ಸರ್ವಯಜ್ಞಾತ್ಮಕಂ
ತೇಷಾಮಶ್ವಮೇಧಂ ಜಗತ್ಪತಿಃ ।
ಕಾರಯಾಮಾಸ ಭಗವಾನ್
ಕೃಷ್ಣದ್ವೈಪಾಯನಃ ಸ್ವಯಮ್ ॥ ೩೦.೯೬ ॥
ಜಗತ್ತಿಗೇ ಒಡೆಯರಾದ, ಷಡ್ಗುಣೈಶ್ವರ್ಯ
ಸಂಪನ್ನರಾದ ವೇದವ್ಯಾಸರು, ತಾವೇ ಮುಂದೆ ನಿಂತು ಯಜ್ಞದ ಎಲ್ಲಾ ಆಚರಣೆಯನ್ನೊಳಗೊಂಡ ಅಶ್ವಮೇಧವನ್ನು
ಮಾಡಿಸುವವರಾದರು.
ಸಾಧನಾನಿ ತು ಸರ್ವಾಣಿ
ಶಾಲಾಂ ಚೈವ ಹಿರಣ್ಮಯೀಮ್ ।
ಪವಮಾನಸುತಶ್ಚಕ್ರೇ
ಕೃಷ್ಣದ್ವೈಪಾಯನೇರಿತಃ ॥ ೩೦.೯೭ ॥
ವೇದವ್ಯಾಸರಿಂದ ಪ್ರೇರಿಸಲ್ಪಟ್ಟ
ಭೀಮಸೇನನು ಯಾಗಕ್ಕೆ ಬೇಕಾದ ಸಮಸ್ತಸಾಧನಗಳನ್ನು ಹೊಂದಿಸಿ, ಹಿರಣ್ಮಯವಾದ ಯಾಗಶಾಲೆಯನ್ನು ಮಾಡಿದನು.
ಅಥಾನುಮನ್ತ್ರಿತೋತ್ಸೃಷ್ಟಂ
ಪುರೋಹಿತಪುರಸ್ಕೃತಮ್ ।
ತುರಗಂ
ಕೃಷ್ಣಸಾರಙ್ಗಮನುವವ್ರಾಜ ವಾಸವಿಃ ॥ ೩೦.೯೮ ॥
ಧೀಕ್ಷೆಯನ್ನು
ತೆಗೆದುಕೊಂಡ ನಂತರ ಅರ್ಜುನನು, ಅಭಿಮಂತ್ರಿತವಾಗಿ ಬಿಡಲ್ಪಟ್ಟ, ಕಪ್ಪು ಹಾಗೂ ಬಹುರೀತಿಯ
ಬಣ್ಣವುಳ್ಳ ಯಜ್ಞತುರಗವನ್ನು, ಪುರೋಹಿತರೊಂದಿಗೆ ಕೂಡಿ, ಅನುಸರಿಸಿ ಹೊರಟನು.
ಸ ಜಿತ್ವಾ ರುನ್ಧತಃ
ಸರ್ವಾನ್ ನೃಪತೀಞ್ಛಸ್ತ್ರತೇಜಸಾ ।
ಚಾರಯಾಮಾಸ ಸರ್ವೇಷು
ರಾಷ್ಟ್ರೇಷ್ವವಿಜಿತೋSರಿಭಿಃ
॥ ೩೦.೯೯ ॥
ಅವನು ಕುದುರೆಯನ್ನು
ಕಟ್ಟಿಹಾಕುವ ಎಲ್ಲಾ ರಾಜರನ್ನೂ ತನ್ನ ಶಸ್ತ್ರ ತೇಜಸ್ಸಿನಿಂದ ಗೆಲ್ಲುತ್ತಾ, ಎಲ್ಲಾ ರಾಜ್ಯಗಳಲ್ಲಿಯೂ ಕುದುರೆಯನ್ನು
ಸಂಚಾರಮಾಡಿಸಿದನು.
ಯುಧಿಷ್ಠಿರಾಜ್ಞಯಾ ತೇನ
ನ ಕಶ್ಚಿನ್ನಿಹತಸ್ತದಾ ।
ಆಹೂತಾಶ್ಚ ನೃಪಾಸ್ತೇನ
ಯಜ್ಞಾರ್ತ್ಥಂ ಪ್ರೀಯತಾSಖಿಲಾಃ ॥ ೩೦.೧೦೦ ॥
ಯುಧಿಷ್ಠಿರನ ಆಜ್ಞೆಯಂತೆ
ಅರ್ಜುನನಿಂದ ಯಾವ ರಾಜರೂ ಸಾಯಿಸಲ್ಪಡಲಿಲ್ಲ. ಪ್ರತಿಯಾಗಿ ಅವರೆಲ್ಲರನ್ನೂ ಅರ್ಜುನ ಪ್ರೀತಿಯಿಂದ
ಯಜ್ಞಕ್ಕೆ ಆಹ್ವಾನ ಮಾಡಿದನು.
No comments:
Post a Comment