ವ್ಯಜ್ಞಾಪಯನ್
ಸ್ವಲೋಕಾಪ್ತಿಮೋಮಿತ್ಯಾಹ ಸ ಚಾಚ್ಯುತಃ ।
ಪ್ರಾಚುರ್ಯ್ಯೇ
ಸಜ್ಜನಸ್ಯ ಸ್ಯಾನ್ನ ಕಲೇರ್ವೃದ್ಧಿರಞ್ಜಸಾ ॥ ೩೨.೧೪ ॥
ಇತಿ ಸ್ವಕುಲಸಂಹೃತ್ಯೈ
ಪ್ರಭಾಸಮನಯತ್ ಪ್ರಭುಃ ।
ಪುಣ್ಯಕ್ಷೇತ್ರೇSಪಿ ನ ಮೃತಿಃ ಸ್ವಗೃಹೇ ತ್ವತಿಧರ್ಮ್ಮದಾ ॥ ೩೨.೧೫
॥
ಗತ್ಯೈವಾಲ್ಪಮಪಿ
ಕ್ಷೇತ್ರಂ ಸ್ಯಾನ್ಮಹತ್ಫಲಮಿತ್ಯಜಃ ।
ಪ್ರಕಾಶಯಿತುಮೇವೈನಾನ್
ಪ್ರಭಾಸಾಯ ಕುಶಸ್ಥಲಾತ್ ॥ ೩೨.೧೬ ॥
ಅವರು ‘ಶ್ರೀಕೃಷ್ಣ ಸ್ವಲೋಕಕ್ಕೆ
ತೆರಳಬೇಕು’ ಎಂದು ವಿಜ್ಞಾಪನೆ ಮಾಡಿಕೊಂಡರು. ಆ ಕೃಷ್ಣನಾದರೋ ಅವರಿಗೆ ‘ಹಾಗೇ ಆಗಲಿ’ ಎಂದೂ ಹೇಳಿದನು.
ಸಜ್ಜನರ ಬಹುಮತವಿರಲು ಕಲಿಯುಗದ ಅಭಿವೃದ್ಧಿಯು ಆಗಲಾರದು ಎಂದು, ಸರ್ವಸಮರ್ಥನಾದ ಕೃಷ್ಣನು ತನ್ನ ಕುಲದ ಸಂಹಾರಕ್ಕಾಗಿ ಯಾದವರನ್ನು
ಪ್ರಭಾಸಕ್ಕೆ ಕೊಂಡೊಯ್ದನು.
ಪುಣ್ಯಕ್ಷೇತ್ರವಾದರೂ ಕೂಡಾ, ತನ್ನ
ಮನೆಯಾಗಿದ್ದಲ್ಲಿ, ತನ್ನ ಊರಾಗಿದ್ದಲ್ಲಿ, ಅಲ್ಲಿ ಸತ್ತರೆ ಹೆಚ್ಚು
ಪುಣ್ಯಪ್ರಾಪ್ತಿಯಾಗಲಾರದು. ಅದರಿಂದಾಗಿ ಚಿಕ್ಕದಾಗಿದ್ದರೂ ಕೂಡಾ, ಬೇರೆ ಕ್ಷೇತ್ರಕ್ಕೆ ಹೋಗಿ ಸಾಯುವುದು
ಮಹಾಫಲ. ಇದನ್ನು ಎಲ್ಲಾ ಸಜ್ಜನರಿಗೂ ತೋರಿಸಲೆಂದೇ ಶ್ರೀಕೃಷ್ಣ ಯಾದವರೆಲ್ಲರನ್ನು ದ್ವಾರಕೆಯಿಂದ
ಪ್ರಭಾಸಕ್ಕೆ ಕೊಂಡೊಯ್ದುನು.
ನೀತ್ವಾ ದಾನಾದಿಸದ್ಧರ್ಮ್ಮಾಂಸ್ತೈರಕಾರಯದಚ್ಯುತಃ
।
ತೇ ತತಃ ಶಾಪದೋಷೇಣ
ಕೃಷ್ಣೇನೈವ ವಿಮೋಹಿತಾಃ ॥ ೩೨.೧೭ ॥
ಮೈರೇಯಮತ್ತಾ
ಅನ್ಯೋನ್ಯಂ ನಿಪಾತ್ಯ ಸ್ವಾಂ ತನುಂ ಗತಾಃ ।
ತದ್ ದೃಷ್ಟ್ವಾ ಬಲದೇವೋSಪಿ ಯೋಗೇನ ಸ್ವತನುಂ ಯಯೌ ॥ ೩೨.೧೮ ॥
ದಾನ, ಯಜ್ಞ, ಮೊದಲಾದ ಧರ್ಮಗಳನ್ನು ಆ ಯಾದವರ ಕಡೆಯಿಂದ ಶ್ರೀಕೃಷ್ಣನು ಮಾಡಿಸಿದನು. ಅವರು ಶಾಪದೋಷದಿಂದಲೂ, ಕೃಷ್ಣನಿಂದಲೂ ಮೋಹಿತರಾಗಿ, ಕುಡಿತದ ಮತ್ತಿನಲ್ಲಿ ಮೈಮರೆತು ಪರಸ್ಪರವಾಗಿ ಹೊಡೆದುಕೊಂಡು ಒಬ್ಬರನೊಬ್ಬರು ಬೀಳಿಸಿಕೊಂಡು,
ತಮ್ಮ ಅವತಾರದ ಶರೀರವನ್ನು ಕಳಚಿಕೊಂಡು, ಮೂಲಶರೀರವನ್ನು ಹೊಂದಿದರು. ಅದನ್ನು ಕಂಡ ಬಲರಾಮನೂ ಕೂಡಾ
ಧ್ಯಾನಯೋಗದಿಂದ ತನ್ನ ಶರೀರವನ್ನು ಬಿಟ್ಟು, ಮೂಲರೂಪವನ್ನು ಹೊಂದಿದನು.
No comments:
Post a Comment