ಯಃ ಪ್ರೇರಕಃ ಸಕಲಲೋಕಬಲಸ್ಯ ನಿತ್ಯಂ ಪೂರ್ಣ್ಣಾವ್ಯಯೋಚ್ಚಬಲವೀರ್ಯ್ಯತನುಃ
ಸ್ವತನ್ತ್ರಃ ।
ಕಿಂ ತಸ್ಯ ದೃಷ್ಟಿಪಥಗಸ್ಯ ಚ ವಾನರೋsಯಂ ಕರ್ತೈಶಚಾಪಮಪಿ ಯೇನ ಪುರಾ
ವಿಭಗ್ನಮ್ ॥೬.೨೧॥
ಯಾರು ಎಲ್ಲಾ ಲೋಕದ
ಬಲಕ್ಕೆ ಪ್ರೇರಕನಾಗಿದ್ದಾನೋ, ಪೂರ್ಣವಾಗಿರುವ,
ನಾಶವಾಗದ, ಉತ್ಕೃಷ್ಟವಾಗಿರುವ ಬಲ-ವೀರ್ಯಗಳೇ ಮೈದಾಳಿ
ಬಂದವನಂತೆ ಯಾರು ಇದ್ದಾನೋ, ಯಾರು ಸ್ವತಂತ್ರನಾಗಿದ್ದಾನೋ, ಇಂತಹ ಯಾವ ರಾಮಚಂದ್ರನಿಂದ
ಹಿಂದೆ ರುದ್ರನ ಬಿಲ್ಲೂ ಕೂಡಾ ಸೀಳಲ್ಪಟ್ಟಿತೋ, ಅಂಥವನನ್ನು ಒಬ್ಬ ವಾನರ ಏನು ತಾನೇ ಮಾಡಿಯಾನು?
ಸನ್ನೇsಥ ವಾಲಿನಿ ಜಗಾಮ ಚ ತಸ್ಯ ಪಾರ್ಶ್ವಂ
ಪ್ರಾಹೈನಮಾರ್ದ್ರವಚಸಾ ಯದಿ ವಾಞ್ಚಸಿ ತ್ವಮ್ ।
ಉಜ್ಜೀವಯಿಷ್ಯ
ಇತಿ ನೈಚ್ಛದಸೌ ತ್ವದಗ್ರೇ ಕೋ ನಾಮ ನೇಚ್ಛತಿ ಮೃತಿಂ ಪುರುಷೋತ್ತಮೇತಿ ॥೬.೨೨॥
ವಾಲಿಯು ಕೆಳಗಡೆ ಬೀಳುತ್ತಿರಲು, ರಾಮಚಂದ್ರನು ಅವನ ಬಳಿಗೆ ಹೋಗುತ್ತಾನೆ
ಮತ್ತು ಆರ್ದ್ರವಾದ ಮಾತಿನಿಂದ ಹೇಳುತ್ತಾನೆ: “ಒಂದು ವೇಳೆ ನೀನು ಬಯಸಿದೆಯಾದರೆ ನಿನ್ನನ್ನು ಮತ್ತೆ
ಬದುಕಿಸುತ್ತೇನೆ” ಎಂದು. ಆದರೆ ಅದನ್ನು ಬಯಸದ ವಾಲಿ ಹೇಳುತ್ತಾನೆ: “ಪುರುಷೋತ್ತಮನಾದ
ರಾಮಚಂದ್ರನೇ, ನಿನ್ನ ಎದುರು ಯಾರು ತಾನೇ ಸಾವನ್ನು ಬಯಸುವುದಿಲ್ಲಾ ಹೇಳು” ಎಂದು.
ಕಾರ್ಯ್ಯಾಣಿ
ತಸ್ಯ ಚರಮಾಣಿ ವಿಧಾಯ ಪುತ್ರಂ ತ್ವಗ್ರೇ ನಿಧಾಯ ರವಿಜಃ ಕಪಿರಾಜ್ಯ ಆಸೀತ್ ।
ರಾಮೋsಪಿ ತದ್ಗಿರಿವರೇ ಚತುರೋsಥ ಮಾಸಾನ್ ದೃಷ್ಟ್ವಾ ಘನಾಗಮಮುವಾಸ
ಸಲಕ್ಷ್ಮಣೋsಸೌ ॥೬.೨೩॥
ಸುಗ್ರೀವನು ವಾಲಿಯ ಅಂತ್ಯಸಂಸ್ಕಾರಗಳನ್ನು ವಾಲಿಯ ಪುತ್ರನಾದ
ಅಂಗದನನ್ನು ಮುಂದೆ ಇಟ್ಟುಕೊಂಡು ಮಾಡಿ, ವಾಲಿಯ ಸ್ಥಾನವನ್ನು ಅಲಂಕರಿಸಿ ಕಪಿರಾಜನೆನಿಸಿದನು.
ರಾಮನೂ ಕೂಡಾ ಮಳೆಗಾಲ ಬಂದದ್ದನ್ನು ಗಮನಿಸಿ, ಮುಂದೆ ಪ್ರಯಾಣ ಬೆಳೆಸದೆ, ಲಕ್ಷ್ಮಣನಿಂದ ಕೂಡಿ,
ನಾಲ್ಕು ಮಾಸವನ್ನು ಅಲ್ಲಿಯೇ ಕಳೆದನು. (ಮಾಲ್ಯವಾನ್ ಎನ್ನುವ ಪರ್ವತದಲ್ಲಿ)
No comments:
Post a Comment