ನೈಸರ್ಗ್ಗಿಕಪ್ರಿಯಮಿಮಂ ಪ್ರವದನ್ತಿ ವಿಪ್ರಾ ವಿಷ್ಣೋರ್ನ್ನಿತಾನ್ತಮಪಿ ಸತ್ಯಮಿದಂ
ಧ್ರುವಂ ಹಿ ।
ನೈವಾನ್ಯಥೌರಸಬಲಂ
ಭವತೀದೃಶಂ ತದುತ್ಸಾದ್ಯ ಏಷ ಹರಿಣೈವ ಸಹೈಷ ನೋSರ್ತ್ಥಃ ॥೧೪.೮೧॥
ಸಹಜವಾದುದ್ದನ್ನೇ ಹೆಚ್ಚು ಇಷ್ಟಪಡುವ ನಾರಾಯಣನಿಗೆ ನೈಸರ್ಗಿಕ
ಬಲವಿರುವ ಭೀಮ ಬಹಳ ಪ್ರಿಯ ಎಂದು ವಿಪ್ರರು ಹೇಳುತ್ತಾರೆ. ಇದು ಖಂಡಿತವಾಗಿಯೂ ಸತ್ಯ. ಇಲ್ಲದಿದ್ದರೆ ಈರೀತಿಯಾದ ಸಹಜಸಿದ್ಧವಾದ
ಬಲವು ಅವನಲ್ಲಿರುತ್ತಿರಲಿಲ್ಲ. ಆ ಕಾರಣದಿಂದ ಶ್ರೀಕೃಷ್ಣನ ಜೊತೆಗೇ ಭೀಮಸೇನನನ್ನು ಸಾಯಿಸಬೇಕು.
ಅದೇ ನಮಗೆ ಅನುಕೂಲವು.
ಕೃಷ್ಣಃ ಕಿಲೈಷ ಚ ಹರಿರ್ಯ್ಯದುಷು ಪ್ರಜಾತಃ ಸೋsಸ್ಯಾsಶ್ರಯಃ ಕುರುತ ತಸ್ಯ ಬಹು
ಪ್ರತೀಪಮ್ ।
ಸಮ್ಮನ್ತ್ರ್ಯ
ಚೈವಮತಿಪಾಪತಮಾ ನರೇನ್ದ್ರಪುತ್ರಾ ಹರೇಶ್ಚ ಬಹು ಚಕ್ರುರಥ ಪ್ರತೀಪಮ್ ॥೧೪.೮೨॥
ನಾರಾಯಣನೇ ಯದುಗಳಲ್ಲಿ ಶ್ರೀಕೃಷ್ಣನಾಗಿ ಬಂದಿದ್ದಾನೆ. ಅವನೇ ಈ
ಭೀಮಸೇನನಿಗೆ ಅಶ್ರಯನಾಗಿದ್ದಾನೆ. ಆ ಕೃಷ್ಣನಿಗೆ ಬಹಳವಾಗಿ ವೈರವನ್ನು ಮಾಡಿರಿ’ ಎಂದು ಮಂತ್ರಾಲೋಚನೆ
ಮಾಡಿದ ಅತ್ಯಂತ ಪಾಪಿಷ್ಠರಾದ ರಾಜಪುತ್ರರು-ಶ್ರೀಕೃಷ್ಣನಿಗೆ ಬಹಳವಾಗಿ ವಿರೋಧವನ್ನು ಮಾಡಿದರು.
ತೈಃ ಪ್ರೇರಿತಾ ನೃಪತಯಃ
ಪಿತರಶ್ಚ ತೇಷಾಂ ಸಾಕಂ ಬೃಹದ್ರಥಸುತೇನ ಹರೇಃ ಸಕಾಶಮ್ ।
ಯುದ್ಧಾಯ ಜಗ್ಮುರಮುನಾsಷ್ಟದಶೇಷು
ಯುದ್ಧೇಷ್ವತ್ಯನ್ತಭಗ್ನಬಲದರ್ಪ್ಪಮದಾ ನಿವೃತ್ತಾಃ ॥೧೪.೮೩॥
ಮಕ್ಕಳಿಂದ ಪ್ರಚೋದಿಸಲ್ಪಟ್ಟ, ರಾಜರಾಗಿದ್ದ ತಂದೆಯಂದಿರು,
ಜರಾಸಂಧನೂಂದಿಗೆ ಕೂಡಿಕೊಂಡು ಶ್ರೀಕೃಷ್ಣನೊಂದಿಗೆ ಯುದ್ಧಕ್ಕೆಂದು ತೆರಳಿದರು. ಕೃಷ್ಣನಿಂದ
ಹದಿನೆಂಟು ಯುದ್ಧಗಳಲ್ಲಿ ಸೋತ ಅವರು, ತಮ್ಮ
ಬಲದರ್ಪದ ಮದವನ್ನು ಕಳೆದುಕೊಂಡು ನಿವೃತ್ತರಾದರು(ಹಿಂತಿರುಗಿದರು).
ತೇನಾsಗೃಹೀತಗಜವಾಜಿರಥಾ
ನಿತಾನ್ತಂ ಶಸ್ತ್ರೈಃ ಪರಿಕ್ಷತತನೂಭಿರಲಂ ವಮನ್ತಃ ।
ರಕ್ತಂ ವಿಶಸ್ತ್ರಕವಚಧ್ವಜವಾಜಿಸೂತಾಃ ಸ್ತ್ರಸ್ತಾಮ್ಬರಾಃ ಶ್ಲಥಿತಮೂರ್ದ್ಧಜಿನೋ ನಿವೃತ್ತಾಃ ॥೧೪.೮೪॥
ಕೃಷ್ಣನಿಂದ ಪರಿಗ್ರಹಿಸಲ್ಪಟ್ಟ ಆನೆ, ಕುದುರೆ, ರಥ, ಎಲ್ಲವನ್ನೂ ಕೂಡಾ ಕಳೆದುಕೊಂಡು, ಗಾಯಗೊಂಡ ದೇಹವುಳ್ಳವರಾಗಿ, ಚೆನ್ನಾಗಿ ರಕ್ತವನ್ನು
ವಾಂತಿಮಾಡುತ್ತಾ, ಶಸ್ತ್ರವಿಲ್ಲದೇ, ಕವಚವಿಲ್ಲದೇ,
ದ್ವಜವಿಲ್ಲದೇ, ಎಲ್ಲವನ್ನೂ ಕಳೆದುಕೊಂಡವರಾಗಿ, ಜಾರುವ ಬಟ್ಟೆಯುಳ್ಳವರಾಗಿ, ಬಿಚ್ಚಿಹೋದ
ಕೂದಲುಳ್ಳವರಾಗಿ ಹಿಂತಿರುಗಿದರು.
ಏವಂ ಬೃಹದ್ರಥಸುತೋsಪಿ ಸುಶೋಚ್ಯರೂಪ ಆರ್ತ್ತೋ ಯಯೌ ಬಹುಶ ಏವ ಪುರಂ ಸ್ವಕೀಯಮ್ ।
ಕೃಷ್ಣೇನ ಪೂರ್ಣ್ಣಬಲವೀರ್ಯಗುಣೇನ ಮುಕ್ತೋ ಜೀವೇತ್ಯತೀವ ವಿಜಿತಃ
ಶ್ವಸಿತಾವಶೇಷಃ ॥೧೪.೮೫॥
ಹೀಗೆಯೇ, ಬೃಹದ್ರಥನ ಮಗನಾಗಿರುವ ಜರಾಸಂಧನೂ ಕೂಡಾ ಅತ್ಯಂತ
ಶೋಚನೀಯ ರೂಪವುಳ್ಳವನಾಗಿ, ಸಂಕಟಗೊಂಡವನಾಗಿ, ಬಹಳ ಬಾರಿ ಪೂರ್ಣವಾಗಿರುವ ಬಲ ಹಾಗೂ ವೀರ್ಯವೆಂಬ
ಗುಣಗಳುಳ್ಳ ಶ್ರೀಕೃಷ್ಣನಿಂದ ‘ಬದುಕಿಕೋ ಹೋಗು’ ಎಂದು ಹೇಳಿ ಬಿಡಲ್ಪಟ್ಟವನಾಗಿ, ಉಸಿರುಮಾತ್ರವನ್ನು ಉಳಿಸಿಕೊಂಡು ತನ್ನ ಪಟ್ಟಣದತ್ತ
ಹಿಂತಿರುಗಿದನು.
No comments:
Post a Comment