರ ಹೃದಯದಲ್ಲಿ ಬೆಳಗಿಸುವವನು, ತನ್ನ ಮಾತಿನಿಂದ ವೇದಗಳ ಅರ್ಥಸಾರವನ್ನು ದೇವತೆಗಳ
ಹೃದಯದಲ್ಲಿ ಬೆಳಗಿಸಿದವನು] ಸ್ವಶಕ್ತಿಯಿಂದ ಬ್ರಹ್ಮಾಂಡದ ಒಳಗೆ ಹೊರಗೆ ತುಂಬಿ ನಿಂತವನು,
ಹೊಳೆವ ಮುಖದವನು, ನೊಂದವರ ನೋವು ನೀಗಲೆಂದೆ ವರ ಮತ್ತು
ಅಭಯ ಎಂಬ ಎರಡು ಕೈಗಳನ್ನು ಹಿಡಿದಿರುವವನು. ಇಂಥಾ ದೇವಾದಿದೇವನು ತಾನು ವಿಶೋಕವೆಂಬ
ಉತ್ತರದಿಕ್ಕಿಗೆ ನಡೆದನು.
No comments:
Post a Comment