ಪಾರ್ತ್ಥಾಃ ಪುನಃ ಪ್ರಾಪ್ಯ ಪುರಂ ಸ್ವಕೀಯಂ ಧರ್ಮ್ಮೇಣ ಪೃಥ್ವೀಂ ಪರಿಪಾಲಯನ್ತಃ ।
ಭೋಗಾನರಾಗಾ ಅಜುಷನ್ತ
ಯೋಗ್ಯಾನ್ ಯುಕ್ತಾ ಜಗದ್ಧಾತರಿ ವಾಸುದೇವೇ ॥ ೩೧.೭೧ ॥
ಪಾಂಡವರು ಮತ್ತೆ ತಮ್ಮ
ಪಟ್ಟಣವನ್ನು ಹೊಂದಿ, ಧರ್ಮದಿಂದ ಭೂಮಿಯನ್ನು ಪಾಲನೆಮಾಡುತ್ತಾ, ಜಗದೊಡೆಯನಾದ ಕೃಷ್ಣನಲ್ಲಿ ಧ್ಯಾನ
ಮಾಡುತ್ತಿದ್ದು, ಅವನಲ್ಲಿಯೇ ಮನಸ್ಸನ್ನು ನೆಟ್ಟಿದ್ದು, ಯಾವುದೇ ಸಲ್ಲದ ಬಯಕೆ ಇಲ್ಲದೇ, ಯೋಗ್ಯವಾದ ಭೋಗಳನ್ನು ಅನುಭವಿಸಿದರು.
ವರ್ಷತ್ರಯಾನ್ತೇ
ತ್ಮಸಮಾಹಿತಾಗ್ನಿಂ ತ್ಯಕ್ತಾಗ್ನಿಭಿಸ್ತೈರ್ವನಮಾಲಿಹದ್ಭಿಃ ।
ತೇ ಶುಶ್ರುವುರ್ದ್ಧೃತರಾಷ್ಟ್ರಂ
ಸಭಾರ್ಯ್ಯಂ ಸಹೈವ ಕುನ್ತ್ಯಾ ಪರಿದಗ್ಧದೇಹಮ್ ॥ ೩೧.೭೨ ॥
ಮೂರು ವರ್ಷಗಳಾದ ಮೇಲೆ, ಅಗ್ನಿಹೊತ್ರವನ್ನು ಬಿಟ್ಟ ಧೃತರಾಷ್ಟ್ರನು,
ತನ್ನೆದೆಯಲ್ಲಿ ಔಪಾಸನಾಗ್ನಿಯನ್ನಿಟ್ಟುಕೊಂಡು, ಆ ವನವನ್ನು ಪ್ರವೇಶಮಾಡುತ್ತಾ ಅಗ್ನಿಯನ್ನು
ಆವಾಹಿಸಿಕೊಂಡನು. ಹೀಗೆ ತನ್ನ ಹೆಂಡತಿಯಿಂದ ಕೂಡಿಕೊಂಡ ಧೃತರಾಷ್ಟ್ರನನ್ನು ಕುಂತಿಯು ಜೋತೆಗೂಡಿಯೇ,
ಎಲ್ಲರೂ ತಮ್ಮ ದೇಹವನ್ನು ದಹಿಸಿಕೊಂಡರು ಎನ್ನುವ ಸುದ್ದಿಯನ್ನು ಪಾಂಡವರೆಲ್ಲರು(ಸಂಜಯನಿಂದ)
ಕೇಳಿದರು.
ವ್ರೀಳಾಮುಖಾ ದ್ಧ್ಯಾನಪರಾ
ನಿಶಮ್ಯ ಸ್ವರ್ಯ್ಯಾತಮಾತ್ಮೀಯಪಿತೃವ್ಯಮಾಶು ।
ಸಮೇತ್ಯ ಭರ್ತ್ರಾ
ಪ್ರತಿಪೂಜ್ಯಮಾನಾಂ ಕುನ್ತೀಂ ಚ ತಪ್ತಾ ವಿದಧುಃ ಕ್ರಿಯಾಶ್ಚ ॥ ೩೧.೭೩ ॥
ನಾಚಿಕೆಯಿಂದ ಕೆಳಗೆ
ಮಾಡಲ್ಪಟ್ಟ ಮುಖವುಳ್ಳ, ಧ್ಯಾನದಲ್ಲಿಯೇ
ತೊಡಗಿದ, ಸ್ವರ್ಗಲೋಕವನ್ನು ಹೊಂದಿದ ದೊಡ್ಡಪ್ಪನ ಕುರಿತು ಕೇಳಿ, ಧ್ಯಾನದಲ್ಲಿಯೇ
ಆಸಕ್ತಳಾಗಿ ಗಂಡನಿಂದ ಕೂಡಿಕೊಂಡು ಪೂಜಿಸಲ್ಪಡುತ್ತಿರುವ ತಾಯಿ ಕುಂತಿಯನ್ನು ಕೇಳಿ, ಸಂಕಟಪಟ್ಟು,
ಪಾಂಡವರು, ಔರ್ಧ್ವದೈಹಿಕ ಕರ್ಮಗಳನ್ನು ಮಾಡಿದರು.
ತೇ ವಿಷ್ಣುಭಕ್ತ್ಯಾ
ಪರಿಪೂತಕರ್ಮ್ಮಭಿರ್ಜ್ಞಾನೇನ ಚಾನ್ತೇ ತಮನುಸ್ಮರನ್ತಃ ।
ಪಾರ್ತ್ಥೈಃ ಸುಪುತ್ರೈಃ
ಸುಕೃತೋರ್ಧ್ವಕರ್ಮ್ಮಭಿರ್ವೃದ್ಧಿಂ ಸುಖಸ್ಯಾSಪುರನಪ್ಯಯಾಂ ಶುಭಾಮ್ ॥ ೩೧.೭೪ ॥
ಆ ಮೂವರು (ಕುಂತಿ, ಗಾಂಧಾರಿ, ಧೃತರಾಷ್ಟ್ರರು) ತಮ್ಮ ಅಂತಿಮಕಾಲದಲ್ಲಿ ವಿಷ್ಣುಭಕ್ತಿಯಿಂದ, ಪವಿತ್ರವಾದ
ಕರ್ಮಗಳಿಂದಲೂ, ಜ್ಞಾನದಿಂದಲೂ, ತಮ್ಮ ಮಕ್ಕಳಾದ ಪಾಂಡವರು ಮಾಡಿದ ಔರ್ಧ್ವದೈಹಿಕ ಕರ್ಮಗಳಿಂದಲೂ,
ಒಳ್ಳೆಯ ಲೋಕಕ್ಕೆ ತೆರಳಿ, ಎಣೆಯಿರದ ಮಂಗಳವಾದ ಸುಖದ ಅಭಿವೃದ್ಧಿಯನ್ನು ಹೊಂದಿದರು.
ಗಾವದ್ಗಣಿರ್ವ್ಯಾಸಸಕಾಶಮೇತ್ಯ
ಶುಶ್ರೂಷಯಾ ತಸ್ಯ ಪುನರ್ನ್ನಿಜಾಂ ಗತಿಮ್ ।
ಪ್ರಪೇದಿವಾನ್
ಪಾಣ್ಡುಸುತಾಶ್ಚ ಕೃಷ್ಣಂ ಪ್ರತೀಕ್ಷಮಾಣಾಃ ಪೃಥಿವೀಮಶಾಸನ್ ॥ ೩೧.೭೫ ॥
ಗಾವದ್ಗಣಿ ಸಂಜಯನು ವೇದವ್ಯಾಸರ
ಬಳಿಗೆ ತೆರಳಿ, ವೇದವ್ಯಾಸರ
ಸೇವೆಯಿಂದ ತನಗೆ ಯೋಗ್ಯವಾದ ಲೋಕವನ್ನು ಹೊಂದಿದನು. ಪಾಂಡವರು ಶ್ರೀಕೃಷ್ಣ ಪರಂಧಾಮಕ್ಕೆ
ತೆರಳುವುದನ್ನು ನಿರೀಕ್ಷಿಸುತ್ತಾ, ಭೂಮಿಯನ್ನು ರಕ್ಷಿಸುತ್ತಿದ್ದರು.
ಅಷ್ಟಾದಶಾಬ್ದಾಃ
ಪೃಥಿವೀಂ ಸಮಸ್ತಾಂ ಪ್ರಶಾಸತಾಮೇವಮಗುರ್ಮ್ಮಹಾತ್ಮನಾಮ್ ।
ಅರಿಕ್ತಧರ್ಮ್ಮಾರ್ತ್ಥಸುಖೋತ್ತಮಾನಾಮನುಜ್ಝಿತಾನನ್ತಪದಸ್ಮೃತೀನಾಮ್
॥ ೩೧.೭೬ ॥
ಹೀಗೆ, ಮಹಾತ್ಮರಾಗಿರುವ,
ಧರ್ಮ-ಅರ್ಥ ಮೊದಲಾದವುಗಳನ್ನು ಬಿಡದೇ, ಸುಖದಿಂದ ಉತ್ಕೃಷ್ಟರಾಗಿರುವ, ಪರಮಾತ್ಮನ ಸ್ಮರಣೆಯನ್ನು
ಎಂದೂ ಬಿಡದ, ಇಡೀ ಭೂಮಿಯನ್ನು ಆಳುತ್ತಿರುವ ಪಾಂಡವರ ಕಾಲದಲ್ಲಿ ಹದಿನೆಂಟು ವರ್ಷಗಳು
ಕಳೆದುಹೋದವು.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಧೃತರಾಷ್ಟ್ರಾದಿಸ್ವರ್ಗ್ಗಪ್ರಾಪ್ತಿರ್ನ್ನಾಮ ಏಕತ್ರಿಂಶೋSಧ್ಯಾಯಃ ॥
[ ಆದಿತಃ ಶ್ಲೋಕಾಃ ೪೯೨೪ + ೭೬=೫೦೦೦ ]
No comments:
Post a Comment