ಸೋsಯಾದ್ ಗಜಾಹ್ವಯಮಮುತ್ರ
ವಿಚಿತ್ರವೀರ್ಯ್ಯಪುತ್ರೇಣ ಭೀಷ್ಮಸಹಿತೈಃ ಕುರುಭಿಃ
ಸಮಸ್ತೈಃ ।
ಸಮ್ಪೂಜಿತಃ ಕತಿಪಯಾನವಸಚ್ಚ
ಮಾಸಾನ್ ಜ್ಞಾತುಂ ಹಿ ಪಾಣ್ಡುಷು ಮನಃಪ್ರಸೃತಿಂ ಕುರೂಣಾಮ್ ॥೧೪.೯೬॥
ಗಜಾಹ್ವಯಕ್ಕೆ(ಹಸ್ತಿನಪುರಕ್ಕೆ) ತೆರಳಿ, ವಿಚಿತ್ರವೀರ್ಯಪುತ್ರನಾದ ಧೃತರಾಷ್ಟ್ರನಿಂದಲೂ,
ಭೀಷ್ಮನಿಂದಲೂ ಕೂಡಿರುವ ಎಲ್ಲಾ ಕುರುಗಳಿಂದಲೂ ಪೂಜಿಸಲ್ಪಟ್ಟವನಾದ ಅಕ್ರೂರನು, ಪಾಂಡವರಲ್ಲಿ ಕುರುಗಳ ಮನಸ್ಸಿನ ಪ್ರಸಾದವನ್ನು ತಿಳಿಯಬೇಕೆಂದು, ಕೆಲವು ತಿಂಗಳುಗಳ ಕಾಲ
ಅಲ್ಲೇ ವಾಸಮಾಡಿದನು.
ಜ್ಞಾತ್ವಾ ಸ
ಕುನ್ತಿವಿದುರೋಕ್ತಿತ ಆತ್ಮನಾ ಚ ಮಿತ್ರಾರಿಮಧ್ಯಮಜನಾಂಸ್ತನಯೇಷು ಪಾಣ್ಡೋಃ ।
ವಿಜ್ಞಾಯ ಪುತ್ರವಶಗಂ
ಧೃತರಾಷ್ಟ್ರಮಞ್ಜಃ ಸಾಮ್ನೈವ ಭೇದಸಹಿತೇನ ಜಗಾದ
ವಿದ್ವಾನ್ ॥೧೪.೯೭॥
ಜ್ಞಾನಿಯಾದ ಅಕ್ರೂರನು ಕುಂತಿ ಹಾಗು ವಿದುರನ ಮಾತಿನಿಂದಲ್ಲದೇ, ತಾನೂ ಕೂಡಾ,
ಪಾಂಡುವಿನ ಮಕ್ಕಳಿಗೆ ಮಿತ್ರರು ಯಾರು, ಶತ್ರುಗಳು ಯಾರು, ತಟಸ್ತರು ಯಾರು ಎಂದು ತಿಳಿದುಕೊಂಡ.
ಧೃತರಾಷ್ಟ್ರನು ಚೆನ್ನಾಗಿ ಪುತ್ರವಶವಾಗಿದ್ದಾನೆ ಎನ್ನುವ ಸತ್ಯವನ್ನು ಅರಿತ ಅವನು ಭೇದದಿಂದ
ಕೂಡಿದ ಸಾಮೋಪಾಯದಿಂದ ಮಾತನ್ನಾಡಿದ:
ಪುತ್ರೇಷು ಪಾಣ್ಡುತನಯೇಷು
ಚ ಸಾಮ್ಯವೃತ್ತಿಃ ಕೀರ್ತ್ತಿಂ ಚ ಧರ್ಮ್ಮಮುರುಮೇಷಿ ತಥಾsರ್ತ್ಥಕಾಮೌ ।
ಪ್ರೀತಿಂ ಪರಾಂ ತ್ವಯಿ
ಕರಿಷ್ಯತಿ ವಾಸುದೇವಃ ಸಾಕಂ ಸಮಸ್ತಯದುಭಿಃ ಸಹಿತಃ ಸುರಾದ್ಯೈಃ ॥೧೪.೯೮॥
‘ನಿನ್ನ ಮಕ್ಕಳೇ ಆಗಿರುವ ಪಾಂಡವರಲ್ಲಿ ಸಮಾನವಾದ ವೃತ್ತಿಯನ್ನು
ಮಾಡಿದರೆ ಕೀರ್ತಿಯನ್ನೂ, ಉತ್ಕೃಷ್ಟವಾದ
ಧರ್ಮವನ್ನೂ, ಹಾಗೆಯೇ ಅರ್ಥ-ಕಾಮಗಳನ್ನೂ ಹೊಂದುತ್ತೀಯ. ನೀನು ಇವರನ್ನು ಚೆನ್ನಾಗಿ ನೋಡಿಕೊಂಡರೆ
ಎಲ್ಲಾ ದೇವತೆಗಳಿಂದ ಮತ್ತು ಯದುಗಳಿಂದ ಕೂಡಿರುವ ಕೃಷ್ಣನು ನಿನ್ನಲ್ಲಿ ಉತ್ಕೃಷ್ಟವಾದ
ಪ್ರೀತಿಯನ್ನು ಮಾಡುತ್ತಾನೆ.
ಧರ್ಮ್ಮಾರ್ತ್ಥಕಾಮಸಹಿತಾಂ ಚ ವಿಮುಕ್ತಿಮೇಷಿ ತತ್ಪ್ರೀತಿತಃ
ಸುನಿಯತಂ ವಿಪರೀತವೃತ್ತಿಃ ।
ಯಾಸ್ಯೇವ ರಾಜವರ
ತತ್ಫಲವೈಪರೀತ್ಯಮಿತ್ಥಂ ವಚೋ ನಿಗದಿತಂ ತವ ಕಾರ್ಷ್ಣಮಧ್ಯ ॥೧೪.೯೯॥
ಧರ್ಮ-ಅರ್ಥ-ಕಾಮ ಇವುಗಳಿಂದ ಕೂಡಿರುವ ಮುಕ್ತಿಯನ್ನು ಪರಮಾತ್ಮನ
ಪ್ರೀತಿಯ ದೆಸೆಯಿಂದಾಗಿ ಖಂಡಿತವಾಗಿ ಹೊಂದುತ್ತೀಯ.
ಇದಕ್ಕೆ ವಿಪರೀತವಾದ ವೃತ್ತಿಯನ್ನು ಮಾಡಿದರೆ, ಎಲೈ ರಾಜಶ್ರೇಷ್ಠನೇ, ಇಲ್ಲಿಯೂ ಇಲ್ಲಾ-ಅಲ್ಲಿಯೂ ಇಲ್ಲವಾಗುವಂತಹ
(ಇಲ್ಲಿ ಧರ್ಮ-ಅರ್ಥ-ಕಾಮವಿಲ್ಲಾ, ಅಲ್ಲಿ ಮುಕ್ತಿ ಇಲ್ಲಾ. ಅಂತಹ) ಫಲವೈಪರೀತ್ಯವನ್ನು ಹೊಂದುವೆ. ಈ ರೀತಿಯಾದ
ಶ್ರೀಕೃಷ್ಣನ ಮಾತನ್ನೇ ನಾನು ನಿನಗಾಗಿ ಹೇಳಿದ್ದೇನೆ’.
ಇತ್ಥಂ ಸಮಸ್ತಕುರುಮದ್ಧ್ಯ ಉಪಾತ್ತವಾಕ್ಯೋ ರಾಜಾsಪಿ ಪುತ್ರವಶಗೋ ವಚನಂ ಜಗಾದ
।
ಸರ್ವಂ ವಶೇ ಭಗವತೋ ನ ವಯಂ
ಸ್ವತನ್ತ್ರಾ ಭೂಭಾರಸಂಹೃತಿಕೃತೇ ಸ ಇಹಾವತೀರ್ಣ್ಣಃ ॥೧೪.೧೦೦॥
ಈರೀತಿಯಾಗಿ ಎಲ್ಲಾ ಕುರುಗಳ ಮಧ್ಯದಲ್ಲಿ ಕೃಷ್ಣನಿಂದ
ಹೇಳಲ್ಪಟ್ಟ ಮಾತನ್ನು ಅಕ್ರೂರನಿಂದ ಕೇಳಿಸಿಕೊಂಡೂ ಕೂಡಾ, ಧೃತರಾಷ್ಟ್ರನು ಪುತ್ರವಶನಾಗಿ ಮಾತನಾಡುತ್ತಾನೆ:
‘ಎಲ್ಲವೂ ಪರಮಾತ್ಮನ ವಶದಲ್ಲಿದೆ. ನಾವು ಸ್ವತಂತ್ರರಲ್ಲಾ. ಭೂಭಾರ ಸಂಹಾರ ಮಾಡಲಿಕ್ಕಾಗಿ ಅವನು
ಇಲ್ಲಿ ಅವತಾರ ಮಾಡಿದವನಲ್ಲವೇ?’
ಏತನ್ನಿಶಮ್ಯ ವಚನಂ ಸ ತು
ಯಾದವೋsಸ್ಯ ಜ್ಞಾತ್ವಾ ಮನೋsಸ್ಯ ಕಲುಷಂ ತವ ನೈವ ಪುತ್ರಾಃ
।
ಇತ್ಯೂಚಿವಾನ್ ಸಹ
ಮರುತ್ತನಯಾರ್ಜ್ಜುನಾಭ್ಯಾಂ ಪ್ರಾಯಾತ್ ಪುರೀಂ ಚ ಸಹದೇವಯುತಃ ಸ್ವಕೀಯಾಮ್ ॥೧೪.೧೦೧॥
ಧೃತರಾಷ್ಟ್ರನ ಮಾತನ್ನು ಕೇಳಿದ ಅಕ್ರೂರನು ಅವನ ಮನಸ್ಸು ಕೊಳೆಯಾಗಿದೆ ಎಂಬುದನ್ನು ತಿಳಿದು, ‘ನಿನ್ನ ಮಕ್ಕಳು ಖಂಡಿತವಾಗಿ ಒಳ್ಳೆಯ ಕೀರ್ತಿಯನ್ನು
ಪಡೆಯಲಾರರು’ ಎಂದು ಹೇಳಿ, ಭೀಮಾರ್ಜುನರು ಹಾಗೂ ಸಹದೇವನಿಂದ ಕೂಡಿಕೊಂಡು ಮಧುರಾ ಪಟ್ಟಣದತ್ತ ತೆರಳಿದನು.
ಜ್ಞಾನಂ ತು
ಭಾಗವತಮುತ್ತಮಮಾತ್ಮಯೋಗ್ಯಂ ಭೀರ್ಮಾರ್ಜ್ಜುನೌ ಭಗವತಃ ಸಮವಾಪ್ಯ
ಕೃಷ್ಣಾತ್ ।
ತತ್ರೋಷತುರ್ಭಗವತಾ ಸಹ
ಯುಕ್ತಚೇಷ್ಟೌ ಸಮ್ಪೂಜಿತೌ ಯದುಭಿರುತ್ತಮಕರ್ಮ್ಮಸಾರೌ ॥೧೪.೧೦೨॥
ಭೀಮಾರ್ಜುನರು ಆ ಮಧುರಾ ಪಟ್ಟಣದಲ್ಲಿ ಭಗವಾನ್ ಕೃಷ್ಣನಿಂದ,
ಉತ್ಕೃಷ್ಟವಾದ, ತಮ್ಮ ಯೋಗ್ಯತೆಗೆ ಅನುಗುಣವಾದ, ಭಗವತ್ಸಂಬಂಧಿಯಾದ ಜ್ಞಾನವನ್ನು ಹೊಂದಿ, ಅಲ್ಲಿಯೇ ವಾಸಮಾಡಿದರು. ಉತ್ತಮ ಕ್ರಿಯೆಗಳುಳ್ಳವರಾದ ಅವರು, ಯದುಗಳಿಂದ ಉತ್ಕೃಷ್ಟವಾದ
ಕರ್ಮವನ್ನು ಮಾಡುವವರಾಗಿ ಪೂಜಿಸಲ್ಪಟ್ಟರು. [ಸಮಸ್ತ ಯದುಗಳೂ ಕೂಡಾ ಅವರನ್ನು ಗೌರವದಿಂದ ಕಂಡರು].
ಪ್ರತ್ಯುದ್ಯಮೋ ಭಗವತಾsಪಿ ಭವೇದ್ ಗದಾಯಾಃ ಶಿಕ್ಷಾ
ಯದಾ ಭಗವತಾ ಕ್ರಿಯತೇ ನಚೇಮಮ್ ।
ಕುರ್ಯ್ಯಾಮಿತಿ ಸ್ಮ ಭಗವತ್ಸಮನುಜ್ಞಯೈವ ರಾಮಾದಶಿಕ್ಷದುರುಗಾಯಪುರಃ
ಸ ಭೀಮಃ ॥೧೪.೧೦೩॥
‘ಯಾವಾಗ ಕೃಷ್ಣನಿಂದಲೇ ಗದೆಯ ಅಭ್ಯಾಸವು ಮಾಡಲ್ಪಡುತ್ತದೋ, ಆಗ ಕೃಷ್ಣನ ಜೊತೆಗೆ ಪ್ರತ್ಯುದ್ಯಮವೂ ಆಗುವುದು.(ಗದಾಭ್ಯಾಸವು
ಪ್ರಹಾರ-ಪ್ರತಿಪ್ರಹಾರ ರೂಪವಾಗಿರುತ್ತದೆ) ಅದನ್ನು ನಾನು ಮಾಡಲಾರೆ’ ಎಂದು, ಕೃಷ್ಣನ ಅನುಜ್ಞೆಯಿಂದಲೇ, ಕೃಷ್ಣನ ಸಮ್ಮುಖದಲ್ಲೇ
ಭೀಮ ಬಲರಾಮನಿಂದ ಗದಾಭ್ಯಾಸ ಮಾಡಿದ (ಶಿಕ್ಷಣ ಪಡೆದ).
[ಮಹಾಭಾರತದ ಆದಿಪರ್ವದಲ್ಲಿ(೧೫೧.೫) ಈಕುರಿತ ವಿವರವನ್ನು
ಕಾಣಬಹುದು. ಅಸಿಯುದ್ಧೇ ಗದಾಯುದ್ಧೇ ರಥಯುದ್ಧೇ ಚ ಪಾಣ್ಡವಃ । ಸಙ್ಕರ್ಷಣಾದಶಿಕ್ಷದ್ ವೈ ಶಶ್ವಚ್ಛಿಕ್ಷಾಂ ವೃಕೋದರಃ].
ರಾಮೋsಪಿ
ಶಿಕ್ಷಿತಮರೀನ್ದ್ರಧರಾತ್ ಪುರೋsಸ್ಯ ಭೀಮೇ ದದಾವಥ ವರಾಣಿ
ಹರೇರವಾಪ ।
ಅಸ್ತ್ರಾಣಿ ಶಕ್ರತನಯಃ
ಸಹದೇವ ಆರ ನೀತಿಂ ತಥೋದ್ಧವಮುಖಾತ್ ಸಕಲಾಮುದಾರಾಮ್ ॥೧೪.೧೦೪॥
ಬಲರಾಮನೂ ಕೂಡಾ ಕೃಷ್ಣನ ಎದುರಲ್ಲಿಯೇ ತಾನು
ಕೃಷ್ಣನಿಂದ ಕಲಿತದ್ದನ್ನು ಭೀಮಸೇನನಿಗೆ ಕೊಟ್ಟ. ತದನಂತರ ಅರ್ಜುನನು ಪರಮಾತ್ಮನಿಂದ
ಉತ್ಕೃಷ್ಟವಾದ ಅಸ್ತ್ರಗಳನ್ನು ಪಡೆದ. ಹಾಗೆಯೇ, ಉದ್ಧವನಿಂದ ಸಹದೇವನು ಎಲ್ಲದರಿಂದ ಕೂಡಿರುವ ಉತ್ಕೃಷ್ಟವಾದ ನೀತಿಯನ್ನು(ನೀತಿಶಾಸ್ತ್ರವನ್ನು)
ಪಡೆದ.
No comments:
Post a Comment