ತದೈವ ರಾಮೋsಪಿ ಹಿ ಭೋಗಸಕ್ತಂ ಪ್ರಮತ್ತಮಾಲಕ್ಷ್ಯ
ಕಪೀಶ್ವರಂ ಪ್ರಭುಃ ।
ಜಗಾದ ಸೌಮಿತ್ರಿಮಿದಂ ವಚೋ ಮೇ
ಪ್ಲವಙ್ಗಮೇಶಾಯ ವದಾsಶು ಯಾಹಿ ॥೬.೨೮॥
ಈ ಹೊತ್ತಿಗಾಗಲೇ
ಭೋಗದಲ್ಲಿದ್ದು ಪ್ರಮಾದವನ್ನು ಮಾಡಿರುವ ಸುಗ್ರೀವನನ್ನು ಗಮನಿಸಿದ
ಶ್ರೀರಾಮಚಂದ್ರನು, ಲಕ್ಷ್ಮಣನಲ್ಲಿ, ತನ್ನ
ಮಾತನ್ನು ಸುಗ್ರೀವನಿಗೆ ತಲುಪಿಸುವುದಕ್ಕಾಗಿ ಆತನಿದ್ದಲ್ಲಿಗೆ ತೆರಳುವಂತೆ ಹೇಳುತ್ತಾನೆ.
ಯದಿ ಪ್ರಮತ್ತೋsಸಿ ಮದೀಯಕಾರ್ಯ್ಯೇ ನಯಾಮ್ಯಹಂ
ತ್ವೇನ್ದ್ರಸುತಸ್ಯ ಮಾರ್ಗ್ಗಮ್ ।
ಪ್ರಾಯಃ ಸ್ವಕಾರ್ಯ್ಯೇ ಪ್ರತಿಪಾದಿತೇ
ಹಿ ಮದೋದ್ಧತಾ ನ ಪ್ರತಿಕರ್ತ್ತುಮೀಶತೇ ॥೬.೨೯॥
ಹೆಚ್ಚಾಗಿ ತಮ್ಮ
ಕೆಲಸವಾಗುತ್ತಿರಲು ಕೃತಘ್ನರು ಪ್ರತ್ಯುಪಕಾರ ಮಾಡುವುದಿಲ್ಲ. “ಒಂದು
ವೇಳೆ ಸುಗ್ರೀವ ನನ್ನ ಕೆಲಸವನ್ನು ಮರೆತಿದ್ದರೆ,
ವಾಲಿಯ ದಾರಿಯನ್ನೇ ಅವನಿಗೂ ತೋರಿಸುತ್ತೇನೆ.”. ಎನ್ನುವ ಎಚ್ಚರಿಕೆಯ ಸಂದೇಶವನ್ನು
ಶ್ರೀರಾಮ ಲಕ್ಷ್ಮಣನ ಮುಖೇನ ಸುಗ್ರೀವನಿಗೆ ತಲುಪಿಸುತ್ತಾನೆ.
ಇತೀಡ್ಯರಾಮೇಣ ಸಮೀರಿತೇ ತದಾ ಯಯೌ
ಸಬಾಣಃ ಸಧನುಃ ಸ ಲಕ್ಷ್ಮಣಃ ।
ದೃಷ್ಟ್ವೈವ ತಂ ತೇನ ಸಹೈವ
ತಾಪನಿರ್ಭಯಾದ್ ಯಯೌ ರಾಮಪದಾನ್ತಿಕಂ ತ್ವರನ್ ॥೬.೩೦॥
ಈರೀತಿಯಾಗಿ ಪೂಜ್ಯನಾದ ಶ್ರೀರಾಮನಿಂದ ಹೇಳಲ್ಪಡುತ್ತಿರಲು, ಬಿಲ್ಲು-ಬಾಣಗಳನ್ನು ಹಿಡಿದ ಲಕ್ಷ್ಮಣನು ಸುಗ್ರೀವನಿದ್ದಲ್ಲಿಗೆ
ತೆರಳುತ್ತಾನೆ. ಲಕ್ಷ್ಮಣನನ್ನು ನೋಡಿದೊಡನೆಯೇ
ಸೂರ್ಯನ ಮಗನಾದ ಸುಗ್ರೀವನು ತಕ್ಷಣ, ಶೀಘ್ರವಾಗಿ ಲಕ್ಷ್ಮಣನೊಂದಿಗೆ ಹೊರಟು ರಾಮನಿದ್ದಲ್ಲಿಗೆ ಬರುತ್ತಾನೆ.
ಹನೂಮತಃ ಸಾಧುವಚೋಭಿರಾಶು
ಪ್ರಸನ್ನಚೇತಸ್ಯಧಿಪೇ ಕಪೀನಾಮ್ ।
ಸಮಾಗತೇ ಸರ್ವಹರಿಪ್ರವೀರೈಃ ಸಹೈವ ತಂ
ವೀಕ್ಷ್ಯ ನನನ್ದ ರಾಘವಃ ॥೬.೩೧॥
ಹನುಮಂತನ ಒಳ್ಳೆಯ ಮಾತುಗಳಿಂದ, ಭಕ್ತಿಯುಕ್ತವಾದ ಮನಸ್ಸನ್ನು
ಹೊಂದಿರುವ ಸುಗ್ರೀವನು ರಾಮಚಂದ್ರನ ಬಳಿಗೆ ಎಲ್ಲಾ ಕಪಿಗಳಿಂದ ಕೂಡಿ ಬರಲು, ಅವನನ್ನು ನೋಡಿ
ರಾಮಚಂದ್ರನು ಪ್ರಸನ್ನನಾಗುತ್ತಾನೆ.
No comments:
Post a Comment