ಅಥಾsಮ್ಬಿಕೇಯಂ ವಿಷಯೇಷು ಸಕ್ತಂ
ದುಸ್ಸಙ್ಗದುಷ್ಟಂ ಕೃತಭೂರಿದೋಷಮ್ ।
ಸಮಸ್ತ
ರಾಜಾಪ್ಯಯಹೇತುಭೂತಂ ನಿಚಾಯ್ಯ ತಂ ಮಾರುತಿರನ್ವಕಮ್ಪತ ॥ ೩೧.೦೬ ॥
ತದನಂತರ ಶಕುನಿ ಮೊದಲಾದ
ದುಷ್ಟರಿಂದ ಕೂಡಿ ಕೆಟ್ಟುಹೋದ, ಬಹಳ
ದೋಷವನ್ನು ಮಾಡಿರುವ, ಎಲ್ಲಾ ರಾಜರ ನಾಶಕ್ಕೆ ಮೂಲ ಕಾರಣನಾಗಿರುವ, ಇನ್ನೂ ಭೋಗದಲ್ಲಿಯೇ ಆಸಕ್ತನಾದ
ಧೃತರಾಷ್ಟ್ರನನ್ನು ಕಂಡು ಭೀಮಸೇನನು ಅವನ ಮೇಲೆ ಅನುಕಂಪ ತೋರಿದನು.
ಅಕುರ್ವತಸ್ತೀಕ್ಷ್ಣತಪಃ ಕುತಶ್ಚಿನ್ನೈವಾಸ್ಯ ಲೋಕಾಪ್ತಿರಮುಷ್ಯ ಭೂಯಾತ್ ।
ರಾಗಾಧಿಕೋSಯಂ ನ ತಪಶ್ಚ ಕುರ್ಯ್ಯಾದಿತ್ಯಸ್ಯ
ವೈರಾಗ್ಯಕರಾಣಿ ಚಕ್ರೇ ॥ ೩೧.೦೭ ॥
ತೀಕ್ಷ್ಣವಾಗಿರುವ
ತಪಸ್ಸನ್ನು ಮಾಡದಿರುವ ಧೃತರಾಷ್ಟ್ರನಿಗೆ ತನ್ನ ಲೋಕ ಪ್ರಾಪ್ತಿಯಾಗಲಾರದು. ಅತ್ಯಂತವಾಗಿ ವಿಷಯಾಸಕ್ತನಾಗಿರುವ ಇವನು, ತಪಸ್ಸನ್ನು ಮಾಡಲಾರ ಎಂದು ತಿಳಿದ
ಭೀಮಸೇನನು, ಧೃತರಾಷ್ಟ್ರನಿಗೆ ವೈರಾಗ್ಯ
ಹುಟ್ಟಿಸುವ ಕರ್ಮಗಳನ್ನು ಮಾಡಿದನು.
ಆಜ್ಞಾಂ ಪರೈರಸ್ಯ
ನಿಹನ್ತಿ ಸೋದರೈರ್ವಧೂಜನೈರಪ್ಯತಿಪೂಜಿತೇSಸ್ಮಿನ್ ।
ಸ
ನಿಷ್ಟನತ್ಯೇವಮಪೀತರೈಃ ಸ ಸುಪೂಜಿತೋ ನಾSಸ ತದಾ ವಿರಾಗಃ ॥ ೩೧.೦೮ ॥
ಸಹೋದರರಿಂದಲೂ,
ಸೊಸೆಯರಿಂದಲೂ ಅತ್ಯಂತ ಪೂಜಿತನಾದರೂ, ಭೀಮಸೇನ ಧೃತರಾಷ್ಟ್ರನ ಆದೇಶಗಳನ್ನು ಬೇರೊಬ್ಬರ ಮುಖಾಂತರ
ಉಲ್ಲಂಘಿಸುವಂತೆ ಮಾಡುತ್ತಿದ್ದನು. ತಾನೂ ಕೂಡಾ (ತಿರಸ್ಕಾರ ಸೂಚಿಸುವ ನಿಷ್ಠುರ ಮಾತುಗಳಿಂದ) ಅದನ್ನೇ
ಮಾಡುತ್ತಿದ್ದನು. ಇಷ್ಟಾದರೂ ಕೂಡಾ, ಬೇರೊಬ್ಬರಿಂದ
ಪೂಜಿಸಲ್ಪಟ್ಟವನಾದ ಧೃತರಾಷ್ಟ್ರನಿಗೆ ವೈರಾಗ್ಯ ಬರುತ್ತಿರಲಿಲ್ಲ.
ಸರ್ವೇ ಹಿ ಪಾರ್ತ್ಥಸ್ತಮೃತೇ
ಸಭಾರ್ಯ್ಯಾ ವೈಚಿತ್ರವೀರ್ಯ್ಯಂ ಪರಮಾದರೇಣ ।
ಪರ್ಯ್ಯೇವ ಚಕ್ರುಃ ಸತತಂ
ಸಭಾರ್ಯ್ಯಂ ಕೃಷ್ಣಾ ಚ ನ ಸ್ಯಾತ್ ತನಯಾರ್ತ್ತಿಮಾನಿತಿ ॥ ೩೧.೦೯ ॥
ಭೀಮಸೇನನನ್ನು ಬಿಟ್ಟು,
ಹೆಂಡಂದಿರಿಂದ ಒಡಗೂಡಿದ ಎಲ್ಲಾ ಪಾಂಡವರು ಗಾಂಧಾರಿಯಿಂದ ಕೂಡಿದ ಧೃತರಾಷ್ಟ್ರನನ್ನು ಪರಮ
ಗೌರವದಿಂದ ಕಾಣುತ್ತಿದ್ದರು(ಪೂಜಿಸುತ್ತಿದ್ದರು). ದ್ರೌಪದಿಯೂ ಕೂಡಾ, ಮಕ್ಕಳನ್ನು ಕಳೆದುಕೊಂಡ
ಸಂಕಟ ಅವನಿಗೆ ಇರಬಾರದು ಎಂದು ಅವನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.
ಸ ಪ್ರೀಯಮಾಣೋ ನಿತರಾಂ
ಚ ತೇಷು ನೈವಾಧಿಕಂ ಪ್ರೀಯತೇ ಭೀಮಸೇನೇ ।
ಸ್ಮರನ್ ಸುತಾಂಸ್ತೇನ
ಹತಾನ್ ಸಮಸ್ತಾನಪಿ ಪ್ರಭಾವಂ ಪರಮಸ್ಯ ಜಾನನ್ ॥ ೩೧.೧೦ ॥
ಧೃತರಾಷ್ಟ್ರನು
ಪಾಂಡವರಲ್ಲಿ ಪರಮ ಪ್ರೀತಿಯನ್ನಿಟ್ಟಿದ್ದರೂ ಕೂಡಾ,
ಸತ್ತುಹೋದ ತನ್ನ ಮಕ್ಕಳನ್ನು ಸ್ಮರಣೆ ಮಾಡುತ್ತಾ,
ಶ್ರೀಕೃಷ್ಣನ ಪ್ರಭಾವವನ್ನು ತಿಳಿದವನಾದರೂ ಕೂಡಾ, ಭೀಮಸೇನನಿಂದ ತನ್ನ ಮಕ್ಕಳು ಸತ್ತರು ಎಂದು ಅವನಲ್ಲಿ
ಪ್ರೀತಿಯನ್ನು ಹೊಂದಿರಲಿಲ್ಲ.
No comments:
Post a Comment