ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 25, 2021

Mahabharata Tatparya Nirnaya Kannada 20: 184 - 188

 ಮಾತಾಪಿತೃಭ್ಯಾಂ ಸಹಿತೋsಥ ಕೃಷ್ಣಸ್ತತ್ರೈವಾsಯಾದ್ ವಾಸವಶ್ಚಾಥ ಶಚ್ಯಾ ।

ಸಮಂ ಮುನೀನ್ದ್ರೈಃ ಫಲ್ಗುನೇನ ಸ್ಮೃತಃ ಸಂಸ್ತತ್ರೈವಾsಗಾತ್ ಪ್ರೀತಿಯುಕ್ತೋ ನಿಶಾಯಾಮ್ ॥೨೦.೧೮೪॥

 

ಆಗ ವಸುದೇವ-ದೇವಕಿಯರಿಂದ ಕೂಡಿರುವ ಶ್ರೀಕೃಷ್ಣ ಅಲ್ಲಿಗೆ ಬಂದ. ತದನಂತರ ಫಲ್ಗುನನಿಂದ ಸ್ಮರಿಸಲ್ಪಟ್ಟ ಇಂದ್ರನು ಶಚಿಯಿಂದಲೂ, ಮುನಿಶ್ರೇಷ್ಠರಿಂದಲೂ ಕೂಡಿಕೊಂಡು ಅಲ್ಲಿಗೆ ಬಂದ.

 

ಕೃಷ್ಣಸ್ತತಃ ಪುರುಹೂತೇನ ಸಾಕಂ ತಯೋರ್ವಿವಾಹಂ ಕಾರಯಾಮಾಸ ಸಮ್ಯಕ್ ।

ಮಾತಾಪಿತೃಭ್ಯಾಂ ಸಾತ್ಯಕಿನಾsಪಿ ಯುಕ್ತೋ ಮಹೋತ್ಸವೇsನ್ಯಾವಿದಿತೋ ಮುನೀನ್ದ್ರೈಃ  ೨೦.೧೮೫

 

ತದನಂತರ ಶ್ರೀಕೃಷ್ಣನು ಇಂದ್ರನಿಂದ ಕೂಡಿಕೊಂಡು, ತಂದೆ ತಾಯಿಗಳಿಂದ, ಸಾತ್ಯಕಿಯಿಂದ, ಮುನಿಗಳಿಂದಲೂ ಸಹಿತನಾಗಿ, ಚೆನ್ನಾಗಿ ಅವರಿಬ್ಬರ ಮದುವೆ ಮಾಡಿಸಿದನು. ಬೇರೊಬ್ಬರಿಗೆ ತಿಳಿಯಲ್ಪಡದ ಮಹೋತ್ಸವದಲ್ಲಿ ಈ ಮದುವೆ ನಡೆಯಿತು.

 

ತತಃ ಕೃಷ್ಣಃ ಸ್ಯನ್ದನಂ ಫಲ್ಗುನಾರ್ತ್ಥೇ ನಿಧಾಯ ಸ್ವಂ ಪ್ರಯಯೌ ತದ್ರಜನ್ಯಾಮ್ ।

ಗತೇ ಚ ಶಕ್ರೇ ರಥಮಾರುರೋಹ ಪ್ರಾತಃ ಪಾರ್ತ್ಥಃ ಸಹಿತೋ ಭಾರ್ಯ್ಯಯೈವ ॥೨೦.೧೮೬॥

 

ಆನಂತರ ಕೃಷ್ಣನು ಅರ್ಜುನನಿಗೆ ತನ್ನ ರಥವನ್ನು ಇತ್ತು, ಆ ರಾತ್ರಿಯೇ ಅಲ್ಲಿಂದ ತೆರಳಿದ. ಇಂದ್ರನೂ ಕೂಡಾ ಹೊರಟುಹೋಗುತ್ತಿರಲು, ಆ ರಾತ್ರಿ ಕಳೆದು ಬೆಳಗಾಗಲು, ಅರ್ಜುನನು ಹೆಂಡತಿಯಾದ ಸುಭದ್ರೆಯೊಂದಿಗೆ ಕೂಡಿದವನಾಗಿ ರಥವನ್ನೇರಿದ.

 

ಸರ್ವಾಯುಧೈರ್ಯ್ಯುಕ್ತರಥಂ ಸಮಾಸ್ಥಿತೇ ಗೃಹೀತಚಾಪೇ ಫಲ್ಗುನೇ ದ್ವಾರವತ್ಯಾಮ್ ।

ಆಸೀದ್ ರಾವಃ ಕಿಙ್ಕಿಮೇತತ್ ತ್ರಿದಣ್ಡೀ ಕನ್ಯಾಂ ಹರತ್ಯೇಷ ಕೋದಣ್ಡಪಾಣಿಃ ೨೦.೧೮೭

 

ಎಲ್ಲಾ ಆಯುಧಗಳಿಂದಲೂ ಯುಕ್ತನಾಗಿರುವ ಅರ್ಜುನನು ರಥವನ್ನು ಏರಿ ಬಿಲ್ಲನ್ನು ಹಿಡಿದಿರಲು, ದ್ವಾರಕೆಯಲ್ಲಿ ‘ಸನ್ಯಾಸಿ ಸುಭದ್ರೆಯನ್ನು ಹೊತ್ತೊಯ್ಯುತ್ತಿದ್ದಾನಲ್ಲಾ, ಬಿಲ್ಲನ್ನು ಹಿಡಿದಿದ್ದಾನೆ’ ಎಂದು ಗಲಾಟೆ(ಶಬ್ದ) ಪ್ರಾರಂಭವಾಯಿತು.

 

ತತಸ್ತು ತಂ ಸತನುತ್ರಂ ಮಹೇನ್ದ್ರದತ್ತೇ ದಿವ್ಯೇ ಕುಣ್ಡಲೇ ವಾಸಸೀ ಚ ।

ದಿವ್ಯಾನಿ ರತ್ನಾನಿ ಚ ಭೂಷಣಾನಿ ದೃಷ್ಟ್ವಾ ಬಿಭ್ರಾಣಂ ರಕ್ಷಿಣೋsವಾರಯನ್ ಸ್ಮ ॥೨೦.೧೮೮॥

 

ತದನಂತರ, ಇಂದ್ರ ಕೊಟ್ಟ ಕವಚ, ಅಲೌಕಿಕವಾಗಿರುವ ಕುಂಡಲ, ಬಟ್ಟೆ, ದಿವ್ಯವಾಗಿರುವ ರತ್ನವನ್ನೂ, ಆಭರಣಗಳನ್ನೂ ಧರಿಸಿರುವ ಅರ್ಜುನನನ್ನು ಕಂಡು - ನಗರ ರಕ್ಷಣೆ ಮಾಡುವ ಸೈನಿಕರು ಅವನನ್ನು ತಡೆದರು.

No comments:

Post a Comment