ಅಥಾತಿಸಕ್ತೇ ಕ್ಷಿತಿಪೇ ಕಪೀನಾಂ
ಪ್ರವಿಸ್ಮೃತೇ ರಾಮಕೃತೋಪಕಾರೇ ।
ಪ್ರಸಹ್ಯ̐ ತಂ ಬುದ್ಧಿಮತಾಂ
ವರಿಷ್ಠೋ ರಾಮಾಙ್ಘ್ರಿಭಕ್ತೋ ಹನುಮಾನುವಾಚ ॥೬.೨೪॥
ಕಪಿರಾಜ್ಯವನ್ನು ಪಡೆದ ನಂತರ , ಕಪಿಗಳ ರಾಜನಾದ ಸುಗ್ರೀವನು ಭೋಗದಲ್ಲಿ ಅತ್ಯಂತ ಆಸಕ್ತನಾಗಿ, ರಾಮಚಂದ್ರನ ಉಪಕಾರವನ್ನು ಮರೆಯಲು, ಶ್ರೇಷ್ಠ
ಬುದ್ಧಿಯುಳ್ಳ ರಾಮನ ಪಾದ ಸೇವಕನಾದ ಹನುಮಂತನು ಅವನಿಗೆ
ಬುದ್ಧಿವಾದ ಹೇಳಿ ಕರ್ತವ್ಯವನ್ನು ನೆನಪಿಸುತ್ತಾನೆ.
ನ ವಿಸ್ಮೃತಿಸ್ತೇ ರಘುವರ್ಯ್ಯಕಾರ್ಯ್ಯೇ
ಕಾರ್ಯ್ಯಾ ಕಥಞ್ಚಿತ್ ಸ ಹಿ ನೋsಭಿಪೂಜ್ಯಃ ।
ನ ಚೇತ್ ಸ್ವಯಂ ಕರ್ತ್ತುಮಭಿಷ್ಟಮದ್ಯತೇ
ದ್ಧ್ರು ವಂ ಬಲೇನಾಪಿ ಹಿ ಕಾರಯಾಮಿ ॥೬.೨೫॥
“ನಿನಗೆ ರಾಮಚಂದ್ರನ ಕೆಲಸದಲ್ಲಿ ಮರೆವು ಇರಬಾರದು. ಅವನು ನಮಗೆ
ಪೂಜ್ಯನಷ್ಟೇ. ನಿನಗೆ ಕರ್ತವ್ಯ ನಿಭಾಯಿಸಲು ಇಷ್ಟವಿಲ್ಲದಿದ್ದರೆ, ಖಂಡಿತವಾಗಿ ನಾನು ಬಲಾತ್ಕಾರವಾಗಿ ನಿನ್ನ ಕೈಯಲ್ಲಿ ರಾಮನ ಕೆಲಸವನ್ನು
ಮಾಡಿಸುತ್ತೇನೆ” ಎನ್ನುತ್ತಾನೆ ಹನುಮಂತ.
ಸ ಏವಮುಕ್ತ್ವಾ ಹರಿರಾಜಸನ್ನಿಧೌ
ದ್ವೀಪೇಷು ಸಪ್ತಸ್ವಪಿ ವಾನರಾನ್ ಪ್ರತಿ ।
ಸಮ್ಮೇಳನಾಯಾsಶುಗತೀನ್ ಸ್ಮ ವಾನರಾನ್
ಪ್ರಸ್ಥಾಪಯಾಮಾಸ ಸಮಸ್ತಶಃ ಪ್ರಭುಃ ॥೬.೨೬॥
ಈರೀತಿಯಾಗಿ ಸುಗ್ರೀವನ
ಸನ್ನಿಧಿಯಲ್ಲಿ ಹೇಳಿದ ಹನುಮಂತ, ಏಳು ದ್ವೀಪಗಳಲ್ಲಿ ಇರುವ ಕಪಿಗಳನ್ನು ಒಟ್ಟಿಗೆ ಸೇರಿಸಲು, ಅಲ್ಲಿಗೆ ಶೀಘ್ರದಲ್ಲಿ ತಲುಪಬಲ್ಲ ತಮ್ಮ ವಾನರ ಧೂತರನ್ನು ಕಳುಹಿಸುತ್ತಾನೆ.
ಹರೀಶ್ವರಾಜ್ಞಾಪ್ರಣಿಧಾನಪೂರ್ವಕಂ
ಹನೂಮತಾ ತೇ ಪ್ರಹಿತಾ ಹಿ ವಾನರಾಃ ।
ಸಮಸ್ತಶೈಲದ್ರುಮಷಣ್ಡಸಂಸ್ಥಿತಾನ್
ಹರೀನ್ ಸಮಾಧಾಯ ತದಾsಭಿಜಗ್ಮುಃ ॥೬.೨೭॥
ಸುಗ್ರೀವನ ಆಜ್ಞೆಯ ಜೊತೆಗೆ ಹನುಮಂತನಿಂದ ಕಳುಹಿಸಲ್ಪಟ್ಟ ವಾನರ ಧೂತರು
ಎಲ್ಲಾ ಬೆಟ್ಟ, ಕಾಡುಗಳಲ್ಲಿ ಇರುವ ಕಪಿಗಳನ್ನು ಕರೆದುಕೊಂಡು ಬರುತ್ತಾರೆ.
No comments:
Post a Comment