ಹರಿಶ್ಚ
ವೈನತೇಯಯುಗ್ ವಿಚಾರ್ಯ್ಯ ರಾಮಸಂಯುತಃ ।
ಸದಾsತಿಪೂರ್ಣ್ಣಸಂವಿದಪ್ಯಜೋsಥ ಲೀಲಯಾsಸ್ಮರತ್ ॥೧೭.೧೦೭॥
ಸಂಪೂರ್ಣಪ್ರಜ್ಞೆಯುಳ್ಳವನಾದರೂ, ಬಲರಾಮನಿಂದ ಕೂಡಿದ ಶ್ರೀಹರಿಯು ಗರುಡನೊಂದಿಗೆ ಕೂಡಿಕೊಂಡು, ಲೀಲಾವಿಲಾಸದಿಂದ ಚಿಂತನೆ ಮಾಡಿದನು.
ಯುಯುತ್ಸುರೇಷ
ಯಾವನಃ ಸಮೀಪಮಾಗತೋsದ್ಯ ನಃ ।
ಯುಯುತ್ಸತಾಮನೇನ
ನೋ ಜರಾಸುತೋsಭಿಯಾಸ್ಯತಿ ॥೧೭.೧೦೮॥
‘ಕಾಲಯವನನು ಯುದ್ಧಮಾಡಬೇಕೆಂದು ನಮ್ಮ
ಸಮೀಪಕ್ಕೆ ಬಂದಿದ್ದಾನೆ. ಯುದ್ಧಮಾಡುವ ಅವನ ಜೊತೆಗೆ ಸೇರಿ ಜರಾಸಂಧನು ಇನ್ನೊಂದು ದಿಕ್ಕಿನಿಂದ
ಬರುತ್ತಿದ್ದಾನೆ.
ಸ ಯಾದವಾನ್
ಹನಿಷ್ಯತಿ ಪ್ರಭಙ್ಗತಸ್ತು ಕೋಪಿತಃ ।
ಪುರಾ ಜಯಾಶಯಾ
ಹಿ ನೌ ಯದೂನ್ ನ ಜಘ್ನಿವಾನಸೌ ॥೧೭.೧೦೯॥
ಅನೇಕ ಸಲ ಸೋತು, ಮುನಿದವನಾದ ಜರಾಸಂಧ ಈ ಬಾರಿ ಯಾದವರನ್ನು ಕೊಲ್ಲುತ್ತಾನೆ. ಹಿಂದೆ ಕೇವಲ
ನಮ್ಮನ್ನು ಗೆಲ್ಲಬೇಕು ಎಂಬ ಬಯಕೆಯಿಂದ ಆತ ಯಾದವರನ್ನು ಕೊಂದಿರಲಿಲ್ಲ.
ನಿರಾಶಕೋsದ್ಯ ಯಾದವಾನಪಿ ಸ್ಮ ಪೀಡಯಿಷ್ಯತಿ ।
ಅತಃ ಸಮುದ್ರಮದ್ಧ್ಯಗಾಪುರೀವಿಧಾನಮದ್ಯ
ಮೇ ॥೧೭.೧೧೦॥
ಈರೀತಿ ಹತಾಶನಾದ ಅವನು ಯಾದವರನ್ನು ಪೀಡಿಸುತ್ತಾನೆ. ಆದ್ದರಿಂದ ಸಮುದ್ರ ಮದ್ಯದಲ್ಲಿ ಪಟ್ಟಣವೊಂದನ್ನು
ನಿರ್ಮಾಣ ಮಾಡಬೇಕೆಂದು ನನಗನಿಸುತ್ತಿದೆ.
ಪ್ರರೋಚತೇ
ನಿಧಾನಮಪ್ಯಮುತ್ರ ಸರ್ವಸಾತ್ತ್ವತಾಮ್ ।
ಉದೀರ್ಯ
ಚೈವಮೀಶ್ವರೋsಸ್ಮರತ್ ಸುರೇಶವರ್ದ್ಧಕಿಮ್ ॥೧೭.೧೧೧॥
ಆ ಪಟ್ಟಣವನ್ನೇ ಎಲ್ಲಾ ಯಾದವರ ಆವಾಸ ಸ್ಥಾನವನ್ನಾಗಿ
ಮಾಡಬೇಕು’ ಎಂದು ಹೇಳಿದ ಪರಮಾತ್ಮ
ವಿಶ್ವಕರ್ಮನನ್ನು ಸ್ಮರಣೆ ಮಾಡಿದ.
No comments:
Post a Comment