ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 16, 2023

Mahabharata Tatparya Nirnaya Kannada 30-117-124

 

ಯಜ್ಞಾರ್ತ್ಥಂ ತಾವಥಾSಹೂಯ ಪೂಜಿತಃ ಪ್ರಯಯೌ ತತಃ ।

ದ್ವಾರಕಾಯಾಃ ಸಮೀಪಸ್ಥಂ ಪ್ರದ್ಯುಮ್ನಾದ್ಯಾಃ ಸುತಾ ಹರೇಃ ॥ ೩೦.೧೧೭ ॥

 

ಪ್ರಸಹ್ಯಾಶ್ವಮಪಾಜಹ್ರುರಾಹ್ವಯನ್ತೋSರ್ಜ್ಜುನಂ ಯುಧೇ ।

ಸುಭದ್ರಾಹರಣಂ ಮಾರ್ಷ್ಟುಂ ನೀತೇSಶ್ವೇ ತೈರ್ದ್ಧನಞ್ಜಯಃ ॥ ೩೦.೧೧೮ ॥

 

ಗೌರವಾದ್ ವಾಸುದೇವಸ್ಯ ಮಾತುಲಸ್ಯ ಚ ಕೇವಲಮ್ ।

ಮಾತುಲಾಯಬ್ರವೀದಶ್ವಂ ಹೃತಂ ಪೌತ್ರೈರಬನ್ಧುವತ್ ॥ ೩೦.೧೧೯ ॥

 

ಅರ್ಜುನನು ಚಿತ್ರಾಂಗದೆ ಮತ್ತು ಬಭ್ರುವಾಹನನನ್ನು ಯಾಗಕ್ಕೆ ಆಹ್ವಾನಿಸಿ, ಅವರಿಂದ ಸತ್ಕೃತನಾಗಿ ಮುನ್ನೆಡೆದ. ಅರ್ಜುನ ದ್ವಾರಕೆಯ ಸಮೀಪದಲ್ಲಿರುವಾಗ, ಅವನನ್ನು ಕಡೆಗಣಿಸಿ(ಆಕ್ರಮಿಸಿ), ಪ್ರದ್ಯುಮ್ನನೇ ಮೊದಲಾದ ಶ್ರೀಕೃಷ್ಣನ ಮಕ್ಕಳು, ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸುತ್ತಾ, ಕುದುರೆಯನ್ನು ಅಪಹರಿಸಿಕೊಂಡು ಹೋದರು. (ಏಕೆ ಹೀಗೆ ಮಾಡಿದರು ಎಂದರೆ-) ಹಿಂದೆ ಅರ್ಜುನ ಸುಭದ್ರೆಯನ್ನು ಅಪಹರಿಸಿದ್ದಾಗ ಬಂದ ಅಪಕೀರ್ತಿ ಪರಿಹಾರಕ್ಕಾಗಿ ಅವರು ಈರೀತಿ ಮಾಡಿ, ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿದರು. ಹೀಗೆ ಅವರಿಂದ ಕುದುರೆಯು ಅಪಹರಿಸಲ್ಪಡಲು, ಅರ್ಜುನನು ಶ್ರೀಕೃಷ್ಣ ಹಾಗೂ ಮಾವನ(ವಸುದೇವನ) ಮೇಲಿನ ಗೌರವದಿಂದ, ಮಾವನಿಗೆ ದೂರುಕೊಟ್ಟ. ‘ನಿನ್ನ ಮೊಮ್ಮಕ್ಕಳು ಶತ್ರುವಿನ ಕುದುರೆಯನ್ನು ಅಪಹರಿಸುವಂತೆ ನಮ್ಮ  ಯಾಗದ ಕುದುರೆಯನ್ನು ಅಪಹರಿಸಿದ್ದಾರೆ’ ಎಂದು ಹೇಳಿದ.

 

ಸ ನಿರ್ಭತ್ಸ್ಯ ಕುಮಾರಾಂಸ್ತಾನ್ ಮೇದ್ಧ್ಯಮಶ್ವಮಮೋಚಯತ್ ।

ಮಾತುಲಂ ಸ ಪ್ರಣಮ್ಯಾಥ ಯಜ್ಞಾರ್ತ್ಥಂ ತಾನ್ ನಿಮನ್ತ್ರ್ಯ ಚ ॥ ೩೦.೧೨೦ ॥

 

ಗಚ್ಛನ್ ಗಜಾಹ್ವಯಂ ದೂತಮಗ್ರತೋSಯಾಪಯನ್ನೃಪೇ ।

ಸಕೃಷ್ಣಃ ಸಹಸೋದರ್ಯ್ಯಃ ಶ್ರುತ್ವಾSಸೌ ಪ್ರಾಪ್ತಮರ್ಜ್ಜುನಮ್ । ॥ ೩೦.೧೨೧ ॥

 

ಪ್ರೀತೋ ಬಾಷ್ಪಾಭಿಪೂರ್ಣ್ಣಾಕ್ಷೋ ಭ್ರಾತೃಸ್ನೇಹಾದಭಾಷತ ।

ವಾಸುದೇವ ನ ಪಶ್ಯಾಮಿ ದುರ್ಲ್ಲಕ್ಷಣಮಜಾರ್ಜ್ಜುನೇ ॥ ೩೦.೧೨೨ ॥

 

ಕೇನ ದುರ್ಲ್ಲಕ್ಷಣೇನಾಯಂ ಬಹುದುಃಖಿ ಪ್ರವಾಸಗಃ ।

ಪೃಷ್ಟಸ್ತಂ ಕೇಶವಃ ಪ್ರಾಹ ಭ್ರಾತಾ ತೇ ದೀರ್ಘಪಿಣ್ಡಿಕಃ  ॥ ೩೦.೧೨೩ ॥

 

ತೇನಾಯಂ ದುಃಖಬಹುಲ ಇತ್ಯುಕ್ತ್ವಾ ಪುನರೇವ ಚ ।

ವದನ್ತಮೇವ ಪಾಞ್ಚಾಲೀ ಕಟಾಕ್ಷೇಣ ನ್ಯವಾರಯತ್ ॥ ೩೦.೧೨೪ ॥

 

ವಸುದೇವನು ಆ ಪ್ರದ್ಯುಮ್ನಾದಿಗಳನ್ನು ಬೈದು, ಅಶ್ವಮೇಧದ ಕುದುರೆಯನ್ನು ಬಿಡುಗಡೆ ಮಾಡಿದ. ಅರ್ಜುನನು ವಸುದೇವನನ್ನು ನಮಸ್ಕರಿಸಿ, ನೀವೆಲ್ಲರೂ ಯಜ್ಞಕ್ಕೆ ಬಂದು, ಚೆಂದಗಾಣಿಸಿ ಕೊಡಬೇಕು ಎಂದು ಆಹ್ವಾನಮಾಡಿ, ಹಸ್ತಿನಾವತಿಗೆ ತೆರಳುತ್ತಾ, ಮೊದಲು ಧರ್ಮರಾಜನಲ್ಲಿಗೆ ಧೂತನನ್ನು ಕಳುಹಿಸಿದ. ತನ್ನ ತಮ್ಮಂದಿರಿಂದ,  ಶ್ರೀಕೃಷ್ಣನಿಂದ ಕೂಡಿಕೊಂಡ ಧರ್ಮರಾಜನು ಅರ್ಜುನ ಬಂದ ವಿಷಯವನ್ನು ಕೇಳಿ, ಅವನಮೇಲಿನ ಪ್ರೀತಿಯಿಂದ ಆನಂದಭಾಷ್ಪವುಳ್ಳವನಾಗಿ, ಪ್ರೀತಿಯಿಂದ ಶ್ರೀಕೃಷ್ಣನನ್ನು ಕುರಿತು ಹೀಗೆ ನುಡಿದ- ‘ವಾಸುದೇವಾ, ಅರ್ಜುನನಲ್ಲಿ ಯಾವ ದುರ್ಲಕ್ಷಣವನ್ನೂ ನಾವು ಕಾಣುವುದಿಲ್ಲ. ಆದರೆ ಯಾವ ದುರ್ಲಕ್ಷಣದಿಂದಾಗಿ ಈ ಅರ್ಜುನನು ಯಾವಾಗಲೂ ಪ್ರವಾಸದಲ್ಲಿದ್ದವನಾಗಿ, ದುಃಖಿಯಾಗಿರುತ್ತಾನೆ?  ಈರೀತಿಯಾಗಿ ಕೇಳಲ್ಪಟ್ಟ ಕೇಶವನು ‘ನಿನ್ನ ತಮ್ಮನಾದ ಅರ್ಜುನನ ಕಾಲಿನ ಹಿಂಭಾಗ ಧೀರ್ಘವಾಗಿದೆ. ಅದರಿಂದ ಇವನು ಬಹಳ ದುಃಖವುಳ್ಳವನಾಗಿದ್ದಾನೆ’ ಎಂದು ಹೇಳಿದನು. ಮತ್ತೆ ಇನ್ನಷ್ಟು ದುರ್ಲಕ್ಷಣವನ್ನು ಹೇಳಲಿಚ್ಛಿಸುತ್ತಿರುವ ಅವನನ್ನು ದ್ರೌಪದಿಯು ಕಡೆಗಣ್ಣಿನಿಂದ(ಸಂಜ್ಞೆಯಿಂದ) ಹೇಳಬೇಡವೆಂದು ತಡೆದಳು.

No comments:

Post a Comment