ಪ್ರವಿಶ್ಯ ಚೇಶಃ
ಸ್ವಪುರೀಂ ಸ ಯಾದವೈಃ ಸುಪೂಜಿತೋsನ್ತಃ ಪುರಮೇತ್ಯ ಚಾಙ್ಗಣೇ ।
ತರುಂ ಪ್ರಿಯಾಯಾ
ನ್ಯದಧಾದ್ ಗೃಹಸ್ಯ ಸಹೈವ ಶೃಙ್ಗೇಣ ಚ ರತ್ನಸದ್ಗಿರೇಃ ॥೨೦.೧೩೮ ॥
ಸರ್ವಸಮರ್ಥನಾದ ಕೃಷ್ಣನು ತನ್ನ ಪಟ್ಟಣವಾದ ದ್ವಾರಕೆಯನ್ನು ಪ್ರವೇಶಮಾಡಿ,
ಯಾದವರಿಂದ ಚೆನ್ನಾಗಿ ಪೂಜಿಸಿಕೊಂಡವನಾಗಿ, ಅಂತಃಪುರವನ್ನು ಹೊಂದಿ, ಸತ್ಯಭಾಮೆಯ ಮನೆಯ ಅಂಗಳದಲ್ಲಿ
ರತ್ನಗಳಿಂದ ತುಂಬಿದ ಶಿಖರದಿಂದ ಸಹಿತವಾಗಿಯೇ ಪಾರಿಜಾತ ವೃಕ್ಷವನ್ನು ನೆಟ್ಟನು.
ಪ್ರದಾಯ ರತ್ನಾನಿ ಚ
ಸರ್ವಸಾತ್ತ್ವತಾಂ ಯಥೇಷ್ಟತಸ್ತಾ ಅಪಿ ಕನ್ಯಕಾಃ ಪ್ರಭುಃ ।
ಉದ್ವಾಹ್ಯ ರೇಮೇ
ಪೃಥಗೇವ ರತ್ನಪ್ರಾಸಾದಸಂಸ್ಥಾಭಿರನನ್ತರೂಪಃ ॥೨೦.೧೩೯ ॥
ಎಲ್ಲಾ ಯಾದವರಿಗೂ ಅವರ ಇಚ್ಛಾನುಸಾರವಾಗಿ ರತ್ನಗಳನ್ನು ಕೊಟ್ಟು, ನರಕಾಸುರನ ಸೆರೆಯಿಂದ ಬಿಡಿಸಿಕೊಂಡು
ಬಂದ ೧೬೧೦೦ ಮಂದಿ ಕನ್ನಿಕೆಯರನ್ನು ಮದುವೆಯಾದ ಶ್ರೀಕೃಷ್ಣ, ಪ್ರತ್ಯೇಕವಾಗಿಯೇ, ರತ್ನಪ್ರಸಾದದಲ್ಲಿಯೇ
ಇರುವ ಅವರೊಂದಿಗೆ ಅನಂತರೂಪನಾಗಿ ಕ್ರೀಡಿಸಿದನು.
ಪೃಥಕ್ಪೃಥಕ್ ತಾಸು ದಶೈವ
ಪುತ್ರಕಾನಧತ್ತ ಕನ್ಯಾಮಪಿ ಸರ್ವಶಃ ಪ್ರಭುಃ ।
ಪ್ರದ್ಯುಮ್ನಸಾಮ್ಭಾವ॑ಪಿ
ಭಾನುಚಾರುದೇಷ್ಣೌ ಚ ತೇಷಾಂ ನಿತರಾಂ ಗುಣಾಧಿಕಾಃ ॥೨೦.೧೪೦॥
ಸರ್ವಸಮರ್ಥನಾದ ಶ್ರೀಕೃಷ್ಣನು ಪ್ರತ್ಯೇಕ-ಪ್ರತ್ಯೇಕವಾಗಿ ತನ್ನೆಲ್ಲಾ ಪತ್ನಿಯರಲ್ಲಿ ಹತ್ತು
ಗಂಡು ಮಕ್ಕಳನ್ನೂ, ಒಂದು ಹೆಣ್ಣು ಮಗುವನ್ನೂ ಹುಟ್ಟಿಸಿದನು. ಆ ಎಲ್ಲಾ ಮಕ್ಕಳಲ್ಲಿ ಪ್ರದ್ಯುಮ್ನ,
ಸಾಮ್ಭ, ಭಾನು ಮತ್ತು ಚಾರುದೇಷ್ಣ ಗುಣಾಧಿಕರಾಗಿದ್ದರು.
[ಭಾನು ಮತ್ತು ಚಾರುದೇಷ್ಣರ ಮೂಲ ಪರಿಚಯಿಸುತ್ತಾರೆ:]
ವಿವಸ್ವತೋ ಯೋsವರಜೋsದಿತೇಃ ಸುತಃ ಖ್ಯಾತಶ್ಚ
ನಾಮ್ನಾ ಸವಿತೇತಿ ಕೃಷ್ಣಾತ್ ।
ಜಾತಃ ಸ ಸತ್ಯಾಜಠರೇsತ್ರ ನಾಮ್ನಾ ಭಾನುಸ್ತು
ಭೈಷ್ಮ್ಯಾ ಅಪಿ ಚಾರುದೇಷ್ಣಃ ॥ ೨೦.೧೪೧॥
ಭಾನು ಅದಿತಿಯ ಮಗ, ಸೂರ್ಯನ ತಮ್ಮ, ಹೆಸರಿನಿಂದ ಸವಿತ ಎಂದು ಖ್ಯಾತನಾದವನು.(ಹನ್ನೆರಡು
ಮಂದಿ ಆದಿತ್ಯರಲ್ಲಿ ಒಬ್ಬನಾದ ಸವಿತ). ಅವನು ಕೃಷ್ಣನಿಂದ ಸತ್ಯಭಾಮೆಯಲ್ಲಿ ಹುಟ್ಟಿದ. ರುಗ್ಮಿಣಿಯಲ್ಲಿ
ಚಾರುದೇಷ್ಣ ಹುಟ್ಟಿದ.
ಸ ಚಾರುದೇಷ್ಣೋsಪಿ ಹಿ ವಿಘ್ನರಾಜೋ ಯೇsನ್ಯೇ ಚ ಕೃಷ್ಣಸ್ಯ
ಸುತಾಃ ಸಮಸ್ತಾಃ ।
ತೇ ಚೈವ
ಗೀರ್ವಾಣಗಣಾಸ್ತಥಾsನ್ಯೇ ಯೇ ದ್ವಾರಕಾಯಾಂ ನಿವಸನ್ತಿ ಸರ್ವೇ ॥ ೨೦.೧೪೨ ॥
ಚಾರುದೇಷ್ಣ ಸಾಕ್ಷಾತ್ ಗಣಪತಿ. ಉಳಿದ ಕೃಷ್ಣನ ಎಲ್ಲಾ ಮಕ್ಕಳೂ ಕೂಡಾ ದೇವತೆಗಳ ಸಮೂಹವೇ ಆಗಿದ್ದಾರೆ.
ಯಾರು ದ್ವಾರಕೆಯಲ್ಲಿ ವಾಸ ಮಾಡುತ್ತಿದ್ದರೋ ಅವರೆಲ್ಲರೂ ಕೂಡಾ ದೇವತೆಗಳ ಗಣಗಳೇ ಆಗಿದ್ದರು.
No comments:
Post a Comment