ಸಮಸ್ತಲಕ್ಷಣಾಭಿಜ್ಞಾಃ ಕೃಷ್ಣಃ ಸತ್ಯಾ ವೃಕೋದರಃ ।
ಕೃಷ್ಣಾ ಚ ಪಞ್ಚಮೋ
ನಾಸ್ತಿ ವಿದ್ಯಾ ಶುದ್ಧೇಯಮಞ್ಜಸಾ ॥ ೩೦.೧೨೫ ॥
ಪರಮಾತ್ಮ(ಶ್ರೀಕೃಷ್ಣ,), ಲಕ್ಷ್ಮೀದೇವಿ(ಸತ್ಯಭಾಮೆ), ಮುಖ್ಯಪ್ರಾಣ(ಭೀಮಸೇನ), ಭಾರತೀದೇವಿ(ದ್ರೌಪದಿ) ಇವರು ಮಾತ್ರ
ಎಲ್ಲಾ ಲಕ್ಷಣಗಳನ್ನು ಸಮಸ್ತವಾಗಿ ಅರಿತವರು. ಇವರಲ್ಲದೇ ಇನ್ನು ಐದನೆಯವರು ಇಲ್ಲವೇ ಇಲ್ಲ. ಈ
ವಿದ್ಯೆಯು ಅತ್ಯಂತ ಪವಿತ್ರವಾದದ್ದು. ಅದು ಯಾರಿಗೂ ತಿಳಿಯುವುದಿಲ್ಲ.
ಪ್ರಸಙ್ಗಾತ್
ಪ್ರಾಪ್ತುಮಿಚ್ಛೇತ್ ತಾಂ ವಿದ್ಯಾಶೀಲೋ ಯುಧಿಷ್ಠಿರಃ ।
ಇತಿ ಲೋಭಾತ್ ತು
ಪಾಞ್ಚಾಲೀ ವಾಸುದೇವಂ ನ್ಯವಾರಯತ್ ॥ ೩೦.೧೨೬ ॥
ವಿದ್ಯೆಯನ್ನು
ತಿಳಿಯಬೇಕು ಎನ್ನುವ ಬಯಕೆಯಿಂದ ವಿದ್ಯಾಗ್ರಹಣ ಸ್ವಭಾವವುಳ್ಳ ಯುಧಿಷ್ಠಿರನು ಈ ಪ್ರಸಂಗಲ್ಲಿ
ಆ ವಿಶಿಷ್ಟ ವಿದ್ಯೆಯನ್ನು ಹೊಂದಲು ಬಯಸುತ್ತಿರಬಹುದು ಎನ್ನುವ ಲೋಭಾತಿಶಯದಿಂದ ದ್ರೌಪದಿಯು ಶ್ರೀಕೃಷ್ಣನನ್ನು
ತಡೆದಳು.
ತದ್ಗೌರವಾದ್ ವಾಸುದೇವೋ
ನೋತ್ತರಂ ಪ್ರತ್ಯಭಾಷತ ।
ವಿಸ್ಮಾರಯಾಮಾಸ ಚ ತಂ
ಪ್ರಬ್ರುವಾಣಃ ಕಥಾನ್ತರಮ್ ॥ ೩೦.೧೨೭ ॥
ದ್ರೌಪದಿಯ ಮೇಲಿನ
ಗೌರವದಿಂದ ಶ್ರೀಕೃಷ್ಣನು ಲಕ್ಷಣದ ಕುರಿತು ಮುಂದಿದ್ದನ್ನು ನುಡಿಯಲಿಲ್ಲ. ಬೇರೊಂದು ಕಥೆಯನ್ನು
ಹೇಳುತ್ತಾ ಅದನ್ನು ಮರೆಸಿದ.
ಉದರಸ್ಯ
ಕಿಞ್ಚಿದಾಧಿಕ್ಯಂ ವೃಷಣಾಧಿಕ್ಯಮೇವ ಚ ।
ಸವ್ಯಬಾಹೋಸ್ತಥಾSSಧಿಕ್ಯಂ ದುರ್ಲ್ಲಕ್ಷಣಮತೋSರ್ಜ್ಜುನೇ ॥ ೩೦.೧೨೮ ॥
ದೀರ್ಘಪಿಣ್ಡಿಕತ್ವವಲ್ಲದೇ,
ಸ್ವಲ್ಪ ಡೊಳ್ಳು ಹೊಟ್ಟೆ, ವೃಷಣಾಧಿಕ್ಯ, ಸ್ವಲ್ಪ
ಎಡಗೈ ಬಲಗೈಕ್ಕಿಂತ ಉದ್ದ, ಇವು ಅರ್ಜುನನಲ್ಲಿರುವ ಇತರ ದುರ್ಲಕ್ಷಣಗಳು.
ನೈವೋಕ್ತಂ ವಾಸುದೇವೇನ
ದೃಶ್ಯಮಾನಮಪಿ ಸ್ಫುಟಮ್ ।
ಜ್ಞಾನಾನನ್ದಹ್ರಾಸಕರಾ
ಹ್ಯೇತೇ ದೋಷಾಃ ಸದಾತನಾಃ ॥ ೩೦.೧೨೯ ॥
ಸ್ಫುಟವಾಗಿ ಇದು ಕಂಡರೂ
ಕೂಡಾ, ಅದು ಕೃಷ್ಣನಿಂದ ಹೇಳಲ್ಪಡಲಿಲ್ಲ. ಈ ದೋಷಗಳು ಜ್ಞಾನ ಹಾಗೂ ಆನಂದದ ಕಡಿಮೆ ಪ್ರಮಾಣವನ್ನು ಹೇಳುತ್ತವೆ/ಕಾರಣವಾಗುತ್ತವೆ.
ಸಮಸ್ತಜೀವರಾಶೌ ತದ್
ದುಷ್ಟಲಕ್ಷಣವರ್ಜ್ಜಿತೌ ।
ಪೂರ್ಣ್ಣಚಿತ್ಸುಖಶಕ್ತ್ಯಾದೇರ್ಯ್ಯೋಗ್ಯೌ
ಕೃಷ್ಣಾ ಚ ಮಾರುತಿಃ ॥ ೩೦.೧೩೦ ॥
ಅನಾದಿದುಃಖಹೀನತ್ವೇ ಸುಖಾಧಿಕ್ಯೇ
ಚ ಲಕ್ಷಣಮ್ ।
ರುಗ್ಮಿಣೀಸತ್ಯಭಾಮಾದಿರೂಪಾಯಾಃ
ಶ್ರಿಯ ಏವ ತು ॥ ೩೦.೧೩೧ ॥
ಮುಖ್ಯಂ ತತೋSಪಿ ಮುಖ್ಯಂ ತು
ಸ್ವಾತನ್ತ್ರ್ಯಾದೇರಶೇಷತಃ ।
ಗುಣರಾಶೇಃ ಪರಂ ಲಿಙ್ಗಂ
ನಿತ್ಯಂ ವ್ಯಾಸಾದಿರೂಪಿಣಃ ।
ವಿಷ್ಣೋರೇವ ನಚಾನ್ಯಸ್ಯ
ಸ ಹ್ಯೇಕಃ ಪೂರ್ಣ್ಣಸದ್ಗುಣಃ ॥ ೩೦.೧೩೨ ॥
ಸಮಸ್ತ ಜೀವರಾಶಿಗಳಲ್ಲಿ
ದುರ್ಲಕ್ಷಣ ಇಲ್ಲದವರು, ಪರಿಪೂರ್ಣವಾದ ಜ್ಞಾನ, ಸುಖ, ಶಕ್ತಿ, ಮೊದಲಾದವುಗಳಿಗೆ ಯೋಗ್ಯರಾದವರು ಭಾರತೀ-ಮುಖ್ಯಪ್ರಾಣ
ಇಬ್ಬರೇ. ಜೀವಸಮುದಾಯಕ್ಕಿಂತ ಮೇಲೆ, ಅನಾದಿಯಾದ ದುಃಖಹೀನತ್ವ, ಸುಖಾಧಿಕ್ಯ ಲಕ್ಷಣಗಳು ರುಗ್ಮಿಣೀ-ಸತ್ಯಭಾಮಾದಿ
ಸ್ವರೂಪಿಣಿಯಾದ ಶ್ರೀಲಕ್ಷ್ಮಿದೇವಿಯಲ್ಲಿ ಸದಾ ಇದ್ದೇ ಇರುತ್ತದೆ. ಲಕ್ಷ್ಮೀದೇವಿಗಿಂತಲೂ
ಅತಿಮುಖ್ಯವಾಗಿ, ಸ್ವತಂತ್ರವಾದ, ನಿತ್ಯವಾಗಿರುವ, ಸರ್ವೋತ್ಕೃಷ್ಟ
ಲಕ್ಷಣಗಳಿರುವುದು ವೇದವ್ಯಾಸಾದಿ ಸ್ವರೂಪವುಳ್ಳ ಶ್ರೀವಿಷ್ಣುವಿನಲ್ಲಿ. ಹೀಗಾಗಿ ಪರಮಾತ್ಮನೊಬ್ಬನೇ
ಪರಿಪೂರ್ಣ, ಸ್ವತಂತ್ರ, ನಿರ್ದುಷ್ಟಗುಣವುಳ್ಳವನು.
No comments:
Post a Comment