ಅಥ ದುರ್ಯ್ಯೋಧನಃ ಪಾಪೋ
ಭೀಮಸೇನಸ್ಯ ಪಶ್ಯತಃ ।
ಊರುಂ ಸನ್ದರ್ಶಯಾಮಾಸ
ಕೃಷ್ಣಾಯೈ ಭೀಮ ಆಹ ತಮ್ ॥೨೧.೩೫೦॥
ತವೋರುಮೇನಂ
ಗದಯೋರುವೇಗಯಾ ಬಿಭೇತ್ಸ್ಯ ಇತ್ಯೇವ ಪುನಃ ಸುಯೋಧನಃ ।
ಊಚೇ ನಾನ್ಯದ್
ಭವತಾಮಸ್ತಿ ವಿತ್ತಂ ದ್ಯೂತೇ ಕೃಷ್ಣಂ ಸ್ಥಾಪಯಧ್ವಂ ಪಣಾಯ ॥೨೧.೩೫೧॥
ಸ್ವಲ್ಪ ಹೊತ್ತಿನ ನಂತರ ಪಾಪಿಷ್ಠನಾದ ದುರ್ಯೋಧನನು ಭೀಮಸೇನ
ನೋಡುತ್ತಿರುವಾಗಲೇ ದ್ರೌಪದಿಯನ್ನು ಕುರಿತು ತನ್ನ ಎಡ ತೊಡೆಯನ್ನು ತೋರಿಸಿದನು. ಆಗ ಭೀಮಸೇನ
ಅವನನ್ನು ಕುರಿತು ‘ನಿನ್ನ ಈ ತೊಡೆಯನ್ನು ಉತ್ಕೃಷ್ಟವಾದ ವೇಗವಿರುವ ಗದೆಯಿಂದ ಅಪ್ಪಳಿಸಿ
ಸೀಳುತ್ತೇನೆ’ ಎಂದನು. ಹೀಗೆ ಹೇಳಿದಾಗ ದುರ್ಯೋಧನ ಹೇಳುತ್ತಾನೆ: ‘ನಿಮಗೆ ಈ ಜೂಜಿನಲ್ಲಿ ಪಣವಾಗಿ ಇಡಲು
ಬೇರೆ ಹಣವಿಲ್ಲವಲ್ಲ. ಕೃಷ್ಣನನ್ನೇ ಪಣವಾಗಿ ಇಡಿ’ ಎಂದು.
ಅಥಾಬ್ರವೀದ್ ವೃಕೋದರಃ
ಕೃತೇSವಮಾನನೇ ಹರೇಃ ।
ನಿಪಾತ್ಯ ಭೂತಳೇ ಹಿ ತೇ
ಶಿರೋ ಮೃದಿಷ್ಯ ಇತ್ಯಲಮ್ ॥೨೧.೩೫೨॥
ತದನಂತರ ಪರಮಾತ್ಮನಿಗೆ ಅವಮಾನ ಮಾಡಲ್ಪಡುತ್ತಿರಲು ಭೀಮಸೇನ ‘ನಿನ್ನನ್ನು
ಭೂಮಿಯಲ್ಲಿ ಬೀಳಿಸಿ, ನಿನ್ನ ತಲೆಯನ್ನು ಚೆನ್ನಾಗಿ ಒದೆಯುತ್ತೇನೆ’ ಎಂದು ಪ್ರತಿಜ್ಞೆಮಾಡಿದನು.
ಸ ವದ್ಧ್ಯ ಏವ ಮೇ ಸದಾ
ಪರೋಕ್ಷತೋSಪಿ ಯೋ ಹರಿಮ್ ।
ವಿನಿನ್ದಯೇದಿತಿ ದ್ಧ್ರುವಂ
ಪ್ರತಿಶ್ರುತಂ ಹಿ ಮಾರುತೇಃ ॥೨೧.೩೫೩॥
ನನ್ನ ಹಿಂದೆ
ಕೂಡಾ (ಪರೋಕ್ಷವಾಗಿ ಕೂಡಾ) ಯಾರು ಪರಮಾತ್ಮನನ್ನು ನಿಂದಿಸುತ್ತಾರೋ ಅವರು ನನ್ನಿಂದ
ಕೊಲೆಯಾಗುತ್ತಾರೆ. ಇದು ಖಂಡಿತವಾದ ಪ್ರತಿಜ್ಞೆ.
ಪುನಶ್ಚ ಪಾಪವೃದ್ಧಯೇ
ತದೈವ ನೋ ಜಘಾನ ತಮ್ ।
ವಿಕರ್ತ್ತನಾತ್ಮಜಃ ಪುನರ್ಜ್ಜಗಾದ
ಸೋಮಕಾತ್ಮಜಾಮ್ ॥೨೧.೩೫೪॥
ಪ್ರಯಾಹಿ ಭೂಭೃತೋ ಹಿ
ನೋ ಗೃಹಂ ನ ಸನ್ತಿ ಪಾಣ್ಡವಾಃ ।
ಇತೀರಿತೇ ಸಮುತ್ಥಿತೌ
ವೃಕೋದರೋSನು ಚಾರ್ಜ್ಜುನಃ ॥೨೧.೩೫೫॥
ಪುನಃ, ದುರ್ಯೋಧನನ ಪಾಪ ಇನ್ನೂ ಬೆಳೆಯಬೇಕು
ಎನ್ನುವುದಕ್ಕಾಗಿಯೇ ಆಗಲೇ ಅವನನ್ನು ಭೀಮಸೇನ ಕೊಲ್ಲಲಿಲ್ಲ. ತದನಂತರ ಸೂರ್ಯನ ಮಗ ಕರ್ಣನು
ದ್ರೌಪದಿಯನ್ನು ಕುರಿತು ‘ದುರ್ಯೋಧನನ ಮನೆಯನ್ನು ಕುರಿತು ತೆರಳು. ಪಾಂಡವರು ಇನ್ನಿಲ್ಲ(ಅವರು ಸತ್ತ
ಹಾಗೇ)’ ಎಂದು ಹೇಳಿದ. ಈರೀತಿಯಾಗಿ ಹೇಳುತ್ತಿರಲು, ಭೀಮಸೇನ ಎದ್ದುನಿಂತ. ಅವನಾದಮೇಲೆ ಅರ್ಜುನನೂ
ಕೂಡಾ ಎದ್ದು ನಿಂತ.
ಉಭೌ ಚ ತೌ ಯುಧಿಷ್ಠಿರೋ
ನ್ಯವಾರಯತ್ ತಥಾSಪರೇ ।
ತತೋ ನಿಷಣ್ಣಯೋಸ್ತಯೋಃ
ಸುಯೋಧನೋ ವಚೋSಬ್ರವೀತ್ ॥೨೧.೩೫೬॥
ಅವರಿಬ್ಬರು ಎದ್ದು ನಿಂತಾಗ ಯುಧಿಷ್ಠಿರನು ಅವರನ್ನು ತಡೆದ.
ಉಳಿದವರೂ ಕೂಡಾ ತಡೆದರು. ತದನಂತರ ಅವರಿಬ್ಬರೂ ಕುಳಿತುಕೊಳ್ಳುತ್ತಿರಲು ದುರ್ಯೋಧನ ಮಾತನ್ನಾಡಿದ:
No comments:
Post a Comment