ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 23, 2021

Mahabharata Tatparya Nirnaya Kannada 20178_20183

 

ಪ್ರದ್ಯುಮ್ನಸಾಮ್ಬಪ್ರಮುಖಾಶ್ಚ ವಞ್ಚಿತಾ ಯಯುಸ್ತೀರ್ತ್ಥಾರ್ತ್ಥಂ ರಾಮಯುಕ್ತಾಃ ಸಮಗ್ರಾಃ ।

ಪಿಣ್ಡೋದ್ಧಾರಂ ತತ್ರ ಮಹೋತ್ಸವೇಷ್ವೇವಾsವರ್ತ್ತಯತ್ಸು ಕ್ವಚಿದೂಚೇ ಸುಭದ್ರಾ ॥೨೦.೧೭೮

 

ಒಮ್ಮೆ ಪ್ರದ್ಯುಮ್ನ ಸಾಮ್ಬ ಮೊದಲಾದ ಎಲ್ಲರೂ ಕೂಡಾ ಕೃಷ್ಣನಿಂದ ವಂಚನೆಗೊಳಗಾಗಿ, ರಾಮನಿಂದ ಕೂಡಿಕೊಂಡು ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಲು ಪಿಣ್ಡೋದ್ಧಾರ ಕ್ಷೇತ್ರವನ್ನು ಕುರಿತು ತೆರಳಿದರು. ಅಲ್ಲಿ ದೊಡ್ಡ ಜಾತ್ರೆ ನಡೆಯುತ್ತಿರಲು, ಇತ್ತ ಸುಭದ್ರೆಯು ಅರ್ಜುನನನ್ನು ಕುರಿತು ಕೇಳಿದಳು.

 

ಯತೇ ತೀರ್ತ್ಥಾನಾಚರನ್ ಬಾನ್ಧವಾಂಸ್ತ್ವಮದ್ರಾಕ್ಷೀರ್ನ್ನಃ ಕಚ್ಚಿದಿಷ್ಟಾನ್ ಸ್ಮ ಪಾರ್ತ್ಥಾನ್ ।

ಕುನ್ತೀಂ ಕೃಷ್ಣಾಂ ಚೇತ್ಯಾಹ ಪೃಷ್ಟಃ ಸ ಪಾರ್ತ್ಥ ಓಮಿತ್ಯೇತೇಷಾಮಾಹ ಚಾನಾಮಯಂ ಸಃ ॥೨೦.೧೭೯

 

‘ಎಲೈ ಸನ್ಯಾಸಿಯೇ, ತೀರ್ಥಕ್ಷೇತ್ರಗಳನ್ನು ತಿರುಗಾಡುತ್ತಾ ನೀನು ನಮಗೆ ಪ್ರಿಯರಾದ, ಬಂಧುಗಳಾದ ಪಾಂಡವರನ್ನು ಕಂಡಿರುವೆಯಾ? ಕುಂತಿಯನ್ನು ನೋಡಿದ್ದೀಯ? ದ್ರೌಪದಿಯನ್ನು? ಹೀಗೆ ಪ್ರಶ್ನಿಸಿದ ಸುಭದ್ರೆಗೆ ಅರ್ಜುನ ಓಂ (ಹೌದು) ಎಂದು ಹೇಳಿದ ಮತ್ತು ಅವರೆಲ್ಲರ ಕ್ಷೇಮವನ್ನೂ ಕೂಡಾ ಹೇಳಿದ.

 

ಭೂಯಃ ಸಾsವಾದೀದ್ ಭಗವನ್ನಿನ್ದ್ರಸೂನುರ್ಗ್ಗತಸ್ತೀರ್ತ್ಥಾರ್ತ್ಥಂ  ಬ್ರಾಹ್ಮಣೇಭ್ಯಃ ಶ್ರುತೋ ಮೇ ।

ಕಚ್ಚಿದ್ ದೃಷ್ಟೋ ಭವತೇತ್ಯೋಮಿತಿ ಸ್ಮ ಪಾರ್ತ್ಥೋsಪ್ಯೂಚೇ ಕ್ವೇತಿ ಸಾsಪೃಚ್ಛದೇನಮ್ ॥೨೦.೧೮೦॥

 

ಆಗ ಸುಭದ್ರೆ: ‘ಪೂಜ್ಯರೇ, ತೀರ್ಥಕ್ಷೇತ್ರ ಯಾತ್ರೆಗೆಂದು ಅರ್ಜುನನು ತೆರಳಿದ್ದಾನೆ ಎನ್ನುವ ವಿಷಯವನ್ನು ಬ್ರಾಹ್ಮಣರಿಂದ ಕೇಳಲ್ಪಟ್ಟಿದ್ದೇನೆ. ನಿಮ್ಮಿಂದ ಅವನು ನೋಡಲ್ಪಟ್ಟನೇನು’ ಎಂದು ಕೇಳುತ್ತಾಳೆ. ಆಗ ಪಾರ್ಥ   ‘ಹೌದು’  ಎಂದು ಉತ್ತರಿಸುತ್ತಾನೆ.  ಆಗ ಆಕೆ ‘ಎಲ್ಲಿ ನೋಡಿದಿರಿ’ ಎಂದು ಕೇಳುತ್ತಾಳೆ.

 

ಅತ್ರೈವೇತಿ ಸ್ಮಯಮಾನಂ ಚ ಪಾರ್ತ್ಥಂ ಪುನಃಪುನಃ ಪರ್ಯ್ಯಪೃಚ್ಛಚ್ಛುಭಾಙ್ಗೀ ।

ಸೋsಪ್ಯಾಹೋನ್ಮತ್ತೇ ಸೋsಸ್ಮಿ ಹೀತಿ ಸ್ಮಯಂಸ್ತಾಂ ಪುಲ್ಲಾಕ್ಷೀ ತಂ ಸಾ ದದರ್ಶಾತಿಹೃಷ್ಟಾ ॥೨೦.೧೮೧

 

‘ಇಲ್ಲಿಯೇ’ ಎಂದು ಅರ್ಜುನ ಹೇಳುತ್ತಾನೆ. ಆಗ ನಗುತ್ತಿರುವ ಅರ್ಜುನನ್ನು ಕುರಿತು ಶುಭಾಙ್ಗೀ ಸುಭದ್ರೆಯು  ಮತ್ತೆಮತ್ತೆ (ಎಲ್ಲಿ ನೋಡಿದೆ ಎಂದು) ಕೇಳಿದಾಗ ಅವನು ನಗುತ್ತಾ ‘ಹುಚ್ಚಿಯೇ, ಅವನೇ ನಾನು ಎನ್ನುತ್ತಾನೆ. ಆಗ ಸುಭದ್ರೆ ಅವನನ್ನು ಅತ್ಯಂತ ಸಂತೋಷದಿಂದ, ಅರಳುಗಣ್ಗಳವಳಾಗಿ ನೋಡುತ್ತಾಳೆ.

 

ತತೋ ಹರ್ಷಾಲ್ಲಜ್ಜಯಾ ಚೋತ್ಪಲಾಕ್ಷೀ ಕಿಞ್ಚಿನ್ನೋಚೇ  ಪಾರ್ತ್ಥ ಏನಾಮುವಾಚ ।

ಕಾಮಾವಿಷ್ಟೋ ಮುಖ್ಯಕಾಲೋ ಹ್ಯಯಂ ನಾವುದ್ವಾಹಾರ್ತ್ಥೋಕ್ತಸ್ತ್ವಿತಿ ಸಾ ಚೈನಮಾಹ ॥೨೦.೧೮೨

 

ತದನಂತರ ಸಂತೋಷದಿಂದಲೂ, ಲಜ್ಜೆಯಿಂದಲೂ ಸುಭದ್ರೆ ಏನನ್ನೂ ಮಾತನಾಡಲಿಲ್ಲ. ಆಗ ಅರ್ಜುನನು ಸುಭದ್ರೆಯನ್ನು ಕುರಿತು: ‘ಕಾಮದಿಂದ ಯಾರು ಆವಿಷ್ಟರಾಗಿರುತ್ತಾರೆ, ಅವರಿಗೆ ಅದೇ ಮುಖ್ಯಕಾಲ. ಹಾಗಾಗಿ ನಮ್ಮಿಬ್ಬರ ವಿವಾಹಕ್ಕೆ ಯುಕ್ತವಾಗಿರುವ ಕಾಲ ಇದಾಗಿದೆ’ ಎಂದ. ಸುಭದ್ರೆಯಾದರೋ ಅರ್ಜುನನನ್ನು ಕುರಿತು ಹೀಗೆ ಹೇಳಿದಳು.

 

ನಾತಿಕ್ರಮೋ ವಾಸುದೇವಸ್ಯ ಯುಕ್ತಸ್ತಸ್ಮಾತ್ ತೇನ ಸ್ವಪಿತೃಭ್ಯಾಂ ಚ ದತ್ತಾಮ್ ।

ಯುಕ್ತೋ ನಿಜೈರ್ಬನ್ಧುಭಿಶ್ಚೋತ್ಸವೇ ಮಾಂ ಸಮುದ್ವಹೇತ್ಯಥ ಕೃಷ್ಣಂ ಸ ದದ್ಧ್ಯೌ ॥೨೦.೧೮೩॥

 

‘ಕೃಷ್ಣನನ್ನು ಮೀರುವಿಕೆಯು ಯುಕ್ತವಲ್ಲ. ಆದ್ದರಿಂದ, ಕೃಷ್ಣನಿಂದಲೂ, ನನ್ನ ತಂದೆ-ತಾಯಿಯರಿಂದಲೂ ಕೊಡಲ್ಪಟ್ಟು, ಬಂಧುಗಳಿಂದ ಒಡಗೂಡಿದ  ನನ್ನನ್ನು ದೊಡ್ಡ ಹಬ್ಬದಲ್ಲಿ ನೀನು ಮದುವೆಯಾಗು’ ಎಂದು ಹೇಳಿದಳು. ತದನಂತರ ಅರ್ಜುನನು ಕೃಷ್ಣನನ್ನು ಸ್ಮರಿಸಿದ.  

No comments:

Post a Comment