ಜ್ಯೇಷ್ಠಸ್ಯ ತೇsಪಿ ಹಿ ವಯಂ ಹೃದಯಪ್ರಜಾತಾ
ನಾರ್ಹತ್ವಮೇವ ಗಮಿತಾ ಭವತೈವ ರಾಜ್ಯೇ ।
ಭ್ರಾತುಃ ಕನೀಯಸ ಉತಾಪಿ ಹಿ ದಾರಜಾತಾ ಅನ್ಯೈಶ್ಚ ರಾಜ್ಯಪದವೀಂ ಭವತೈವ
ನೀತಾಃ ॥೧೯.೦೬॥
‘ಅಪ್ಪಾ, ಕುಲಕ್ಕೆ
ಹಿರಿಯನಾದ ನಿನ್ನಿಂದಲೇ ನಾವು ಹುಟ್ಟಿದವರಾದರೂ(ಔರಸಪುತ್ರರಾದರೂ) ಕೂಡಾ, ನಿನ್ನಿಂದಲೇ
ರಾಜ್ಯದಲ್ಲಿ ನಾವು ನಿಯುಕ್ತರಾಗಲಿಲ್ಲ. ಆದರೆ ಇತರ ಪುರುಷರಿಂದ ನಿನ್ನ ತಮ್ಮನ ಹೆಂಡತಿಗೆ
ಹುಟ್ಟಿದವರು ನಿನ್ನಿಂದಲೇ ರಾಜ್ಯಾಭಿಷಿಕ್ತರಾಗಿದ್ದಾರೆ.
ರಾಜ್ಯಂ ಮಹಚ್ಚ ಸಮವಾಪ್ಸ್ಯತಿ ಧರ್ಮ್ಮಸೂನುಸ್ತ್ವತ್ತೋsಥವಾsನುಜಬಲಾತ್ ಪ್ರಸಭಂ ವಯಂ ತು ।
ದಾಸಾ ಭವೇಮ ನಿಜತನ್ತುಭಿರೇವ ಸಾಕಂ ಕುನ್ತೀಸುತಸ್ಯ ಪರತೋsಪಿ ತದನ್ವಯಸ್ಯ ॥೧೯.೦೭॥
ಆ ಧರ್ಮರಾಜನು ನಿನ್ನ ಅನುಗ್ರಹದಿಂದ ಮತ್ತು ತಮ್ಮಂದಿರ ಬಲದಿಂದ
ಸಂಪೂರ್ಣ ಸಾಮ್ರಾಜ್ಯವನ್ನು ಬಲಾತ್ಕಾರವಾಗಿ
ಹೊಂದುತ್ತಾನೆ. ನಾವಾದರೋ, ನಿನ್ನ ಸಂತತಿಯಿಂದ ಕೂಡಿಕೊಂಡು
ಧರ್ಮರಾಜನಿಗೆ ದಾಸರಾಗಿರುತ್ತೇವೆ. ಮುಂದೆ ಆ ಕುಂತೀಪುತ್ರನ ಸಂತಾನಕ್ಕೆ ನಮ್ಮ ಸಂತತಿ
ದಾಸರಾಗುತ್ತಾರೆ.
ನಾsತ್ಮಾರ್ತ್ಥಮಸ್ತಿ ಮಮ
ದುಃಖಮಥಾತಿಶುದ್ಧಲೋಕಪ್ರಸಿದ್ಧಯಶಸಸ್ತವ ಕೀರ್ತ್ತಿನಾಶಃ
।
ಅಸ್ಮನ್ನಿಮಿತ್ತ ಇತಿ ದುಃಖಮತೋ ಹಿ ಸರ್ವೇsಪೀಚ್ಛಾಮ ಮರ್ತ್ತುಮಥ ನಃ ಕುರು ಚಾಪ್ಯನುಜ್ಞಾಮ್ ॥೧೯.೦೮॥
ಇಲ್ಲಿ ನಾನು ನನಗಾಗಿ ದುಃಖಪಡುತ್ತಿಲ್ಲ. ಲೋಕದಲ್ಲಿ ಪ್ರಸಿದ್ಧವಾದ
ಕೀರ್ತಿಯುಳ್ಳ ನಿನ್ನ ಕೀರ್ತಿನಾಶವು ನಮ್ಮ ನಿಮಿತ್ತ ಆಗುತ್ತಿದೆಯಲ್ಲಾ ಎಂದು ನನಗೆ ದುಃಖವಾಗುತ್ತಿದೆ.
ಆ ಕಾರಣದಿಂದ ನಾವೆಲ್ಲರೂ ಸಾಯಲು ಬಯಸುತ್ತಿದ್ದೇವೆ. ನಮಗೆ ಅನುಜ್ಞೆಯನ್ನು ಕೊಡು’.
ಏವಂ ಸ್ವಪುತ್ರವಚನಂ ಸ ನಿಶಮ್ಯ ರಾಜಾ ಪ್ರೋವಾಚ ನಾನುಗುಣಮೇತದಹೋ
ಮನಸ್ತೇ ।
ಕೋ ನಾಮ ಪಾಣ್ಡುತನಯೇಷು ಗುಣೋತ್ತಮೇಷು ಪ್ರೀತಿಂ ನ ಯಾತಿ ನಿಜವೀರ್ಯ್ಯಭವೋಚ್ಚಯೇಷು
॥೧೯.೦೯॥
ಈ ಪ್ರಕಾರ ತನ್ನ ಮಗನ ಮಾತನ್ನು ಕೇಳಿದ ಧೃತರಾಷ್ಟ್ರನು ಹೇಳುತ್ತಾನೆ:
‘ಏನಯ್ಯ, ನಿನ್ನ ಮನಸ್ಸು ಸರಿಯಾಗಿಲ್ಲ. ಗುಣದಲ್ಲಿ ಉನ್ನತವಾಗಿರುವ, ತಮ್ಮ
ವೀರ್ಯದಿಂದ ಮೇಲಕ್ಕೆ ಬಂದಿರುವ ಪಾಣ್ಡವರಲ್ಲಿ ಯಾರು ತಾನೇ ಪ್ರೀತಿಯನ್ನು ಹೊಂದುವುದಿಲ್ಲ?
ತೇ ಹಿ ಸ್ವಭಾಹುಲತೋsಖಿಲಭೂಪಭೂತಿಂ ಮಯ್ಯಾಕೃಷನ್ತಿ ನಚ ವಃ ಪ್ರತಿಷೇಧಕಾಸ್ತೇ ।
ತಸ್ಮಾಚ್ಛಮಂ ವ್ರಜ ಶುಭಾಯ ಕುಲಸ್ಯ ತಾತ ಕ್ಷೇಮಾಯ ನೋ ಭವತಿ ವೋ
ಬಲವದ್ವಿರೋಧಃ॥೧೯.೧೦॥
ಆ ಪಾಣ್ಡವರಾದರೋ, ತಮ್ಮ ಬಾಹುಬಲದಿಂದ ಎಲ್ಲಾ ರಾಜರ ಸಂಪತ್ತನ್ನು
ಸೆಳೆದು ನನಗೆ ತಂದೊಪ್ಪಿಸುತ್ತಿದ್ದಾರೆ. ಅವರು ನಿಮಗೆ ವಿರೋಧಿಗಳಲ್ಲ. ಆಕಾರಣದಿಂದ ಇಡೀ ಕುಲದ ಒಳಿತಿಗಾಗಿ
ಶಾಂತಿಯನ್ನು ಹೊಂದು. ಬಲಿಷ್ಠರೊಂದಿಗೆ ವಿರೋಧ ಕಟ್ಟಿಕೊಳ್ಳುವುದು
ನಿಮಗೆ ಒಳ್ಳೆಯದಲ್ಲ’.
No comments:
Post a Comment