ಉನ್ಮಾದನಾದೀನಿ ಸ ವೇದ ಕೃಷ್ಣಾದಸ್ತ್ರಾಣ್ಯನಾಪತ್ಸು ನ ತಾನಿ ಮುಞ್ಚೇತ್ ।
ಇತ್ಯಾಜ್ಞಯಾ ಕೇಶವಸ್ಯಾಪರಾಣಿ ಪ್ರಯೋಗಯೋಗ್ಯಾನಿ ಸದೇಚ್ಛತಿ ಸ್ಮ ॥೧೫.೩೬॥
ಅರ್ಜುನನು ಉನ್ಮಾದನಾದಿ ಅಸ್ತ್ರಗಳನ್ನು
ಕೃಷ್ಣನಿಂದ ಈಗಾಗಲೇ ತಿಳಿದಿದ್ದನಾದರೂ ಕೂಡಾ, ‘ಆಪತ್ತು ಇಲ್ಲದಿರಬೇಕಾದರೆ ಆ ಅಸ್ತ್ರಗಳನ್ನು ಪ್ರಯೋಗಿಸಬಾರದು’ ಎನ್ನುವ ಶ್ರೀಕೃಷ್ಣನ ಆಜ್ಞೆಯಿಂದಾಗಿ ಬೇರೆ
ಪ್ರಯೋಗ ಯೋಗ್ಯವಾದ ಅಸ್ತ್ರಗಳನ್ನು ಯಾವಾಗಲೂ
ಬಯಸುತ್ತಿದ್ದ.
ಭೀಷ್ಮಾದಿಭಿರ್ಭವಿತಾ ಸಙ್ಗರೋ ನಸ್ತದಾ ನಾಹಂ ಗುರುಭಿರ್ನ್ನಿತ್ಯಯೋದ್ಧಾ ।
ಭವೇಯಮೇಕಃ ಫಲ್ಗುನೋsಸ್ತ್ರಜ್ಞ ಏಷಾಂ ನಿವಾರಕಶ್ಚೇನ್ಮಮ
ಧರ್ಮ್ಮಲಾಭಃ ॥೧೫.೩೭॥
ನ ಬುದ್ಧಿಪೂರ್ವಂ ವರ ಇನ್ದಿರಾಪತೇರನ್ಯತ್ರ ಮೇ ಗ್ರಾಹ್ಯ ಇತಶ್ಚ ಜಿಷ್ಣುಃ ।
ಕರೋತು ಗುರ್ವರ್ತ್ಥಮಿತಿ ಸ್ಮ ಚಿನ್ತಯನ್ ಭೀಮಃ ಪ್ರತಿಜ್ಞಾಂ ನ ಚಕಾರ ತತ್ರ ॥೧೫.೩೮॥
‘ಭೀಷ್ಮ ಮೊದಲಾದವರೊಂದಿಗೆ ಮುಂದೆ ಯುದ್ಧವಾಗಲಿದ್ದು ಆಗ ಗುರು-ಹಿರಿಯರಾದ
ಅವರೊಂದಿಗೆ ನಾನೆಂದಿಗೂ ಯುದ್ಧಮಾಡುವುದಿಲ್ಲ. ಹಾಗಾಗಿ, ಅಸ್ತ್ರಗಳನ್ನು ತಿಳಿದಿರುವ ಅರ್ಜುನ
ಭೀಷ್ಮಾದಿಗಳನ್ನು ನಿವಾರಣಮಾಡತಕ್ಕವನಾದರೆ ಅದರಿಂದ
ನನಗೆ ಧರ್ಮಲಾಭವಾಗುತ್ತದೆ’. ಇದಲ್ಲದೇ, ‘ಇನ್ದಿರಾಪತಿ
ನಾರಾಯಣನಿಗಿಂತ ಹೊರತಾಗಿ ಬೇರೆಯವರಿಂದ
ಬುದ್ಧಿಪೂರ್ವಕವಾಗಿ ನಾನು ವರವನ್ನು ಪಡೆಯಬಾರದು’ ಎಂಬ ಈ ಎರಡು ಕಾರಣಗಳಿಂದ ‘ಅರ್ಜುನನೇ
ಗುರುಗಳಿಗಾಗಿ ಪ್ರತಿಜ್ಞೆಯನ್ನು ಮಾಡಲಿ’ ಎಂದು ಚಿಂತಿಸಿದ ಭೀಮನು, ಆಗ ಯಾವುದೇ ಪ್ರತಿಜ್ಞೆಯನ್ನು
ಮಾಡಲಿಲ್ಲ.
ತತ್ಪ್ರೇರಿತೇನಾರ್ಜ್ಜುನೇನ ಪ್ರತಿಜ್ಞಾ ಕೃತಾ ಯದಾ ವಿಪ್ರವರಸ್ತತಃ ಪರಮ್ ।
ಸ್ನೇಹಂ ನಿತಾನ್ತಂ ಸುರರಾಜಸೂನೌ ಕೃತ್ವಾ ಮಹಾಸ್ತ್ರಾಣಿ ದದೌ ಸ ತಸ್ಯ ॥೧೫.೩೯॥
ಭೀಮಸೇನನಿಂದ
ಪ್ರೇರಿತನಾದ ಅರ್ಜುನನಿಂದ ಯಾವಾಗ ಪ್ರತಿಜ್ಞೆ ಮಾಡಲ್ಪಪಟ್ಟಿತೋ, ಅದಾದ ನಂತರ ದ್ರೋಣಾಚಾರ್ಯರು
ಇಂದ್ರನ ಮಗನಾದ ಅರ್ಜುನನಲ್ಲಿ ಆತ್ಯಂತಿಕವಾದ
ಪ್ರೀತಿಯಿಟ್ಟು, ಅವನಿಗೆ ಮಹಾಸ್ತ್ರಗಳನ್ನು
ನೀಡಿದರು.
ಸ ಪಕ್ಷಪಾತಂ ಚ ಚಕಾರ ತಸ್ಮಿನ್ ಕರೋತಿ ಚಾಸ್ಯೋರುತರಾಂ ಪ್ರಶಂಸಾಮ್ ।
ರಹಸ್ಯವಿದ್ಯಾಶ್ಚ ದದಾತಿ ತಸ್ಯ ನಾನ್ಯಸ್ಯ ಕಸ್ಯಾಪಿ ತಥಾ ಕಥಞ್ಚಿತ್ ॥೧೫.೪೦॥
ದ್ರೋಣಾಚಾರ್ಯರು ಅರ್ಜುನನಲ್ಲಿ ಅತ್ಯಂತ ಪಕ್ಷಪಾತವನ್ನು ಮಾಡಿಕೊಂಡು,
ಅವನನ್ನು ಆತ್ಯಂತಿಕವಾಗಿ ಹೊಗಳಿಕೆ
ಮಾಡುತ್ತಿದ್ದರು. ಅವನಿಗೆ ಅನೇಕ ರಹಸ್ಯ ವಿದ್ಯೆಗಳನ್ನೂ ಕೂಡಾ ಉಪದೇಶಿಸಿದ ಅವರು, ಅರ್ಜುನನಂತೆ ಉಳಿದವರಿಗೆ
ಏನನ್ನೂ ಕೊಡುತ್ತಿರಲಿಲ್ಲ.
No comments:
Post a Comment