ಅಥ ಬ್ರಹ್ಮಾ ಹರಿಂ ಸ್ತುತ್ವಾ
ಜಗಾದೇದಂ ವಚೋ ವಿಭುಮ್ ।
ತ್ವದಾಜ್ಞಯಾ ಮಯಾ ದತ್ತಂ ಸ್ಥಾನಂ
ದಶರಥಸ್ಯ ಹಿ ॥೯.೯೪ ॥
ಮಾತೄಣಾಂ ಚಾಪಿ
ತಲ್ಲೋಕಸ್ತ್ವಯುತಾಬ್ದಾದಿತೋsಗ್ರತಃ ।
ಅನರ್ಹಾಯಾಸ್ತ್ವಯಾssಜ್ಞಪ್ತಾ ಕೈಕೇಯ್ಯಾ ಅಪಿ ಸದ್ಗತಿಃ ॥೯.೯೫
॥
ಸೂತ್ವಾ ತು ಭರತಂ ನೈಷಾ ಗಚ್ಛೇತ
ನಿರಯಾನಿತಿ ।
ತಥಾsಪಿ ಸಾ ಯದಾವೇಶಾಚ್ಚಕಾರ
ತ್ವಯ್ಯಶೋಭನಮ್ ॥೯.೯೬ ॥
ತದನಂತರ, ಭಗವಂತನು ಸ್ವಧಾಮವನ್ನು ಸೇರಿಯಾದ ಮೇಲೆ, ಬ್ರಹ್ಮದೇವರು ಭಗವಂತನಿಗೆ
ನಮಸ್ಕರಿಸಿ ಈ ಮಾತನ್ನು ಹೇಳುತ್ತಾರೆ: ನಿನ್ನ ಆಜ್ಞೆಯಂತೆ ದಶರಥನಿಗೆ ಉತ್ತಮ ಲೋಕದ ಸ್ಥಾನವನ್ನು
ನೀಡಿದ್ದೇನೆ.
ಕೌಸಲ್ಯಾದಿ ನಿನ್ನ ತಾಯನ್ದಿರರಿಗೂ ಕೂಡಾ ಉತ್ತಮ ಗತಿಯನ್ನು
ನೀಡಿದ್ದೇನೆ. (ದಶರಥನ ಲೋಕವನ್ನು ನೀಡಿದ್ದೇನೆ).
ನಿಜವಾಗಿಯೂ ಕೈಕೇಯಿ ಸದ್ಗತಿಯನ್ನು
ಹೊಂದಲು ಅರ್ಹಳಲ್ಲ. ಆದರೆ ಅವಳಿಗೂ ಕೂಡಾ ನಿನ್ನ
ಆಜ್ಞೆಯಂತೆ ನಾನು ಒಳ್ಳೆಯ ಗತಿಯನ್ನು ನೀಡಿದ್ದೇನೆ.
ಭರತನಂತಹ ಮಗನನ್ನು ಹೆತ್ತಮೇಲೆ, ಆ ತಾಯಿ ನರಕಕ್ಕೆ ಹೋಗಬಾರದು
ಎನ್ನುವುದು ನಿನ್ನ ಸಂಕಲ್ಪ. ಭರತನ ಮೇಲಿನ ಅನುಗ್ರಹದಿಂದ ಕೈಕೇಯೀ ಈರೀತಿ ಒಳ್ಳೆಯ ಲೋಕವನ್ನು
ಪಡೆದಿದ್ದಾಳೆ.
ನಿಕೃತಿರ್ನ್ನಾಮ ಸಾ ಕ್ಷಿಪ್ತಾ ಮಯಾ
ತಮಸಿ ಶಾಶ್ವತೇ ।
ಕೈಕಯಿ ತು ಚಲಾನ್ ಲೋಕಾನ್ ಪ್ರಾಪ್ತಾ
ನೈವಾಚಲಾನ್ ಕ್ವಚಿತ್ ॥೯.೯೭
॥
ಪಶ್ಚಾದ್ ಭಕ್ತಿಮತೀ ಯಸ್ಮಾತ್ ತ್ವಯೀ
ಸಾ ಯುಕ್ತಮೇವ ತತ್ ।
ಮನ್ಥರಾ ತು ತಮಸ್ಯನ್ಧೇ ಪಾತಿತಾ
ದುಷ್ಟಚಾರಿಣೀ ॥೯.೯೮
॥
ಕೈಕೇಯಿ ಯಾರ ಆವೇಶದಿಂದ ನಿನ್ನಲ್ಲಿ ಕೆಟ್ಟದ್ದಾಗಿ ನಡೆದುಕೊಂಡಳೋ, ಆ ನಿಕೃತಿ^ ಎನ್ನುವ ತಾಮಸಿಯನ್ನು ಶಾಶ್ವತವಾಗಿ ಅಂಧಂತಮಸ್ಸಿಗೆ ಹಾಕಿದ್ದೇನೆ.
ಕೈಕೇಯ್ಯೀಯೂ ಕೂಡಾ ಈಗ ಕೇವಲ ಚಲ(ಸಂಸಾರಕ್ಕೆ ಹಿಂದಿರುಗೆ ಬರಬಹುದಾದ)
ಲೋಕವನ್ನಷ್ಟೇ ಹೊಂದಿದ್ದಾಳೆ. ಅವಳು ನಿನ್ನಲ್ಲಿ ಭಕ್ತಿಯನ್ನು ಹೊಂದಿಯೇ ಇರುವುದರಿಂದ, ಆ ಭಕ್ತಿ ಬೆಳೆದು,
ತದನಂತರ ಆಕೆ ಅಚಲ ಲೋಕವನ್ನು ಪಡೆಯುತ್ತಾಳೆ. ಇನ್ನು
ಮನ್ಥರೆಯನ್ನು^ ಅಂಧಂತಮಸ್ಸಿಗೆ ಹಾಕಿದ್ದೇನೆ.
[^ನಿಕೃತಿ ಎನ್ನುವ ರಾಕ್ಷಸಿ ಕೈಕೇಯಿಯೊಳಗಿದ್ದು ಆಕೆಯನ್ನು
ಪ್ರಚೋದಿಸಿ, ಸಮಸ್ತ ಕಾರ್ಯವನ್ನು ಕೈಕೇಯಿ ಮುಖೇನ ಮಾಡಿಸಿದ್ದಳು. ನಿಕೃತಿ ಕೈಕೇಯಿ ಒಳಗಿದ್ದು
ಪ್ರಚೋದಿಸಿದರೆ, ಹೊರಗೆ ಮಂಥರಾ ಎನ್ನುವ ರಾಕ್ಷಸಿ ದಾಸಿಯಾಗಿ ಕೈಕೇಯಿಯನ್ನು
ಪ್ರಚೋದಿಸುತ್ತಿದ್ದಳು. ಈ ರೀತಿ ಕೈಕೇಯಿ
ಅಸುರಾವೇಶಕ್ಕೊಳಗಾಗಿದ್ದಳು ]
ಸೀತಾರ್ತ್ಥಂ ಯೇsಪ್ಯನಿನ್ದಮ್ಸ್ತ್ವಾಂ ತೇsಪಿ ಯಾತಾ ಮಹತ್ ತಮಃ ।
ಪ್ರಾಯಶೋ ರಾಕ್ಷಸಾಸ್ಚೈವ ತ್ವಯಿ
ಕೃಷ್ಣತ್ವಮಾಗತೇ ॥೯.೯೯॥
ಶೇಷಾ ಯಾಸ್ಯನ್ತಿ ತಚ್ಛೇಷಾ
ಅಷ್ಟಾವಿಂಶೇ ಕಲೌ ಯುಗೇ ।
ಗತೇ ಚತುಸ್ಸಹಸ್ರಾಬ್ದೇ
ತಮೋಗಾಸ್ತ್ರಿಶತೋತ್ತರೇ ॥೯.೧೦೦ ॥
ಸೀತೆಗಾಗಿ ಯಾರು ನಿನ್ನನ್ನು ನಿಂದನೆ ಮಾಡಿದರೋ(ಸುರಾಣಕ ದೈತ್ಯರು),
ಅಂತಹ ಅಸುರ ಸ್ವಭಾವದವರನ್ನೂ ಅಂಧಂತಮಸ್ಸಿಗೆ ಹಾಕಿದ್ದೇನೆ. ನಿನ್ನಿಂದ ಸಂಹರಿಸಲ್ಪಟ್ಟ ರಾಕ್ಷಸರು
ಪ್ರಾಯಶಃ (ಸರಿ ಸುಮಾರು ರಾಕ್ಷಸರೆಲ್ಲರೂ ಕೂಡಾ) ತಮಸ್ಸನ್ನು ಪಡೆದ್ದಿದ್ದಾರೆ. ಉಳಿದವರು ನೀನು ಕೃಷ್ಣಾವತಾರವನ್ನು ಹೊಂದಿದಾಗ ತಮಸ್ಸನ್ನು
ಪಡೆಯುತ್ತಾರೆ.
ಕೃಷ್ಣಾವತಾರದಲ್ಲೂ ತಮಸ್ಸನ್ನು ಹೊಂದದೇ ಉಳಿಯುವ ದೈತ್ಯರು, ಇಪ್ಪತ್ತೆಂಟನೇ ಕಲಿಯುಗದಲ್ಲಿ, ನಾಲ್ಕು ಸಾವಿರದ
ಮುನ್ನೂರು ವರ್ಷಗಳು ಕಳೆದಾದ ಮೇಲೆ (ಅವರಿಗೆ
ಮೀಸಲಾದ ಕಾರ್ಯವನ್ನು ಮಾಡಿ) ತಮಸ್ಸನ್ನು ಹೊಂದುತ್ತಾರೆ.
No comments:
Post a Comment