ಅತೋ ನ ದೇಯಮಸ್ಯ
ನಃ ಸುಭೂಭುಜಾಂ ಸಮಾಗಮೇ ।
ಕ್ವಚಿತ್
ಕದಾಚಿದಾಸನಂ ನಚಾರ್ಘ್ಯಪೂರ್ವಕೋ ವಿಧಿಃ ॥೧೭.೨೭॥
ಸ್ವಯಮ್ಬರಕ್ಕೆ ಶ್ರೀಕೃಷ್ಣನ ಸಂಗಮವಾಗದಂತೆ
ಮಾಡಲು, ದೊಡ್ಡದೊಡ್ಡ ರಾಜರೆಲ್ಲ ಬರುತ್ತಿರಲು, ಇವನಿಗೆ ಮಾತ್ರ ಯಾವಾಗಲೂ ಯಾವ ಆಸನವನ್ನೂ ಕೊಡಬಾರದು. ಅರ್ಘ್ಯವನ್ನೇ
ಕೊಡಬಾರದು.
ನಚಾsಸ್ಯತಿ ಕ್ಷಿತೌ ಕ್ವಚಿದ್ ವಿಮಾನಿತಃ ಪುರೋ ಹಿ ನಃ ।
ವರಾಸನಸ್ಥಭೂಭುಜಾಂ
ಸ ಮಾನಿತೋ ಹಿ ದೈವತೈಃ ॥೧೭.೨೮॥
ಸ
ದರ್ಪಮಾನಸಂಯುತಃ ಕ್ರುಧಾ ಪ್ರಯಾಸ್ಯತಿ ಧ್ರುವಮ್ ।
ಪುರೀಂ
ಸ್ವಕಾಂ ತತೋ ವಯಂ ವಿಧೇಮ ಚ ಸ್ವಯಮ್ಬರಮ್ ॥೧೭.೨೯॥
ನಮ್ಮ ಎದುರುಗಡೆ ಅವಮಾನಕ್ಕೊಳಗಾಗಿ ಆತ ನೆಲದಲ್ಲಿ ಕೂಡುವುದಿಲ್ಲ. ಅವನು ದೇವತೆಗಳಿಂದಲೂ ಕೂಡಾ ಗೌರವಿಸಲ್ಪಟ್ಟವನಷ್ಟೇ. ಹೀಗಿರುವಾಗ ದೊಡ್ಡ ದೊಡ್ಡ ಆಸನದಲ್ಲಿ ಕುಳಿತಿರುವ ನಮ್ಮ ಎದುರುಗಡೆ ದರ್ಪ ಹಾಗೂ ಮಾನದಿಂದ ಕೂಡಿರುವ ಅವನು ಸಿಟ್ಟಿನಿಂದ ಖಂಡಿತವಾಗಿಯೂ ತನ್ನ ಪಟ್ಟಣಕ್ಕೆ ಹೊರಟು
ಹೋಗುತ್ತಾನೆ. ಹೀಗೆ ನಾವು ಅವನು ಹೋದ ಮೇಲೆ ಸ್ವಯಮ್ಬರ ಮಾಡೋಣ.
ಇತಿ ಸ್ಮ
ಸರ್ವಭೂಭೃತಾಂ ವಿನಿಶ್ಚಯಂ ಸಕೈಶಿಕಃ ।
ಕ್ರಥೋsವಗಮ್ಯ ಭೀಷ್ಮಕಾನುಜೋsಭ್ಯಯಾದ್ಧರಿಂ
ಧ್ರುತಮ್ ॥೧೭.೩೦॥
ಈರೀತಿಯಾದ ಎಲ್ಲಾ ರಾಜರ ವಿನಿಶ್ಚಯವನ್ನು ಭೀಷ್ಮಕನ ತಮ್ಮನಾದ, ಕೈಶಿಕನಿಂದ ಒಡಗೂಡಿದ ಕೃಥನು ತಿಳಿದು, ಶೀಘ್ರವಾಗಿ ಕುಣ್ಡಿನ ಪಟ್ಟಣದ ಹೊರಭಾಗದಲ್ಲಿರುವ ಶ್ರೀಕೃಷ್ಣನಿದ್ದಲ್ಲಿಗೆ
ತೆರಳಿದನು.
ಪ್ರಣಮ್ಯ
ಪಾದಪದ್ಮಯೋರ್ನ್ನಿಜಂ ಗೃಹಂ ಪ್ರವೇಶ್ಯ ಚ ।
ಮಹಾಸನಂ
ಪ್ರದಾಯ ತೌ ಪ್ರಚಕ್ರತುರ್ವರಾರ್ಚ್ಚನಮ್ ॥೧೭.೩೧॥
ಅವರು (ಕೃಥ ಹಾಗು ಕೈಶಿಕರು) ಶ್ರೀಕೃಷ್ಣನ ಪಾದಕಮಲಗಳಿಗೆ ನಮಸ್ಕರಿಸಿ, ಅವನನ್ನು ತಮ್ಮ
ಮನೆಗೆ ಕರೆದುಕೊಂಡು ಹೋಗಿ, ಉತ್ಕೃಷ್ಟವಾದ ಆಸನವನ್ನಿತ್ತು ಶ್ರೇಷ್ಠವಾದ
ಪೂಜೆಯನ್ನುಮಾಡಿದರು.
No comments:
Post a Comment