ಇತೀರಿತೇsಪ್ಯತೃಪ್ತವತ್ ಸ್ಥಿತೇ ತು ಬಾರ್ಹದ್ರಥೇ ।
ಜಗಾಮ
ಸೌಭಮಾಸ್ಥಿತಃ ಸ ಸೌಭರಾಟ್ ಚ ಯಾವನಮ್ ॥೧೭.೧೦೧॥
ಸಾಲ್ವ ಇಷ್ಟೆಲ್ಲಾ ಹೇಳಿದರೂ ಕೂಡಾ, ಜರಾಸಂಧ ಮಾತ್ರ
ಕಸಿವಿಸಿಯಲ್ಲಿಯೇ(ಅತೃಪ್ತನಾಗಿಯೇ) ಇದ್ದ. ಹೀಗಿರುವಾಗ ಸಾಲ್ವನು ತನ್ನ ಸೌಭ ವಿಮಾನವನ್ನೇರಿ
ಕಾಲಯವನನ ದೇಶದತ್ತ ತೆರಳಿದ.
ಸ ಕಾಲಯಾವನೋsಥ ತಂ ಜರಾಸುತಾನ್ತಿಕಾಗತಮ್ ।
ನಿಶಮ್ಯ ಭಕ್ತಿಪೂರ್ವಕಂ
ಪ್ರಣಮ್ಯ ಚಾsರ್ಚ್ಚಯದ್ ದೃತಮ್ ॥೧೭.೧೦೨॥
ಆ ಕಾಲಯವನನು, ‘ಸಾಲ್ವ ಜರಾಸಂಧನ ಕಡೆಯಿಂದ ಬಂದಿದ್ದಾನೆ’ ಎಂದು ತಿಳಿದೊಡನೇ, ಭಕ್ತಿಯಿಂದ ನಮಸ್ಕರಿಸಿ
ಸತ್ಕರಿಸಿದನು.
ಜರಾಸುತೋ ಹಿ
ದೈವತಂ ಸಮಸ್ತಕೇಶವದ್ವಿಷಾಮ್ ।
ಇತಿ ಪ್ರಣಮ್ಯ
ತಾಂ ದಿಶಂ ತದೀಯಮಾಶ್ವಪೂಜಯತ್ ॥೧೭.೧೦೩॥
‘ಜರಾಸಂಧನಲ್ಲವೇ ಎಲ್ಲಾ ಕೇಶವ
ದ್ವೇಷಿಗಳಿಗೆ ದೇವತೆಯಂತೆ ಇರುವವನು’ ಎಂದು ಹೇಳಿದ ಕಾಲಯವನ, ಜರಾಸಂಧನಿರುವ ದಿಕ್ಕಿಗೆ
ನಮಸ್ಕರಿಸಿ, ಸಾಲ್ವನಿಗೆ ಗೌರವ ನೀಡಿದನು.
ತದೀರಿತಂ
ನಿಶಮ್ಯ ಚ ದ್ರುತಂ ತ್ರಿಕೋಟಿಸಙ್ಖ್ಯಯಾ ।
ಅಕ್ಷೋಹಿಣೀಕಯಾ
ಯುತಃ ಸ್ವಸೇನಯಾ ನಿರಾಕ್ರಮತ್ ॥೧೭.೧೦೪॥
ಸಾಲ್ವನ ಸಂದೇಶವನ್ನು ಕೇಳಿದ ಕಾಲಯವನ, ಮೂರುಕೋಟಿ ಬಲವುಳ್ಳ, ಅಕ್ಷೋಹಿಣೀನಾಮಕವಾದ ತನ್ನ ಸೇನೆಯೊಂದಿಗೆ ಕೂಡಲೇ ಅಲ್ಲಿಂದ ಹೊರಟನು.
ತದಶ್ವಮೂತ್ರವಿಷ್ಠಯಾ
ಬಭೂವ ನಾಮತಃ ಶಕೃತ್ ।
ನದೀ
ಸುವೇಗಗಾಮಿನೀ ಕಲೌ ಚ ಯಾ ವಹೇದ್ ದ್ರುತಮ್ ॥೧೭.೧೦೫॥
ಕಾಲಯವನನ ಸೇನೆಯಲ್ಲಿರುವ ಅಶ್ವಗಳ ಮಲ-ಮೂತ್ರದಿಂದ ‘ಶಕೃತ್’ ಎಂಬ ಹೆಸರಿನ ನದಿಯೇ
ಹರಿಯಲಾರಂಭಿಸಿತು. ಯಾವ ನದಿ ಕಲಿಯುಗದಲ್ಲಿ ವೇಗವಾಗಿ
ಹರಿಯುತ್ತದೋ ಅಂತಹ ನದಿ.
ಪುನಃಪುನರ್ನ್ನದೀಭವಂ
ನಿಶಾಮ್ಯ ದೇಶಸಙ್ಕ್ಷಯಮ್ ।
ತದನ್ಯದೇಶಮೂತ್ರಿತಂ
ವ್ಯಶೋಷಯದ್ಧಿ ಮಾರುತಃ ॥೧೭.೧೦೬॥
ಆಗ ಶಕೃತ್ ನದಿಯಿಂದ ಉಂಟಾಗತಕ್ಕಂತಹ ಪರಿಸರ ಹಾಗು ದೇಶನಾಶವನ್ನು ನೋಡಿ, ಮಾರುತನು ಆ
ನದಿಯನ್ನು ಬತ್ತಿಸಿಬಿಟ್ಟ.
[ಭಾಗವತದಲ್ಲಿ(೧೦.೫೩.೨೮) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ನಾರದಪ್ರೇಷಿತೋ
ವೀರೋ ಯಾವನಃ ಪ್ರತ್ಯದೃಶ್ಯತ । ರುರೋಧ ಮಧುರಾಮೇತ್ಯ ತಿಸೃುಭಿರ್ಮ್ಲೇಚ್ಛಕೋಟಿಭಿಃ’
ಹರಿವಂಶದಲ್ಲೂ ಈ ಕುರಿತಾದ ವಿವರಣೆ ಇದೆ: ’ ಸಮೃದ್ಧೋ ಹಿ ಯದಾ ರಾಜಾ ಯವನಾನಾಂ ಮಹಾಬಲಃ ।
ತತ ಏನಂ ನೃಪಾ ಮ್ಲೇಚ್ಛಾಃ ಸಂಶ್ರಿತ್ಯಾನುಯಯುಸ್ತದಾ
। [ಮ್ಲೇಚ್ಛ ರಾಜರೆಲ್ಲರೂ (ಶಕರು, ಹೂಣರು, ಆಂದ್ರರು,
ಪುಳಿನ್ದರು, ಪುಲ್ಕಸರು, ಇತ್ಯಾದಿ) ಯವನನ ಹಿಂಬಾಲಕರಾಗಿ ಬಂದರು]. ಶಕಾಸ್ತುಷಾರಾ ದರದಾ ಪಾರದಾಃ ಶೃುಙ್ಖಲಾಃ ಖಶಾಃ । ಪಲ್ಲವಾಃ ಶತಶಶ್ಚಾನ್ಯೇ ಮ್ಲೇಚ್ಛಾ ಹೈಮವತಾಸ್ತಥಾ’ (ವಿಷ್ಣುಪರ್ವಣಿ ೫೭.೧೯-೨೦)....
ಮೂತ್ರೇಣ ಶಕೃತಾ ಚೈವ ಸೈನ್ಯೇನ ಸಸೃಜೇ ನದೀಮ್ । ಅಶ್ವಷ್ಟ್ರಶಕೃತಾಂ ರಾಶೇರ್ನಿಃಸೃತೇತಿ ಜನಾಧಿಪ
। ತತೋsಶ್ವಶಕೃದಿತ್ಯೇವ ನಾಮ ನದ್ಯಾ ಬಭೂವ ಹ’ (ವಿಷ್ಣುಪರ್ವಣಿ ೫೭.೨೩-೨೪)]
No comments:
Post a Comment