ಇತೀರಿತಂ ತತ್ ಪವನಾತ್ಮಜಸ್ಯ
ಶ್ರುತ್ವಾsತಿಭೀತಾ ಧೃತಮೂಕಭಾವಾಃ ।
ಸರ್ವೇsನುಜಗ್ಮುಸ್ತಮಥಾದ್ರಿಮುಖ್ಯಂ
ಮಹೇನ್ದ್ರಮಾಸೇದುರಗಾಧಭೋಧಾಃ ॥೬.೪೬॥
ಈ ರೀತಿಯಾಗಿ ಹನುಮಂತನು ಹೇಳಲು, ಆ ಮಾತನ್ನು ಕೇಳಿ ಅತ್ಯಂತ ಭಯಗೊಂಡು,
ಮೂಕಭಾವರಾದ ತಾರಾದಿಗಳು, ಹನುಮಂತನ ಮಾತಿನಂತೆ
ಆತನನ್ನು ಅನುಸರಿಸಿ, ಗುಹೆಯಿಂದ ತಕ್ಷಣ ಹೊರಬಂದು, ಪರ್ವತ ಶ್ರೇಷ್ಠವಾದ ಮಹೇಂದ್ರ ಪರ್ವತವನ್ನು
ಹೊಂದಿದರು.
ನಿರೀಕ್ಷ್ಯ ತೇ
ಸಾಗರಮಪ್ರಧೃಷ್ಯಮಪಾರಮೇಯಂ ಸಹಸಾ ವಿಷಣ್ಣಾಃ ।
ದೃಢಂ ನಿರಾಶಾಶ್ಚ ಮತಿಂ ಹಿ ದಧ್ರುಃ
ಪ್ರಾಯೋಪವೇಶಾಯ ತಥಾ ಚ ಚಕ್ರುಃ ॥೬.೪೭॥
ಅವರು ಹಾರಲಾಗದ, ದಡ ಕಾಣದ ಸಮುದ್ರವನ್ನು ನೋಡಿ, ಕೂಡಲೇ ದುಃಖಿತರಾಗಿ,
ಬಹಳವಾಗಿ ಭರವಸೆಯನ್ನು ಕಳೆದುಕೊಂಡು, ಸಾಯುವತನಕ ಉಪವಾಸವನ್ನು ನಿಶ್ಚಯಿಸಿದರು. ಅದರಂತೆಯೇ
ಆಹಾರವನ್ನು ಸ್ವೀಕರಿಸದೇ ಕುಳಿತರು.
ಪ್ರಾಯೋಪವಿಷ್ಟಾಶ್ಚ ಕಥಾ ವದನ್ತೋ
ರಾಮಸ್ಯ ಸಂಸಾರವಿಮುಕ್ತಿದಾತುಃ ।
ಜಟಾಯುಷಃ ಪಾತನಮೂಚುರೇತತ್
ಸಮ್ಪಾತಿನಾಮ್ನಃ ಶ್ರವಣಂ ಜಗಾಮ ॥೬.೪೮॥
‘ಸಾಯುವ ತನಕ ಉಪವಾಸ’ ಎನ್ನುವ ವ್ರತಕ್ಕೆ ಕಟ್ಟುಬಿದ್ದವರಾಗಿ, ಸಂಸಾರದಿಂದ ಮುಕ್ತಿಯನ್ನು ನೀಡುವ ರಾಮಚಂದ್ರನ
ಕಥೆಗಳನ್ನು ಹೇಳುತ್ತಾ, ಜಟಾಯುಪಕ್ಷಿಯ ಸಾವಿನ ಕಥೆಯನ್ನೂ ಹೇಳಿದರು. ಅವರು ಹೇಳುತ್ತಿದ್ದ ಜಟಾಯುವಿನ ಸಾವಿನ ಕಥೆ ಅಲ್ಲಿದ್ದ ಸಂಪಾತಿ ಎಂಬ ಪಕ್ಷಿಯ ಕಿವಿಗೆ ಬಿತ್ತು.
No comments:
Post a Comment